Just In
Don't Miss
- Movies
'ಮನೆ ಮಾರಾಟಕ್ಕಿಟ್ಟ' ನಿರ್ದೇಶಕನ ಜೊತೆಗೆ ರಾಧಿಕಾ ಕುಮಾರಸ್ವಾಮಿ ಸಿನಿಮಾ.!
- News
ಉಪ ಚುನಾವಣೆ ಸೋಲಿನ ಬಳಿಕ ಜೆಡಿಎಸ್ ಹುದ್ದೆ ತೊರೆದ ಶಾಸಕನ ಪುತ್ರ
- Sports
ಐಎಸ್ಎಲ್ 2019: ಒಡಿಶಾ ಎಫ್ಸಿಗೆ ಪುಣೆಯಲ್ಲಿ ಅಮೂಲ್ಯ ಜಯ
- Lifestyle
ಗುರುವಾರದ ದಿನ ಭವಿಷ್ಯ 12-12-2019
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಡಿಶ್ಟಿವಿಯಿಂದ ಕೇವಲ 399ರೂ.ಗಳಿಗೆ 'ಡಿ2ಎಚ್ ಮ್ಯಾಜಿಕ್ ಸ್ಟಿಕ್'!
ಡಿ2ಎಚ್ ಪುಟ್ಟಿಯಿಂದ ಕೇಬಲ್ಗಳ ಮೂಲಕ ಟಿವಿಗಳಿಗೆ ಕೇಬಲ್ ಕನೆಕ್ಟ್ ಮಾಡಿ ಟಿವಿ ವೀಕ್ಷಿಸುವುದು ಜಮಾನ ಈಗ ಮರೆಯಾಗುತ್ತಿದ್ದು, ಮಹತ್ತರ ಬದಲಾವಣೆಗಳು ನಡೆಯುತ್ತಿವೆ. ಆ ಪೈಕಿ ಸದ್ಯ ಟ್ರೆಂಡಿಂಗ್ನಲ್ಲಿರುವುದು ಫೈರ್ಸ್ಟಿಕ್ ಮೂಲಕ ವಿಡಿಯೊ ಸ್ಟ್ರಿಮಿಂಗ್ ಮಾಡುವುದು. ಅದೇ ರೀತಿ ಈಗ ಎಲ್ಲ ಡಿಶ್ ಆಪರೇಟರ್ ಸಂಸ್ಥೆಗಳು ಸ್ಟಿಕ್ ಮೂಲಕ ವಿಡಿಯೊ ಸ್ಟ್ರಿಮಿಂಗ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುನ್ನಡೆದಿವೆ.
ಹೌದು, ಡಿ2ಎಚ್ ಸಂಸ್ಥೆಗಳಲ್ಲಿ ಒಂದಾಗಿರುವ ಡಿಶ್ಟಿವಿ ಇಂಡಿಯಾ ಸಂಸ್ಥೆಯು ಇದೀಗ ಡಿ2ಎಚ್ ಮ್ಯಾಜಿಕ್ ಹೆಸರಿನ ಸ್ಟಿಕ್ ಲಾಂಚ್ ಮಾಡಿದ್ದು, ಈ ಹೊಸ ಸೇವೆಯನ್ನು ಪ್ರಸ್ತುತ ಡಿಶ್ಟಿವಿ ಸೆಟ್ಬಾಕ್ಸ್ ಹೊಂದಿರುವ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮ್ಯಾಜಿಕ್ ಸ್ಟಿಕ್ ಮೂಲಕ ಬಳಕೆದಾರರು ಜೀ5, ಹಂಗಾಮಾ ಪ್ಲೇ, ಎಎಲ್ಟಿ ಬಾಲಾಜಿ ಸೇರಿದಂತೆ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ (OTT) ಆಪ್ಸ್ಗಳನ್ನು ವೀಕ್ಷಿಸಬಹುದಾಗಿದೆ.
ಡಿಶ್ಟಿವಿ ಸಂಸ್ಥೆಯು ಆರಂಭಿಕ ಕೊಡುಗೆಯಾಗಿ 399ರೂ.ಗಳಿಗೆ 'ಡಿ2ಎಚ್ ಮ್ಯಾಜಿಕ್' ಅನ್ನು ಪರಿಚಯಿಸಿದ್ದು, ಹಾಗೆಯೇ 25+ಟ್ಯಾಕ್ಸ್ ನಾಮಿನಲ್ ಚಂದಾದಾರಿಕೆಯ ಶುಲ್ಕ ಇರಲಿದೆ. ಈ ಸೇವೆಯು ಏರ್ಟೆಲ್ ಇಂಟರ್ನೆಟ್ ಬಾಕ್ಸ್ ಮತ್ತು ಟಾಟಾಸ್ಕೈ Binge ಸೇವೆಗೆ ನೇರ ಪೈಪೋಟಿ ನೀಡುವ ಮುನ್ಸೂಚನೆಗಳನ್ನು ಹೊರಹಾಕಿದೆ. ಹಾಗಾದರೇ ಡಿಶ್ಟಿವಿಯ ಹೊಸ 'ಡಿ2ಎಚ್ ಮ್ಯಾಜಿಕ್' ಸೇವೆಯ ಇನ್ನಷ್ಟು ಮಾಹಿತಿಗಳನ್ನು ಮುಂದೆ ನೋಡೋಣ ಬನ್ನಿರಿ.
ಓದಿರಿ : 'ನೋಕಿಯಾ 105' ಫೀಚರ್ ಫೋನ್ ಲಾಂಚ್!.ಬಿಗ್ ಬ್ಯಾಟರಿ ಲೈಫ್!

ಡಿ2ಎಚ್ ಮ್ಯಾಜಿಕ್ ಸ್ಟಿಕ್ ಆರ್ಡರ್ ಹೇಗೆ
ಈಗಾಗಲೇ ಡಿಶ್ಟಿವಿ ಸೆಟ್ಅಪ್ ಬಾಕ್ಸ್ ಸೇವೆಯನ್ನು ಪಡೆಯುತ್ತಿರುವ ಗ್ರಾಹಕರು ಕಂಪನಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ 'ಡಿ2ಎಚ್ ಮ್ಯಾಜಿಕ್ ಸ್ಟಿಕ್' ಆರ್ಡರ್ ಮಾಡಬಹುದು. ಅಥವಾ ಕಂಪೆನಿಯ 1800 1370 111 ನಂಬರ್ಗೆ ಕರೆ ಮಾಡುವ ಮೂಲಕವು ಮ್ಯಾಜಿಕ್ ಸ್ಟಿಕ್ ತರಿಸಿಕೊಳ್ಳಬಹುದಾಗಿದೆ. ಎಲ್ಲ ಪ್ರಮುಖ ನಗರಗಳಲ್ಲಿ ಈ ಸೇವೆಯು ಲಭ್ಯವಾಗಲಿದೆ.

ಡಿ2ಎಚ್ ಮ್ಯಾಜಿಕ್ ಸ್ಟಿಕ್ ಕನೆಕ್ಟ್
ಡಿ2ಎಚ್ ಮ್ಯಾಜಿಕ್ ಸ್ಟಿಕ್ ಅನ್ನು ಗ್ರಾಹಕರು ಡಿಶ್ಟಿವಿ ಸೆಟ್ಅಪ್ ಬಾಕ್ಸ್ನ ಯುಎಸ್ಬಿ ಪೋರ್ಟ್ ಕನೆಕ್ಟ್ ಮಾಡಬೇಕಿರುತ್ತದೆ. ಹೀಗಾಗಿ ಗ್ರಾಹಕರು ಇತ್ತೀಚಿನ ಮೊಬೈಲ್ ಹಾಟ್ಸ್ಪಾಟ್ ಮತ್ತು ವೈ ಫೈ ನೆಟ್ವರ್ಕ್ ಬೆಂಬಲ ಪಡೆದಿರುವ ಅಪ್ಡೇಟ್ ಸೆಟ್ಅಪ್ ಬಾಕ್ಸ್ ಹೊಂದಿದ್ದರಬೇಕು. ಹಾಗೆಯೇ ಡಿ2ಎಚ್ ಮ್ಯಾಜಿಕ್ ಸ್ಟಿಕ್ ಸೇವೆಯನ್ನು ರಿಮೋಟ್ ಕಂಟ್ರೂಲ್ ಸಹ ಮಾಡಬಹುದಾಗಿದೆ.
ಓದಿರಿ : 4G ನೆಟ್ವರ್ಕ್ ವೇಗದಲ್ಲಿ ಕಿಂಗ್ ಯಾರು?..ಜಿಯೋ ಸ್ಥಾನವೇನು?

ಡಿ2ಎಚ್ ಮ್ಯಾಜಿಕ್ ಸ್ಟಿಕ್ ಸೌಲಭ್ಯಗಳು
ಡಿ2ಎಚ್ ಮ್ಯಾಜಿಕ್ ಸ್ಟಿಕ್ ಡಿವೈಸ್ ಲೈವ್ ಟಿವಿ ಮತ್ತು ಜೀ5, ಹಂಗಾಮಾ ಪ್ಲೇ, ಎಎಲ್ಟಿ ಬಾಲಾಜಿ, ಸೋನಿ ಲೈವ್, ವಾಚೋ ಸೇರಿದಂತೆ ಜನಪ್ರಿಯ OTT ವಿಡಿಯೊ ಸ್ಟ್ರಿಮಿಂಗ್ ಆಪ್ಸ್ಗಳ ನಡುವೆ ಬ್ರಿಡ್ಜ್ ಇದ್ದಂತೆ. ಈ ಸ್ಟಿಕ್ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಆಪ್ಸ್ ಪ್ರಿ-ಇನ್ಸ್ಟಾಲ್ ಹೊಂದಿದ್ದು, ಅವುಗಳು ಅನೇಕ ಮನರಂಜನೆಯ ಕಾರ್ಯಕ್ರಮಗಳ ಸಂಗ್ರಹ ಇದ್ದು, ಗ್ರಾಹಕರಿಗೆ ಲಭ್ಯವಾಗಲಿದೆ.

ಲಭ್ಯತೆ ಮತ್ತು ಬೆಲೆ
ಪ್ರಸ್ತುತ ವಿಡಿಯೊ ಸ್ರಿಮಿಂಗ್ ಆಪ್ಸ್ಗಳ ಸೇವೆ ಒದಗಿಸುವ ಸ್ಟಿಕ್ಗಳಲ್ಲಿ ಆಪ್ಸ್ಗಳು ಪ್ರಿ-ಇನ್ಬಿಲ್ಟ್ ಆಗಿರುತ್ತವೆ. ಹಾಗೆಯೇ ಡಿಶ್ಟಿವಿ ಮ್ಯಾಜಿಕ್ ಸ್ಟಿಕ್ನಲ್ಲಿಯೂ OTT ಆಪ್ಸ್ಗಳು ಸೇರಿವೆ. ಈ ಡಿ2ಎಚ್ ಮ್ಯಾಜಿಕ್ ಸ್ಟಿಕ್ ಅನ್ನು ಸಂಸ್ಥೆಯು ಆರಂಭಿಕ ಕೊಡುಗೆಯಾಗಿ 399ರೂ.ಗಳಿಗೆ 'ಡಿ2ಎಚ್ ಮ್ಯಾಜಿಕ್' ಅನ್ನು ಪರಿಚಯಿಸಿದ್ದು, ಹಾಗೆಯೇ 25+ಟ್ಯಾಕ್ಸ್ ನಾಮಿನಲ್ ಚಂದಾದಾರಿಕೆಯ ಶುಲ್ಕ ಇರಲಿದೆ.
ಓದಿರಿ : ನೋಕಿಯಾ ವಾಯರ್ಲೆಸ್ ಇಯರ್ಫೋನ್ಗಳು ಈಗ ಕಡಿಮೆ ಬೆಲೆಗೆ ಲಭ್ಯ!
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090