ಭಾರತದಲ್ಲಿ ಡೈವಾ 4K UHD ಸ್ಮಾರ್ಟ್‌ಟಿವಿ D50162FL ಲಾಂಚ್‌! ಬೆಲೆ ಎಷ್ಟು?

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಟಿವಿಗಳಿಗೆ ಭಾರಿ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ. ಇದರಲ್ಲಿ ಡೈವಾ ಕಂಪೆನಿ ಕೂಡ ಒಂದಾಗಿದೆ. ಡೈವಾ ಕಂಪೆನಿ ಈಗಾಗಲೇ ಅನೇಕ ಆಕರ್ಷಕ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಡೈವಾ ಕಂಪೆನಿ ಹೊಸ ಡೈವಾ 44K UHD ಸ್ಮಾರ್ಟ್‌ಟಿವಿ D50162FL ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಡೈವಾ

ಹೌದು, ಡೈವಾ ಸಂಸ್ಥೆ ಹೊಸ ಡೈವಾ 4K UHD ಸ್ಮಾರ್ಟ್‌ಟಿವಿ D50162FL ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇದು ಆಂಡ್ರಾಯ್ಡ್ 9 ಆಧಾರಿತ ಕ್ಲೌಡ್ ಟಿವಿ-ಪ್ರಮಾಣೀಕೃತ AOSP OSನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಬಿಗ್‌ವಾಲ್ ಯುಐ ಮೇಲಿರುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿ "ಫ್ರೇಮ್‌ಲೆಸ್" ವಿನ್ಯಾಸ ಮತ್ತು ಹೆಚ್‌ಡಿಆರ್ 10 ಬೆಂಬಲವನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ 50 ಇಂಚಿನ ಪರದೆಯ ಗಾತ್ರದಲ್ಲಿ ಬರುತ್ತದೆ. ಇದು ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದೆ. ಇದು ಇಂಟರ್‌ಬಿಲ್ಟ್‌ ಸ್ಪೀಕರ್‌ಗಳೊಂದಿಗೆ ಸರೌಂಡ್ ಸೌಂಡ್ ಆಡಿಯೊವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಟಿವಿ

ಡೈವಾ 4K UHD ಸ್ಮಾರ್ಟ್‌ಟಿವಿ D50162FL 3,840x2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 50 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1.07 ಬಿಲಿಯನ್ ಬಣ್ಣಗಳು ಮತ್ತು ಹೆಚ್‌ಡಿಆರ್ 10 ಅನ್ನು ಬೆಂಬಲಿಸುತ್ತದೆ. ಇದು ಮೂರು ಬದಿಗಳಲ್ಲಿ "ಫ್ರೇಮ್‌ಲೆಸ್" ವಿನ್ಯಾಸಕ್ಕೆ 96% ಸ್ಕ್ರೀನ್-ಟು-ಬಾಡಿ ಅನುಪಾತದ ಬೋಟ್ಸ್‌ ಅನ್ನು ಹೊಂದಿದೆ. ಸ್ಮಾರ್ಟ್ ಟಿವಿ ಪ್ರಮಾಣಿತ 16: 9 ರಚನೆ ಅನುಪಾತ, 60Hz ರಿಫ್ರೆಶ್ ರೇಟ್‌ ಮತ್ತು 10,00,000: 1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ A55 ಕ್ವಾಡ್-ಕೋರ್ ಸಿಪಿಯು ಪ್ರೊಸೆಸರ್‌ ಅನ್ನು ಹೊಂದಿದೆ. ಜೊತೆಗೆ ಇದು 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೆ ಇದು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2.4GHz ವೈ-ಫೈ, ಬ್ಲೂಟೂತ್, ಮೂರು ಹೆಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, ಆಪ್ಟಿಕಲ್ ಪೋರ್ಟ್, ಎತರ್ನೆಟ್ ಪೋರ್ಟ್ ಮತ್ತು ಹೆಡ್‌ಫೋನ್ ಜ್ಯಾಕ್‌ ಅನ್ನು ಬೆಂಬಲಿಸಲಿದೆ. ಇದು ಹೆಡ್‌ಫೋನ್‌ಗಳನ್ನು ಸಂಪರ್ಕಿಸಲು ಮತ್ತು ಇತರರಿಗೆ ತೊಂದರೆಯಾಗದಂತೆ ಕೇಳಲು ಅನುವು ಮಾಡಿಕೊಡುತ್ತದೆ. ಡೈವಾ 4ಕೆ ಯುಹೆಚ್‌ಡಿ ಸ್ಮಾರ್ಟ್ ಟಿವಿ ಸಹ ವಿಷಯವನ್ನು ಸುಲಭವಾಗಿ ಪ್ರವೇಶಿಸಲು ವಾಯ್ಸ್‌ ಆಲರ್ಟ್‌ಗಳನ್ನು ಬೆಂಬಲಿಸುತ್ತದೆ.

ಸ್ಮಾರ್ಟ್‌ಟಿವಿ

ಇದಲ್ಲದೆ ಡೈವಾ 4K UHD ಸ್ಮಾರ್ಟ್‌ಟಿವಿ D50162FL ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿ ಸ್ಕ್ರೀನ್ ಮಿರರಿಂಗ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಏರ್ ಮೌಸ್ ಆಗಿ ಸಹ ಬಳಸಬಹುದು. ಇದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಯೂಟ್ಯೂಬ್, ಡಿಸ್ನಿ + ಹಾಟ್‌ಸ್ಟಾರ್, Zee5, ಸೋನಿ ಲಿವ್, ವೂಟ್ ಮತ್ತು ಇನ್ನೂ ಹೆಚ್ಚಿನ ಅಪ್ಲಿಕೇಶನ್ ಪ್ರಮಾಣೀಕರಣಗಳನ್ನು ಹೊಂದಿದೆ. ಡೈವಾ 4K UHD ಸ್ಮಾರ್ಟ್‌ಟಿವಿ D50162FL ಭಾರತದಲ್ಲಿ ಬೆಲೆ 39,990 ರೂ. ಹೊಂದಿದ್ದು, ಇದು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

Most Read Articles
Best Mobiles in India

English summary
Daiwa 4K UHD Smart TV D50162FL comes with 20W speakers and has a standard 60Hz refresh rate with a 16:9 aspect ratio.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X