ಜಿಯೋ ಎಫೆಕ್ಟ್!!..ಮತ್ತೊಂದು ಟೆಲಿಕಾಂ ಕಂಪೆನಿ ಶವಪೆಟ್ಟಿಗೆಗೆ ಕೊನೆ ಮೊಳೆ!!

|

ಸಾಲದ ಹೊರೆಯಿಂದ ಮುಚ್ಚಿದ ರಿಲಾಯನ್ಸ್ ಕಮ್ಯುನಿಕೇಶನ್‌ನಂತೆಯೇ ಮತ್ತೊಂದು ಟೆಲಿಕಾಂ ಕಂಪೆನಿ ದಿವಾಳಿಯಾಗುವ ಹಂತಕ್ಕೆ ಬಂದು ನಿಂತಿದೆ.! ಭಾರತದ ಟೆಲಿಕಾಂನಲ್ಲಿ ನಡೆಯುತ್ತಿರುವ ಭಾರೀ ದರಸಮರಕ್ಕೆ ಮತ್ತೊಂದು ಕಂಪೆನಿ ನಲುಗಿದ್ದು ಸದ್ಯದಲ್ಲಿಯೇ ದಿವಾಳಿತನದ ಅರ್ಜಿ ಸಲ್ಲಿಸಲಿದೆ ಎನ್ನಲಾಗಿದೆ.!!

ಜಿಯೋ ಎಫೆಕ್ಟ್!!..ಮತ್ತೊಂದು ಟೆಲಿಕಾಂ ಕಂಪೆನಿ ಶವಪೆಟ್ಟಿಗೆಗೆ ಕೊನೆ ಮೊಳೆ!!

ಹೌದು, ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ದರಸಮರವನ್ನು ಅದುರಿಸಲಾಗದೆ ಏರ್‌ಸೆಲ್ ಕಂಪೆನಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ.! ಹಾಗಾದರೆ, ಆರ್‌ಕಾಂ ನಂತರ ಎರಡನೇ ಕಂಪೆನಿ ಏರ್‌ಸೆಲ್ ದಿವಾಳಿ ಘೋಷಿಸಿಕೊಳ್ಳಲು ಕಾರಣಗಳೇನು? ಇದರಿಂದ ಟೆಲಿಕಾಂ ಮೇಲೆ ಬೀರಬಹದಾದ ಪರಿಣಾಮಗಳೇನು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜಿಯೋ ಎಫೆಕ್ಟ್!!

ಜಿಯೋ ಎಫೆಕ್ಟ್!!

ಟೆಲಿಕಾಂಗೆ ಜಿಯೋ ಎಂಟ್ರಿ ನೀಡಿದ ನಂತರ ಟೆಲಿಕಾಂನಲ್ಲಿ ಭಾರೀ ದರಸಮರ ಉಂಟಾಗಿದೆ. ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾದಂತಹ ಕಂಪೆನಿಗಳು ದರಸಮರಕ್ಕೆ ಮುಂದಾಗಿದ್ದರೆ, ಇತರೆ ಸಣ್ಣಪುಟ್ಟ ಕಂಪನಿಗಳು ಭಾರೀ ಸಂಕಷ್ಟಕ್ಕೆ ಸಿಲುಕಿ ದಿವಾಳಿಯ ಹಂತಕ್ಕೆ ಬಂದುನಿಂತಿವೆ.!!

ದಿವಾಳಿ ಅರ್ಜಿ!!

ದಿವಾಳಿ ಅರ್ಜಿ!!

ಭಾರತದ ಟೆಲಿಕಾಂನಲ್ಲಿ ನಡೆಯುತ್ತಿರುವ ಭಾರೀ ದರಸಮರದಿಂದ ನಷ್ಟಕ್ಕೆ ತುತ್ತಾಗಿರುವ ಏರ್‌ಟೆಲ್ ಏರ್‌ಸೆಲ್‌ ದಿವಾಳಿ ಅರ್ಜಿ ಸಲ್ಲಿಸುತ್ತಿದೆ. ಏರ್‌ಸೆಲ್‌ ಕಂಪನಿಯ ಆಡಳಿತ ಮಂಡಳಿ ವಿಸರ್ಜನೆ ಬಳಿಕ ಸದ್ಯದಲ್ಲಿಯೇ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ(ಎನ್‌ಸಿಎಲ್‌ಟಿ) ದಿವಾಳಿತನದ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.!!

15,500 ಕೋಟಿ ರೂ. ಸಾಲ!!

15,500 ಕೋಟಿ ರೂ. ಸಾಲ!!

ಏರ್‌ಸೆಲ್‌ನ ಪುನಶ್ಚೇತನಕ್ಕೆ ಮಲೇಷಿಯಾದ ಮ್ಯಾಕ್ಸಿಸ್‌ ಪೋಷಕ ಸಂಸ್ಥೆ ರೂಪಿಸಿದ ಯೋಜನೆಗಳು ಫಲಕಾರಿಯಾಗಿಲ್ಲ. 15,500 ಕೋಟಿ ರೂ. ಸಾಲ ಸಂಬಂಧ ಸಾಲದಾತರ ಜತೆ ಸೆಪ್ಟೆಂಬರ್‌ನಿಂದ ನಡೆಸಿದ ಮಾತುಕತೆಗಳು ಫಲ ನೀಡಿಲ್ಲ ಹಾಗಾಗಿ, ಬೇರೆ ದಾರಿ ಇಲ್ಲದೇ ಏರ್‌ಸೆಲ್ ತನ್ನ ಶವಪೆಟ್ಟಿಗೆ ತಾನೇ ಮೊಳೆ ಹೊಡೆದುಕೊಳ್ಳುತ್ತಿದೆ.!!

ಬೇರೆ ದಾರಿ ಕಾಣುತ್ತಿಲ್ಲ.!!

ಬೇರೆ ದಾರಿ ಕಾಣುತ್ತಿಲ್ಲ.!!

ಏರ್‌ಸೆಲ್ ಕಂಪನಿಯ ನಿರ್ವಹಣೆಗೆ ಹಣದ ಕೊರತೆ ಎದುರಾಗಿದ್ದು, ಬೃಹತ್‌ ಕಂಪನಿಯಲ್ಲಿ ವಿಲೀನ ಮತ್ತು ಬಂಡವಾಳ ಆಕರ್ಷಿಸುವ ಯೋಜನೆಗಳು ವಿಫಲಗೊಂಡಿದೆ. ಇದರಿಂದ ಸಂಕಷ್ಟ ನಿರ್ವಹಣೆಗೆ ಬೇರೆ ದಾರಿ ಕಾಣುತ್ತಿಲ್ಲ. ವಾರಾಂತ್ಯದ ಒಳಗೆ ವೇತನ ವಿತರಣೆಯನ್ನು ಕಂಪನಿ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.!!

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ಪ್ರತಿಕ್ರಿಯೆ ಇಲ್ಲ!!

ಪ್ರತಿಕ್ರಿಯೆ ಇಲ್ಲ!!

ಏರ್‌ಸೆಲ್ ದಿವಾಳಿತನದ ಅರ್ಜಿ ಸಲ್ಲಿಸುತ್ತಿದೆ ಎಂಬುದರ ಬಗ್ಗೆ ಉದ್ಯಮಿ ಆನಂದ ಕೃಷ್ಣನ್‌ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಏರ್‌ಸೆಲ್‌ಗೆ ಸಾಲದಾತನಾಗಿರುವ ಎಸ್‌ಬಿಐ ಬ್ಯಾಂಕ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಲು ಮುಂದಾಗಿಲ್ಲ.! ಹಾಗಾಗಿ, ಟೆಲಿಕಾಂ ವಲಯದಲ್ಲಿ ಮತ್ತೊಂದು ವಿಕೆಟ್ ಬೀಳುತ್ತಿದೆ ಎನ್ನಬಹುದು.!!

ಕರ್ನಾಟಕ ವಿದ್ಯಾರ್ಥಿಗಳಿಂದ ಅದ್ಬುತ ''ಬ್ಲೂಟೂತ್ ಹೆಲ್ಮೆಟ್'' ಅವಿಷ್ಕಾರ!..ರಾಷ್ಟ್ರವ್ಯಾಪಿ ಸುದ್ದಿ!!

Most Read Articles
Best Mobiles in India

English summary
Telecom company Aircel will shortly file for bankruptcy at the National Company Law Tribunal . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more