ದೀಪಾವಳಿ ವಿಥ್‌ ಲೆನೊವೊ ಸೇಲ್‌: ಲ್ಯಾಪ್‌ಟಾಪ್‌ಗಳಿಗೆ ವಿಶೇಷ ರಿಯಾಯಿತಿ!

|

ಭಾರತದಲ್ಲಿ ದೀಪಾವಳಿ ಸಂಭ್ರಮ ಶುರುವಾಗುವುದಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಇದೇ ಸಂದರ್ಭದಲ್ಲಿ ಇ-ಕಾಮರ್ಸ್‌ ತಾಣಗಳು, ಎಲೆಕ್ಟ್ರಾನಿಕ್ಸ್‌ ವಲಯದ ಕಂಪೆನಿಗಳು ಸಾಕಷ್ಟು ರಿಯಾಯಿತಿ ದರದಲ್ಲಿ ತಮ್ಮ ಪ್ರಾಡಕ್ಟ್‌ಗಳನ್ನ ಸೇಲ್‌ ಮಾಡುತ್ತಿವೆ. ಆನ್‌ಲೈನ್‌ ಗ್ರಾಹಕರಿಗಂತೂ ಹಬ್ಬದ ಸಂಭ್ರಮ ಈ ಭಾರಿ ಇನ್ನಷ್ಟು ಇಮ್ಮಡಿಯಾಗುವಂತೆ ಮಾಡಿವೆ. ಸದ್ಯ ಲೆನೊವೊ ಕಂಪೆನಿ ಕೂಡ ಡೀಪಾವಳಿ ಪ್ರಯುಕ್ತ ದೀಪಾವಳಿ ವಿತ್‌ ಲೆನೊವೊ ಸೇಲ್‌ ಅನ್ನು ಶುರುಮಾಡಿದೆ. ಈ ಸಮಯದಲ್ಲಿ ಸಾಕಷ್ಟು ರಿಯಾಯಿತಿ ದರದಲ್ಲಿ ಲ್ಯಾಪ್‌ಟಾಪ್‌ಗಳನ್ನ ಖರೀದಿಸಬಹುದಾಗಿದೆ.

ದೀಪಾವಳಿ ವಿತ್ ಲೆನೊವೊ ಸೇಲ್ 2020

ಹೌದು, ದೀಪಾವಳಿ ವಿತ್ ಲೆನೊವೊ ಸೇಲ್ 2020ನಲ್ಲಿ ಲೆನೊವೊ ತನ್ನ ಅತಿ ಹೆಚ್ಚು ಮಾರಾಟವಾದ ಲ್ಯಾಪ್‌ಟಾಪ್‌ಗಳ ಮೇಲೆ ಸಾಕಷ್ಟು ರಿಯಾಯಿತಿಯನ್ನ ನೀಡುತ್ತಿದೆ. ಆದ್ದರಿಂದ, ನೀವು ಈಗ ಕಂಪನಿಯ ವೆಬ್‌ಸೈಟ್‌ನಿಂದ ನೇರವಾಗಿ ಸಾರ್ವಕಾಲಿಕ ಕಡಿಮೆ ಬೆಲೆಯಲ್ಲಿ ಲೆನೊವೊದಿಂದ ಕೆಲವು ಹೊಸ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದಾಗಿದೆ. ಸದ್ಯ ಈ ಸೇಲ್‌ನಲ್ಲಿ ಲೆನೊವೊ ಕಂಪನಿಯು ನೀಡುತ್ತಿರುವ ಕೆಲವು ಅತ್ಯುತ್ತಮ ಗೇಮಿಂಗ್ ಮತ್ತು ಬ್ಯುಸಿನೆಸ್‌ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಲೀಜನ್ 5I

ಲೆನೊವೊ ಲೀಜನ್ 5I

ಲೆನೊವೊ ಲೀಜನ್ 5I ಲ್ಯಾಪ್‌ಟಾಪ್‌ ಮೂಲಬೆಲೆ 1,25,890 ರೂ. ಆಗಿದ್ದು, ಲೆನೊವೊ ಸೇಲ್‌ನಲ್ಲಿ ಕೇವಲ 87,490, ರೂಗಳಿಗೆ ಲಭ್ಯವಾಗಲಿದೆ. ಇದು ತೆರಿಗೆ ಮತ್ತು ಶಿಫ್ಟಿಂಗ್‌ ಚಾರ್ಜ್‌ ಅನ್ನು ಒಳಗೊಂಡಿದೆ. ಈ ಮೂಲಕ 38,400 ರೂ.ಗಳಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಲೆನೊವೊ ಐಡಿಯಾಪ್ಯಾಡ್ S340

ಲೆನೊವೊ ಐಡಿಯಾಪ್ಯಾಡ್ S340

14 ಇಂಟೆಲ್ ಪ್ರೊಸೆಸರ್ ಚಾಲಿತ ಲೆನೊವೊ ಐಡಿಯಾಪ್ಯಾಡ್ S340 (14) ಲೆನೊವೊ ದೀಪಾವಾಳಿ ಸೇಲ್‌ನಲ್ಲಿ ಕೇವಲ 58,490,ರೂ ಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 74,790 ರೂ. ಆಗಿದ್ದು, ಇದು ತೆಳುವಾದ ಮತ್ತು ಹಗುರವಾದ ಲ್ಯಾಪ್‌ಟಾಪ್ ಆಗಿದೆ. ಇದು ಅದ್ಭುತ ಬ್ಯಾಟರಿ ಅವಧಿಯೊಂದಿಗೆ ಅತ್ಯುತ್ತಮವಾದ ದಿನನಿತ್ಯದ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3 ಲ್ಯಾಪ್‌ಟಾಪ್‌ ದೀಪಾವಳಿ ವಿತ್‌ ಲೆನೊವೊ ಸೇಲ್‌ 2020 ಯಲ್ಲಿ ರಿಯಾಯಿತಿ ದರದಲ್ಲಿ 41,990,ರೂಗಳಿಗೆ ಲಭ್ಯವಾಗಲಿದೆ. ಇದು ತೆಳುವಾದ ಮತ್ತು ಹಗುರವಾದ ಬಜೆಟ್ ಲ್ಯಾಪ್‌ಟಾಪ್ ಆಗಿದ್ದು, ಇದನ್ನು ಸಾಗಿಸಲು ಸುಲಭವಾಗಿದೆ.

ಲೆನೊವೊ ಐಡಿಯಾಪ್ಯಾಡ್ S145

ಲೆನೊವೊ ಐಡಿಯಾಪ್ಯಾಡ್ S145

15AMD ಪ್ರೊಸೆಸರ್ ಬಲದೊಂದಿಗೆ ಕಾರ್ಯನಿರ್ವಹಿಸುವ ಲೆನೊವೊ ಐಡಿಯಾಪ್ಯಾಡ್ S145 (15) ಈಗ ಕೇವಲ 35,990 ರೂ ಬೆಲೆಯಲ್ಲಿ ಲಭ್ಯವಾಗಲಿದೆ.

ಲೆನೊವೊ ಐಡಿಯಾಪ್ಯಾಡ್ ಫ್ಲೆಕ್ಸ್ 5I

ಲೆನೊವೊ ಐಡಿಯಾಪ್ಯಾಡ್ ಫ್ಲೆಕ್ಸ್ 5I

ಲೆನೊವೊ ಐಡಿಯಾಪ್ಯಾಡ್ ಫ್ಲೆಕ್ಸ್ 5I ಲ್ಯಾಪ್‌ಟಾಪ್‌ ದೀಪಾವಳಿ ಸೇಲ್‌ನಲ್ಲಿ ಖರೀದಿಸಬಹುದಾದ ಮತ್ತೊಂದು ಅತ್ಯುತ್ತಮ ಲ್ಯಾಪ್‌ಟಾಪ್‌ ಆಗಿದೆ. ಇದು ತೆಳುವಾದ ಮತ್ತು ಹಗುರವಾದ ಲ್ಯಾಪ್‌ಟಾಪ್ ಆಗಿದ್ದು, ದೀಪಾವಳಿ ಸೇಲ್‌ನಲ್ಲಿ 46,990, ರೂ,ಗಳಿಗೆ ಖರೀದಿಸಬಹುದಾಗಿದೆ.

Most Read Articles
Best Mobiles in India

Read more about:
English summary
Lenovo is offering a sale on their highest selling laptops during Diwali With Lenovo Sale 2020.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X