ಭಾರತೀಯರಿಗೆ ಬಿಗ್‌ ಶಾಕ್‌! ಡೊಮಿನೊಸ್ ಇಂಡಿಯಾದ ಡೇಟಾ ಸೋರಿಕೆ!

|

ಇತ್ತೀಚಿನ ದಿನಗಳಲ್ಲಿ ಸೈಬರ್‌ ಅಟ್ಯಾಕ್‌ ಅನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಪ್ರತಿ ಭಾರಿಯೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರನ್ನು ಟಾರ್ಗೆಟ್‌ ಮಾಡುವ ಹ್ಯಾಕರ್‌ಗಳು ಈ ಭಾರಿ ಡೊಮಿನೊಸ್‌ ಇಂಡಿಯಾದ ಡೇಟಾಬೇಸ್‌ ಅನ್ನು ಹ್ಯಾಕ್‌ ಮಾಡಿದ್ದಾರೆ. ಈ ಮೂಲಕ ಪಿಜ್ಜಾ ಔಟ್‌ಲೆಟ್‌ನಲ್ಲಿ ಕ್ರೆಡಿಟ್‌ಕಾರ್ಡ್‌, ಡೆಬಿಟ್‌ ಕಾರ್ಡ್‌ ಮೂಲಕ ವ್ಯವಹಾರ ನಡೆಸಿರುವ ಗ್ರಾಹಕರ ಡೇಟಾ ಸೋರಿಕೆ ಆಗಿದೆ. ಇದರಲ್ಲಿ 10 ಲಕ್ಷ ಬಳಕೆದಾರರ ಕ್ರೆಡಿಟ್ ಕಾರ್ಡ್ ವಿವರಗಳನ್ನು 4 ಕೋಟಿ ರೂ.ಗೆ ಮಾರಾಟಕ್ಕೆ ಇಡಲಾಗಿದೆ ಎಂದು ವರದಿ ಆಗಿದೆ.

ಡೊಮಿನೊಸ್‌

ಹೌದು, ಭಾರತದಲ್ಲಿ ಪಿಜ್ಜಾ ಔಟ್‌ಲೆಟ್‌ ಡೊಮಿನೊಸ್‌ ಇಂಡಿಯಾದ ಡೇಟಾ ಬೇಸ್‌ ಮೇಲೆ ಸೈಬರ್‌ ಅಟ್ಯಾಕ್‌ ಆಗಿದೆ. ಐಟಿ, ಲೀಗಲ್, ಫೈನಾನ್ಸ್, ಮಾರ್ಕೆಟಿಂಗ್, ಆಪರೇಶನ್ಸ್ ಮುಂತಾದ 250 ಕ್ಕೂ ಹೆಚ್ಚು ಉದ್ಯೋಗಿಗಳ ವಿವರಗಳನ್ನು ಒಳಗೊಂಡಿರುವ ಡೊಮಿನೊಸ್‌ ಇಂಡಿಯಾದ 13 ಟಿಬಿ ಆಂತರಿಕ ಡೇಟಾಬೇಸ್‌ ಅನ್ನು ಹ್ಯಾಕರ್‌ ಹ್ಯಾಕ್‌ ಮಾಡಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಈ ಡೇಟಾ ಬೇಸ್‌ ಹ್ಯಾಕ್‌ನಲ್ಲಿ ಏನೆಲ್ಲಾ ಸೋರಿಕೆ ಆಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೊಮಿನೊಸ್‌

ಡೊಮಿನೊಸ್‌ ಇಂಡಿಯಾದ ಡೇಟಾ ಬೇಸ್‌ ಮೇಲೆ ಸೈಬರ್‌ ಅಟ್ಯಾಕ್‌ ನಡೆದಿದ್ದು, ಇದರಲ್ಲಿ ಸಾಕಷ್ಟು ಗ್ರಾಹಕರ ಡೇಟಾ ಸೋರಿಕೆ ಆಗಿದೆ. ಗ್ರಾಹಕರ ಹೆಸರುಗಳು, ಫೋನ್ ಸಂಖ್ಯೆಗಳು, ಇಮೇಲ್ ಐಡಿಗಳು, ವಿತರಣಾ ವಿಳಾಸ, ಪಾವತಿ ವಿವರಗಳು ಮುಂತಾದ ವಿವರಗಳನ್ನು ಒಳಗೊಂಡಿರುವ 18 ಕೋಟಿ ಆರ್ಡರ್ ವಿವರಗಳನ್ನು ಒಳಗೊಂಡ ಡೇಟಾವನ್ನು ಹ್ಯಾಕರ್‌ಗಳು ಹ್ಯಾಕ್‌ ಮಾಡಿದ್ದಾರೆ. ಈ ವಿವರಗಳಲ್ಲಿ ಡೊಮಿನೊಸ್ ಇಂಡಿಯಾ ಅಪ್ಲಿಕೇಶನ್‌ನಲ್ಲಿ ಶಾಪಿಂಗ್ ಮಾಡಲು ಬಳಸುವ 10 ಲಕ್ಷಕ್ಕೂ ಹೆಚ್ಚು ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.

ಡೇಟಾಬೇಸ್

ಇದಲ್ಲದೆ ಹ್ಯಾಕರ್‌ಗಳು ಸಂಪೂರ್ಣ ಡೇಟಾಬೇಸ್ ಅನ್ನು ಒಂದೇ ಖರೀದಿದಾರರಿಗೆ ಮಾರಾಟ ಮಾಡುವ ಗುರಿಯನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ. ಅಲೋನ್ ಗಾಲ್ ಅವರಿಂದ ಬಂದಿರುವ ವರದಿಯ ಪ್ರಕಾರ, ಹ್ಯಾಕರ್‌ಗಳು $550,000 ಬೆಲೆಗೆ ಈ ಡೇಟಾವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಅಂದರೆ ಡಾರ್ಕ್‌ವೆಬ್‌ನಲ್ಲಿ ಇಡೀ ಡೇಟಾಬೇಸ್‌ಗೆ ಸುಮಾರು 4 ಕೋಟಿ ರೂ. ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕಂಪ್ಯೂಟರ್

ಇತ್ತೀಚಿನ ದಿನಗಳಲ್ಲಿ ಪ್ರತಿ ದಿನವೂ ಸೈಬರ್ ದಾಳಿ ಪ್ರಕರಣಗಳು ಅಪಾಯಕಾರಿ ಮಟ್ಟದಲ್ಲಿ ಏರುತ್ತಿವೆ. ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ದತ್ತಾಂಶದ ಪ್ರಕಾರ, ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಭಾರತದಲ್ಲಿ ಸೈಬರ್ ದಾಳಿಯು ಸುಮಾರು 300 ಪ್ರತಿಶತದಷ್ಟು ಹೆಚ್ಚಾಗಿದೆ, ಇದು 2019 ರಲ್ಲಿ 3,94,499 ರಿಂದ 2020 ರಲ್ಲಿ 11,58,208 ಕ್ಕೆ ಏರಿದೆ. ಎನ್ನಲಾಗಿದೆ. ಸದ್ಯ ಟೆಕ್ನಾಲಜಿ ಹೆಚ್ಚಾದಂತೆ ಹ್ಯಾಕರ್‌ಗಳು ಕೂಡ ಸ್ಮಾರ್ಟ್‌ ಆಗುತ್ತಿದ್ದು, ಡೇಟಾ ಸುರಕ್ಷತೆಯ ಬಗ್ಗೆ ಎಚ್ಚರವಹಿಸುವುದು ಇಂದು ಅನಿವಾರ್ಯವಾಗಿದೆ.

Most Read Articles
Best Mobiles in India

English summary
Domino’s India data leak: According to Alon Gal co-founder of an Israeli cybercrime intelligence, popular pizza outlet Domino’s India has fallen victim to a massive cyberattack. Check details.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X