ಹೊಸ Social Media ತೆರೆದ ಟ್ರಂಪ್!..ಫೇಸ್‌ಬುಕ್‌, ಟ್ವಿಟರ್‌ ಕಥೆ ಏನು?

|

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮದೇ ಆದ ಹೊಸ Social Media ಆರಂಭಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಇತ್ತೀಚಿಗೆ ಟ್ವಿಟರ್ ಮತ್ತು ಫೇಸ್‌ಬುಕ್‌ನಿಂದ ತನ್ನ ಖಾತೆಗಳನ್ನು ಬಹಿಷ್ಕಾರ ಗೊಂಡಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲ್ಲೆಯಲ್ಲಿ ಪ್ರಸ್ತುತ ಲೀಡ್ ನಲ್ಲಿರುವ ಸೋಶಿಯಲ್ ಮೀಡಿಯಾಗಳಿಗೆ ಸೆಡ್ಡು ಹೊಡೆಯಲು ಸ್ವಂತ ತಮ್ಮದೇ ಸೋಶಿಯಲ್ ಮೀಡಿಯಾ ಅನ್ನು ಪ್ರಾರಂಭ ಮಾಡಿಕೊಂಡಿದ್ದಾರೆ.

ಹೊಸ Social Media ತೆರೆದ ಟ್ರಂಪ್!..ಫೇಸ್‌ಬುಕ್‌, ಟ್ವಿಟರ್‌ ಕಥೆ ಏನು?

ಹೌದು, ಡೊನಾಲ್ಡ್ ಟ್ರಂಪ್ ಅವರು 'TRUTH Social' ಎಂಬ ಹೆಸರಿನ ಹೊಸ ಸಾಮಾಜಿಕ ಜಾಲತಾಣವನ್ನು ಶುರು ಮಾಡಲು ಮುಂದಾಗಿದ್ದಾರೆ. ಮುಂದಿನ ತಿಂಗಳು ಬೀಟಾ ಆವೃತ್ತಿಯಲ್ಲಿ ಅನಾವರಣ ಮಾಡುವ ಸಾಧ್ಯತೆಗಳಿವೆ. ಈ ನೂತನ ಜಾಲತಾಣವು ಟ್ರಂಫ್ ಮಿಡಿಯಾ ಮತ್ತು ಟೆಕ್ನಾಲಜಿ ಗ್ರೂಪ್ ಮಾಲೀಕತ್ವದಲ್ಲಿರಲಿದೆ ಎಂದು ತಿಳಿದು ಬಂದಿದೆ. ಹೊಸ TRUTH Social ಸಂಸ್ಥೆ ವಿಶ್ವದ ಇತರ ದೊಡ್ಡ ಸಾಮಾಜಿಕ ತಾಣಗಳಿಗೆ ಸೆಡ್ಡು ಹೊಡೆಯಲಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೊಸ Social Media ತೆರೆದ ಟ್ರಂಪ್!..ಫೇಸ್‌ಬುಕ್‌, ಟ್ವಿಟರ್‌ ಕಥೆ ಏನು?

ನಾವು ವಿಶ್ವದಲ್ಲಿ ವಾಸಿಸುತ್ತಿದ್ದೇವೆ. ವಿಶ್ವಕ್ಕೆ ಮಾರಕವಾದ ತಾಲಿಬಾನಿಗಳು ಟ್ವಿಟರ್ ಬಳಕೆ ಮಾಡುತ್ತಿದ್ದಾರೆ. ಆದರೂ ಅಮೆರಿಕ ಅಧ್ಯಕ್ಷರು ಬಾಯ್ಮುಚ್ಚಿಕೊಂಡಿದ್ದಾರೆ ಎಂದು ಟ್ರಂಪ್ ಸಂದರ್ಭದಲ್ಲಿ ವ್ಯಂಗ್ಯವಾಡಿದ್ದಾರೆ. ಒಂಬತ್ತು ತಿಂಗಳ ಹಿಂದೆ ಟ್ರಂಪ್ ಅವರನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್ ಹೊರ ಹಾಕಿದ್ದ ನಂತರ ಮೌನಕ್ಕೆ ಶರಣಾಗಿದ್ದ ಟ್ರಂಪ್, ಇದೀಗ ವಿಶ್ವ ಮನ್ನಣೆಯ ಸೋಶಿಯಲ್ ಮೀಡಿಯಾಗಳಿಗೆ ಫೈಟ್‌ ನೀಡುವಂತಹ ಹೊಸ ಜಾಲತಾಣ ಸ್ಥಾಪಿಸಿ ಗಮನ ಸೆಳೆದಿದ್ದಾರೆ.

ಹೊಸ Social Media ತೆರೆದ ಟ್ರಂಪ್!..ಫೇಸ್‌ಬುಕ್‌, ಟ್ವಿಟರ್‌ ಕಥೆ ಏನು?

ಟ್ರಂಪ್ ಅವರು ಅಮೆರಿಕಾ ರಾಷ್ಟ್ರದ ಅತ್ಯಂತ ಪ್ರಭಾವಶಾಲಿ ರಿಪಬ್ಲಿಕನ್ ಆಗಿ ಉಳಿಯಲು ಪ್ರಯತ್ನಿಸುತ್ತಿರುವುದರಿಂದ ಪ್ರಚಾರ-ಶೈಲಿಯ ರ್ಯಾಲಿಗಳನ್ನು ಒಳಗೊಂಡಂತೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಪ್ರಾರಂಭಿಸಿದ್ದಾರೆ. ಮೇ ತಿಂಗಳಲ್ಲಿ, ಅವರು "ಫ್ರಂ ದಿ ಡೆಸ್ಕ್ ಆಫ್ ಡೊನಾಲ್ಡ್ ಜೆ. ಟ್ರಂಪ್" ಎಂಬ ಬ್ಲಾಗ್ ಅನ್ನು ಪ್ರಾರಂಭಿಸಿದರು, ಇದು ಒಂದು ಪ್ರಮುಖ ಹೊಸ ಔಟ್ಲೆಟ್ ಆಗಿತ್ತು. ಇದೀಗ ತನ್ನ ಇಂಟರ್ನೆಟ್ ಜನಪ್ರಿಯತೆಯನ್ನು ಮರುಪಡೆಯಲು ಮಾರ್ಗಗಳನ್ನು ಹುಡುಕುವ ಮೂಲಕ ಟೆಕ್ ದೈತ್ಯರ ವಿರುದ್ಧ ಟ್ರಂಪ್ ಅವರು ಸವಾಲನ್ನು ಎಸೆದಿದ್ದಾರೆ.

ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ವಿಶ್ವದ ಇತರ ಪ್ರಬಲ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಹಿಡಿತದ ಬಗ್ಗೆ ಟ್ರಂಪ್ ಸಿಟ್ಟಾಗಿದ್ದು, ಅದರಲ್ಲೂ ಟ್ವಿಟ್ಟರ್ ತಾಣದ ವಿರುದ್ಧ ಹೆಚ್ಚು ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ.

Most Read Articles
Best Mobiles in India

English summary
Donald Trump To Launch New Social Media Platform TRUTH Social.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X