ಕೇಂದ್ರ ಬಜೆಟ್ 2022-23: ಶೀಘ್ರದಲ್ಲೇ ಇ-ಪಾರ್ಸ್‌ಪೋರ್ಟ್‌ ಪ್ರಾರಂಭಿಸುವುದಾಗಿ ಘೋಷಣೆ!

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು 2022-23ನೇ ಸಾಲಿನ ಬಜೆಟ್‌ ಮಂಡಿಸಿದ್ದಾರೆ. ಇನ್ನು ಈ ವರ್ಷದ ಬಜೆಟ್‌ನಲ್ಲಿ ಕೂಡ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಅದರಂತೆ 2022-23ರಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ಬಿಡುಗಡೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ. ಇ-ಪಾಸ್‌ಪೋರ್ಟ್‌ಗಳು ಎಂಬೆಡೆಡ್ ಚಿಪ್‌ಗಳನ್ನು ಹೊಂದಿರಲಿವೆ ಎಂದು ಹೇಳಲಾಗಿದೆ. ಇನ್ನು ಈ ಇ-ಪಾಸ್‌ಪೋರ್ಟ್‌ಗಳು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಮಾನದಂಡಗಳಿಗೆ ಅನುಗುಣವಾಗಿರುತ್ತವೆ.

ಇ-ಪಾಸ್‌ಪೋರ್ಟ್‌

ಹೌದು, ಭಾರತದಲ್ಲಿ 2022-23ರಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ಪರಿಚಯಿಸುವುದಾಗಿ ಕೇಂದ್ರ ಬಜೆಟ್‌ನಲ್ಲಿ ಹೇಳಲಾಗಿದೆ. ಇ-ಪಾಸ್‌ಪೋರ್ಟ್‌ಗಳು ಸಾಂಪ್ರದಾಯಿಕ ಪಾಸ್‌ಪೋರ್ಟ್‌ಗಳ ಮಾದರಿಯ ಉದ್ದೇಶವನ್ನು ಹೊಂದಿವೆ. ಆದರೆ ಎಂಬೆಡೆಡ್ ಚಿಪ್‌ಗಳು ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನದೊಂದಿಗೆ ಬರುತ್ತವೆ ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಹಾಗಾದ್ರೆ ಇ-ಪಾಸ್‌ಪೋರ್ಟ್‌ಗಳು ಹೇಗಿರಲಿವೆ. ಇದರ ಬಗ್ಗೆ ಬಜೆಟ್‌ನಲ್ಲಿ ಹೇಳಿರುವುದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ

ಭಾರತದಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ಪರಿಚಯಿಸುವ ಸಮಯ ತುಂಬಾ ಹತ್ತಿರದಲಿದೆ. ಎಂಬೆಡೆಡ್‌ ಮೈಕ್ರೋಚಿಪ್‌ಗಳನ್ನು ಹೊಂದಿರುವ ಇ-ಪಾಸ್‌ಪೋರ್ಟ್‌ಗಳು ಸಾಕಷ್ಟು ಸುರಕ್ಷಿತವಾಗಿರುತ್ತವೆ ಎನ್ನಲಾಗಿದೆ. ಪ್ರಮುಖವಾಗಿ ಭದ್ರತಾ ಡೇಟಾವನ್ನು ಇದರಲ್ಲಿ ಸಂಗ್ರಹಿಸಲಾಗುತ್ತದೆ. ಭಾರತವು ಪ್ರಸ್ತುತ ಬಳಕೆದಾರರಿಗೆ ಮುದ್ರಿತ ಪಾಸ್‌ಪೋರ್ಟ್‌ಗಳನ್ನು ಮಾತ್ರ ನೀಡುತ್ತದೆ. ಆದರೆ ಇ-ಪಾಸ್‌ಪೋರ್ಟ್‌ಗಳು ಯುಎಸ್, ಯುಕೆ ಮತ್ತು ಜರ್ಮನಿ ಸೇರಿದಂತೆ ದೇಶಗಳಲ್ಲಿ ಲಭ್ಯವಿದೆ.ಇದೀಗ ಭಾರತದಲ್ಲಿ ಕೂಡ ಇ-ಪಾಸ್‌ಪೋರ್ಟ್‌ಗಳು ಲಭ್ಯವಾಗಲಿದ್ದು ಅತಂರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಅನುಕೂಲವಾಗಲಿದೆ.

ಇ-ಪಾಸ್‌ಪೋರ್ಟ್‌

ಇನ್ನು ಈ ಇ-ಪಾಸ್‌ಪೋರ್ಟ್‌ಗಳು ಸುರಕ್ಷಿತ ಬಯೋಮೆಟ್ರಿಕ್ ಡೇಟಾವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಇದು ಜಾಗತಿಕವಾಗಿ ವಲಸೆ ಪೋಸ್ಟ್‌ಗಳ ಮೂಲಕ ಸುಗಮ ಮಾರ್ಗವನ್ನು ಖಚಿತಪಡಿಸುತ್ತದೆ. ಜೊತೆಗೆ ಇ-ಪಾಸ್‌ಪೋರ್ಟ್ ICAO ಕಂಪ್ಲೈಂಟ್ ಆಗಿರುತ್ತದೆ ಇದನ್ನು ನಾಸಿಕ್‌ನ ಇಂಡಿಯಾ ಸೆಕ್ಯುರಿಟಿ ಪ್ರೆಸ್‌ನಲ್ಲಿ ತಯಾರಿಸಲಾಗುವುದು ಎನ್ನಲಾಗಿದೆ. ಇದಲ್ಲದೆ ಮೈಕ್ರೋಚಿಪ್‌ಗಳಿಗಾಗಿ ಭಾರತ ಸರ್ಕಾರವು 'ಇಂಡಿಯಾ ಸೆಕ್ಯುರಿಟಿ ಪ್ರೆಸ್' ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಬಹಿರಂಗಪಡಿಸಿದ್ದಾರೆ.

ಇ-ಪಾಸ್‌ಪೋರ್ಟ್ ಎಂದರೇನು?

ಇ-ಪಾಸ್‌ಪೋರ್ಟ್ ಎಂದರೇನು?

ಇ-ಪಾಸ್‌ಪೋರ್ಟ್ ಹೆಸರೇ ಸೂಚಿಸುವಂತೆ ಸಾಂಪ್ರದಾಯಿಕ ಪಾಸ್‌ಪೋರ್ಟ್‌ಗಿಂತ ಭಿನ್ನವಾಗಿರಲಿದೆ. ಆದರೆ ಕಾರ್ಯಗಳು ಮಾತ್ರ ಸಾಂಪ್ರದಾಯಿಕ ಮಾದರಿಯ ಕಾರ್ಯಗಳನ್ನೇ ಹೊಂದಿರುತ್ತದೆ. ಆದರೆ ಇದು ಸಾಂಪ್ರದಾಯಿಕ ಪಾಸ್‌ಪೋರ್ಟ್‌ಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ. ಏಕೆಂದರೆ ಇ-ಪಾಸ್‌ಪೋರ್ಟ್ ಎಲೆಕ್ಟ್ರಾನಿಕ್ ಚಿಪ್ ಅನ್ನು ಒಳಗೊಂಡಿರುತ್ತದೆ. ಇದು ಮುದ್ರಿತ ಪಾಸ್‌ಪೋರ್ಟ್‌ನಂತೆಯೇ ಮಾಹಿತಿಯನ್ನು ಹೊಂದಿರುತ್ತದೆ. ಇನ್ನು ಮೈಕ್ರೋಚಿಪ್ ಪಾಸ್‌ಪೋರ್ಟ್ ನಲ್ಲಿ ಹೆಸರು, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ. ಅಲ್ಲದೆ ಇ-ಪಾಸ್‌ಪೋರ್ಟ್‌ ಹೊಂದಿದ್ದರೆ ಇಮಿಗ್ರೇಷನ್‌ ಕೌಂಟರ್‌ ಮುಂದೆ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸುತ್ತದೆ. ಇ-ಪಾಸ್‌ಪೋರ್ಟ್ ಅನ್ನು ಇಮಿಗ್ರೇಷನ್ ಕೌಂಟರ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಸ್ಕ್ಯಾನ್ ಮಾಡಬಹುದು. ಈಗಾಗಲೇ ಇ-ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಹೊಂದಿರುವ US, UK ಮತ್ತು ಜರ್ಮನಿ ಸೇರಿದಂತೆ 120 ದೇಶಗಳಲ್ಲಿ ಪರಿಚಯಿಸಲಾಗಿದೆ.

ಇ-ಪಾಸ್‌ಪೋರ್ಟ್‌ನ ವಿಶೇಷತೆ ಏನು?

ಇ-ಪಾಸ್‌ಪೋರ್ಟ್‌ನ ವಿಶೇಷತೆ ಏನು?

ಇ-ಪಾಸ್‌ಪೋರ್ಟ್ ಪಾಸ್‌ಪೋರ್ಟ್‌ ಹೊಂದಿರುವವರ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಚಿಪ್ ಅನ್ನು ಹೊಂದಿರುತ್ತದೆ. ಈ ಪಾಸ್‌ಪೋರ್ಟ್‌ನ ಹಿಂಭಾಗದಲ್ಲಿ ಇರಿಸಲಾಗುವ ಚಿಪ್ 64KB ಸ್ಟೋರೇಜ್‌ ಸ್ಪೇಸ್‌ ಅನ್ನು ಹೊಂದಿರಲಿದೆ. ಇನ್ನು ಈ ಚಿಪ್ ಪ್ರಾರಂಭಿಕ ಹಂತದಲ್ಲಿ 30 ಅಂತರರಾಷ್ಟ್ರೀಯ ಪ್ರವಾಸಗಳ ಡೇಟಾವನ್ನು ಹೊಂದಿರುತ್ತದೆ. ಜೊತೆಗೆ ಬೆರಳಚ್ಚು ಒಳಗೊಂಡ ಬಯೋಮೆಟ್ರಿಕ್ ಡೇಟಾದೊಂದಿಗೆ ಪಾಸ್‌ಪೋರ್ಟ್ ಹೊಂದಿರುವವರ ಚಿತ್ರವನ್ನು ಚಿಪ್ ಸಂಗ್ರಹಿಸುವ ಸಾದ್ಯತೆಯಿದೆ. ಇದು ಮುದ್ರಿತ ಪಾಸ್‌ಪೋರ್ಟ್‌ಗಿಂತ ಎಲೆಕ್ಟ್ರಾನಿಕ್ಸ್‌ ಚಿಪ್‌ನಲ್ಲಿ ಮಾಹಿತಿ ಹೊಂದಿರುವುದರಿಂದ ಪ್ರಯಾಣ ಮಾಡುವುದು ಸುಲಭವಾಗಲಿದೆ. ಅಂತರರಾಷ್ಟ್ರೀಯ ಪ್ರಯಾಣ ಇನ್ನು ಸುಲಭವಾಗಲಿದೆ. ಜೊತೆಗೆ ವಿಮಾನಯಾನದಲ್ಲಿ ಹೊಸ ಡಿಜಿಟಲೀಕರಣಕ್ಕೆ ಇದು ಸಹಾಯಮಾಡಲಿದೆ.

Most Read Articles
Best Mobiles in India

Read more about:
English summary
Finance Minister Nirmala Sitharaman announced today that e-passports with embedded chips will be rolled out in India in 2022-2023.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X