ನಿಮ್ಮ PFಗೆ ಈ ಬ್ಯಾಂಕ್ ಖಾತೆ ಲಿಂಕ್ ಮಾಡಿದರೇ, ನಿಮ್ಮ ಹಣ ನಿಮಗೆ ಸಿಗಲ್ಲ!

|

ನೌಕರರ ಭವಿಷ್ಯ ನಿಧಿ ಸಂಸ್ಥೆಯು ಉದ್ಯೋಗಿಗಳ ಪಾಲಿಗೆ ಕಷ್ಟಕಾಲಕ್ಕೆ ಆರ್ಥಿಕ ನೆರವಿನ ಭರವಸೆ ಆಗಿದೆ. ಪ್ರತಿ ತಿಂಗಳು ಕಾರ್ಯನಿರತ ಉದ್ಯೋಗಿಗಳ ಸಂಬಳದಲ್ಲಿನ ಒಂದು ನಿರ್ದಿಷ್ಟ ಮೊತ್ತ ಮತ್ತು ಉದೋಗ ಸಂಸ್ಥೆಯಿಂದ ಒಂದು ನಿರ್ದಿಷ್ಟ ಮೊತ್ತ ಉದ್ಯೋಗಿಯ ಪಿಎಫ್‌ ಖಾತೆಯಲ್ಲಿ ಜಮಾ ಆಗುತ್ತದೆ. ಹಣಕಾಸಿನ ತುರ್ತು ಅಗತ್ಯ ಇದ್ದಾಗ ಉದ್ಯೋಗಿಯು ತನ್ನ ಪಿಎಫ್ ಖಾತೆಯಿಂದ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದಾಗಿದೆ. ಸದ್ಯ ಕೋವಿಡ್ ಎರಡನೇ ಅಲೆ ಹೆಚ್ಚಿದ್ದು, ಬಹುತೇಕರು ಅಗತ್ಯ ಹಣಕಾಸಿನ ನೆರವಿಗೆ ಪಿಎಫ್‌ ಖಾತೆಯಿಂದ ಹಣ ವಿತ್‌ಡ್ರಾ ಮಾಡಲು ಮುಂದಾಗುತ್ತಾರೆ. ಈ ವೇಳೆ ಬ್ಯಾಂಕ್ ಮಾಹಿತಿ ನೀಡುವುದು ಅಗತ್ಯ.

ಬ್ಯಾಂಕ್‌ಗಳ

ಹೌದು, ಇತ್ತೀಚಿಗೆ ಕೆಲವು ಬ್ಯಾಂಕ್‌ಗಳ ವಿಲಿನದಿಂದಾಗಿ ಬ್ಯಾಂಕ್‌ಗಳ IFSC ಕೋಡ್ ಬದಲಾಗಿರುತ್ತವೆ. ಈ ನಿಟ್ಟಿನಲ್ಲಿ 1 ಏಪ್ರಿಲ್ 2021 ರಿಂದ ಜಾರಿಗೆ ಬರುವಂತೆ ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಅಲಹಾಬಾದ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕಾರ್ಪೊರೇಶನ್ ಬ್ಯಾಂಕ್ ಅಮಾನ್ಯವಾಗಿದೆ ಎಂದು ತನ್ನ ನೋಟಿಫಿಕೇಶನ್ ನಲ್ಲಿ EPF ತಿಳಿಸಿದೆ. ಹೀಗಾಗಿ ಪಿಎಫ್‌ ಖಾತೆದಾರರು ಬ್ಯಾಂಕ್‌ಗಳ ಮೂಲಕ ಸರಿಯಾದ IFSC ಕೋಡ್ ಪಡೆದು. ಉದ್ಯೋಗದಾತರ ಮೂಲಕ ಪಿಎಫ್‌ ಖಾತೆಯಲ್ಲಿ ಅಪ್‌ಡೇಟ್ ಮಾಡುವುದು. ಹಾಗಾದರೇ ಪಿಎಫ್‌ ಖಾತೆಯಲ್ಲಿ ಬ್ಯಾಂಕ್‌ ಮಾಹಿತಿ ಅಪ್‌ಡೇಟ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಅಕೌಂಟ್

EPFO ಸದಸ್ಯರಿಗಾಗಿ ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಅನ್ನು ಪರಿಚಯಿಸಿದೆ. ನೌಕರರ ಭವಿಷ್ಯ ನಿಧಿ (ಇಪಿಎಫ್) ಯೋಜನೆಗೆ ಕೊಡುಗೆ ನೀಡುವ ಪ್ರತಿಯೊಬ್ಬ ಇಪಿಎಫ್‌ಒ ಸದಸ್ಯರಿಗೆ ಯುಎಎನ್ ಒಂದು ಅನನ್ಯ ಸಂಖ್ಯೆಯಾಗಿದೆ. ನೌಕರರು ಸಂಸ್ಥೆಗಳನ್ನು ಬದಲಾಯಿಸಿದಾಗಲೂ ಯುಎಎನ್ ಒಂದೇ ಆಗಿರುತ್ತದೆ.

EPFO ಖಾತೆಯಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ನವೀಕರಿಸುಲು ಹೀಗೆ ಮಾಡಿರಿ:

EPFO ಖಾತೆಯಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ನವೀಕರಿಸುಲು ಹೀಗೆ ಮಾಡಿರಿ:

* EPFO ಸದಸ್ಯ ಪೋರ್ಟಲ್‌ಗೆ ಹೋಗಿ ಮತ್ತು ನಿಮ್ಮ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಿ.
* ಈಗ ಮೇಲಿನ ಮೆನುವಿನಲ್ಲಿ ‘ನಿರ್ವಹಿಸು' ಆಯ್ಕೆಗೆ ಹೋಗಿ.

ಬ್ಯಾಂಕ್

* ನಂತರ ಡ್ರಾಪ್-ಡೌನ್ ಮೆನುವಿನಿಂದ ‘ಕೆವೈಸಿ' ಆಯ್ಕೆಯನ್ನು ಕ್ಲಿಕ್ ಮಾಡಿ.
* ಡಾಕ್ಯುಮೆಂಟ್ ಪ್ರಕಾರದಲ್ಲಿ, ‘ಬ್ಯಾಂಕ್' ಆಯ್ಕೆಮಾಡಿ.

ಬಾಕಿ

* ಈಗ ನಿಮ್ಮ ಖಾತೆ ವಿವರಗಳನ್ನು ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ನವೀಕರಿಸಿ, ಮತ್ತು ಮುಂದುವರಿಯಲು ಸೇವ್ ಕ್ಲಿಕ್ ಮಾಡಿ.
* ನಿಮ್ಮ ವಿವರಗಳನ್ನು ಉಳಿಸಿದ ನಂತರ, ನೀವು ಅವುಗಳನ್ನು ‘ಅನುಮೋದನೆಗಾಗಿ ಬಾಕಿ ಉಳಿದಿರುವ ಕೆವೈಸಿ' ಆಯ್ಕೆಯ ಅಡಿಯಲ್ಲಿ ನೋಡಲು ಸಾಧ್ಯವಾಗುತ್ತದೆ.
* ಮುಂದೆ, ಡಾಕ್ಯುಮೆಂಟ್ ಪ್ರೂಫ್ ಅನ್ನು ನಿಮ್ಮ ಉದ್ಯೋಗದಾತರಿಗೆ ಸಲ್ಲಿಸಿ.

ಡಿಜಿಟಲ್

ನಿಮ್ಮ ಉದ್ಯೋಗದಾತರು ನಿಮ್ಮ ದಾಖಲೆಗಳನ್ನು ಪರಿಶೀಲಿಸಿದ ನಂತರ, ಸ್ಥಿತಿಯನ್ನು ಇಪಿಎಫ್‌ಒ ಪೋರ್ಟಲ್‌ನಲ್ಲಿ ‘ಡಿಜಿಟಲ್ ಅನುಮೋದಿತ ಕೆವೈಸಿ' ಅಡಿಯಲ್ಲಿ ತೋರಿಸಲಾಗುತ್ತದೆ. ಅನುಮೋದನೆಯ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು SMS ಅನ್ನು ಸಹ ಸ್ವೀಕರಿಸುತ್ತೀರಿ.

Most Read Articles
Best Mobiles in India

English summary
EPF: Cheque Book and Passbook of These Banks Invalid.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X