Just In
Don't Miss
- News
NEP- ತಿಂಗಳ ಬಳಿಕ ರಾಜ್ಯದ ಶಾಲೆಗಳಲ್ಲಿ ಎನ್ಇಪಿ ಜಾರಿ
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಮೇಷ, ಮಿಥುನ, ಸಿಂಹ, ವೃಶ್ಚಿಕ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಉತ್ತಮ ಸಮಯ
- Sports
DC vs PBKS: ಕೊನೆಯ ನಿಮಿಷದಲ್ಲಿ ಸ್ಟ್ರೈಕ್ ಬದಲಿಸಿ ಗೋಲ್ಡನ್ ಡಕೌಟ್ ಆದ ಡೇವಿಡ್ ವಾರ್ನರ್
- Movies
ಹೆಣ್ ಮಕ್ಕಳ ದಿಲ್ ಕದ್ದ ಅಭಿನವ್: ಹ್ಯಾಂಡ್ಸಮ್ ಹುಡುಗನ ಕಲರ್ ಫುಲ್ ಜಗತ್ತು ಹೇಗಿದೆ?
- Finance
ಮೇ 16ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಆಕರ್ಷಕ ಬೆಲೆಯಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಡಿ15 ಇವಿ ಸ್ಕೂಟರ್ ಬಿಡುಗಡೆಗೊಳಿಸಿದ ಬಿಗೌಸ್
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪಿಎಫ್ ಅಕೌಂಟ್ ಹೊಂದಿರುವವರು ಈ ಸ್ಟೋರಿಯನ್ನು ಓದಲೇಬೇಕು?
ನೌಕರರ ಭವಿಷ್ಯ ನಿಧಿ ಉದ್ಯೋಗಿಗಳ ಕಷ್ಟ ಕಾಲದಲ್ಲಿ ಆರ್ಥಿಕ ನೆರವನ್ನು ನೀಡುವ ನಿಧಿಯಾಗಿದೆ. ಇದೇ ಕಾರಣಕ್ಕೆ ಉದ್ಯೋಗಿಗಳು ತಾವು ದುಡಿಯುವ ಹಣದಲ್ಲಿ ಇಂತಿಷ್ಟು ಹಣವನ್ನು ಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ನೌಕರರು ಉದ್ಯೋಗ ಮಾಡುವ ಸಂಸ್ಥೆಗಳು ನೌಕರರಿಗೆ ಪಿಎಫ್ ವ್ಯವಸ್ಥೆಯನ್ನು ಮಾಡಿರುತ್ತವೆ. ಅಗತ್ಯ ಸಂದರ್ಭದಲ್ಲಿ ನೌಕರರು ಪಿಎಫ್ ಹಣವನ್ನು ವಿಥ್ಡ್ರಾ ಮಾಡಿಕೊಳ್ಳಬಹುದು. ಆದರೆ ಇತ್ತಿಚಿನ ದಿನಗಳಲ್ಲಿ ಪಿಎಫ್ ಹೆಸರಿನಲ್ಲಿ ವಂಚನೆ ಕ್ರಮಗಳು ಕೂಡ ನಡೆಯುತ್ತಿರೋದು ದಾಖಲಾಗಿವೆ.

ಹೌದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ತಮ್ಮ EPF ಖಾತೆಯ ಯಾವುದೇ ವಿವರಗಳನ್ನು ಆನ್ಲೈನ್ನಲ್ಲಿ ಅಪರಿಚಿತರರೊಂದಿಗೆ ಹಂಚಿಕೊಳ್ಳಬಾರದು ಎಂದು ಸೂಚಿಸಿದೆ. ಏಕೆಂದರೆ EPFO ಹೆಸರಿನಲ್ಲಿ ಒಟಿಪಿ ಕಳುಹಿಸುವ ವಂಚಕರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ ಎನ್ನಲಾಗಿದೆ. EPF ಲಿಂಕ್, OTP ವಂಚನೆಗಳ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ EPFO ತನ್ನ ಸದಸ್ಯರಿಗೆ ವಂಚನೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಹಾಗಾದ್ರೆ EPFO ಹೆಸರಿನಲ್ಲಿ ಒಟಿಪಿ ಸ್ಕ್ಯಾಮ್ ಹೇಗೆ ನಡೆಯುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

EPFO ಸದ್ಯಸರಿಗೆ ನಕಲಿ EPFO ಹೆಸರಿನಲ್ಲಿ ಲಿಂಕ್ಗಳನ್ನು ಕಳುಹಿಸೋದು ಅವರ ಒಟಿಪಿ ನಂಬರ್ ಪಡೆದು EPFO ಸದಸ್ಯರ ಖಾತೆಗೆ ಕನ್ನ ಹಾಕುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಹೆಚ್ಚಿನ ಜನರು ತಮ್ಮ ಪಿಎಫ್ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ EPFO ಸದಸ್ಯರು ಆಧಾರ್ ಕಾರ್ಡ್ ಸಂಖ್ಯೆ, ಪ್ಯಾನ್, ಬ್ಯಾಂಕ್ ಖಾತೆ ಸಂಖ್ಯೆ, ಯುಎಎನ್ ಸಂಖ್ಯೆಯಂತಹ ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು EPFO ಸಲಹೆ ನೀಡಿದೆ.

EPFO ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಎಲ್ಲಾ ಸದಸ್ಯರಿಗೆ ತನ್ನ ಎಚ್ಚರಿಕೆಯ ಸಂದೇಶವನ್ನು ಟ್ವೀಟ್ ಮಾಡಿದೆ. ಟ್ವೀಟ್ನಲ್ಲಿ, "#EPFO ತನ್ನ ಸದಸ್ಯರಿಗೆ ಆಧಾರ್, ಪ್ಯಾನ್, UAN, ಬ್ಯಾಂಕ್ ಖಾತೆ ಅಥವಾ OTP ಯಂತಹ ವೈಯಕ್ತಿಕ ವಿವರಗಳನ್ನು ಫೋನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ."ಎಂದು ಉಲ್ಲೇಖಿಸಲಾಗಿದೆ. ಜೊತೆಗೆ EPFO ಸದಸ್ಯರು ಎದುರಸಿಬಹುದಾದ ಸಮಸ್ಯೆಗಳ ಬಗ್ಗೆ ಕೂಡ ಮಾಹಿತಿ ನೀಡಿದೆ.

ಇದಲ್ಲದೆ EPFO ಎಂದಿಗೂ ಹಣವನ್ನು ಠೇವಣಿ ಮಾಡಲು ಕೇಳುವುದಿಲ್ಲ ಎಂದು ಟ್ವೀಟ್ ಮಾಡಿದೆ. ವಾಟ್ಸಾಪ್ ಅಥವಾ ಸೊಶೀಯಲ್ ಮೀಡಿಯಾ ಮುಖಾಂತರ ಯಾರೊಬ್ಬರನ್ನು ಕೂಡ ತಾವು ಬೇಟಿ ಮಾಡುವುದಿಲ್ಲ. ತಮ್ಮ ಅಗತ್ಯ ಮಾಹಿತಿಯನ್ನು ನಾವು ಬಯಸುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಒಂದು ವೇಳೆ ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳುವ ಅಥವಾ OTP ಅನ್ನು ಹಂಚಿಕೊಳ್ಳುವ ಕರೆಗಳು ಬಂದರೆ ಅಂತಹ ಕರೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ಹೇಳಿದೆ.

ನಿಮಗೆ EPFO ಅಥವಾ ಇತರ ಯಾವುದೇ ಕುಂದುಕೊರತೆಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದರೆ, EPFO ನ ಅಧಿಕೃತ ವೆಬ್ಸೈಟ್ - www.epfindia.gov.in ಅನ್ನು ಸಂಪರ್ಕಿಸಬಹುದು. ಅಲ್ಲದೆ, ತಮ್ಮ ಡಾಕ್ಯುಮೆಂಟ್ಗಳನ್ನು ಸುರಕ್ಷಿತವಾಗಿರಿಸಲು, ಇಪಿಎಫ್ಒ ಸದಸ್ಯರು ಅವುಗಳನ್ನು ಆನ್ಲೈನ್ನಲ್ಲಿ ಡಿಜಿಲಾಕರ್ ಸೇವ್ ಮಾಡಿಕೊಲ್ಳಬಹುದು. ಡಿಜಿಲಾಕರ್ನಲ್ಲಿರುವ ನಿಮ್ಮ ದಾಖಲೆಗಳು ಸುರಕ್ಷಿತವಾಗಿರಲಿದೆ.

ಇನ್ನು ದೀಪಾವಳಿ ಹಬ್ಬದ ಪ್ರಯುಕ್ತ ಕೇಂದ್ರ ಸರ್ಕಾರ ಐದು ಕೋಟಿ EPFO ಚಂದಾದಾರರಿಗೆ 2020-21ಕ್ಕೆ 8.5 ಶೇಕಡಾ ಬಡ್ಡಿ ದರವನ್ನು ಅನುಮೋದಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿಗಳ ಮೇಲಿನ 8.5 ಶೇಕಡಾ ಬಡ್ಡಿ ದರ ನೀಡಲಾಗಿತ್ತು. ಈ ವರ್ಷದ ಮಾರ್ಚ್ನಲ್ಲಿ ಕಾರ್ಮಿಕ ಸಚಿವರ ನೇತೃತ್ವದ ಇಪಿಎಫ್ಒದ ಅಪೆಕ್ಸ್ ಡಿಸಿಷನ್ ಮೇಕಿಂಗ್ ಬಾಡಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (ಸಿಬಿಟಿ) ನಿರ್ಧರಿಸಿದೆ ಎಂದು ಕೂಡ ವರದಿಯಾಗಿದೆ.

ಆನ್ಲೈನ್ ಮೂಲಕ ಪಿಎಫ್ ಹಣವನ್ನು ಹಿಂಪಡೆಯುವುದು ಹೇಗೆ?
ಹಂತ: 1 ಯುಎಎನ್ ಮೆಂಬರ್ ಇ-ಸೇವಾ ಪೋರ್ಟಲ್ಗೆ ಭೇಟಿ ನೀಡಿ.
ಹಂತ: 2 ನಿಮ್ಮ ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ. ತದನಂತರ, ಸೈನ್ ಇನ್ ಬಟನ್ ಕ್ಲಿಕ್ ಮಾಡಿ. ಹಂತ: 3 ಈಗ, ಮೇಲಿನ ಮೆನುವಿನಿಂದ ಆನ್ಲೈನ್ ಸೇವೆಗಳ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ CLAIM (FORM-31,19,10C & 10D) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ: 4 ಆನ್ಲೈನ್ ಕ್ಲೈಮ್ ಫಾರ್ಮ್ನಲ್ಲಿ ಕಂಡುಬರುವ ವಿವರಗಳನ್ನು ಪರಿಶೀಲಿಸಿ.
ಹಂತ: 5 ಪರಿಶೀಲಿಸಿದ ನಂತರ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ.
ಹಂತ: 6 ಪರಿಶೀಲನೆ ಬಟನ್ ಕ್ಲಿಕ್ ಮಾಡಿ ಮತ್ತು ನಂತರ ಪ್ರಮಾಣಪತ್ರದಲ್ಲಿ ಲಭ್ಯವಿರುವ Yes ಬಟನ್ ಕ್ಲಿಕ್ ಮಾಡಿ.
ಹಂತ: 7 Proceed for Online claim ಕ್ಲಿಕ್ ಮಾಡುವ ಮೂಲಕ ಕ್ಲೈಮ್ನೊಂದಿಗೆ ಮುಂದುವರಿಯಲು ನಿಮ್ಮನ್ನು ಈಗ ಕೇಳಲಾಗುತ್ತದೆ.
ಹಂತ: 8 ನೀವು ಸುಧಾರಿತ ಪಿಎಫ್ ಹಿಂಪಡೆಯಲು ಅರ್ಜಿ ಸಲ್ಲಿಸುತ್ತಿದ್ದೀರಾ ಎಂದು ಕ್ಲೈಮ್ ಫಾರ್ಮ್ ಈಗ ನಮೂದಿಸಬೇಕಾಗುತ್ತದೆ. ಯಾವ ಅಗತ್ಯಕ್ಕಾಗಿ ನೀವು ಪಿಎಫ್ ಕ್ಲೇಮ್ ಮಾಡುತ್ತೀದ್ದಿರಾ ಅನ್ನೊದನ್ನ ನಮೂದಿಸಲು ಲಭ್ಯವಿರುವ ಉದ್ದೇಶಗಳಿಂದ ಆಯ್ಕೆ ಮಾಡಲು 'ಯಾವ ಉದ್ದೇಶಕ್ಕಾಗಿ ಮುಂಗಡ ಅಗತ್ಯವಿದೆ' ಎಂಬ ಶೀರ್ಷಿಕೆಯ ಡ್ರಾಪ್-ಡೌನ್ ಮೆನುವನ್ನು ಇದು ತೋರಿಸುತ್ತದೆ.
ಹಂತ: 9 ಕೆಳಗಿನ ಪಠ್ಯ ಪೆಟ್ಟಿಗೆಯಲ್ಲಿ ಅಗತ್ಯವಿರುವ ಮೊತ್ತವನ್ನು ನಮೂದಿಸಿ ಮತ್ತು ನಂತರ ನೌಕರರ ವಿಳಾಸ ವಿಭಾಗದಲ್ಲಿ ನಿಮ್ಮ ಮೇಲಿಂಗ್ ವಿಳಾಸವನ್ನು ನಮೂದಿಸಿ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999