Just In
- 13 hrs ago
ಬೇರೆಯವರು ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?
- 18 hrs ago
ಈ ಯೋಜನೆಗಳನ್ನು ರೀಚಾರ್ಜ್ ಮಾಡಿದ್ರೆ, ನಿಮಗೆ ವ್ಯಾಲಿಡಿಟಿ ಬಗ್ಗೆ ಟೆನ್ಷನ್ ಇರಲ್ಲ!
- 22 hrs ago
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- 1 day ago
ಇನ್ಸ್ಟಾಗ್ರಾಮ್ನಲ್ಲಿ ಬೇರೆಯವರ ಲಾಸ್ಟ್ ಸೀನ್ ನೋಡುವುದು ಹೇಗೆ?
Don't Miss
- News
ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
- Lifestyle
Today Rashi Bhavishya: ಸೋಮವಾರದ ದಿನ ಭವಿಷ್ಯ: ಮೇಷ, ಕರ್ಕ, ಕನ್ಯಾ, ಧನು ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿವಹಿಸಿ
- Sports
ಭಾರತ vs ಐರ್ಲೆಂಡ್: ಮೊದಲ ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್ಗಳ ಭರ್ಜರಿ ಜಯ
- Movies
ರಾಘವೇಂದ್ರ ರಾಜ್ಕುಮಾರ್ ನಿರ್ಮಾಣದಲ್ಲಿ 'ವಿಜಯದಶಮಿ' ಧಾರಾವಾಹಿ: ಯಾವ ಸಿನಿಮಾಗೂ ಕಮ್ಮಿಯಿಲ್ಲ!
- Finance
Gold Rate Today: ನಿಮ್ಮ ನಗರದಲ್ಲಿ ಜೂ.26ರಂದು ಚಿನ್ನದ ಬೆಲೆ ಎಷ್ಟಿದೆ ನೋಡಿ
- Education
PGCIL Recruitment 2022 : 32 ಡೆಪ್ಯುಟಿ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
EPFO ಸುದ್ದಿ: ನಿಮ್ಮ ಪಿಎಫ್ ಹಣವನ್ನು ಒಂದು ಗಂಟೆಯಲ್ಲಿ ವಿತ್ಡ್ರಾ ಮಾಡಬಹುದು!
ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನೌಕರರ ಪಾಲಿಗೆ ಆರ್ಥಿಕ ಭರವಸೆ ಅಂದರೇ ಅದು ನೌಕರರ ಭವಿಷ್ಯ ನಿಧಿ (EPF) ಅಂದರೇ ತಪ್ಪಾಗಲಾರದು. ಕೆಲವು ಅಗತ್ಯ ಸಂದರ್ಭಗಳಲ್ಲಿ EPF ಸಂಸ್ಥೆಯು ನೌಕರರಿಗೆ ತಮ್ಮ ಪಿಎಫ್ ಹಣವನ್ನು ವಿತ್ಡ್ರಾ ಮಾಡಿಕೊಳ್ಳುವ ಅವಕಾಶ ನೀಡಿದೆ. ಪಿಎಫ್ (ಭವಿಷ್ಯ ನಿಧಿ) ನಿಂದ ಹಣ ಪಡೆದುಕೊಳ್ಳಲು ಕನಿಷ್ಠ ಮೂರರಿಂದ ನಾಲ್ಕು ದಿನ ಬೇಕಾಗುತ್ತದೆ. ಆದರೆ ನೂತನ ನಿಯಮದ ಪ್ರಕಾರ ಪಿಎಫ್ ಖಾತೆದಾರರು ಕೇವಲ ಒಂದು ಗಂಟೆಯಲ್ಲಿ ಹಣ ವಿತ್ಡ್ರಾ ಮಾಡಬಹುದಾಗಿದೆ.

ಹೌದು, ಅರ್ಹ ನೌಕರರು ತಮ್ಮ ಭವಿಷ್ಯ ನಿಧಿಯಿಂದ ಮುಂಗಡವಾಗಿ 1 ಲಕ್ಷ ರೂ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಹಣವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಅಧಿಕೃತ EPFO ನ ವೆಬ್ಸೈಟ್ನಲ್ಲಿ ಅಗತ್ಯ ಮಾಹಿತಿ ನೀಡುವ ಮೂಲಕ ಕೇವಲ ಒಂದು ಗಂಟೆಯಲ್ಲಿ ಹಣ ಪಡೆದುಕೊಳ್ಳಬಹುದಾಗಿದೆ. ಇನ್ನು ಹಣ ಪಡೆದುಕೊಳ್ಳಲು UAN ಖಾತೆಯ ನಂಬರ್ ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ ಆಗಿದೆ.
ನೌಕರರು ಕೆಲಸದಿಂದ ನಿವೃತ್ತರಾದಾಗ ಅಥವಾ ಎರಡು ತಿಂಗಳಗಿಂತಲೂ ಹೆಚ್ಚು ಕಾಲ ನಿರುದ್ಯೋಗಿಯಾದ ಸಂದರ್ಭದಲ್ಲಿ ಪಿಎಫ್ನ ಸಂಪೂರ್ಣ ಹಣ ಪಡೆದುಕೊಳ್ಳುವ ಅವಕಾಶವಿದೆ. ಇದರ ಜೊತೆಗೆ ವೈದ್ಯಕೀಯ, ಗೃಹ ಸಾಲ, ಗೃಹ ಸಾಲ ಮರುಪಾವತಿ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಹೆಚ್ಚಿನ ಹಣ ಪಡೆದುಕೊಳ್ಳಬಹುದು. ಹಾಗಾದರೇ EPFOನ ವೆಬ್ಸೈಟ್ ನಿಂದ ಹಣ ಪಡೆಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

EPFOನ ವೆಬ್ಸೈಟ್ ಮೂಲಕ ಹಣ ಪಡೆದುಕೊಳ್ಳಲು ಈ ಕ್ರಮ ಅನುಸರಿಸಿ:
ಹಂತ 1. ಮೊದಲು epfindia.gov.inಗೆ ಲಾಗಿನ್ ಮಾಡಿ.
ಹಂತ 2. ವೆಬ್ಸೈಟ್ನ ಮುಖಪುಟದ ಬಲ ಮೂಲೆಯಲ್ಲಿ ಆನ್ಲೈನ್ ಮುಂಗಡ ಕ್ಲೈಮ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ.
ಹಂತ 3. ಸೇವೆಗಳಿಗೆ ಹೋಗಿ, ಕ್ಲೈಮ್ ಫಾರ್ಮ್-31,19,10C ಮತ್ತು 10D ಭರ್ತಿ ಮಾಡಿ. ಫಾರ್ಮ್ ಭರ್ತಿ ಮಾಡಿದ ಬಳಿಕ ನಿಮ್ಮ ಬ್ಯಾಂಕ್ ಖಾತೆಯ ಕೊನೆಯ 4 ನಂಬರ್ ನಮೂದಿಸಿ, ಪರಿಶೀಲನೆ ಮಾಡಬೇಕು.
ಹಂತ 4. ಆನ್ಲೈನ್ ಕ್ಲೈಮ್ಗಾಗಿ ಮುಂದುವರಿಕೆ ಕ್ಲಿಕ್ ಮಾಡ್ಬೇಕು. ಇದಾದ ಬಳಿಕ ಪಿಎಫ್ ಅಡ್ವಾನ್ಸ್ ಆಯ್ಕೆ ಮಾಡಿ, ಹಣ ಪಡೆದುಕೊಳ್ಳುವ ಕಾರಣ ನಮೂದಿಸಬೇಕು.
ಹಂತ 5. ಇದಾದ ಬಳಿಕ ನಿಮಗೆ ಬೇಕಾದ ಮೊತ್ತ ಭರ್ತಿ ಮಾಡಿ, ಚೆಕ್ನ ಸ್ಕ್ಯಾನ್ ಮಾಡಿದ ಪ್ರತಿ ಅಪ್ಲೋಡ್ ಮಾಡಬೇಕು.
ಹಂತ 6. ಅರ್ಜಿದಾರನ ಪೂರ್ಣ ವಿಳಾಸ ನೀಡುವುದು ಕಡ್ಡಾಯ.
ಹಂತ 7. ಗೆಟ್ ಆಧಾರ್ ಒಟಿಪಿ ಮೇಲೆ ಕ್ಲಿಕ್ ಮಾಡಿ, ಆಧಾರ್ ಕಾರ್ಡ್ಗೆ ನೋಂದಣಿ ಮಾಡಿರುವ ಮೊಬೈಲ್ ನಂಬರ್ಗೆ ಬರುವ OTP ನಮೂದಿಸಬೇಕು.
ಹಂತ 8. ಇದಾದ ಬಳಿಕ ಒಂದು ಗಂಟೆಯಲ್ಲಿ ನಿಮ್ಮ ಖಾತೆಗೆ ಹಣ ಬರಲಿದೆ. ಇದರ ಜೊತೆಗೆ UMANG ವೆಬ್ಸೈಟ್ ಮೂಲಕ ಹಣ ಪಡೆದುಕೊಳ್ಳಬಹುದಾಗಿದೆ.
ಎಸ್ಎಮ್ಎಸ್ ಮೂಲಕ PF ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದು ಹೇಗೆ?
ಪ್ರತಿಯೊಬ್ಬ EPFO ಸದಸ್ಯರು ತಮ್ಮದೆ UAN ( ಸಾರ್ವತ್ರಿಕ ಖಾತೆ ಸಂಖ್ಯೆ) ಹೊಂದಿದ್ದಾರೆ. PF ಖಾತೆಯ ಬಾಕಿಯನ್ನು ತಿಳಿಯಲು, ನೌಕರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಯಿಂದ 7738299899 ಗೆ ' EPFOHO UAN ENG ' ಗೆ SMS ಕಳುಹಿಸಬಹುದು. ಈ ಮೂಲಕ ನೌಕರರು ಅವರ ಪಿಎಫ್ ಖಾತೆಯ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದಾಗಿದೆ. ಉಮಂಗ್ ಆಪ್ ಮೂಲಕವು ಬ್ಯಾಲೆನ್ಸ್ ಮಾಹಿತಿ ತಿಳಿಯಬಹುದು.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999