ವಾಟ್ಸಾಪ್‌ ಫಾರ್ವರ್ಡ್‌ ಫೀಚರ್ಸ್‌ ಬಗ್ಗೆ ನೀವು ಈ ಅಂಶಗಳನ್ನು ಗಮನಿಸಲೇಬೇಕು!

|

ವಾಟ್ಸಾಪ್‌ ಇಂದಿನ ದಿನಗಳಲ್ಲಿ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಆಕರ್ಷಕ ಫೀಚರ್ಸ್‌ಗಳು, ಸರಳ ಬಳಕೆಯ ಕಾರಣದಿಂದಾಗಿ ಹೆಚ್ಚಿನ ಜನರು ವಾಟ್ಸಾಪ್‌ ಬಳಸುವುದು ಸುಲಭವಾಗಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ ಕೂಡ ಬಳಕೆದಾರರಿಗೆ ಕಾಲಕಾಲಕ್ಕೆ ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇನ್ನು ವಾಟ್ಸಾಪ್‌ ಒಳಗೊಂಡಿರುವ ಆಕರ್ಷಕ ಫೀಚರ್ಸ್‌ಗಳಲ್ಲಿ ಪಾರ್ವರ್ಡ್‌ ಫೀಚರ್‌ ಕೂಡ ಒಂದಾಗಿದೆ. ಫಾರ್ವರ್ಡ್‌ ಫೀಚರ್‌ ಯಾವುದೇ ಸಂದೇಶವನ್ನು ಬೇರೆಯವರಿಗೆ ಫಾರ್ವರ್ಡ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಹೊಂದಿರುವ ವಿಶೇಷ ಫೀಚರ್ಸ್‌ಗಳಲ್ಲಿ ಫಾರ್ವರ್ಡ್‌ ಫೀಚರ್‌ ಕೂಡ ಒಂದು. ಇದು ನಿಮಗೆ ಒಬ್ಬ ವ್ಯಕ್ತಿ ಅಥವಾ ಗ್ರೂಪ್ ಚಾಟ್ ಅನ್ನು ಇನ್ನೊಬ್ಬ ವ್ಯಕ್ತಿ ಅಥವಾ ಗ್ರೂಪ್ ಚಾಟ್‌ಗೆ ಫಾರ್ವರ್ಡ್ ಮಾಡಲು ಅನುಮತಿಸುತ್ತದೆ. ಅಲ್ಲದೆ ನೀವು ಯಾವುದೇ ಸಂದೇಶಗಳನ್ನು ಫಾರ್ವರ್ಡ್ ಮಾಡಿದ್ದರೆ, ಸಂದೇಶಗಳಲ್ಲಿ "ಫಾರ್ವರ್ಡ್" ಲೇಬಲ್ ಅನ್ನು ಕಾಣಬಹುದಾಗಿದೆ. ಇದರಿಂದ ನಿಮ್ಮ ಸ್ನೇಹಿತರು ಕಳುಹಿಸಿರುವ ಸಂದೇಶ ಫಾರ್ವರ್ಡ್‌ ಸಂದೇಶ ಅನ್ನೊದು ಗೊತ್ತಾಗಲಿದೆ. ಇದಲ್ಲದೆ ವಾಟ್ಸಾಪ್‌ನಲ್ಲಿ ಫಾರ್ವರ್ಡ್‌ ಮೆಸೇಜ್‌‌ ಮಾಡುವ ಮುನ್ನ ಕೆಲವು ಸಂಗತಿಗಳನ್ನು ಗಮನಿಸಬಹುದಾಗಿದೆ. ಅದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ನಿಮ್ಮ ಸ್ನೇಹಿತ ಅಥವಾ ಕುಟುಂಬದ ಸದಸ್ಯರು ಕಳುಹಿಸಿದ ಸಂದೇಶವನ್ನು ಬರೆದಿದ್ದಾರೆಯೇ ಅಥವಾ ಬೇರೆಯವರ ಸಂದೇಶವನ್ನು ಕಳುಹಿಸಿದ್ದಾರೆ ಅನ್ನೊದು ಫಾರ್ವರ್ಡ್‌ ಫಿಚರ್‌ ಮೂಲಕ ತಿಳಿಯಬಹುದಾಗಿದೆ. ಪ್ರಾರಂಭದಲ್ಲಿ ವಾಟ್ಸಾಪ್‌ನಲ್ಲಿ ಒಂದೇ ಭಾರಿ ಎಷ್ಟು ಜನರಿಗೆ ಬೇಕಿದ್ದರೂ ಫಾರ್ವರ್ಡ್‌ ಮಾಡಬಹುದಾಗಿತ್ತು. ಆದರೆ ದಿನೇ ದಿನೇ ಹೆಚ್ಚಿದ ವದಂತಿಗಳು, ನಕಲಿ ಸುದ್ದಿಗಳು ಫಾರ್ವರ್ಡ್‌, ವೈರಲ್ ಸಂದೇಶಗಳು ಫಾರ್ವರ್ಡ್‌ ಆಗೋದು ಜಾಸ್ತಿ ಆಗಿದ್ದರಿಂದ ಫಾರ್ವರ್ಡ್‌ ಮಾಡುವ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ವಾಟ್ಸಾಪ್‌ 'ಫಾರ್ವರ್ಡ್' ಸಂದೇಶಗಳ ಬಗ್ಗೆ ನೀವು ತಿಳಿದಿರಲೇಬೇಕಾದ ಪ್ರಮುಖ 5 ವಿಷಯಗಳು

ವಾಟ್ಸಾಪ್‌ 'ಫಾರ್ವರ್ಡ್' ಸಂದೇಶಗಳ ಬಗ್ಗೆ ನೀವು ತಿಳಿದಿರಲೇಬೇಕಾದ ಪ್ರಮುಖ 5 ವಿಷಯಗಳು

* ವಾಟ್ಸಾಪ್‌ನಲ್ಲಿ ನೀವು ಒಮದು ಸಮಯದಲ್ಲಿ ಐದು ಚಾಟ್‌ಗಳಿಗೆ ಮಾತ್ರ ಸಂದೇಶವನ್ನು ಫಾರ್ವರ್ಡ್ ಮಾಡಬಹುದಾಗಿದೆ. ನೀವು ಬಹಳಷ್ಟು ಸ್ನೇಹಿತರಿಗೆ ಸಂದೇಶವನ್ನು ಫಾರ್ವರ್ಡ್‌ ಮಾಡಬೇಕೆನಿಸಿದರೆ ಮತ್ತೆ ಮತ್ತೆ ಫಾರ್ವರ್ಡ್‌ ಮಾಡಬೇಕಾಗುತ್ತದೆ.

* ಇನ್ನು ನೀವು ವಾಟ್ಸಾಪ್‌ನಲ್ಲಿ ಯಾವುದೇ ಸಂದೇಶವನ್ನು ಹಲವು ಬಾರಿ ಫಾರ್ವರ್ಡ್ ಮಾಡಿದಾಗ, ಅದನ್ನು ಒಂದು ಸಮಯದಲ್ಲಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್ ಮಾಡಬಹುದು. ವಾಟ್ಸಾಪ್‌ ಎರಡು ಬಾಣದ ಐಕಾನ್ ಮತ್ತು "ಹಲವು ಬಾರಿ ಫಾರ್ವರ್ಡ್ ಮಾಡಲಾಗಿದೆ" ಲೇಬಲ್ ಅನ್ನು ಪ್ರದರ್ಶಿಸುತ್ತದೆ. ಇಂತಹ ಸಂದೇಶಗಳನ್ನು ಒಂದು ಸಮಯದಲ್ಲಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್ ಮಾಡಬಹುದಾಗಿರುತ್ತದೆ.

* ಇದಲ್ಲದೆ ವಾಟ್ಸಾಪ್‌ ಮೂಲಕ ಕೇವಲ ಟೆಕ್ಸ್ಟ್‌ ಮಾತ್ರವಲ್ಲ, ಮೀಡಿಯಾ ಫೈಲ್‌, ಲೊಕೇಶನ್‌ ಮತ್ತು ಕಂಟ್ಯಾಕ್ಟ್‌ಗಳನ್ನು ಫಾರ್ವರ್ಡ್ ಮಾಡಬಹುದಾಗಿದೆ. ಆದ್ದರಿಂದ ನೀವು ಅವುಗಳನ್ನು ಮತ್ತೆ ಅಪ್‌ಲೋಡ್ ಮಾಡಬೇಕಾದ ಅನಿವಾರ್ಯತೆ ಇಲ್ಲ.

* ಇನ್ನು ನೀವು ಕಳುಹಿಸುವ ಯಾವುದೇ ಫಾರ್ವರ್ಡ್ ಸಂದೇಶಗಳು ನಿಮಗೆ "ಫಾರ್ವರ್ಡ್" ಲೇಬಲ್ ಅನ್ನು ಡಿಸ್‌ಪ್ಲೇ ಮಾಡುತ್ತದೆ. ಅಲ್ಲದೆ ಸಂದೇಶ ಸ್ವೀಕರಿಸುವವರು ಫಾರ್ವರ್ಡ್‌ ಲೇಬಬಲ್‌ ಅನ್ನು ಕಾಣಬಹುದಾಗಿದೆ.

* ಒಂದು ವೇಳೆ ನೀವು ಐದಕ್ಕಿಂತ ಹೆಚ್ಚು ಜನರಿಗೆ ಸಂದೇಶವನ್ನು ಫಾರ್ವರ್ಡ್‌ ಮಾಡಲು ಬಯಸಿದರೆ, ಚಾಟ್‌ ಅನ್ನು ಕಾಪಿ ಮಾಡುವ ಮೂಲಕ ಕಳುಹಿಸಬಹುದು.

ವಾಟ್ಸಾಪ್

ಇದಲ್ಲದೆ ವಾಟ್ಸಾಪ್ ಇತ್ತೀಚೆಗೆ ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಬೀಟಾ ಬಳಕೆದಾರರಿಗಾಗಿ ಆವೃತ್ತಿ 2.21.200.11 ಅಪ್‌ಡೇಟ್ ಅನ್ನು ಪರಿಚಯಿಸಿದೆ. ಈ ಅಪ್ಡೇಟ್‌ನಲ್ಲಿ ಬಳಕೆದಾರರು ರಿ ಡಿಸೈನ್‌ ಮಾಡಲಾದ ಬಬಲ್ಸ್‌ ಅನ್ನು ವೀಕ್ಷಿಸಲು ಅನುಮತಿಸುತ್ತದೆ. ಹಳೆಯ ಚಾಟ್ ಬಬಲ್‌ಗೆ ಹೋಲಿಸಿದರೆ ಬೀಟಾ ಬಳಕೆದಾರರು ಈಗ ದುಂಡಾದ, ದೊಡ್ಡದಾದ ಮತ್ತು ಹೆಚ್ಚು ವರ್ಣರಂಜಿತ ಚಾಟ್ ಬಬಲ್‌ಗಳನ್ನು ಕಾಣಬಹುದಾಗಿದೆ. ಈ ಫೀಚರ್ಸ್‌ ಪ್ರಸ್ತುತ ಬೀಟಾದಲ್ಲಿದೆ ಎಂಬುದನ್ನು ಗಮನಿಸುವುದು ಮುಖ್ಯ.

ವಾಟ್ಸಾಪ್‌

ಹಾಗೆಯೇ ವಾಟ್ಸಾಪ್‌ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಬೀಟಾ ವರ್ಷನ್‌ನಲ್ಲಿ ಹೊಸ ಕಸ್ಟಮ್ ಪ್ರೈವೆಸಿ ಸೆಟ್ಟಿಂಗ್ ಆಯ್ಕೆಯನ್ನು ಪರಿಚಯಿಸುತ್ತಿದೆ. ಸದ್ಯ ವಾಟ್ಸಾಪ್‌ ಕಸ್ಟಮ್‌ ಪ್ರೈವೆಸಿ ಸೆಟ್ಟಿಂಗ್‌ಗಳಲ್ಲಿ ಹೊಸದಾಗಿ "ನನ್ನ ಸಂಪರ್ಕಗಳನ್ನು ಹೊರತುಪಡಿಸಿ" ಆಯ್ಕೆಯನ್ನು ಸೇರಿಸುತ್ತಿದೆ. ಇದು ನಿರ್ದಿಷ್ಟ ಸಂಪರ್ಕಗಳಿಗಾಗಿ ಬಳಕೆದಾರರನ್ನು ಲಾಸ್ಟ್‌ ಸೀನ್‌ ನೋಡಲು ಅನುಮತಿ ನೀಡಲಿದೆ. ಐಒಎಸ್ ಬಳಕೆದಾರರಿಗಾಗಿ ವಾಟ್ಸಾಪ್‌ ಈಗಾಗಲೇ ಈ ಫೀಚರ್ಸ್‌ ಅನ್ನು ಪರೀಕ್ಷಿಸಲು ಆರಂಭಿಸಿದೆ.

Most Read Articles
Best Mobiles in India

English summary
WhatsApp introduced features like "Forwarded many times" to help slow down the spread of rumours, viral messages, and fake news.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X