ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಆಪ್‌ಗಳು ಸ್ಥಗಿತ!

|

ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಹಾಗೂ ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್ ಗಳು ಕೆಲ ಗಂಟೆಗಳಿಂದ ಸ್ಥಗಿತ ಕಂಡಿವೆ. ಈ ಆಪ್‌ಗಳ ಬಳಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ಕೆಲವು ಬಳಕೆದಾರರು ಟ್ವಿಟ್ಟರ್ ಖಾತೆಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಆಪ್‌ಗಳು ಸ್ಥಗಿತ!

ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಆಪ್‌ಗಳಲ್ಲಿ ಪೋಸ್ಟ್ ಮಾಡಲಾಗುತ್ತಿಲ್ಲ ಎಂದು ಕೆಲವು ಬಳಕೆದಾರರು ಮಾಹಿತಿ ಶೇರ್ ಮಾಡಿದ್ದಾರೆ. ಹಾಗೆಯೇ ಈ ವ್ಯತ್ಯಯವು ಆಂಡ್ರಾಯ್ಡ್‌, ಐಓಎಸ್‌ ಹಾಗೂ ಪಿಸಿ ಆವೃತ್ತಿಯ ಆಪ್‌ಗಳಲ್ಲಿ ಕಂಡು ಬಂದಿದೆ ಎಂದು ಹೇಳಲಾಗಿದೆ.

ಇನ್ನು ಉಂಟಾಗಿರುವ ವ್ಯತ್ಯಯ ಬಗ್ಗೆ ಫೇಸ್‌ಬುಕ್ ತನ್ನ ಅಧಿಕೃತ ಟ್ವಿಟ್ಟರ್‌ ಅಕೌಂಟ್‌ನಲ್ಲಿ ಪ್ರತಿಕ್ರಿಯಿಸಿದೆ. 'ಕೆಲವು ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಬಳಕೆಯಲ್ಲಿ ತೊಂದರೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಆದಷ್ಟು ಬೇಗನೇ ಸರಿಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ. ಅಲ್ಲದೆ ಈ ಅಡಚಣೆಗಾಗಿ ನಾವು ಕ್ಷಮೆ ಕೋರುತ್ತೇವೆ' ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಅದೇ ರೀತಿ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್‌ ತಾಣ ವಾಟ್ಸಾಪ್ ಸಹ ವ್ಯತ್ಯಯವನ್ನು ಸರಿಪಡಿಸಲಾಗುವುದು ಎಂದು ಟ್ವಿಟ್ ಮಾಡಿದೆ.

ಸಂಜೆಯಿಂದಲೇ ಈ ರೀತಿಯ ವ್ಯತ್ಯಯ ಕಂಡು ಬಂದಿದೆ ಎಂದು ಹೇಳಲಾಗಿದೆ. ಫೇಸ್‌ಬುಕ್ ವಾಲ್‌ನಲ್ಲಿ ಯಾವುದೇ ಫೋಸ್ಟ್ ಮಾಡಲಾಗುತ್ತಿಲ್ಲ. ಇನ್ನು ವಾಟ್ಸಾಪ್‌ನಲ್ಲಿ ಟೆಕ್ಸ್ಟ್ ಮೆಸೆಜ್ ಹಾಗೂ ಮೀಡಿಯಾ ಫೈಲ್‌ ಯಾವುದು ಸೆಂಡ್ ಆಗುತ್ತಿಲ್ಲ ಎಂದು ಅನೇಕ ಬಳಕೆದಾರರು ಟ್ವಿಟ್ಟರ್ ಖಾತೆಗಳಲ್ಲಿ ಹೇಳಿಕೊಂಡಿದ್ದಾರೆ. ಹಾಗೆಯೇ ಟ್ವಿಟ್ಟರ್ ತಾಣದಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಾಪ್ ವ್ಯತ್ಯಯದ ಟ್ರೋಲ್‌ ಹರಿದಾಡುತ್ತಿವೆ.

Most Read Articles
Best Mobiles in India

English summary
Facebook, Instagram And WhatsApp Are Down Globally.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X