ಫೇಸ್‌ಬುಕ್‌ನಿಂದ ಹೊಸ ಪೇಜ್‌ ಅನಾವರಣ! ಏನೆಲ್ಲಾ ಬದಲಾಗಿದೆ ಗೊತ್ತಾ?

|

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ ಪರಿಚಯಿಸಿರುವ ಫೇಸ್‌ಬುಕ್‌ ಇದೀಗ ಹೊಸ ಪೇಜ್‌ ಎಕ್ಸ್‌ಪೀರಿಯನ್ಸ್‌ ಅನ್ನು ಪರಿಚಯಿಸಿದೆ. ಇದು ಸಾರ್ವಜನಿಕ ವ್ಯಕ್ತಿಗಳು ಮತ್ತು ಕ್ರಿಯೆಟರ್ಸ್‌ ಕಮ್ಯೂನಿಟಿ ಬಿಲ್ಡ ಮಾಡಲು ಸಹಾಯ ಮಾಡಲಿದೆ. ಅಷ್ಟೇ ಅಲ್ಲ ಅವರ ವ್ಯಾಪಾರ ಉದ್ದೇಶಗಳನ್ನು ಸಾಧಿಸಲು ಅನುಕೂಲ ಮಾಡಿಕೊಡಲಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಬಳಕೆದಾರರಿಗೆ ಹೊಸ ಪೇಜ್‌ ಎಕ್ಸ್ ಪೀರಿಯನ್ಸ್ ಅನ್ನು ಹೊರತಂದಿದೆ. ಇದರಿಂದ ಸಾಕಷ್ಟು ಬದಲಾವಣೆಯನ್ನು ನಾವು ಕಾಣಬಹುದಾಗಿದೆ. ಸದ್ಯ ಭಾರತೀಯರಿಗೆ ಪರಿಚಯಿಸಿರುವ ಹೊಸ ಪೇಜ್‌ನಿಂದ ವ್ಯಾಪಾರಸ್ಥರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಅಲ್ಲದೆ ಕ್ರಿಯೆಟರ್ಸ್‌ಗಳು ತಮ್ಮದೇ ಆದ ಕಮ್ಯೂನಿಟಿಯನ್ನು ಬಿಲ್ಟ್‌ ಮಾಡಲು ಅವಕಾಶ ನೀಡಲಿದೆ. ಇದರಲ್ಲಿ ಒಬ್ಬರ ನ್ಯೂಸ್‌ಫೀಡ್‌ನಿಂದ ಇತರರನ್ನು ಫಾಲೋ ಮಾಡುವುದಕ್ಕೆ ಮತ್ತು ಅಪ್‌ಡೇಟ್‌ಗಳ ಮೇಲೆ ಲೈಕ್ಸ್‌ ಮತ್ತು ಕಾಮೆಂಟ್‌ಗಳನ್ನು ಶೇರ್‌ ಮಾಡಲು ಅನುಕೂಲಕರವಾಗಿದೆ. ಹಾಗಾದ್ರೆ ಫೇಸ್‌ಬುಕ್‌ ಪರಿಚಯಿಸಿರುವ ಹೊಸ ಪೇಜ್‌ ಎಕ್ಸ್ ಪೀರಿಯನ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ನ ಈ ಹೊಸ ಪೇಜ್‌ನಿಂದ ಬಳಕೆದಾರರ ಬಯೋಸ್, ಪೋಸ್ಟ್‌ಗಳು ಮತ್ತು ಇತರ ಪ್ರಮುಖ ಮಾಹಿತಿ ತಿಳಿಯುವುದು ಸುಲಭವಾಗಲಿದೆ. ಇದು ಬಳಕೆದಾರರಿಗೆ ವೈಯಕ್ತಿಕ ಪ್ರೊಫೈಲ್ ಮತ್ತು ಪಬ್ಲಿಕ್‌ ಪೇಜ್‌ ನಡುವೆ ನ್ಯಾವಿಗೇಟ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಲ್ಲದೆ ಪೇಜ್‌ಗಳಿಗೆ ಮೊದಲ ಬಾರಿಗೆ ಡೇಡಿಕೇಟೆಡ್‌ ನ್ಯೂಸ್‌ ಫೀಡ್ ಅನ್ವೇಷಣೆಗೆ ಸಹಾಯ ಮಾಡಲಿದೆ. ಜೊತೆಗೆ ಸಂಭಾಷಣೆಗಳಿಗೆ ತೊಡಗಿಸಿಕೊಳ್ಳಲು ಹೊಸ ಮಾರ್ಗಗಳನ್ನು ನೀಡಲಿದೆ. ಫೇಸ್‌ಬುಕ್‌ನಲ್ಲಿನ ಇದು ಟ್ರೆಂಡ್‌ಗಳನ್ನು ಫಾಲೋ ಮಾಡುವುದಕ್ಕೆ, ಸ್ನೇಹಿತರ ಜೊತೆ ಹರಟೆ ಹೊಡೆಯೋಕೆ ಸುಲಭವಾದ ಮಾರ್ಗವಾಗಿದೆ.

ಫಾಲೋವರ್‌

ಈ ಪೇಜ್‌ನಲ್ಲಿ ನ್ಯೂಸ್‌ ಫೀಡ್, ಪಬ್ಲಿಕ್‌ ಫಿಗರ್ಸ್‌, ಪೇಜಸ್‌, ಗ್ರೂಪ್ಸ್‌ ಮತ್ತು ಸಿಂಗಲ್‌ ಪೇಜ್‌ ಕಾಳಜಿವಹಿಸುವ ಟ್ರೆಂಡಿಂಗ್ ಸಬ್ಜೆಕ್ಟ್‌ ಅನ್ನು ಸಹ ಸೂಚಿಸುತ್ತದೆ. ಇದಲ್ಲದೆ ಹೆಚ್ಚುವರಿಯಾಗಿ, ಪೇಜ್‌ ಕಮ್ಯೂನಿಕೇಶನ್‌ ಈಗ ಹೆಚ್ಚಿನ ಪ್ರೇಕ್ಷಕರಿಗೆ ಗೋಚರಿಸಲಿದೆ. ಅಲ್ಲದೆ ಫಾಲೋವರ್‌ಗಳ ನ್ಯೂಸ್ ಫೀಡ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಹಾಗೆಯೇ ಪಬ್ಲಿಕ್‌ ಫಿಗರ್ಸ್‌ ಕಾಮೆಂಟ್‌ಗಳನ್ನು ಕಾಮೆಂಟ್‌ಗಳ ವಿಭಾಗದ ಮೇಲ್ಭಾಗಕ್ಕೆ ಬಂಪ್ ಮಾಡಲಾಗುತ್ತದೆ. ಜನರು ನೇರವಾಗಿ ಕಾಮೆಂಟ್‌ಗಳನ್ನು ಮಾಡಬಹುದು. ಪೋಸ್ಟ್‌ಗಳ ಮೂಲಕವೇ ಪೇಜ್‌ ಅನ್ನು ಫಾಲೋ ಮಾಡುವುದಕ್ಕೆ ಸಾಧ್ಯವಾಗಲಿದೆ.

ಫೇಜ್‌

ಇನ್ನು ಫೇಜ್‌ ಪೋಸ್ಟ್‌ನಲ್ಲಿ ಲೈಕ್‌ಗಳನ್ನು ತೆಗೆದುಹಾಕಲು ಕೂಡ ಅವಕಾಶ ನೀಡಲಿದೆ. ಇದರಿಂದ ಫಾಲೋವರ್‌ಗಳ ಮೇಲೆ ಕೇಂದ್ರೀಕರಿಸಲು ಹೊಸ ಪಠ್ಯ ಆಧಾರಿತ ಪ್ರಶ್ನೋತ್ತರ ಸ್ವರೂಪವನ್ನು ಪರಿಚಯಿಸಲಾಗುತ್ತಿದೆ. ಇದರಿಂದ ಜನರು ತಮ್ಮ ನೆಚ್ಚಿನ ಪುಟಗಳೊಂದಿಗೆ ಸಂಪರ್ಕ ಸಾಧಿಸುವುದು ಸುಲಭವಾಗಲಿದೆ. ಪೇಜ್‌ ಅನ್ನು ಫಾಲೋ ಮಾಡುವವರು ಈಗ ತಮ್ಮ ಮೆಚ್ಚಿನ ಪುಟಗಳಿಂದ ಅಪ್ಡೇಟ್‌ಗಳ್ನು ಸಹ ಪಡೆಯಬಹುದಾಗಿದೆ. ಅಪ್ಡೇಟ್‌ ಮಾಡಿದ ವರ್ಕ್‌ ಬೇಸ್ಡ್‌ ಮ್ಯಾನೇಜಿಂಗ್‌ ಕಂಟ್ರೋಲ್‌ ಮಾಡಬಹುದಾಗಿದೆ. ಇದು ನಿರ್ದಿಷ್ಟ ಕಾರ್ಯಗಳ ಆಧಾರದ ಮೇಲೆ ಅನುಮತಿಗಳನ್ನು ನಿಯೋಜಿಸುವ ಸಾಮರ್ಥ್ಯದಂತಹ ಪೇಜ್‌ ಮ್ಯಾನೇಜಿಂಗ್‌ ಮಾಡುವುದಕ್ಕೆ ಹೆಚ್ಚು ಅನುಕೂಲಕರವಾಗಿಸುತ್ತದೆ.

ಮ್ಯಾನೇಜ್‌

ಇದಲ್ಲದೆ ಪೇಜ್‌ ಮ್ಯಾನೇಜ್‌ ಮಾಡುವವರು ಒಳನೋಟಗಳು, ಜಾಹೀರಾತುಗಳು, ವಿಷಯ ಮತ್ತು ಸಮುದಾಯ ಚಟುವಟಿಕೆ ಮತ್ತು ಸಂದೇಶಗಳು ಸೇರಿದಂತೆ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಇದು ದೃಡಿಕೃತ ಬ್ಯಾಡ್ಜ್‌ಗಳ ಅಧಿಕೃತ ಪುಟಗಳು ಮತ್ತು ಪ್ರೊಫೈಲ್‌ಗಳಿಂದ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳನ್ನು ಗುರುತಿಸಬಹುದಾಗಿದೆ. ಜೊತೆಗೆ ಇನ್ನೊಂದು ಪೇಜ್‌ ಪಬ್ಲಿಕ್‌ ಪೋಸ್ಟ್‌ನಲ್ಲಿ ಪರಿಶೀಲಿಸಿದ ಕಾಮೆಂಟ್ ವಿಭಾಗದಲ್ಲಿ ಹೆಚ್ಚು ಕಾಣಿಸಲಿದೆ.

ಫೇಸ್‌ಬುಕ್‌

ಇನ್ನು ಫೇಸ್‌ಬುಕ್‌ ಇತ್ತೀಚಿಗಷ್ಟೇ ತನ್ನ ಮೆಸೆಂಜರ್‌ನಲ್ಲಿ ಸೌಂಡ್‌ಮೊಜಿಸ್‌ ಫೀಚರ್ಸ್‌ ಅನ್ನು ಪರಿಚಯಿಸಿತ್ತು. ಇದು ನಿಮ್ಮ ಮೆಸೆಂಜರ್‌ ಸಂಭಾಷಣೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿಡಲು ಸಹಾಯ ಮಾಡಲಿದೆ. ನೀವು ಏನು ಹೇಳಬೇಕೊ ಅದನ್ನು ಸೌಡ್‌ಮೊಜಿಸ್‌ ಮೂಲಕ ವ್ಯಕ್ತ ಪಡಿಸಬಹುದಾಗಿದೆ. ಇದರಿಂದ ನಿಮ್ಮ ಸಂಭಾಷಣೆ ಇನ್ನಷ್ಟು ಉತ್ತಮವಾಗಿರಲಿದೆ. ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಸೌಂಡ್‌ಮೊಜಿಸ್ ಅನ್ನು ಪ್ರವೇಶಿಸಲು, ನೀವು ಮೆಸೆಂಜರ್ ಸಂಭಾಷಣೆಯಲ್ಲಿರುವಾಗ ಎಮೋಜಿ ಬಟನ್ ಟ್ಯಾಪ್ ಮಾಡಿ ಬಲಬದಿಯಲ್ಲಿರುವ ಧ್ವನಿ ಐಕಾನ್ ಅನ್ನು ಟ್ಯಾಪ್ ಮಾಡಿ, ತದನಂತರ ಲಭ್ಯವಿರುವ ಆಯ್ಕೆಗಳ ಪಟ್ಟಿಯನ್ನು ಸ್ಕ್ರಾಲ್ ಮಾಡಿ. ಜತೆಗೂಡಿದ ಧ್ವನಿಯನ್ನು ಪೂರ್ವವೀಕ್ಷಣೆ ಮಾಡಲು ಎಮೋಜಿಯನ್ನು ಟ್ಯಾಪ್ ಮಾಡಿ ಮತ್ತು ಅದನ್ನು ನಿಮ್ಮ ಸಂಭಾಷಣೆಗೆ ಬಿಡಲು "ಸೆಂಡ್‌" ಬಟನ್ ಒತ್ತಬೇಕಾಗುತ್ತದೆ. ನೀವು ಯಾವ ಬಾವಾರ್ಥ ವ್ಯಕ್ತಪಡಿಸಬೇಕೋ ಅದನ್ನು ನೀವು ಕಳುಹಿಸುವ ಎಮೊಜಿ ಮೂಲಕ ಹೇಳಬಹುದಾಗಿದೆ.

Most Read Articles
Best Mobiles in India

English summary
Facebook's new Page design will make it easier for users to find and manage activities.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X