ನೂರಕ್ಕೂ ಪೇಜ್‌ ಮತ್ತು ಖಾತೆಗಳಿಗೆ ನಿ‍ಷೇಧ ಹೇರಿತು ಫೇಸ್‌ಬುಕ್‌!..ಏಕೆ ಗೊತ್ತಾ?

|

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಅನ್ನು ದುಷ್ಕೃತ್ಯ, ದುರುದ್ದೇಶಕ್ಕಾಗಿ ಫೇಸ್‌ಬುಕ್ ಪೇಜ್‌ಗಳನ್ನು ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ಇಂಡೊನೇಷ್ಯಾ, ಯುಎಇ, ಈಜಿಪ್ಟ್‌ ಮತ್ತು ನೈಜೀರಿಯಾದಲ್ಲಿ ನೂರಕ್ಕೂ ಅಧಿಕ ಪೇಜ್‌, ಗ್ರೂಪ್‌ ಹಾಗೂ ಖಾತೆಗಳನ್ನು ರದ್ದುಗೊಳಿಸಿರುವುದಾಗಿ ಫೇಸ್‌ಬುಕ್‌ ಸಂಸ್ಥೆ ತಿಳಿಸಿದೆ. ಫೇಸ್‌ಬುಕ್ ಪೇಜ್‌ಗಳು ಮತ್ತು ಗ್ರೂಪ್‌ಗಳು ಒಂದೇ ಸಮಯದಲ್ಲಿ ಲಕ್ಷಾಂತರ ಜನರನ್ನು ಒಂದೆಡೆ ಸೇರಿಸುವಂತಹ ಫ್ಲಾಟ್‌ಫಾರ್ಮ್‌ಗಳಾಗಿದ್ದು, ಇವುಗಳನ್ನು ದುರುದ್ದೇಶಕ್ಕಾಗಿ ಬಳಸಲು ಅವಕಾಶ ಇಲ್ಲ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಸೆಪ್ಟೆಂಬರ್‌

ಹೌದು, ಇಂಡೊನೇಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಗಮನವಿರಿಸಲಾಗುತ್ತಿದ್ದು, ನಕಲಿ ಖಾತೆಗಳು ಜಾಹೀರಾತಿನ ಮೂಲಕ ಜನರನ್ನು ಸೆಳೆಯುತ್ತಿವೆ. ಆಗಸ್ಟ್‌ನಿಂದ ಪಪುವಾದಲ್ಲಿ ಪ್ರತಿಭಟನೆ, ಘರ್ಷಣೆ ತೀವ್ರವಾಗಿದ್ದು, ಸೆಪ್ಟೆಂಬರ್‌ನಲ್ಲಿ ನಡೆದ ಘರ್ಷಣೆಯಲ್ಲಿ 33 ಜನ ಮೃತಪಟ್ಟು ಸಾವಿರಾರು ಜನ ಗಾಯಗೊಂಡಿದ್ದರು. ನಕಲಿ ಫೇಸ್‌ಬುಕ್‌ ಹಾಗೂ ಟ್ವಿಟರ್‌ಖಾತೆಗಳು ಹೆಚ್ಚುತ್ತಿರುವ ಬಗ್ಗೆ ಸಂಶೋಧಕರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆರುವುದಾಗಿ ಫೇಸ್‌ಬುಕ್‌ ತಿಳಿಸಿದೆ.

ನಕಲಿ ಫೇಸ್‌ಬುಕ್‌

ಇಂಡೊನೇಷ್ಯಾದಲ್ಲಿ ಪಶ್ಚಿಮ ಪಪುವಾ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿ ಅಥವಾ ಆ ಬಗ್ಗೆ ಟೀಕಿಸಿ 100ಕ್ಕೂ ಅಧಿಕ ನಕಲಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಇಂಗ್ಲಿಷ್‌ ಮತ್ತು ಇಂಡೋನೇಷ್ಯನ್ ಭಾಷೆಯಲ್ಲಿ ವಿಷಯಗಳನ್ನು ಪ್ರಕಟಿಸಲಾಗುತ್ತಿತ್ತು. ಈ ಖಾತೆಗಳನ್ನು ಸ್ಥಳೀಯ ಮಾಧ್ಯಮ ಸಂಸ್ಥೆಗಳಂತೆ ಗೋಚರಿಸುವಂತೆ ವಿನ್ಯಾಸಗೊಳಿಸಲಾಗಿತ್ತುಎಂದು ಫೇಸ್‌ಬುಕ್‌ನ ಥ್ರೆಟ್ ಡಿಸ್‌ರಪ್ಷನ್ ಕಾರ್ಯಪಡೆಯ ಡೇವಿಡ್‌ ಅಗ್ರನೋವಿಚ್ ತಿಳಿಸಿದ್ದಾರೆ. ಹಾಗಾಗಿ, ಇಂತಹ ಖಾತೆಗಳನ್ನು ರದ್ದುಗೊಳಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಡೇವಿಡ್‌ ಅಗ್ರನೋವಿಚ್

ಇಂಡೊನೇಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಗಮನವಿರಿಸಲಾಗುತ್ತಿದ್ದು, ನಕಲಿ ಖಾತೆಗಳು ಜಾಹೀರಾತಿನ ಮೂಲಕ ಜನರನ್ನು ಸೆಳೆಯುತ್ತಿವೆ ಎಂದು ಡೇವಿಡ್‌ ಅಗ್ರನೋವಿಚ್ ಅವರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ದುಷ್ಕೃತ್ಯ, ದುರುದ್ದೇಶಕ್ಕಾಗಿ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ. ಇಂತಹ ಕಾರ್ಯದಲ್ಲಿರುವ ಯಾವುದೇ ತನ್ನ ಫ್ಲಾಟ್‌ಫಾರ್ಮ್ ಮೇಲೆ ಪರಿಣಾಮಕಾರಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸ್ಪ್ಯಾಮ್ ವಿರುದ್ಧ

ಭಾರತದ ಸಾರ್ವತ್ರಿಕ ಚುನಾವಣೆಗೆ ಮುನ್ನ 1,126 ಪುಟಗಳು, ಗುಂಪುಗಳು ಮತ್ತು ಖಾತೆಗಳನ್ನು ತೆಗೆದುಹಾಕಿದ್ದ ಫೇಸ್‌ಬುಕ್ ಇದೇ ಕ್ರಮವನ್ನು ಇಂಡೊನೇಷ್ಯಾದಲ್ಲೂ ತೆಗೆದುಕೊಂಡಿದೆ. ಸ್ಪ್ಯಾಮ್ ವಿರುದ್ಧ ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದಲ್ಲಿ 321 ಫೇಸ್‌ಬುಕ್ ಪುಟಗಳು ಮತ್ತು ಖಾತೆಗಳನ್ನು ತೆಗೆದುಹಾಕಿದ್ದನ್ನು ನಾವು ನೋಡಬಹುದು. ಈ ಮೂಲಕ ಸಮಾಜದಲ್ಲಿ ದ್ವೇಷ ಹರಡುವವರನ್ನು ತಡೆಗಟ್ಟಲು ಫೇಸ್‌ಬುಕ್ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಎಂದರೆ ತಪ್ಪಾಗುವುದಿಲ್ಲ.

Most Read Articles
Best Mobiles in India

English summary
These accounts and pages were actively working to conceal what they were doing and were linked to the Saracen Group, an online syndicate in Indonesia, Facebook's head of cybersecurity policy Nathaniel Gleicher said.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more