ಫೇಸ್‌ಬುಕ್‌ ರೇ-ಬ್ಯಾನ್ ಸ್ಟೋರೀಸ್ 'ಸ್ಮಾರ್ಟ್' ಗ್ಲಾಸ್‌ ಬಿಡುಗಡೆ! ವಿಶೇಷತೆ ಏನು?

|

ಸಾಮಾಜಿಕ ಜಾಲತಾಣ ದೈತ್ಯ ಎನಿಸಿಕೊಂಡಿರುವ ಫೇಸ್‌ಬುಕ್‌ ಬಳಕೆದಾರರ ಅನುಕೂಲಕಕ್ಕಾಗಿ ಹೊಸ ಮಾದರಿಯ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಫೇಸ್‌ಬುಕ್‌ ರೇ-ಬ್ಯಾನ್ ಸ್ಟೋರೀಸ್ 'ಸ್ಮಾರ್ಟ್' ಗ್ಲಾಸ್‌ಗಳನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ ಗ್ಲಾಸ್‌ ಮೂರು ವಿನ್ಯಾಸಗಳಲ್ಲಿ ಮತ್ತು ಫ್ರೇಮ್‌ಗಳಿಗೆ ಮಲ್ಟಿ ಕಲರ್‌ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಗ್ರಾಹಕರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ರೀತಿಯ ಲೆನ್ಸ್‌ಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ತನ್ನ ರೇ-ಬ್ಯಾನ್‌ ಸ್ಟೋರೀಸ್‌ ಸ್ಮಾರ್ಟ್‌ ಗ್ಲಾಸ್‌ಗಳನ್ನು ಪರಿಚಯಿಸಿದೆ. ಇನ್ನು ಈ ರೇ-ಬ್ಯಾನ್ ಸ್ಟೋರಿಸ್‌ 5 ಮೆಗಾಪಿಕ್ಸೆಲ್‌ ಸಾಮರ್ಥ್ಯದ ಡ್ಯುಯೆಲ್‌ ಕ್ಯಾಮೆರಾಗಳನ್ನು ಹೊಂದಿದೆ. ಇದರ ಮೂಲಕ ಫೋಟೋ ಮತ್ತು 30 ಸೆಕೆಂಡುಗಳ ವೀಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ. ಅಲ್ಲದೆ ಕ್ಯಾಮೆರಾ ಕಾರ್ಯನಿರ್ವಹಿಸುವಾಗ ಜನರಿಗೆ ಗೊತ್ತಾಗುವುದಕ್ಕಾಗಿ ಪ್ರೈವೆಸಿ ಫೀಚರ್ಸ್‌ ಆಗಿ ಬಾಹ್ಯ ಮುಖದ ಎಲ್ಇಡಿ ಲೈಟ್ಸ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಗ್ಲಾಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌ನ ರೇ-ಬ್ಯಾನ್ ಸ್ಟೋರೀಸ್ ಸ್ಮಾರ್ಟ್ ಗ್ಲಾಸ್‌ ಡ್ಯುಯೆಲ್‌ ಕ್ಯಾಮೆರಾವನ್ನು ಹೊಂದಿದ್ದು, ಕ್ಯಾಮೆರಾಗಳು 5 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿವೆ. ಇನ್ನು ಈ ಕ್ಯಾಮೆರಾಗಳನ್ನು ಬಳಸಿ ನೀವು 2,592x1,944 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಇದಲ್ಲದೆ ಈ ಕ್ಯಾಮೆರಾಗಳ ಮೂಲಕ ಹೆಚ್ಚುವರಿಯಾಗಿ, 30 ಸೆಕೆಂಡುಗಳ ವೀಡಿಯೋಗಳನ್ನು 1,184x1,184 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದದಲ್ಲಿ ಸೆರೆಹಿಡಿಯಬಹುದು. ಅಲ್ಲದೆ ಸ್ಮಾರ್ಟ್‌ಗ್ಲಾಸ್‌ನಲ್ಲಿ ಬಳಕೆದಾರರು ಸರಿಸುಮಾರು 500 ಚಿತ್ರಗಳನ್ನು ಮತ್ತು 35 ವಿಡಿಯೊಗಳನ್ನು ಸ್ಟೋರೇಜ್‌ ಮಾಡುವ ಅವಕಾಶವನ್ನ ಸಹ ನೀಡಲಾಗಿದೆ.

ಸ್ಮಾರ್ಟ್‌ಗ್ಲಾಸ್‌

ಇನ್ನು ಈ ಸ್ಮಾರ್ಟ್‌ಗ್ಲಾಸ್‌ ಹೊಂದಿರುವ ಕ್ಯಾಮೆರಾಗಳು ಎಕ್ಸ್‌ಟರ್ನಲ್‌ ಫೇಸ್‌ ಎಲ್‌ಇಡಿ ಲೈಟ್ಸ್‌ ಹೊಂದಿವೆ. ನೀವು ಸ್ಮಾರ್ಟ್‌ಗ್ಲಾಸ್‌ ಕ್ಯಾಮೆರಾ ಮೂಲಕ ಫೋಟೋ ಕ್ಯಾಪ್ಚರ್‌ ಮಾಡಿದಾಗ ಬೇರೆಯವರಿಗೆ ತಿಳಿಯುವಂತೆ ಮಾಡಲಿದೆ. ಅಲ್ಲದೆ ಈ ಸ್ಮಾರ್ಟ್ ಗ್ಲಾಸ್‌ಗಳಿಗೆ ನಿರ್ದಿಷ್ಟಪಡಿಸದ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಬಲವೂ ಕೂಡ ಹೊಂದಿದೆ. ಇದಲ್ಲದೆ ಈ ಫೇಸ್‌ಬುಕ್‌ ರೇ-ಬ್ಯಾನ್‌ ಸ್ಟೋರೀಸ್‌ ಸ್ಮಾರ್ಟ್ ಗ್ಲಾಸ್‌ಗಳ ಟೆಂಪಲ್ಸ್‌ ಅನ್ನು ಇಯರ್‌ಫೋನ್‌ಗಳಾಗಿ ಕೂಡ ಬಳಸಬಹುದಾಗಿದೆ. ಇದರಲ್ಲಿ ಮ್ಯೂಸಿಕ್ ಪ್ಲೇಬ್ಯಾಕ್, ಕರೆಗಳು ಮತ್ತು ವಾಲ್ಯೂಮ್‌ಗಾಗಿ ಟಚ್‌-ಆಕ್ಟಿವ್‌ ಕಂಟ್ರೋಲ್‌ ಅನ್ನು ಸಹ ನೀಡಲಾಗಿದೆ.

ವೀಡಿಯೊ

ಈ ಓಪನ್ ಇಯರ್ ಸ್ಪೀಕರ್‌ಗಳು ಸಿಂಗಲ್-ಟ್ಯಾಪ್, ಡಬಲ್-ಟ್ಯಾಪ್ ಮತ್ತು ಟ್ರಿಪಲ್-ಟ್ಯಾಪ್ ಗೆಸ್ಚರ್‌ಗಳೊಂದಿಗೆ ಮ್ಯೂಸಿಕ್ ಪ್ಲೇಬ್ಯಾಕ್, ಕರೆಗಳು ಮತ್ತು ವಾಲ್ಯೂಮ್ ಅನ್ನು ನಿಯಂತ್ರಿಸುವ ಟಚ್-ಸೆನ್ಸಿಟಿವ್ ಕಂಟ್ರೋಲ್‌ಗಳನ್ನು ಹೊಂದಿವೆ. ಅಲ್ಲದೆ ಬಳಕೆದಾರರು ಚಿತ್ರಗಳನ್ನು ಸೆರೆಹಿಡಿಯಲು ಮತ್ತು ವೀಡಿಯೊಗಳನ್ನು ರೆಕಾರ್ಡ್ ಮಾಡಲು ಶಟರ್ ಬಟನ್ ಅನ್ನು ಬಳಸಬಹುದು. ಕರೆಗಳನ್ನು ತೆಗೆದುಕೊಳ್ಳಲು ಸ್ಮಾರ್ಟ್ ಗ್ಲಾಸ್‌ಗಳು ಮೂರು ಮೈಕ್ರೊಫೋನ್‌ಗಳನ್ನು ಸಹ ಒಳಗೊಂಡಿವೆ. ಇನ್ನು ಬಳಕೆದಾರರು ತಮ್ಮ ಫೇಸ್‌ಬುಕ್‌ನ ರೇ-ಬ್ಯಾನ್ ಸ್ಟೋರೀಸ್‌ಗಳನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಕೂಡ ಬ್ಲೂಟೂತ್ v5 ಮೂಲಕ ಕನೆಕ್ಟ್‌ ಮಾಡಬಹುದಾಗಿದೆ

ಫೇಸ್ಬುಕ್

ಫೇಸ್ಬುಕ್ ವ್ಯೂ ಆಪ್ ಮೂಲಕ ಸ್ಮಾರ್ಟ್ ಗ್ಲಾಸ್ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಆಗಲಿದೆ. ಇನ್ನು ಈ ಅಪ್ಲಿಕೇಶನ್‌ "ಆಪರೇಟಿಂಗ್ ಸಿಸ್ಟಂ ಮತ್ತು ಕಂಟೆಂಟ್ ಶೇರಿಂಗ್ ಕಂಪ್ಯಾನಿಯನ್" ಆಗಿ ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಮೆಸೆಂಜರ್ ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಕಂಟೆಟ್‌ ಶೇರ್‌ ಮಾಡಲು ಅವಕಾಶ ನೀಡಲಿದೆ. ಫೇಸ್‌ಬುಕ್‌ನ ರೇ-ಬ್ಯಾನ್ ಸ್ಟೋರೀಸ್‌ ಫೇಸ್‌ಬುಕ್ ಅಸಿಸ್ಟೆಂಟ್ ವಾಯ್ಸ್ ಅಸಿಸ್ಟೆಂಟ್‌ ಅನ್ನು ಸಹ ಬೆಂಬಲಿಸಲಿದೆ. ಇದರ ಮೂಲಕ ಬಳಕೆದಾರರು ಸ್ಮಾರ್ಟ್‌ಗ್ಲಾಸ್‌ನಲ್ಲಿ ಹಲವು ಕಾರ್ಯಗಳನ್ನು ಹ್ಯಾಂಡ್ಸ್-ಫ್ರೀಯಾಗಿ ಕಂಟ್ರೋಲ್‌ ಮಾಡಬಹುದು.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಫೇಸ್‌ಬುಕ್‌ ರೇ-ಬ್ಯಾನ್ ಸ್ಟೋರೀಸ್ ಪ್ರಸ್ತುತ ಬೆಲೆ 299 ಡಾಲರ್‌ನಿಂದ (ರೂ. 22,000) 379 ಡಾಲರ್‌ಗಳವರೆಗೆ (ಅಂದಾಜು ರೂ. 27,900)ಇದೆ. ಈ ಗ್ಲಾಸ್‌ಗಳನ್ನು ಕಪ್ಪು, ನೀಲಿ, ಕಂದು ಮತ್ತು ಹಸಿರು ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಗ್ಲಾಸ್‌ಗಳು ವಿಭಿನ್ನ ಮಾದರಿಯ ಲೆನ್ಸ್‌ ಆಯ್ಕೆಯನ್ನು ಹೊಂದಿದ್ದು, ಕ್ಲಿಯರ್ ವಿತ್ ಬ್ಲೂ ಲೈಟ್ ಫಿಲ್ಟರ್, ಬ್ರೌನ್, ಡಾರ್ಕ್ ಗ್ರೇ, ಗ್ರೀನ್, ಪೋಲರೈಸ್ಡ್ ಡಾರ್ಕ್ ಬ್ಲೂ, ಟ್ರಾನ್ಸಿಶನ್ ಕ್ಲಿಯರ್ ವಿತ್ ಡಾರ್ಕ್ ಗ್ರೀನ್ ಲೆನ್ಸ್ ಗಳ ನಡುವೆ ಆಯ್ಕೆ ಮಾಡಬಹುದು. ಸದ್ಯ ಫೇಸ್‌ಬುಕ್ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ಗಳನ್ನು ಆನ್‌ಲೈನ್‌ನಲ್ಲಿ ರೇ-ಬಾನ್‌ನ ವೆಬ್‌ಸೈಟ್ ಮೂಲಕ ಮತ್ತು ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ಇಟಲಿ, ಯುಕೆ ಮತ್ತು ಯುಎಸ್‌ನಲ್ಲಿ ಆಯ್ದ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ. ಭಾರತದಲ್ಲಿ ಇದು ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Most Read Articles
Best Mobiles in India

English summary
Facebook x Ray-Ban smart glasses can be purchased online via Ray-Ban's website and through select retail stores in Australia, Canada, Ireland, Italy, UK, and US.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X