ಭಾರತದಲ್ಲಿ 4G ನೆಟ್‌ವರ್ಕ್‌ ಬೆಂಬಲಿಸುವ ಅತ್ಯುತ್ತಮ ಫೀಚರ್‌ ಫೋನ್‌ಗಳು!

|

ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್‌ಫೋನ್‌ಗಳ ಹಾವಳಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕೀ ಪ್ಯಾಡ್‌ ಸೆಟ್‌ಗಳು ಮರೆಯಾಗುತ್ತಿವೆ. ಆದರೂ ಕೀ ಪ್ಯಾಡ್‌ ಸೆಟ್‌ಗಳನ್ನು ಕೊಳ್ಳುವವರೂ ಈಗಲೂ ಕೂಡ ಇದ್ದಾರೆ. ಸ್ಮಾರ್ಟ್‌ಫೋನ್‌ ಜೊತೆಗೊಂದು ಫೀಚರ್‌ಫೋನ್‌ ಇರಲಿ ಅಂತಲೊ, ಇಲ್ಲವೇ ಒರುಟಾದ ಸ್ಥಳಗಳಲ್ಲಿ ಕೆಲಸ ಮಾಡುವಾಗ ಬಳಕೆಗೆ ಇರಲಿ ಎಂತಲೊ ಕೀ ಪ್ಯಾಡ್‌ ಸೆಟ್‌ಗಳನ್ನು ಬಳಸುವವರು ಇದ್ದಾರೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ಫೀಚರ್‌ಫೋನ್‌ಗಳನ್ನು ಪರಿಚಯಿಸುತ್ತಲೇ ಬಂದಿವೆ.

ಫೀಚರ್

ಹೌದು, ಫೀಚರ್ ಫೋನ್‌ಗಳು ಕೈಗೆಟುಕುವ ಬೆಲೆಯನ್ನು ಹೊಂದಿರುವ ಕಾರಣ ಈಗಲೂ ಇವುಗಳನ್ನು ಖರೀದಿಸುವವರಿದ್ದಾರೆ. ಆದರೂ ಇತ್ತೀಚಿನ ದಿನಗಳಲ್ಲಿ ಫೀಚರ್‌ ಫೋನ್‌ಗಳಲ್ಲಿ ಹೊಸ ವಿನ್ಯಾಸವನ್ನು ಪಡೆದುಕೊಂಡಿವೆ. ಇನ್ನು ಈ ಫೀಚರ್‌ಫೋನ್‌ಗಳು ಮಲ್ಟಿಮೀಡಿಯಾ ಕ್ರಿಯಾತ್ಮಕತೆ, ದೀರ್ಘ ಬ್ಯಾಟರಿ ಮತ್ತು ಕೀಪ್ಯಾಡ್ ಅನ್ನು ಬಳಸಲು ಸುಲಭವಾಗಿದೆ. ಸದ್ಯ ಭಾರತದಲ್ಲಿ 4G ಬೆಂಬಲಿಸುವ ಫೀಚರ್‌ ಫೋನ್‌ಗಳು ಕೂಡ ಲಭ್ಯವಿದೆ. ಹಾಗಾದ್ರೆ ಭಾರತದಲ್ಲಿ ಲಭ್ಯವಾಗುವ 4G ಬೆಂಬಲಿಸುವ ಫೀಚರ್ ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ರಿಲಯನ್ಸ್ ಜಿಯೋಫೋನ್

ರಿಲಯನ್ಸ್ ಜಿಯೋಫೋನ್

ರಿಲಯನ್ಸ್ ಜಿಯೋಫೋನ್ 4G VoLTE ಬೆಂಬಲಿಸುವ ಫೀಚರ್‌ ಫೋನ್‌ ಆಗಿದೆ. ಫೀಚರ್‌ಫೋನ್‌ ಮಾದರಿಯಲ್ಲಿಯೇ ಹೊಸ ಸಂಚಲನ ಸೃಷ್ಟಿಸಿದ ಫೋನ್‌ ಎಂದೇ ಹೇಳಬಹುದಾಗಿದೆ. ಇದು ಹೆಚ್‌ಡಿ ವಾಯ್ಸ್‌ ಕರೆಗಳು ಮತ್ತು ವೀಡಿಯೊ ಕರೆಗಳನ್ನು ಬೆಂಬಲಿಸುತ್ತದೆ. ಇನ್ನು ಈ ಫೋನ್ 2,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 128GB ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್‌ ಹೊಂದಿದೆ. ಇದರ ಬೆಲೆ 1,799 ರೂ ಆಗಿದೆ.

ನೋಕಿಯಾ 215

ನೋಕಿಯಾ 215

ನೋಕಿಯಾ ಕಂಪೆನಿ ಮೊಬೈಲ್‌ ಮಾರುಕಟ್ಟೆಯ ಎವರ್‌ಗ್ರೀನ್‌ ಬ್ರಾಂಡ್‌ ಎನಿಸಿಕೊಂಡಿದೆ. ಸದ್ಯ ಭಾರತದಲ್ಲಿ 4G ಬೆಂಬಲಿಸುವ ಫೀಚರ್‌ಫೋನ್‌ಗಳಲ್ಲಿ ನೋಕಿಯಾ 215 ಕೂಡ ಒಮದಾಗೊದೆ. ಇದು ನಾಕ್-ಪ್ರೂಫ್ ಬಾಳಿಕೆ ಹೊಂದಿದೆ ಮತ್ತು ಇದು ಹೆಚ್ಚಿನ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಆನ್‌ಲೈನ್‌ನಲ್ಲಿ ಬ್ರೌಸ್ ಮಾಡಲು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಫೋನ್ ಒಬ್ಬರನ್ನು ಅನುಮತಿಸುತ್ತದೆ. ಇದು ಡ್ಯುಯಲ್ ಸಿಮ್ ಫೋನ್ ಆಗಿದ್ದು, 2.4 ಇಂಚಿನ ಡಿಸ್ಪ್ಲೇ ನೀಡುತ್ತದೆ. ಇದು 32 ಜಿಬಿ ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್‌ ನೀಡುತ್ತದೆ.

ಮೈಕ್ರೋಮ್ಯಾಕ್ಸ್ ಭರತ್ 1

ಮೈಕ್ರೋಮ್ಯಾಕ್ಸ್ ಭರತ್ 1

ಇದು 4G ಫೀಚರ್ ಫೋನ್ ಆಗಿದ್ದು, ಇದನ್ನು ಮೈಕ್ರೋಮ್ಯಾಕ್ಸ್ ಬಿಎಸ್ಎನ್ಎಲ್ ಜಂಟಿ ಸಹಭಾಗಿತ್ವದಲ್ಲಿ ಪರಿಚಯಿಸಿದೆ. 2,200 ರೂ.ಗಳ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ, ಭಾರತ್ -1 ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಹೊಂದಿದ್ದು, 4G ಗೆ ಅವಕಾಶವಿದೆ. ಇದು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂಭಾಗದಲ್ಲಿ 2 ಎಂಪಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್‌ 2,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ನೋಕಿಯಾ 225

ನೋಕಿಯಾ 225

ಇನ್ನು ನೋಕಿಯಾ 225 ಡ್ಯುಯಲ್ ಸಿಮ್ ಒಳಗೊಂಡ 4G ಫೋನ್ ಆಗಿದ್ದು, 2.4 ಇಂಚಿನ ಕ್ಯೂವಿಜಿಎ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಜೊತೆಗೆ ಇದು 16 ತಿಂಗಳವರೆಗೆ ಬ್ಯಾಟರಿ ಬಾಳಿಕೆ ಹೊಂದಿದೆ. ಈ ಹ್ಯಾಡ್‌ಸೆಟ್‌ 128MB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಈ ಫೋನ್‌ 1200mAh ಬ್ಯಾಟರಿ ಹೊಂದಿದೆ. ಇದರ ಬೆಲೆ 2,731 ರೂ. ಆಗಿದೆ.

Most Read Articles
Best Mobiles in India

Read more about:
English summary
If you are looking for feature phones in India that come with 4G mobile connectivity, here is a list that you can consider.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X