ಐಫೋನ್‌ 13 ಸರಣಿಯಲ್ಲಿ ಇರಲಿದೆ ಹೊಸ ವೈಫೈ 6E; ವೇಗ ಜಬರ್ದಸ್ತ್!

|

ಜನಪ್ರಿಯ ಆಪಲ್‌ ಕಂಪನಿಯ ಮುಂಬರುವ ಐಫೋನ್ 13 ಸರಣಿಯು ಕ್ಯಾಮೆರಾ, ಡಿಸ್‌ಪ್ಲೇ ಮತ್ತು ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಹೊಸ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದು ಸುಧಾರಿತ ಕಾರ್ಯಕ್ಷಮತೆಯ ಜೊತೆಗೆ ಉತ್ತಮ ಬ್ಯಾಟರಿ ಬಾಳಿಕೆಯನ್ನು ನೀಡುವ ನಿರೀಕ್ಷೆಯಿದೆ. ಇವುಗಳೊಂದಿಗೆ, ಕಳೆದ ವರ್ಷ ಜನವರಿಯಲ್ಲಿ ಘೋಷಿಸಲಾದ ಇತ್ತೀಚಿನ ವೈಫೈ 6E ಸ್ಟ್ಯಾಂಡರ್ಡ್‌ಗೆ ಆಪಲ್ ಬೆಂಬಲವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಸ್ಮಾರ್ಟ್‌ಫೋನ್‌ಗಳು

ವೈಫೈ 6E ಬೆಂಬಲವು ಈಗಾಗಲೇ ಕೆಲವು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತಿದೆ ಮತ್ತು ಶೀಘ್ರದಲ್ಲೇ ಎಲ್ಲಾ ಸಾಧನಗಳಲ್ಲಿ ಲಭ್ಯವಾಗಲಿದೆ. ನೂತನ ವೈಫೈ 6E ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿರಿ.

ಏನಿದು ವೈಫೈ 6E?..ವೈಫೈ 6 ಗಿಂತ ಹೇಗೆ ಭಿನ್ನ

ಏನಿದು ವೈಫೈ 6E?..ವೈಫೈ 6 ಗಿಂತ ಹೇಗೆ ಭಿನ್ನ

ವೈಫೈಗೆ ಬಂದಾಗ, ನೀವು ಈಗಾಗಲೇ ಎರಡು ವೈಫೈ ಬ್ಯಾಂಡ್‌ಗಳೊಂದಿಗೆ ಪರಿಚಿತರಾಗಿದ್ದೀರಿ - 2.4GHz ಮತ್ತು 5GHz. 2.4GHz ನೊಂದಿಗೆ, ವೈಫೈ ವ್ಯಾಪ್ತಿಯು ಹೆಚ್ಚಾಗುತ್ತದೆ ಮತ್ತು 5GHz ಹೆಚ್ಚಿನ ಡೇಟಾ ವೇಗವನ್ನು ನೀಡುತ್ತದೆ. ಈಗ, ಮೂರನೇ ಬ್ಯಾಂಡ್ ಇದೆ 6GHz, ವೈಫೈ 6E ಪರಿಚಯದೊಂದಿಗೆ. ಹೊಸ ಮಾನದಂಡವು ಕೇವಲ 6GHz ಸ್ಪೆಕ್ಟ್ರಮ್‌ನಲ್ಲಿ ವೈಫೈ 6 ತಂತ್ರಜ್ಞಾನವಾಗಿದೆ.

ವೈಫೈ 6E ಅಗತ್ಯತೆ ಏನು?

ವೈಫೈ 6E ಅಗತ್ಯತೆ ಏನು?

ವೈಫೈ 6E ಯೊಂದಿಗೆ, ನೀವು ವೇಗವಾಗಿ ಡೇಟಾ ವೇಗವನ್ನು ನಿರೀಕ್ಷಿಸಬಹುದು. ಅಲ್ಲದೇ ನಿಮ್ಮ ವೈಫೈ ನೆಟ್‌ವರ್ಕ್ (ವೈಫೈ 6E ಯಲ್ಲಿ) ಯಾವುದೇ ದಟ್ಟಣೆಯಿಂದ ಕೂಡಿರುವುದಿಲ್ಲ. ಹಾಗೆಯೇ ನಿಮ್ಮ ಸಾಧನದಲ್ಲಿ ವೈಫೈ ಸಂಪರ್ಕ ಕಡಿಮೆ ಆಗುವ ಸಾಧ್ಯತೆ ಇರುವುದಿಲ್ಲ.

ವೈಫೈ 6E ವೇಗವಾಗಿ ವೈಫೈ ಇಂಟರ್ನೆಟ್ ಒದಗಿಸುತ್ತದೆಯೇ?

ವೈಫೈ 6E ವೇಗವಾಗಿ ವೈಫೈ ಇಂಟರ್ನೆಟ್ ಒದಗಿಸುತ್ತದೆಯೇ?

ವಿಶೇಷಣಗಳ ಪ್ರಕಾರ ನೋಡುವುದಾದರೇ, 5GHz ಮತ್ತು 6GHz ನಲ್ಲಿ ವೈಫೈ ಗರಿಷ್ಠ ವೇಗವು ಒಂದೇ ಆಗಿರುತ್ತದೆ- 9.6Gbps. ಇದು ಪ್ರಸ್ತುತ ವೈಫೈ 6 ಮಾನದಂಡದಿಂದ ಸಾಧಿಸಬಹುದಾದ ಗರಿಷ್ಠ ವೇಗವಾಗಿದೆ. ವಾಸ್ತವದಲ್ಲಿ, ವಾಣಿಜ್ಯ ಇಂಟರ್ನೆಟ್ ಸೇವಾ ಪೂರೈಕೆದಾರರು ಅಂತಹ ವೇಗವನ್ನು ನೀಡಲು ಸಾಧ್ಯವಾಗುವುದಿಲ್ಲ. ಆದರೆ 5GHz ವೈಫೈಗೆ ವೇಗವು ಸಮಸ್ಯೆಯಲ್ಲ, ನಿಜವಾದ ಸಮಸ್ಯೆ ಸ್ಪೆಕ್ಟ್ರಮ್ ಲಭ್ಯತೆ ಮತ್ತು 6GHz (WiFi 6E) ನೊಂದಿಗೆ, ನಾಲ್ಕು ಪಟ್ಟು ಹೆಚ್ಚು ಬ್ಯಾಂಡ್‌ವಿಡ್ತ್ ಇರುತ್ತದೆ, ಅಂತಿಮವಾಗಿ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ವೇಗದ ಇಂಟರ್ನೆಟ್ ಪಡೆಯಲು ಸಹಾಯ ಮಾಡುತ್ತದೆ.

ಹೊಸ ಐಫೋನ್‌ಗಳಲ್ಲಿ ಆಪಲ್ ವೈಫೈ 6E ಬೆಂಬಲ ಇರಲಿದೆಯೇ?

ಹೊಸ ಐಫೋನ್‌ಗಳಲ್ಲಿ ಆಪಲ್ ವೈಫೈ 6E ಬೆಂಬಲ ಇರಲಿದೆಯೇ?

ಆಪಲ್ ತನ್ನ ಮುಂಬರುವ ಶ್ರೇಣಿಯ ಐಫೋನ್ 13 ರಲ್ಲಿ ವೈಫೈ 6E ಗೆ ಬೆಂಬಲವನ್ನು ಸೇರಿಸುತ್ತದೆ ಎಂದು ಹೇಳಲಾಗಿದೆ. ಡಿಜಿಟೈಮ್ಸ್ ವರದಿಯ ಪ್ರಕಾರ, ಆಪಲ್ ತನ್ನ ಎಲ್ಲಾ ಭವಿಷ್ಯದ ಐಫೋನ್‌ಗಳಲ್ಲಿ ವೈಫೈ 6E ನೀಡಲು ಸಿದ್ಧತೆ ನಡೆಸಿದೆ.

Most Read Articles
Best Mobiles in India

English summary
Apple is also said to offer support for the latest WiFi 6E standard that was announced in January last year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X