ಈ ಶಾರ್ಟ್‌ ವಿಡಿಯೊ ಆಪ್‌ನಲ್ಲಿ ಒಂದೇ ಬಾರಿಗೆ ಎರಡು ಕ್ಯಾಮೆರಾ ಬಳಕೆ ಮಾಡಬಹುದು!

|

ಪ್ರಸ್ತುತ ವಿಡಿಯೊ ಮೇಕಿಂಗ್ ಅಪ್ಲಿಕೇಶನ್‌ಗಳಿಗೆ ಅಧಿಕ ಬೇಡಿಕೆ ಇದ್ದು, ಅದರಲ್ಲಿಯೂ ಟಿಕ್‌ಟಾಕ್‌ ಸೇರಿದಂತೆ ಶಾರ್ಟ್ ವಿಡಿಯೊ ಮೇಕಿಂಗ್ ಆಪ್ಸ್‌ಗಳ ಅಬ್ಬರ ಜೋರಾಗಿದೆ. ಅವುಗಳಲ್ಲಿ 'ಫೈರ್‌ವರ್ಕ್' ಆಪ್‌ ಕೂಡಾ ಒಂದಾಗಿದೆ. ಈ ಆಪ್‌ಗಳಲ್ಲಿ ಬಹುತೇಕ ಬಳಕೆದಾರರು ಫೋನ್ ಕ್ಯಾಮೆರಾದಲ್ಲಿಯೇ ತುಂಬಾ ಕ್ರಿಯೆಟಿವ್ ಆಗಿ ಶೂಟ್ ಮಾಡುತ್ತಾರೆ. ಬಳಕೆದಾರರಿಗೆ 'ಫೈರ್‌ವರ್ಕ್' ಆಪ್ ಇದೀಗ ಹೊಸದೊಂದು ಫೀಚರ್ಸ್‌ ಸೇರಿಸಿದ್ದು, ವಿಡಿಯೊ ಕ್ರಿಯೆಟರ್‌ಗಳಿಗೆ ಖುಷಿ ತಂದಿದೆ.

ಶಾರ್ಟ್‌ ವಿಡಿಯೊ ಅಪ್ಲಿಕೇಶನ್

ಹೌದು, ಸದ್ಯ ವೇಗವಾಗಿ ಬೆಳೆಯುತ್ತಿರುವ ಶಾರ್ಟ್‌ ವಿಡಿಯೊ ಅಪ್ಲಿಕೇಶನ್ 'ಫೈರ್‌ವರ್ಕ್' ಈಗ ಮಲ್ಟೀ ಕ್ಯಾಮೆರಾ ರೆಕಾರ್ಡಿಂಗ್ ಸೌಲಭ್ಯವನ್ನು ಅಳವಡಿಸಿದ್ದು, ಅದನ್ನು ಜೆಮಿ-Gemi ಎಂದು ಕರೆದಿದೆ. ಈ ಫೀಚರ್ಸ್‌ ವಿಡಿಯೊ ಕ್ರಿಯಟ್ ಮಾಡುವ ಬಳಕೆದಾರರಿಗೆ ಒಂದೇ ವೇಳೆಗೆ ಫೋನಿನ ಫ್ರಂಟ್ ಮತ್ತು ಬ್ಯಾಕ್ ಎರಡು ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಒದಗಿಸುತ್ತದೆ. ಈ ಸೌಲಭ್ಯದಿಂದ ಬಳಕೆದಾರರಿಗೆ ಮಲ್ಟೀ ಕ್ಯಾಮೆರಾ ವಿಡಿಯೊ ಶೂಟ್ ಮಾಡಲು ದಾರಿ ಸುಲಭವಾದಂತೆ.

ವಿಡಿಯೊ ಕ್ರಿಯೆಟ್

ವಿಡಿಯೊ ಕ್ರಿಯೆಟ್ ಮಾಡುವ ಬಳಕೆದಾರರು ಒಂದೇ ವೇಳೆಗೆ ಸೆಲ್ಫಿ ಮತ್ತು ಬ್ಯಾಕ್ ಕ್ಯಾಮೆರಾ ಎರಡನ್ನು ಬಳಕೆ ಮಾಡಲು ಸಾಕಷ್ಟು ಪ್ರಯತ್ನ ಪಡುತ್ತಿದ್ದರು. ಈ ನಿಟ್ಟಿನಲ್ಲಿ ಹೊಸದಾಗಿ ಅಳವಡಿಸಿದ ಜೆಮಿ ಆಯ್ಕೆಯು ಬಳಕೆದಾರರಿಗೆ ಫ್ರಂಟ್ ಮತ್ತು ಬ್ಯಾಕ್ ಕ್ಯಾಮೆರಾ ಬಳಕೆಗೆ ಅನುಕೂಲ ಆಗಲಿದೆ ಎಂದು ಫೈರ್‌ವರ್ಕ್ ಇಂಡಿಯಾದ ಉದ್ಯಮ ಅಭಿವೃದ್ಧಿ, ಬೆಳವಣಿಗೆ ಮತ್ತು ಸಹಭಾಗಿತ್ವದ ಮುಖ್ಯಸ್ಥ ಸುದರ್ಶನ್ ಕದಮ್ ಹೇಳಿದರು.

ವಿಡಿಯೊ ರೆಕಾರ್ಡಿಂಗ್ ಟೂಲ್

ಅಂದಹಾಗೆ ಫೈರ್‌ವರ್ಕ್ ವಿಡಿಯೊ ಅಪ್ಲಿಕೇಶನ್ ಆಪಲ್‌ ಐಫೋನ್‌ಗಳಲ್ಲಿ ಲಭ್ಯವಾಗಲಿದ್ದು, ಆಪಲ್‌ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಐಫೋನ್‌ಗಳಲ್ಲಿ ವಿಡಿಯೊ ರೆಕಾರ್ಡಿಂಗ್ ಟೂಲ್ (split) ವಿಭಜನೆಯ ರೀತಿಯಲ್ಲಿ ಕಾಣಿಸಲಿದ್ದು, ಎರಡು ಕ್ಯಾಮೆರಾಗಳು ಒಂದೇ ವೇಳಗೆ ಕಾರ್ಯನಿರ್ವಹಿಸುತ್ತವೆ. ಈ ಆಪ್ 30 ಸೆಕೆಂಡ್‌ಗಳ ವಿಡಿಯೊ ರೆಕಾರ್ಡ್‌ ಮಾಡಬಹುದಾಗಿದೆ.

ಫೈರ್‌ವರ್ಕ್ ಅಪ್ಲಿಕೇಶನ್

ಕ್ಯಾಲಿಫೋರ್ನಿಯ ಮೂಲದ ಫೈರ್‌ವರ್ಕ್ ಅಪ್ಲಿಕೇಶನ್ ಸದ್ಯ ಮನರಂಜನೆ ಮತ್ತು ಶಾರ್ಟ್‌ ವಿಡಿಯೊ ಕ್ರಿಯೆಟ್‌ ವಲಯದಲ್ಲಿ ದಾಪುಗಾಲಿಡುವ ಪ್ರಯತ್ನಗಳನ್ನು ನಡೆಸುತ್ತ ಸಾಗಿದೆ. 30 ಸೆಕೆಂಡ್ ವಿಡಿಯೊ ಸೆರೆಹಿಡಿಯುವ ಆಯ್ಕೆ ಇದೆ. ಮುಂದಿನ ದಿನಗಳಲ್ಲಿ ಭಾರತೀಯ ಬಳಕೆದಾರರಿಗೆ ಇನ್ನಷ್ಟು ನೂತನ ಫೀಚರ್ಸ್‌ಗಳನ್ನು ಪರಿಚಯಿಸುವ ಯೋಜನೆಗಳು ಇವೆ ಎಂದು ಹೇಳಿಕೊಂಡಿದೆ.

Best Mobiles in India

English summary
Firework's new Gemi tool allows iPhone users to shoot split-screen videos using their front and back cameras at the same time.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X