Just In
Don't Miss
- Sports
ಐಪಿಎಲ್ 2022 ಹರಾಜಿನಲ್ಲಿ ಬೇಡಿಕೆಯೇ ಇಲ್ಲ: 2ನೇ ಅವಕಾಶ ಪಡೆದು ಅಬ್ಬರಿಸಿದ 3 ಆಟಗಾರರು ಇವರು!
- Movies
ಅತ್ತೆ ಮೆಚ್ಚಿದ ಸೊಸೆಯಾಗುತ್ತಾಳಾ ಪಾರು? ಧಾಮಿನಿ ಕುತಂತ್ರಕ್ಕೆ ಬಲಿಯಾಗುತ್ತಾಳಾ ಜನನಿ?
- News
ಹಿಂದೂ ರಾಷ್ಟ್ರ ಕಟ್ಟುವುದನ್ನು ಹೆಡ್ಗೆವಾರ್ ಪಾಠದಿಂದಲೇ ಕಲಿಯಬೇಕಾ..?
- Finance
Gold Rate Today: 10 ದಿನದಲ್ಲಿ 6 ಬಾರಿ ಚಿನ್ನದ ದರ ಏರಿಕೆ: ಮೇ 25ರ ಬೆಲೆ ತಿಳಿಯಿರಿ
- Automobiles
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Lifestyle
ಡಬಲ್ ಚಿನ್ ಇಲ್ಲವಾಗಿಸಲು ನಿತ್ಯ ಈ ವ್ಯಾಯಾಮಗಳನ್ನು ಮಾಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ವರ್ಷದ ಮೊದಲ ಚಂದ್ರಗ್ರಹಣದ ವಿಶೇಷತೆ ಏನು? ಇದು ಎಲ್ಲೆಲ್ಲಿ ಗೋಚರಿಸಲಿದೆ?
ಈ ವರ್ಷದ ಮೊದಲ ಚಂದ್ರಗಹಣ ಇದೇ ಮೇ 16, 2022 ರಂದು ಗೋಚರಿಸಲಿದೆ. ಸೌರವ್ಯೂಹದಲ್ಲಿ ನಡೆಯುವ ಈ ಕುತೂಹಲಕಾರಿ ದೃಶ್ಯವನ್ನು ಕಣ್ತುಂಬಿಕೊಳ್ಳಲು ಖಗೋಳಶಾಸ್ತ್ರಜ್ಞರು ಸಾಕಷ್ಟು ಆಸಕ್ತಿಯಿಂದ ಕಾಯುತ್ತಿದ್ದಾರೆ. ಇನ್ನು ಈ ಸಂಪೂರ್ಣ ಚಂದ್ರಗ್ರಹಣವೂ ಸುರ್ದೀರ್ಘ ಸಮಯದ ಗ್ರಹಣವಾಗಿದೆ. 2018ರಲ್ಲಿ ಸಂಭವಿಸಿದ್ದ ಸುದಿರ್ಘ ಚಂದ್ರಗ್ರಹಣದ ನಂತರ ಸಂಭವಿಸುತ್ತಿರುವ ದೀರ್ಘ ಚಂದ್ರಗ್ರಹಣ ಇದಾಗಿದೆ.

ಮೇ 16 ರಂದು ಸಂಭವಿಸುವ ಈ ಚಂದ್ರಗ್ರಹಣದ ಪೆನಂಬ್ರಲ್ ಹಂತವನ್ನು ಬರಿಗಣ್ಣಿನಿಂದ ವೀಕ್ಷಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಗ್ರಹಣವನ್ನು ವೀಕ್ಷಿಸುವುದಕ್ಕೆ ಸೂಕ್ತವಾದ ಉಪಕರಣಗಳನ್ನು ಬಳಸಿ ಇದನ್ನು ವೀಕ್ಷಿಸಬಹುದಾಗಿದೆ. ಆದರೆ ಗ್ರಹಣದ ಪ್ರಗತಿಯ ಹಂತವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು ಎನ್ನಲಾಗಿದೆ. ಹಾಗಾದ್ರೆ ಈ ಚಂದ್ರಗ್ರಹಣ ಮೊದಲು ಎಲ್ಲಿ ಕಾಣಿಸಲಿದೆ? ಯಾವ ಸಮಯದಲ್ಲಿ ಗೋಚರಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗ್ರಹಣ ಪ್ರಾರಂಭವಾಗುವುದು ಯಾವಾಗ?
ಈ ವರ್ಷದ ಮೊದಲ ಚಂದ್ರಗ್ರಹಣವು ಸುಮಾರು 5 ಗಂಟೆ 20 ನಿಮಿಷಗಳ ಕಾಲ ಇರಲಿದೆ ಎಂದು ಖಗೋಳ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಚಂದ್ರಗ್ರಹಣ ಮೇ 15ರ ತಡರಾತ್ರಿ 9.40ಕ್ಕೆ ಆರಂಭವಾಗಿ ಮೇ16ರ ಬೆಳಗ್ಗೆ 12.20(ಮಧ್ಯರಾತ್ರಿ)ರವರೆಗೆ ನಡೆಯಲಿದೆ. ಅಲ್ಲದೆ ಭಾರತೀಯ ಕಾಲಮಾನ ರಾತ್ರಿ 10.23ರ ಹೊತ್ತಿಗೆ ಗ್ರಹಣ ತನ್ನ ಗರಿಷ್ಠ ಮಟ್ಟ ತಲುಪಲಿದೆ.

ಪೆನಂಬ್ರಲ್ ಚಂದ್ರಗ್ರಹಣ
ಗ್ರಹಣದ ಪೆನಂಬ್ರಲ್ ಹಂತವು 01:33 GMT ಗೆ ಪ್ರಾರಂಭವಾಗುತ್ತದೆ. ಈ ಹಂತವನ್ನು ಬರಿಗಣ್ಣಿನಿಂದ ವೀಕ್ಷಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಈ ಸಮಯದಲ್ಲಿ ಸಂಪೂರ್ಣವಾಗಿ ಚಂದ್ರನನ್ನು ನೆರಳು ಆವರಿಸಲಿದ್ದು, ನೆರಳಿನ ಹೊರಭಾಗ ಮಾತ್ರ ಕಾಣಿಸಲಿದೆ. ಇನ್ನು ಈ ಚಂದ್ರಗ್ರಹಣದ ಭಾಗಶಃ ಗ್ರಹಣವು 02:28 GMT ಕ್ಕೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ, ನೀವು ಗ್ರಹಣದ ಹಂತಗಳನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು ಎನ್ನಲಾಗಿದೆ.

ಗ್ರಹಣ ಎಲ್ಲೆಲ್ಲಿ ಗೋಚರಿಸಲಿದೆ
ಮೇ 16 2022 ರಂದು ಸಂಭವಿಸುವ ಚಂದ್ರಗ್ರಹಣವು ಅಮೆರಿಕ, ಲ್ಯಾಟಿನ್ ಅಮೇರಿಕಾ, ಪಶ್ಚಿಮ ಯುರೋಪ್ ಮತ್ತು ಆಫ್ರಿಕಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಗೋಚರಿಸಲಿದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಏಕೆಂದರೆ ಗ್ರಹಣದ ಸಮಯದಲ್ಲಿ ಭಾರತದಲ್ಲಿ ಹಗಲಿನ ಸಮಯವಾಗಿರುತ್ತದೆ. ಆದರಿಂದ ಗ್ರಹಣದ ಗೋಚರತೆ ಕಾಣುವುದಿಲ್ಲ.ಆದರೆ ಗ್ರಹಣ ಅಮೆರಿಕ, ಯುರೋಪ್ನಲ್ಲಿ ಮೇ 15 ರ ತಡರಾತ್ರಿಯಿಂದ ಮೇ 16 ರ ಮುಂಜಾನೆಯವರೆಗೆ ಚಂದ್ರನು ಕಪ್ಪನೆ ಬಣ್ಣಕ್ಕೆ ಬಂದು ಕೆಂಪು ಬಣ್ಣಕ್ಕೆ ತಿರುಗುವುದನ್ನು ಕಣ್ತುಂಬಿಕೊಳ್ಳಬಹುದು.

ಗ್ರಹಣವನ್ನು ವೀಕ್ಷಿಸುವುದು ಹೇಗೆ?
ಭಾರತದಲ್ಲಿ ಚಂದ್ರಗ್ರಹಣದ ಗೋಚರತೆ ಇಲ್ಲ. ಆದರಿಂದ ನೀವು ನಾಸಾದ ಲೈವ್ ಸ್ಟ್ರೀಮ್ನಲ್ಲಿ ವೀಕ್ಷಿಸಬಹುದಾಗಿದೆ.

ಇನ್ನು ಚಂದ್ರಗ್ರಹಣ ಸಾಮಾನ್ಯವಾಗಿ ಹುಣ್ಣಿಮೆಯ ದಿನಗಳಲ್ಲಿಯೇ ಸಂಭವಿಸಲಿದೆ. ಏಕೆಂದರೆ ಚಂದ್ರ ಪೂರ್ಣಚಂದ್ರನಾಗಿ ಕಂಗೊಳಿಸುವುದು ಹುಣ್ಣಿಮೆಯ ದಿನದಂದು. ಇನ್ನು ಹುಣ್ಣಿಮೆಯ ದಿನದಂದು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ವಸ್ತುಗಳನ್ನು ಜೋಡಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಮತ್ತು ಚಂದ್ರನ ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999