Just In
Don't Miss
- Sports
ಕೊಹ್ಲಿ ಮತ್ತು ಸ್ಟೋಕ್ಸ್ ನಡುವೆ ಮಾತಿನ ಚಕಮಕಿ: ನಿಜಕ್ಕೂ ಆಗಿದ್ದೇನೆಂದು ವಿವರಿಸಿದ ಸಿರಾಜ್
- Movies
ಕಿರುತೆರೆಯಲ್ಲಿ ಪವರ್ ಸ್ಟಾರ್ ಅಬ್ಬರ: 'ಡಿಕೆಡಿ'ಯಲ್ಲಿ ಅಪ್ಪು ಡಾನ್ಸ್
- News
ಕೋಟ್ಯಧಿಪತಿಯ ಜತೆ ಚಂದ್ರಯಾನಕ್ಕೆ ಹೋಗಬಹುದು, ಅದೂ ಉಚಿತವಾಗಿ!
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Automobiles
ಉರುಸ್ ಕಾರಿನ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ
- Lifestyle
ಬಾಳೆಹಣ್ಣು ಹಾಳಾಗದಂತೆ ತಡೆಯಲು ಟಿಪ್ಸ್
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫ್ಲಿಪ್ಕಾರ್ಟ್, ಅಮೆಜಾನ್ ಸೇಲ್ನಲ್ಲಿ ಈ ಐಫೋನ್ಗಳಿಗೆ ಭಾರೀ ಡಿಸ್ಕೌಂಟ್!
ಜನಪ್ರಿಯ ಇ-ಕಾಮರ್ಸ್ ತಾಣಗಳಾದ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ವಿಶೇಷ ದಿನಗಳಂದು ಹಾಗೂ ಮಂತ್ ಎಂಡ್ನಲ್ಲಿ ಆಕರ್ಷಕ ಕೊಡುಗೆ ಘೋಷಿಸುತ್ತವೆ. ಸದ್ಯ ಗಣರಾಜ್ಯೋತ್ಸವದ ಅಂಗವಾಗಿ ರಿಪಬ್ಲಿಕ್ ಡೇ ಸೇಲ್ ಆಯೋಜಿಸಿದ್ದು, ಈ ಎರಡು ತಾಣಗಳ ನೂತನ ಸ್ಮಾರ್ಟ್ಫೋನ್ಗಳಿಗೆ ಭರ್ಜರಿ ಡಿಸ್ಕೌಂಟ್ ತಿಳಿಸಿವೆ. ಮುಖ್ಯವಾಗಿ ಆಪಲ್ನ ಜನಪ್ರಿಯ ಐಫೋನ್ ಮಾಡೆಲ್ಗಳ ಮೇಲೆ ಹೆಚ್ಚಿನ ರಿಯಾಯಿತಿ ತಿಳಿಸಿವೆ.

ಹೌದು, ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಇ-ಕಾಮರ್ಸ್ ತಾಣಗಳು ರಿಪಬ್ಲಿಕ್ ಡೇ ಸೇಲ್ ಅನ್ನು ಆಯೋಜಿಸಿದ್ದು, ಈ ಸೇಲ್ ಮೇಳವು ಜನವರಿ 20 ರಿಂದ ಜನವರಿ 24 ರವರೆಗೆ ನಡೆಯಲಿದೆ. ಸೇಲ್ನಲ್ಲಿ ಶಿಯೋಮಿ, ಸ್ಯಾಮ್ಸಂಗ್, ಆಪಲ್ ಸೇರಿದಂಗೆ ಇತರೆ ಬ್ರ್ಯಾಂಡ್ಗಳ ಫೋನ್ಗಳಿಗೂ ವಿಶೇಷ ಡಿಸ್ಕೌಂಟ್ ನೀಡಲಾಗಿದೆ. ಹಾಗೆಯೇ ಬ್ಯಾಂಕ್ಗಳ ರಿಯಾಯಿತಿ ಸಹ ಸಿಗಲಿದೆ. ಈ ಎರಡು ತಾಣಗಳ ಸೇಲ್ನಲ್ಲಿ ಆಪಲ್ ಐಫೋನ್ ಕೊಡುಗೆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿಶೇಷ ಆಫರ್
ಗ್ರಾಹಕರು ಐಫೋನ್ 11 ಅನ್ನು ಫ್ಲಿಪ್ಕಾರ್ಟ್ ತಾಣದ ಮೂಲಕ 48,999 ರೂ.ಗಳಿಗೆ ಖರೀದಿಸಬಹುದು. ಇದರೊಂದಿಗೆ ಎಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ ಮೂಲಕ 1,000ರೂ. ಆಫರ್ ಸಹ ಪಡೆಯಬಹುದು. ಇನ್ನು ಐಫೋನ್ SE 2020 ಫೋನ್ 27,999ರೂ. ಪ್ರೈಸ್ಟ್ಯಾಗ್ನಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಐಫೋನ್ XR ಫೋನ್ 35,999ರೂ.ಗಳಿಗೆ ಮಾರಾಟವಾಗಲಿದೆ. ಇನ್ನು ಅಮೆಜಾನ್ ತಾಣದಲ್ಲಿ ಐಫೋನ್ 12 ಮಿನಿ ಫೋನ್ 64,490ರೂ.ಗಳ ಬೆಲೆಯಲ್ಲಿ ಲಭ್ಯ.

ಐಫೋನ್ 11 ಫೋನ್ -ಫೀಚರ್ಸ್
ಐಫೋನ್ 11 ಫೋನ್ 6.1 ಇಂಚಿನ ಡಿಸ್ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್ಸೆಟ್ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್ ಪಡೆದುಕೊಂಡಿದೆ. ಆಪಲ್ ಎಕ್ಸ್ಆರ್ಗಿಂತ ಇದರ ಬ್ಯಾಟರಿ ಲೈಫ್ ಅಧಿಕವಾಗಿದೆ. ಹಿಂಬದಿಯ ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್ ಬೆಂಬಲವನ್ನು ಪಡೆದಿದ್ದು, ಇದರೊಂದಿಗೆ ನೈಟ್ಮೋಡ್, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್ಗಳನ್ನು ಪಡೆದಿದೆ.

ಐಫೋನ್ 12 ಮಿನಿ-ಫೀಚರ್ಸ್
ಐಫೋನ್ 12 ಮಿನಿ ಫೋನ್ 5.4-ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, ಡಿಸ್ಪ್ಲೇಯು ಸೂಪರ್ ರೆಟಿನಾ XRD ಡಿಸ್ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190