ಫ್ಲಿಪ್‌ಕಾರ್ಟ್‌ ಡೇಸ್‌ ಸೇಲ್‌ ಕೊನೆ ದಿನ: ಫೋನ್‌ಗಳಿಗೆ ಭರ್ಜರಿ ರಿಯಾಯಿತಿ

|

ಭಾರತದಲ್ಲಿ ಹಬ್ಬದ ಸೀಸನ್‌ ಪ್ರಯುಕ್ತ ಆನ್‌ಲೈನ್‌ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಭರ್ಜರಿ ಆಫರ್‌ಗಳನ್ನ ಇ-ಕಾಮರ್ಸ್‌ ತಾಣಗಳು ನೀಡಿವೆ. ಅದರಂತೆ ಫ್ಲಿಪ್‌ಕಾರ್ಟ್‌ ಕೂಡ ತನ್ನ ಬಿಗ್‌ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಧರಿಸಬಹುದಾದ ವಸ್ತುಗಳು, ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮೇಲೆ ಸಾಕಷ್ಟು ರಿಯಾಯಿತಿಯನ್ನ ನೀಡಿತ್ತು. ಒಂದು ವಾರಗಳ ಕಾಲ ನಡೆದ ಫ್ಲಿಪ್ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ 2020 ಸೇಲ್‌ ಇಂದು ಕೊನೆಗೊಳ್ಳಲಿದೆ. ಫ್ಲಿಪ್ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ 2020 ಸೇಲ್‌ನ ಕೊನೆಯ ದಿನವಾದ ಇಂದು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗಿದೆ.

ಫ್ಲಿಪ್‌ಕಾರ್ಟ್‌ ತನ್ನ ಬಿಗ್‌ಬಿಲಿಯನ್‌ ಡೇಸ್‌ ಸೇಲ್ 2020

ಹೌದು, ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ತನ್ನ ಬಿಗ್‌ಬಿಲಿಯನ್‌ ಡೇಸ್‌ ಸೇಲ್ 2020ಯನ್ನು ಇಂದು ಕೊನೆಗೊಳಿಸಲಿದೆ. ಕೊನೆ ದಿನವಾದ ಇಂದು ಲ್ಯಾಪ್‌ಟಾಪ್‌, ಮೊಬೈಲ್‌, ಸ್ಮಾರ್ಟ್‌ಫೋನ್‌ಗಳ ಮೇಲೆ ಸಾಕಷ್ಟು ರಿಯಾಯಿತಿಯನ್ನ ನೀಡಲಾಗಿದೆ. ಕೂಡಲೇ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಸದ್ಯ ಕೊನೆ ದಿನದ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲು ತಿಳಿಸಿಕೊಡ್ತೀವಿ ಓದಿರಿ.

ಐಫೋನ್ 11 ಪ್ರೊ

ಐಫೋನ್ 11 ಪ್ರೊ

ಆಪಲ್‌ ಸಂಸ್ಥೆಯ ಐಫೋನ್ 11 ಪ್ರೊ ಮೂಲಬೆಲೆ 1,06,600 ರೂ ಆಗಿದ್ದು, ಇದು ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಕೇವಲ 79,999 ರೂ ಗಳಿಗೆ ಲಭ್ಯವಾಗುತ್ತಿದೆ. ಸದ್ಯ ಬಿಗ್ ಬಿಲಿಯನ್ ಡೇಸ್ ಸೇಲ್‌ ಕೊನೆಯ ದಿನವಾಗಿರುವುದರಿಂದ ಇಂದೇ ಖರೀದಿಸಿದರೆ ನಿಮಗೆ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಅಲ್ಲದೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನಿಮ್ಮ ಖರೀದಿಯೊಂದಿಗೆ ವಿನಿಮಯ ಮಾಡಿಕೊಂಡಾಗ 16,400 ರೂ. ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ದಾರರು ಹೆಚ್ಚುವರಿ 10% ರಿಯಾಯಿತಿ ಪಡೆಯಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ನೋಟ್ 10 ಪ್ಲಸ್ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ 2020ಸೇಲ್‌ನಲ್ಲಿ 54,999 ರೂ.ಗಳಿಗೆ ಲಭ್ಯವಾಗಲಿದೆ. ಇದರ ಮೂಲಬೆಲೆ 85,000 ರೂ ಆಗಿದೆ. ಇದಲ್ಲದೆ ಫ್ಲಿಪ್‌ಕಾರ್ಟ್‌ ತನ್ನ 'ಸ್ಮಾರ್ಟ್ ಅಪ್‌ಗ್ರೇಡ್' ಕಾರ್ಯಕ್ರಮದ ಭಾಗವಾಗಿ ಫ್ಲಿಪ್‌ಕಾರ್ಟ್ ಸಹ ರೂ. 16,500 ರು ರಿಯಾಯಿತಿ ನೀಡುತ್ತಿರುವುದರಿಂದ ನೀವು ಗ್ಯಾಲಕ್ಸಿ ನೋಟ್ 10 ಪ್ಲಸ್ ಅನ್ನು ರೂ. 38,998. ರೂ ಗಳಿಗೆ ಖರೀದಿಸಬಹುದಾಗಿದೆ.

ಪೊಕೊ M2 ಪ್ರೊ

ಪೊಕೊ M2 ಪ್ರೊ

ಪೊಕೊ M2 ಪ್ರೊ ಸ್ಮಾರ್ಟ್‌ಫೋನ್‌ 16,999ರೂ. ಮೂಲಬೆಲೆಯನ್ನು ಹೊಂದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಕೇವಲ 12,999 ರೂ ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಪೊಕೊ M2 ಪ್ರೊ 6.67 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದ್ದು, 48 ಮೆಗಾಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.

ಶಿಯೋಮಿ ಮಿ 10

ಶಿಯೋಮಿ ಮಿ 10

ಶಿಯೋಮಿ MI 10 ಸ್ಮಾರ್ಟ್‌ಫೋನ್‌ ಆಕರ್ಷಕ ರಿಯಾಯಿತಿ ಪಡೆದಿದ್ದು, ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ನಲ್ಲಿ 44,999ರೂ, ಗೆ ಲಭ್ಯವಾಗಲಿದೆ. ಇನ್ನು ಈ ಫೊನಿನ ಸ್ಟಿಕ್ಕರ್ ಪ್ರೈಸ್‌ಟ್ಯಾಗ್ 54,999ರೂ. ಆಗಿದೆ.

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನ ಕೊನೆಯ ದಿನವಾದ ಇಂದು ಕೇವಲ 11,499 ರೂ ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.3-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು 48 ಮೆಗಾಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಜೊತೆಗೆ 4,000mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.

ಮೋಟೋ G9

ಮೋಟೋ G9

ಮೋಟೋ G9 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ 9,999ರೂ ಬೆಲೆಯನ್ನು ಹೊಂದಿದೆ. ಇದರ ಮೂಲ 14,999 ರೂ ಆಗಿದ್ದು, ಇದು 5,000mAh ದೊಡ್ಡ ಗಾತ್ರದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ.

Most Read Articles
Best Mobiles in India

English summary
Flipkart Big Billion Days 2020 sale has now entered its last day. The festive season sale kicked off last week with some amazing deals and offers on mobile phones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X