ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಲ್‌ಮಿ GT ಫೋನ್‌ ಸರಣಿಗೆ ಸಿಗಲಿದೆ ಬಿಗ್‌ ಡಿಸ್ಕೌಂಟ್‌!

|

ಇ-ಕಾಮರ್ಸ್‌ ಸೈಟ್‌ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್ ಮೂಲಕ ಮತ್ತೊಮ್ಮೆ ಬಂದಿದೆ. ಇನ್ನು ಈ ಸೇಲ್‌ ಇದೇ ಅಕ್ಟೋಬರ್ 3 ರಿಂದ 10 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಬ್ಯಾಂಡ್‌, ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌ ಸೇರಿದಂತೆ ಹಲವು ಗ್ಯಾಜೆಟ್ಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಘೋಷಿಸಲಾಗಿದೆ. ಅದರಲ್ಲೂ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿ ಲಭ್ಯವಾಗಲಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿ ಸಿಗಲಿದೆ. ಇತ್ತೀಚಿಗೆ ಭಾರತದಲ್ಲಿ ಲಾಂಚ್‌ ರಿಯಲ್‌ಮಿ GT ಜೊತೆಗೆ ರಿಯಲ್‌ಮಿ GT ಮಾಸ್ಟರ್‌ ಎಡಿಷನ್‌ ಸ್ಮಾರ್ಟ್‌ಫೋನ್‌ ಬಿಗ್‌ ಡಿಸ್ಕೌಂಟ್‌ನಲ್ಲಿ ದೊರೆಯಲಿದೆ ಎನ್ನಲಾಗಿದೆ. ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಲ್‌ಮಿ ಫೆಸ್ಟಿವ್‌ ಸೇಲ್‌ ಕೂಡ ನಡೆಯಲಿದೆ. ಇದೇ ಕಾರಣಕ್ಕೆ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಆಫರ್‌ ಸಿಗಲಿದೆ. ಅದರಂತೆ ರಿಯಲ್‌ಮಿ ಜಿಟಿ ಸರಣಿ ಸ್ಮಾರ್ಟ್‌ಫೋನ್‌ಗಳ ಮೇಲೆ 5,000 ರೂ.ಗಳ ರಿಯಾಯಿತಿ ದೊರೆಯಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಏನೆಲ್ಲಾ ರಿಯಾಯಿತಿ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ GT

ರಿಯಲ್‌ಮಿ GT

ಈ ಸ್ಮಾರ್ಟ್‌ಫೋನ್ 120Hz ರೀಫ್ರೇಶ್‌ ರೇಟ್‌ ಜೊತೆಗೆ AMOLED ಡಿಸ್‌ಪ್ಲೇಯನ್ನು ಪಡೆದಿದೆ. ಇದರೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಹೊಂದಿದೆ. ಹಾಗೆಯೇ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 8GB RAM+128GB ರೂಪಾಂತರಕ್ಕೆ 35,999ರೂ. ಗಳಿಗೆ ಲಭ್ಯವಾಗಲಿದೆ.

ರಿಯಲ್‌ಮಿ GT ಮಾಸ್ಟರ್ ಎಡಿಷನ್‌

ರಿಯಲ್‌ಮಿ GT ಮಾಸ್ಟರ್ ಎಡಿಷನ್‌

ರಿಯಲ್‌ಮಿ GT ಮಾಸ್ಟರ್ ಎಡಿಷನ್‌ ಸ್ಮಾರ್ಟ್‌ಫೋನ್‌ 6.43-ಇಂಚಿನ ಪೂರ್ಣ ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಜೊತೆಗೆ 120Hz ರಿಫ್ರೆಶ್ ದರ, 360Hz ಟಚ್ ಸ್ಯಾಂಪ್ಲಿಂಗ್ ದರ ಹೊಂದಿದೆ.ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778 SoC ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಆಂಡ್ರಾಯ್ಡ್ 11 ಅನ್ನು ರಿಯಲ್ಮೆ ಯುಐ 2.0 ನೊಂದಿಗೆ ಚಾಲನೆ ಮಾಡುತ್ತದೆ. ಇನ್ನು ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ರಿಯಲ್‌ಮಿ ಜಿಟಿ ಮಾಸ್ಟರ್ ಆವೃತ್ತಿಯ ಬೆಲೆ 20,999 ರೂ.ಆಗಿದೆ. ಇನ್ನು 8GB RAM ಮತ್ತು 128GB ಸ್ಟೋರೇಜ್ ರೂಪಾಂತರವು 22,999ರೂ,ಬೆಲೆಗೆ ಲಭ್ಯವಾಗಲಿದೆ. ಜೊತೆಗೆ 8GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಟಾಪ್ ವೆರಿಯಂಟ್ 24,999ರೂ ಗೆ ಲಭ್ಯವಾಗಲಿದೆ.

ಆಫರ್‌ ಏನಿದೆ?

ಆಫರ್‌ ಏನಿದೆ?

ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ರಿಯಲ್‌ಮಿ ಜಿಟಿ ಮತ್ತು ರಿಯಲ್‌ಮಿ ಜಿಟಿ ಮಾಸ್ಟರ್ ಎಡಿಶನ್ ಖರೀದಿಸಿದರೆ ಬ್ಯಾಂಕ್ ಆಫರ್‌ಗಳನ್ನು ಪಡೆಯಬಹುದು. ಅಲ್ಲದೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐಗಳ ಮೇಲೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ 2,000 ರೂಪಾಯಿಗಳವರೆಗೆ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇನ್ನು ಹೆಚ್ಚುವರಿಯಾಗಿ, ಫ್ಲಿಪ್‌ಕಾರ್ಟ್ ಮತ್ತು ಅಧಿಕೃತ ವೆಬ್‌ಸೈಟ್‌ನಿಂದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದ ಮೇಲೆ ಗ್ರಾಹಕರು 5,000 ರೂ.ಗಳ ರಿಯಾಯಿತಿ ಪಡೆಯಬಹುದು. ಇದಲ್ಲದೆ ಫ್ಲಿಪ್‌ಕಾರ್ಟ್, ಅಧಿಕೃತ ವೆಬ್‌ಸೈಟ್ ಮತ್ತು ಹತ್ತಿರದ ಸ್ಟೋರ್‌ಗಳಿಂದ ಜಿಟಿ ಮತ್ತು ಮಾಸ್ಟರ್ ಎಡಿಶನ್ ಅನ್ನು ಖರೀದಿಸುವ ಗ್ರಾಹಕರು 4,999 ಮೌಲ್ಯದ ರಿಯಲ್‌ಮಿ ಬಡ್ಸ್ ಏರ್ ಪ್ರೊ ಅನ್ನು ಉಚಿತವಾಗಿ ಪಡೆಯಲಿದ್ದಾರೆ.

Most Read Articles
Best Mobiles in India

English summary
Realme GT 5G will be available at a discounted price of Rs 35,999 for its single 8GB+128GB variant.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X