ಹೊಸದಾಗಿ ಐಫೋನ್‌ ಖರೀದಿಸುವ ಗ್ರಾಹಕರಿಗೆ ಇಲ್ಲಿದೆ ಗುಡ್‌ನ್ಯೂಸ್‌!

|

ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ರಿಯಾಯಿತಿ ಕೊಡುಗೆಗಳ ಸೇಲ್‌ ಆಯೋಜಿಸುತ್ತಲೇ ಮುನ್ನಡೆದಿದೆ. ಮುಖ್ಯವಾಗಿ ಹಬ್ಬದ ಸಂದರ್ಭಗಳಲ್ಲಿ ವಿಶೇಷ ಸೇಲ್‌ಗಳನ್ನು ಆಯೋಜಿಸಿ ಆಕರ್ಷಕ ರಿಯಾಯಿತಿ ತಿಳಿಸುತ್ತದೆ. ಅದೇ ರೀತಿ ಇದೀಗ ಫ್ಲಿಪ್‌ಕಾರ್ಟ್‌ ತಾಣವು ಬಿಗ್‌ ಬಿಲಿಯನ್ ಡೇಸ್‌ ಸೇಲ್‌ ಮೇಳವನ್ನು ಆಯೋಜಿಸಿದ್ದು, ಈ ಸೇಲ್‌ನಲ್ಲಿ ಆಪಲ್‌ ಕಂಪನಿಯ ಆಯ್ದ ಐಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡುತ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ತಾಣವು ಇದೀಗ 'ಬಿಗ್‌ ಬಿಲಿಯನ್ ಡೇಸ್‌' ಸೇಲ್‌ ಆಯೋಜಿಸಿದೆ. ಈ ಸೇಲ್‌ ಇದೇ ಅಕ್ಟೋಬರ್ 3 ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 10ರ ವರೆಗೂ ಚಾಲ್ತಿ ಇರಲಿದೆ. ಈ ಸೇಲ್‌ನಲ್ಲಿ ಆಪಲ್‌ ಕಂಪನಿಯ ಇತ್ತೀಚಿಗಿನ ಜನಪ್ರಿಯ ಮಾಡೆಲ್‌ಗಳಾದ ಐಫೋನ್‌ 12 ಮತ್ತು ಐಫೋನ್‌ 12 ಮಿನಿ ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿ ಘೋಷಿಸಿದೆ. ಹೀಗಾಗಿ ಹೊಸ ಐಫೋನ್‌ ಖರೀದಿಸುವ ಗ್ರಾಹಕರಿಗೆ ಇದು ಒಂದೊಳ್ಳೆ ಅವಕಾಶ ಎನಿಸಿದೆ.

ಬೆಲೆಯು

ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಮಿನಿ ಬೇಸ್‌ ವೇರಿಯಂಟ್‌ ರಿಯಾಯಿತಿ ಬೆಲೆಯು 40,999ರೂ. ಆಗಿದೆ. ಹಾಗೆಯೇ ಆರಂಭಿಕ ಐಫೋನ್ 12 ವೇರಿಯಂಟ್ ಬೆಲೆಯು 52,999ರೂ. ಆಗಿದೆ. ಹಾಗೆಯೇ ಐಫೋನ್ 12 ಮಿನಿ 128GB ವೇರಿಯಂಟ್ ಬೆಲೆಯು 45,999ರೂ. ಆಗಿದೆ. ಇನ್ನು 256GB ವೇರಿಯಂಟ್‌ ದರದವು 55,999ರೂ. ಆಗಿದೆ. ಹಾಗೆಯೇ ಐಫೋನ್‌ 12 ಮಾಡೆಲ್‌ನ 128 GB ವೇರಿಯಂಟ್‌ ಬೆಲೆಯು 57,999ರೂ, ಆಗಿದ್ದು, 256GB ಮಾಡೆಲ್‌ ದರದವು 67,999ರೂ. ಆಗಿದೆ. ಹಾಗಾದರೇ ಐಫೋನ್ 12 ಮತ್ತು ಐಫೋನ್ 12 ಮಿನಿ ಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಪಲ್ ಐಫೋನ್ 12 ಮಿನಿ ಫೀಚರ್ಸ್‌

ಆಪಲ್ ಐಫೋನ್ 12 ಮಿನಿ ಫೀಚರ್ಸ್‌

ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ. ಐಫೋನ್ 12 ಮಿನಿ ಬೆಲೆಯು 69,900ರೂ.

ಆಪಲ್ ಐಫೋನ್ 12 ಫೀಚರ್ಸ್‌

ಆಪಲ್ ಐಫೋನ್ 12 ಫೀಚರ್ಸ್‌

ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಆಪಲ್ ಐಫೋನ್ 13 ಸರಣಿ

ಆಪಲ್ ಐಫೋನ್ 13 ಸರಣಿ

ಜನಪ್ರಿಯ ಟೆಕ್ ದೈತ್ಯ ಆಪಲ್‌ ಸಂಸ್ಥೆಯು ಆಪಲ್ 12 ಸರಣಿಯ ಉತ್ತರಾಧಿಕಾರಿ ಆಗಿ ಇತ್ತೀಚಿಗಷ್ಟೆ ಐಫೋನ್‌ 13 ಸರಣಿಯಲ್ಲಿ ಬಿಡುಗಡೆ ಮಾಡಿ ಭಾರೀ ಸದ್ದು ಮಾಡಿದೆ. ಆಪಲ್‌ನ ಈ ಸರಣಿಯು ನಾಲ್ಕು ಮಾಡೆಲ್‌ಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್‌ ಮತ್ತು ಐಫೋನ್ 13 ಮಿನಿ ಫೋನ್ ಆಗಿವೆ. ಈ ಹೊಸ ಐಫೋನ್‌ 13 ಸರಣಿಯು ಸಾಕಷ್ಟು ಅಪಗ್ರೇಡ್‌ ಫೀಚರ್ಸ್‌ಗಳೊಂದಿಗೆ ಲಗ್ಗೆ ಹಾಕಿದ್ದು, ಡಿಸೈನ್, ಕ್ಯಾಮೆರಾ, ಬ್ಯಾಟರಿ ಆಯ್ಕೆಗಳು ಆಕರ್ಷಕ ಆಗಿ ಕಾಣಿಸಿಕೊಂಡಿವೆ.

ಭಾರತದಲ್ಲಿ ಐಫೋನ್ 13 ಸರಣಿ ಬೆಲೆ

ಭಾರತದಲ್ಲಿ ಐಫೋನ್ 13 ಸರಣಿ ಬೆಲೆ

ಭಾರತದಲ್ಲಿ ಐಫೋನ್ 13 ಮಿನಿ 128 ಜಿಬಿ ವೇರಿಯಂಟ್ ಬೆಲೆ 69,900 ರೂ. ಗಳಾದರೆ, 256GB ವೇರಿಯಂಟ್ ಬೆಲೆ 79.900 ರೂ, ಆಗಿದೆ. ಹಾಗೆಯೇ 512GB ವೇರಿಯಂಟ್ ಬೆಲೆ 99,900 ರೂ.ಗಳಾಗಿವೆ. ಇನ್ನು ಐಫೋನ್ 13 ಫೋನಿನ ಬೆಲೆಗಳು ಕ್ರಮವಾಗಿ 79,900 ರೂ, 89,900 ರೂ ಮತ್ತು 99,900 ರೂ ಗಳಾಗಿವೆ. ಇನ್ನು ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಎರಡೂ 1 ಟಿಬಿ ವರೆಗೆ ಸ್ಟೋರೇಜ್ ಆಯ್ಕೆ ಪಡೆದಿವೆ. ಐಫೋನ್ 13 ಪ್ರೊ ಬೆಲೆ 128 ಜಿಬಿಗೆ 1,19,900 ರೂ., 256 ಜಿಬಿಗೆ 1,29,900 ರೂ., ರೂ. 512 ಜಿಬಿಗೆ 1,49,900 ರೂ. 1 ಟಿಬಿಗೆ 1,69,900 ಗಳಾಗಿವೆ. ಅಗ್ರ ಶ್ರೇಣಿಯ ಐಫೋನ್ 13 ಪ್ರೊ ಮ್ಯಾಕ್ಸ್ ಬೆಲೆ 1,29,900 ರೂ, 1,39,900 ರೂ, 1,59,900 ರೂ., ಮತ್ತು 1,79,900 ರೂ. ಆಗಿವೆ

Most Read Articles
Best Mobiles in India

English summary
Flipkart Big Billion Days Sale 2021: Amazing Deals On iPhone 12 Mini And iPhone 12.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X