ಬಂದೇ ಬಿಡ್ತು ಭರ್ಜರಿ ಆಫರ್‌ಗಳ 'ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್'‌!

|

ಇ-ಕಾಮರ್ಸ್‌ ದೈತ್ಯ ಎಂದೇ ಗುರುತಿಸಿಕೊಂಡಿರುವ ಫ್ಲಿಪ್‌ಕಾರ್ಟ್‌ ತಾಣವು ಹಲವು ವಿಶೇಷ ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಅದರಲ್ಲಿಯೂ ಹಬ್ಬ ಹಾಗೂ ವಿಶೇಷ ದಿನಗಳು ಬಂದರೆ ಅಥವಾ ಮಂತ್‌ ಎಂಡ್‌ ದಿನಗಳಲ್ಲಿ ಭರ್ಜರಿ ರಿಯಾಯಿತಿ ಮೇಳಗಳನ್ನು ಆಯೋಜಿಸುತ್ತದೆ. ಆ ಪೈಕಿ 'ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್' ಆನ್‌ಲೈನ್‌ ಶಾಪಿಂಗ್ ಪ್ರಿಯರ ಫೇವರೇಟ್ ಸೇಲ್ ಮೇಳವಾಗಿ ಕಾಣಿಸಿಕೊಂಡಿದೆ. ಇದೀಗ ಫ್ಲಿಪ್‌ಕಾರ್ಟ್‌ನ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್ ಮತ್ತೆ ಬಂದಿದೆ.

ಬಂದೇ ಬಿಡ್ತು ಭರ್ಜರಿ ಆಫರ್‌ಗಳ 'ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್'‌!

ಹೌದು, ಜನಪ್ರಿಯ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2021 ಆಯೋಜಿಸಲಿದ್ದು, ಆದರೆ ಅಧಿಕೃತ ದಿನಾಂಕ ಘೋಷಿಸಿಲ್ಲ. ಆದರೆ ಈ ಸೇಲ್ ಮೇಳವು ಇದೇ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1 ರ ನಡುವೆ ನಡೆಯಬಹುದು ಎಂದು ಹೇಳಲಾಗಿದೆ. ಇನ್ನು ಈ ಸೇಲ್‌ನಲ್ಲಿ ಫೋನ್‌ಗಳಿಗೆ ಬಿಗ್ ಡೀಲ್ ನೀಡುವ ಸಾಧ್ಯತೆಗಳು ಹೆಚ್ಚಿದ್ದು, ಮುಖ್ಯವಾಗಿ ಒಪ್ಪೋ, ಪೊಕೊ, ರಿಯಲ್‌ಮಿ, ಸ್ಯಾಮ್‌ಸಂಗ್ ಮತ್ತು ವಿವೋ ಕಂಪನಿಗಳ ಫೋನ್‌ಗಳು ಜಬರ್ದಸ್ತ್ ರಿಯಾಯಿತಿ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

ಬಂದೇ ಬಿಡ್ತು ಭರ್ಜರಿ ಆಫರ್‌ಗಳ 'ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್'‌!

ಬಿಗ್ ಬಿಲಿಯನ್ ಡೇಸ್ ಸೇಲ್ 2021 ಸೇಲ್‌ನ ಮೈಕ್ರೊಸೈಟ್‌ ವಿಭಾಗದಲ್ಲಿ ರಿವೀಲ್ ಕ್ಯಾಲೆಂಡರ್ ಆರು ತಯಾರಿಕಾ ಸಂಸ್ಥೆಗಳು ಲಾಂಚ್ ಮಾಡುವ ಫೋನ್‌ಗಳಿಗೆ ಗ್ರಾಹಕರು ಸಾಕ್ಷಿಯಾಗುತ್ತಾರೆ ಎಂದು ತಿಳಿಸಲಾಗಿದೆ. ರಿಯಲ್‌ಮಿಯ ನಾರ್ಜೊ 50 ಸರಣಿಯು ಇದೇ ಸೆಪ್ಟೆಂಬರ್ 24 ರಂದು ಲಾಂಚ್ ಆಗಲಿದೆ. ಹಾಗೆಯೇ ಒಪ್ಪೋ ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್‌ ಅನ್ನು ಇದೇ ಸೆಪ್ಟೆಂಬರ್ 27 ರಂದು ಬಿಡುಗಡೆ ಮಾಡಲಿದೆ.

ಬಂದೇ ಬಿಡ್ತು ಭರ್ಜರಿ ಆಫರ್‌ಗಳ 'ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್'‌!

ಹಾಗೆಯೇ ಸ್ಯಾಮ್‌ಸಂಗ್‌ನ ತನ್ನ ಮುಂಬರುವ ಹೊಸ ಸ್ಮಾರ್ಟ್‌ಫೋನ್ ಅನ್ನು ಅದು ಸಹ ಇದೇ ಸೆಪ್ಟೆಂಬರ್ 28 ರಂದು ಬಿಡುಗಡೆ ಮಾಡಲಿದೆ. ಇದರೊಂದಿಗೆ ಪೊಕೊ ಮತ್ತು ವಿವೊ ಕಂಪನಿಗಳು ಕೂಡಾ ತಮ್ಮ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಸೆಪ್ಟೆಂಬರ್ 30 ರಂದು ಬಿಡುಗಡೆ ಮಾಡಲಿವೆ. ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದಾದ ಮೊಟೊರೊಲಾ ಸಂಸ್ಥೆಯು ಸಹ ತನ್ನ ನೂತನ ಫೋನ್ ಅನ್ನು ಅಕ್ಟೋಬರ್ 1 ರಂದು ಬಿಡುಗಡೆ ಮಾಡಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M52 5G ಫೋನ್‌ ಅನ್ನು ಇದೇ ಸೆಪ್ಟೆಂಬರ್ 28 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಆ ದಿನ ಸ್ಯಾಮ್‌ಸಂಗ್‌ ನೂತನ ಸ್ಮಾರ್ಟ್‌ಫೋನ್ ಅನ್ನು ಮಾಡಲಿದೆ ಎಂದು ಫ್ಲಿಪ್‌ಕಾರ್ಟ್ ಸೇಲ್‌ನ ಮೈಕ್ರೋಸೈಟ್ ಟೀಸ್ ಮಾಡಿದೆ. ಆದರೆ, ವರದಿಯ ಪ್ರಕಾರ, ಗ್ಯಾಲಕ್ಸಿ M52 5G ಅನ್ನು ಅಮೆಜಾನ್ ತಾಣದ ಮೂಲಕ ಬಿಡುಗಡೆ ಮಾಡಲಾಗುವುದು. ಆದ್ದರಿಂದ, ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಲಾಂಚ್ ನಂತರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಗ್ಯಾಲಕ್ಸಿ M52 5G ಸೆಪ್ಟೆಂಬರ್ 28 ರಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಪ್ರಾರಂಭವಾಗಲಿದೆ ಎಂದು ಸ್ಯಾಮ್‌ಸಂಗ್ ಟ್ವೀಟ್ ಮೂಲಕ ಖಚಿತಪಡಿಸಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. ಇದು ಸೂಪರ್ AMOLED ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 6GB ಮತ್ತು 8GB RAM ಹಾಗೂ 128GB ಇಂಟರ್‌ ಸ್ಟೋರೇಜ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ ಎಂದು ನಿರೀಕ್ಷಿಸಲಾಗಿದೆ.

ಈ ತಿಂಗಳಾಂತ್ಯದಲ್ಲಿ ಒಪ್ಪೋ ಕಂಪನಿಯು ತಮ್ಮ ಒಪ್ಪೋ A55 ಅನ್ನು ಬಿಡುಗಡೆ ಮಾಡಬಹುದೆಂದು ವರದಿಯಾಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ನಲ್ಲಿರುವ ಮೈಕ್ರೋಸೈಟ್‌ನಲ್ಲಿರುವ ಬ್ಯಾನರ್ ಸೆಪ್ಟೆಂಬರ್ 27 ರಂದು ಬಿಡುಗಡೆಯಾಗಲಿರುವ ಒಪ್ಪೋ ಸ್ಮಾರ್ಟ್‌ಫೋನ್‌ ಅನ್ನು ಉಲ್ಲೇಖಿಸುತ್ತದೆ. ಆದಾಗ್ಯೂ, ಸೇಲ್‌ನ ಮೈಕ್ರೊಸೈಟ್ ನಿಖರವಾದ ಸ್ಮಾರ್ಟ್‌ಫೋನ್‌ ಹೆಸರನ್ನು ನಮೂದಿಸಿಲ್ಲ. ಇನ್ನು ಫ್ಲಿಪ್‌ಕಾರ್ಟ್ ಆಯೋಜಿಸಿರುವ ಬಿಗ್ ಬಿಲಿಯನ್ ಡೇಸ್ ಸೇಲ್ 2021 ರಲ್ಲಿ ಜನಪ್ರಿಯ ಮೊಟೊರೊಲಾ ಮತ್ತು ಪೊಕೊ ಬ್ರ್ಯಾಂಡ್‌ಗಳು ಯಾವ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತವೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯ ಇಲ್ಲ.

Most Read Articles
Best Mobiles in India

English summary
Flipkart Big Billion Days Sale 2021: These Top Brands To Launch New Smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X