ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಈ ಸ್ಮಾರ್ಟ್‌ ಟಿವಿಗಳು ಬಿಗ್ ಡಿಸ್ಕೌಂಟ್‌ನಲ್ಲಿ ಲಭ್ಯ!

|

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಒಂದಿಲ್ಲೊಂದು ವಿಶೇಷ ಸೇಲ್‌ ಆಯೋಜಿಸುತ್ತಲೇ ಸಾಗಿದೆ. ಆಕರ್ಷಕ ರಿಯಾಯಿತಿ ಕೊಡುಗೆಗಳನ್ನು ಪರಿಚಯಿಸುತ್ತಾ ಆನ್‌ಲೈನ್ ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ. ಮುಖ್ಯವಾಗಿ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ ಹಾಗೂ ಗ್ಯಾಡ್ಜೆಟ್ಸ್‌ಗಳಿಗೆ ವಿಶೇಷ ಡಿಸ್ಕೌಂಟ್‌ ಸೇಲ್‌ ಅನ್ನು ಆಯೋಜಿಸಿ ಗಮನ ಸೆಳೆದಿದೆ. ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಫ್ಲಿಪ್‌ಕಾರ್ಟ್‌ ಇದೀಗ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ ಅನ್ನು ಘೋಷಿಸಿದೆ. ಈ ಹಬ್ಬದ ಸೇಲ್‌ನಲ್ಲಿ ಆಯ್ದ ಕೆಲವು ಆಯ್ದ ಸ್ಮಾರ್ಟ್‌ ಟಿವಿ ಮಾಡೆಲ್‌ಗಳಿಗೆ ಆಕರ್ಷಕ ರಿಯಾಯಿತಿಗಳನ್ನು ತಿಳಿಸಿದೆ.

ಫ್ಲಿಪ್‌ಕಾರ್ಟ್‌ ಸೇಲ್‌: ಈ ಸ್ಮಾರ್ಟ್‌ ಟಿವಿಗಳು ಬಿಗ್ ಡಿಸ್ಕೌಂಟ್‌ನಲ್ಲಿ ಲಭ್ಯ!

ಹೌದು, ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ ಅನ್ನು ಘೋಷಿಸಿದೆ. ಈ ಸೇಲ್ ಇದೇ ಅಕ್ಟೋಬರ್ 3ರಂದು ಶುರುವಾಗಲಿದ್ದು, ಅಕ್ಟೋಬರ್ 10ರ ವರೆಗೂ ಚಾಲ್ತಿ ಇರಲಿದೆ ಎಂದು ತಿಳಿಸಿದೆ. ಇನ್ನು ಈ ಬಿಗ್ ಸೇವಿಂಗ್ ಡೇಸ್ 2021 ಮಾರಾಟವು ಜನಪ್ರಿಯ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಿಗೆ ದೊಡ್ಡ ರಿಯಾಯಿತಿಯನ್ನು ನೀಡುತ್ತದೆ.

ಫ್ಲಿಪ್‌ಕಾರ್ಟ್‌ ಸೇಲ್‌: ಈ ಸ್ಮಾರ್ಟ್‌ ಟಿವಿಗಳು ಬಿಗ್ ಡಿಸ್ಕೌಂಟ್‌ನಲ್ಲಿ ಲಭ್ಯ!

ಈ ಸೇಲ್‌ನಲ್ಲಿ ಆಯ್ದ ಸ್ಮಾರ್ಟ್‌ ಟಿವಿಗಳಿಗೆ ಭರ್ಜರಿ ಡಿಸ್ಕೌಂಟ್‌ ದೊರೆಯಲಿದೆ. ಹೆಚ್ಚುವರಿಯಾಗಿ, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರು ಹೆಚ್ಚುವರಿ 10% ತ್ವರಿತ ರಿಯಾಯಿತಿ ಪಡೆಯಬಹುದು. ಹಾಗಾದರೇ ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್‌ ಸೇಲ್‌ನಲ್ಲಿ ರಿಯಾಯಿತಿಯಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಥಾಮ್ಸನ್ OATH ಪ್ರೊ ಸ್ಮಾರ್ಟ್ ಟಿವಿ
ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ ನಲ್ಲಿ ಥಾಮ್ಸನ್ OATH ಪ್ರೊ ಸ್ಮಾರ್ಟ್ ಟಿವಿಯು 36,999ರೂ.ಗಳ ಆಕರ್ಷಕ ದರದಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಕಾರ್ಡ್‌ಗಳ ಮೇಲೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಸಿಗಲಿದೆ. ಪ್ರಮುಖ ಬ್ಯಾಂಕುಗಳಲ್ಲಿ ನೋ-ಕಾಸ್ಟ್ ಇಎಂಐ ಸೌಲಭ್ಯದ ಆಯ್ಕೆ ಇದೆ. ಈ ಟಿವಿಯು 30W ಸ್ಪೀಕರ್, ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು ಆಂಡ್ರಾಯ್ಡ್ 10 ನಿಂದ ಚಾಲಿತವಾಗಿದೆ. ಹಾಗೆಯೇ 4K HDR10 ಡಿಸ್‌ಪ್ಲೇ ಪಡೆದಿದೆ.

ಇನ್ಫಿನಿಕ್ಸ್ ಎಕ್ಸ್ 1 ಸ್ಮಾರ್ಟ್ ಟಿವಿ
ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ ನಲ್ಲಿ ಇನ್ಫಿನಿಕ್ಸ್ ತನ್ನ 32 ಇಂಚು, 43 ಇಂಚು ಮತ್ತು 40 ಇಂಚಿನ ಸ್ಮಾರ್ಟ್ ಟಿವಿಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. 32 ಇಂಚಿನ ಸ್ಮಾರ್ಟ್ ಟಿವಿ 11999ರೂ.ಗಳ ಪ್ರೈಸ್‌ನಲ್ಲಿ ಲಭ್ಯವಾಗಲಿದೆ. ಹಾಗೆಯೇ 43 ಇಂಚಿನ ಸ್ಮಾರ್ಟ್ ಟಿವಿ 21,999ರೂ.ಗಳಿಗೆ ಸಿಗಲಿದೆ.

ಫ್ಲಿಪ್‌ಕಾರ್ಟ್‌ ಸೇಲ್‌: ಈ ಸ್ಮಾರ್ಟ್‌ ಟಿವಿಗಳು ಬಿಗ್ ಡಿಸ್ಕೌಂಟ್‌ನಲ್ಲಿ ಲಭ್ಯ!

ಸ್ಯಾಮ್ಸಂಗ್ ಹೆಚ್‌ಡಿ ರೆಡಿ ಎಲ್ಇಡಿ ಸ್ಮಾರ್ಟ್ ಟಿವಿ
32 ಇಂಚಿನ ಡಿಸ್‌ಪ್ಲೇಯ ಸ್ಯಾಮ್ಸಂಗ್ ರೆಡಿ ಎಲ್ಇಡಿ ಸ್ಮಾರ್ಟ್ ಟಿವಿ ಸಹ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಬಿಗ್ ಆಫರ್ ಪಡೆದಿದೆ. ಈ ಸ್ಮಾರ್ಟ್‌ ಟಿವಿ 18,290ರೂ.ಗಳಲ್ಲಿ ಲಭ್ಯವಿರುತ್ತದೆ. ಹಾಗೆಯೇ ಬ್ಯಾಂಕ್ ಆಫ್ ಬರೋಡಾ ಮಾಸ್ಟರ್‌ಕಾರ್ಡ್ ಡೆಬಿಟ್ ಕಾರ್ಡ್‌ಗಳಿಗೆ 10 ಶೇಕಡಾ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಮೊದಲ ಬಾರಿಗೆ ICICI ಬ್ಯಾಂಕ್ ಮಾಸ್ಟರ್ ಕಾರ್ಡ್ ಕ್ರೆಡಿಟ್ ಕಾರ್ಡ್‌ಗಳಿಗೆ 10 ಶೇಕಡಾ ರಿಯಾಯಿತಿ ಲಭ್ಯ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 5 ಪ್ರತಿಶತ ಕ್ಯಾಶ್‌ಬ್ಯಾಕ್ ಸಹ ಸಿಗುತ್ತದೆ. ಯಾವುದೇ ವೆಚ್ಚ ಇಲ್ಲದ ಇಎಂಐನಲ್ಲಿ ಖರೀದಿಸಬಹುದು.

ಮಿ 4X 50-ಇಂಚಿನ ಅಲ್ಟ್ರಾ HD (4K) LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ
ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಟಿವಿಯು 7 % ವರೆಗೂ ರಿಯಾಯಿತಿ ಪಡೆದಿದೆ. ರಿಯಾಯಿತಿ ಬಳಿಕ ಈ ಸ್ಮಾರ್ಟ್ ಟಿವಿಯ ಬೆಲೆ 38,999ರೂ. ಆಗಿರಲಿದೆ. ಇನ್ನು ಈ ಟಿವಿಯು 50 ಇಂಚಿನ ಅಲ್ಟ್ರಾ ಹೆಚ್‌ಡಿ (4K) LED ಸ್ಕ್ರೀನ್ ಹೊಂದಿದ್ದು, ಸ್ಕ್ರೀನ್ 3840 × 2160 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಡಿಸ್‌ಪ್ಲೇಯು 60Hz ರಿಫ್ರೆಶ್ ದರ ಒಳಗೊಂಡಿದ್ದು, 20W ಸೌಂಡ್ ಔಟ್‌ಪುಟ್‌ ಪಡೆದಿದೆ. ಇದರೊಂದಿಗೆ ನೆಟ್‌ಫ್ಲಿಕ್ಸ್, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಯೂಟ್ಯೂಬ್ ಬೆಂಬಲವನ್ನು ಹೊಂದಿದೆ.

Most Read Articles
Best Mobiles in India

English summary
Flipkart Big Billion Days Sale: Big Discount On These Smart Tvs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X