ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಬಿಗ್‌ ಡಿಸ್ಕೌಂಟ್‌ ಪಡೆದಿವೆ!

|

ಆನ್‌ಲೈನ್‌ ಶಾಪಿಂಗ್‌ ಪ್ರಿಯರ ಪಾಲಿನ ನೆಚ್ಚಿನ ಪ್ಲಾಟ್‌ಫಾರ್ಮ್‌ಗಳಲ್ಲಿ ಫ್ಲಿಪ್‌ಕಾರ್ಟ್‌ ಕೂಡ ಒಂದಾಗಿದೆ. ಫ್ಲಿಪ್‌ಕಾರ್ಟ್‌ ಕೂಡ ಆನ್‌ಲೈನ್‌ ಗ್ರಾಹಕರಿಗಾಗಿ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಇದೀಗ ಫ್ಲಿಪ್‌ಕಾರ್ಟ್‌ ಮತ್ತೊಮ್ಮೆ ಬಿಗ್‌ ದೀಪಾವಳಿ ಸೇಲ್‌ ಅನ್ನು ಆಯೋಜಿಸಿದೆ. ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ ಲೈವ್‌ ಆಗಿದ್ದು, ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಗಳನ್ನು ಹೊತ್ತು ತಂದಿದೆ.

ಫ್ಲಿಪ್‌ಕಾರ್ಟ್

ಹೌದು, ಫ್ಲಿಪ್‌ಕಾರ್ಟ್ ಮತ್ತೊಮ್ಮೆ ಬಿಗ್ ದೀಪಾವಳಿ ಸೇಲ್‌ ಅನ್ನು ಮತ್ತೆ ತಂದಿದೆ. ಈ ಸೇಲ್‌ ಇಂದಿನಿಂದ ಶುರುವಾಗಿದ್ದು, ನವೆಂಬರ್ 3 ರವರೆಗೆ ನಡೆಯಲಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಆಯ್ದ ಹಲವು ಗ್ಯಾಜೆಟ್ಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ಕೆಲವು ಆಯ್ದ ಉತ್ಪನ್ನಗಳ ಮೇಲೆ 10% ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಈ ಸೇಲ್‌ನಲ್ಲಿ ಮೊಟೊರೊಲಾ ಮತ್ತು ಇನ್ಫಿನಿಕ್ಸ್‌ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿ ದೊರೆಯುತ್ತಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಮೊಟೊರೊಲಾ ಹಾಗೂ ಇನ್ಫಿನಿಕ್ಸ್‌ ಸ್ಮಾರ್ಟ್‌ಫೋನ್‌ಗಳಿಗೆ ಏನೆಲ್ಲಾ ಡಿಸ್ಕೌಂಟ್‌ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಟೊರೊಲಾ ಎಡ್ಜ್ 20

ಮೊಟೊರೊಲಾ ಎಡ್ಜ್ 20 ಸ್ಮಾರ್ಟ್‌ಫೋನ್‌ ಭಾರತದಲ್ಲಿ 29,999ರೂ. ಬೆಲೆಗೆ ಬಿಡುಗಡೆ ಆಗಿತ್ತು. ಆದರೆ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ 27,749ರೂ.ಗಳಿಗೆ ಲಭ್ಯವಾಗಲಿದೆ. ಜೊತೆಗೆ SBI ಕಾರ್ಡ್‌ ಮತ್ತು EMI ಮೂಲಕ ಖರೀದಿಸವುವರಿಗೆ 10% ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.7-ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 778G ಪ್ರೊಸೆಸರ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108MP ಸೆನ್ಸಾರ್‌ ಹೊಂದಿದೆ. ಜೊತೆಗೆ 4,000mAh ಬ್ಯಾಟರಿ ಹೊಂದಿದ್ದು, 30W ಟರ್ಬೊಪವರ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2,ಬೆಂಬಲಿಸಲಿದೆ.

ಮೋಟೋ G60

ಮೋಟೋ G60

ಮೋಟೋ G60 ಸ್ಮಾರ್ಟ್‌ಫೋನ್‌ ಮೂಲಬೆಲೆ ಮೂಲ ಬೆಲೆ 17,999 ರೂ.ಆಗಿದ್ದು, ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ 14,749ರೂ.ಬೆಲೆಗೆ ಲಭ್ಯವಾಗಲಿದೆ. SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿಮಾಡುವವರಿಗೆ 10% ಡಿಸ್ಕೌಂಟ್‌ ದೊರೆಯಲಿದೆ. ಈ ಸ್ಮಾರ್ಟ್‌ಫೋನ್‌ 6.8-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು HDR10 ಬೆಂಬಲಿಸಲಿದೆ. ಇದು ಸ್ನಾಪ್‌ಡ್ರಾಗನ್‌ 732G ಪ್ರೊಸೆಸರ್ ಬಲವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 6000mAh ಬ್ಯಾಟರಿಯನ್ನು ಹೊಂದಿದೆ.

ಮೊಟೊರೊಲಾ ಎಡ್ಜ್ 20 ಪ್ರೊ

ಮೊಟೊರೊಲಾ ಎಡ್ಜ್ 20 ಪ್ರೊ

ಮೊಟೊರೊಲಾ ಎಡ್ಜ್ 20 ಪ್ರೊ ಸ್ಮಾರ್ಟ್‌ಫೋನ್‌ 34,999ರೂ.ಗಳಿಗೆ ಲಭ್ಯವಾಗಲಿದೆ. ಇದರಲ್ಲಿ 2000ರೂ. ಎಕ್ಸ್‌ಚೇಂಜ್ ಬೋನಸ್ ಮತ್ತು ಎಸ್‌ಬಿಐ ಕಾರ್ಡ್‌ನಲ್ಲಿ ಶೇ 10 ರಷ್ಟು ಹೆಚ್ಚುವರಿ ಬ್ಯಾಂಕ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.7 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 144Hz ನ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 5G ಪ್ರೊಸೆಸರ್‌ ಹೊಂದಿದೆ. ಈ ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108MP ಸೆನ್ಸಾರ್‌ ಹೊಂದಿದೆ.

ಇನ್ಫಿನಿಕ್ಸ್‌ ಹಾಟ್‌ 10 ಪ್ಲೇ

ಇನ್ಫಿನಿಕ್ಸ್‌ ಹಾಟ್‌ 10 ಪ್ಲೇ

ಇನ್ಫಿನಿಕ್ಸ್‌ ಹಾಟ್‌ 10 ಪ್ಲೇ ಸರಣಿ 8,299ರೂ ಬೆಲೆಯಲ್ಲಿ ಲಾಂಚ್‌ ಆಗಿತ್ತು. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ 7,799ರೂ.ಗಳಿಗೆ ಲಭ್ಯವಾಗಲಿದೆ. ಈ ಫೋನ್‌ನ 4GB ಮತ್ತು 64 GB ರೂಪಾಂತರವು 8,499ರೂ.ಗಳಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 6.82-ಇಂಚಿನ HD+ ಡ್ರಾಪ್ ನಾಚ್ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್‌ ಹೆಲಿಯೊ G35 ಆಕ್ಟಾ-ಕೋರ್ ಪ್ರೊಸೆಸರ್‌ ಹೊಂದಿದೆ. ಈ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13MP AI ಹೊಂದಿದೆ. ಜೊತೆಗೆ ಇದು ಪವರ್ ಮ್ಯಾರಥಾನ್ ವೈಶಿಷ್ಟ್ಯದೊಂದಿಗೆ 6000 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಇನ್ಫಿನಿಕ್ಸ್‌ ಹಾಟ್‌ 10S

ಇನ್ಫಿನಿಕ್ಸ್‌ ಹಾಟ್‌ 10S

ಇನ್ಫಿನಿಕ್ಸ್‌ ಹಾಟ್‌ 10S ಸ್ಮಾರ್ಟ್‌ಫೋನ್‌ 4GB ಆಯ್ಕೆಗೆ ಫ್ಲಿಪ್‌ಕಾರ್ಟ್‌ನಲ್ಲಿ 9,499ರೂ.ಬೆಲೆಗೆ ಲಭ್ಯವಾಗಲಿದೆ. ಆದರೆ 6+64 GB ರೂಪಾಂತರವನ್ನು 10,499ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ. ಈ ಫೋನ್‌ 6.82-ಇಂಚಿನ HD+ ಡಿಸ್ಪ್ಲೇ ಮತ್ತು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್‌ ಹೊಂದಿದ್ದು, ಆಡ್ರಾಯ್ಡ್‌ 11 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48MP AI ಸೆನ್ಸಾರ್‌ ಹೊಂದಿದೆ. ಜೊತೆಗೆ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Most Read Articles
Best Mobiles in India

English summary
Flipkart is offering some crazy deals on smartphones and other products including laptops, tablets, home appliances and more.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X