ಫ್ಲಿಪ್ ಕಾರ್ಟ್ ದೀಪಾವಳಿ ಸೇಲ್- 1 ರೂಪಾಯಿಯಿಂದ ಆರಂಭವಾಗುವ ಪ್ರೊಡಕ್ಟ್ ಗಳು

By Gizbot Bureau
|

ದೀಪಗಳ ಹಬ್ಬ ದೀಪಾವಳಿ ಇನ್ನೇನು ಸಮೀಪಿಸುತ್ತಿದೆ. ನಿಮ್ಮ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವುದಕ್ಕೆ ಆನ್ ಲೈನ್ ಮಳಿಗೆಗಳು ಕೂಡ ಸಜ್ಜಾಗಿ ನಿಂತಿವೆ. ಹೌದು ದೀಪಾವಳಿ ಸಡಗರಕ್ಕಾಗಿ ಫ್ಲಿಪ್ ಕಾರ್ಟ್ ನಲ್ಲಿ ಹಲವಾರು ರಿಯಾಯಿತಿ ಮತ್ತು ಆಫರ್ ಬೆಲೆಯ ಮಾರಾಟವನ್ನು ಆಯೋಜಿಸಲಾಗಿದೆ. ಈಗ ತಾನೇ ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇ ಸೇಲ್ ಮುಗಿದಿದೆ. ಇದೀಗ ಪುನಃ ದೀಪಾವಳಿ ಆಫರ್ ಗಳು ಪ್ರಾರಂಭವಾಗುತ್ತಿದೆ. ಹಾಗಾದ್ರೆ ಫ್ಲಿಪ್ ಕಾರ್ಟ್ ನ ದೀಪಾವಳಿ ಆಫರ್ ನಲ್ಲಿ ಏನೇನಿದೆ ಎಂಬುದನ್ನು ಮುಂದೆ ನೋಡಿ.

ನೋ ಕಾಸ್ಟ್ ಇಎಂಐ

ಅಕ್ಟೋಬರ್ 12 ರಿಂದ ಅಕ್ಟೋಬರ್ 16 ರ ವರೆಗೆ ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ಸೇಲ್ ನಡೆಯುತ್ತದೆ. ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರಿಗೆ ಅಕ್ಟೋಬರ್ 11 ರ 8pm ಗೆ ಅಂದರೆ ನಾಲ್ಕು ತಾಸುಗಳ ಮುಂಚೆಯೇ ಸೇಲ್ ಲೈವ್ ಆಗುತ್ತದೆ. ಹಾಗಾಗಿ ಪ್ಲಸ್ ಸದಸ್ಯರು ಹೆಚ್ಚಿನ ಲಾಭವನ್ನು ಬೇಗನೆ ಪಡೆಯುವುದಕ್ಕೆ ಅವಕಾಶವಿರುತ್ತದೆ. ಮೊಬೈಲ್ ಗಳು, ಲ್ಯಾಪ್ ಟಾಪ್ ಗಳು, ಮನೆಬಳಕೆ ವಸ್ತುಗಳು, ಫ್ಯಾಷನ್, ಬ್ಯೂಟಿ, ಪೀಠೋಪಕರಣಗಳು ಹಾಗೂ ಇತರೆ ಕೆಟಗರಿಯ ಹಲವು ವಸ್ತುಗಳಿಗೆ ಇ-ಕಾಮರ್ಸ್ ಪೋರ್ಟಲ್ ನಲ್ಲಿ 80% ದ ವರೆಗೆ ಆಫರ್ ಗಳನ್ನು ನೀಡಲಾಗುತ್ತಿದೆ.

ನೋ ಕಾಸ್ಟ್ ಇಎಂಐ ಆಯ್ಕೆಗಳು, ಫ್ಲಿಪ್ ಕಾರ್ಟ್ ಪೇ ಲೇಟರ್ ಪೇಮೆಂಟ್ ಆಯ್ಕೆ ಹಾಗೂ ಇತರೆ ಹಲವು ರಿಯಾಯಿತಿಗಳನ್ನು ಗ್ರಾಹಕರು ಈ ಸೇಲ್ ನಲ್ಲಿ ಪಡೆದುಕೊಳ್ಳಬಹುದು. ಎಸ್ ಬಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಲ್ಲಿ ಖರೀದಿ ಮಾಡುವವರಿಗೆ 10% ಇನ್ಸೆಂಟ್ ರಿಯಾಯಿತಿ ಕೂಡ ಲಭ್ಯವಾಗುತ್ತದೆ.

ಪ್ರಮುಖ ಮೊಬೈಲ್ ಬ್ರ್ಯಾಂಡ್ ಗಳಿಗೆ ದೊಡ್ಡ ದೊಡ್ಡ ರಿಯಾಯಿತಿಗಳು :

ಪ್ರಮುಖ ಮೊಬೈಲ್ ಬ್ರ್ಯಾಂಡ್ ಗಳಿಗೆ ದೊಡ್ಡ ದೊಡ್ಡ ರಿಯಾಯಿತಿಗಳು :

ಹೊಸ ಫೋನಿಗೆ ಅಪ್ ಗ್ರೇಡ್ ಆಗಬೇಕು ಎಂದು ಬಯಸುವವರಿಗೆ ಖಂಡಿತ ಇದು ಸರಿಯಾದ ಸಮಯ. ಬುಯ್ ಬ್ಯಾಕ್ ಗ್ಯಾರೆಂಟಿ ಆಫರ್ ಮತ್ತು ಕಂಪ್ಲೀಟ್ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಸೇರಿದಂತೆ ಹಲವು ಆಕರ್ಷಕ ಆಯ್ಕೆಗಳು ಈ ಸೇಲ್ ನಲ್ಲಿ ಲಭ್ಯವಿದೆ.ರಿಯಲ್ ಮಿ ಸಿ2, ರಿಯಲ್ ಮಿ 5, ವಿವೋ ಝಡ್1 ಪ್ರೋ ಮತ್ತು ರೆಡ್ಮಿ ನೋಟ್ 7ಎಸ್ ಫೋನ್ ಗಳು ಈ ಸೇಲ್ ನಲ್ಲಿ ರಿಯಾಯಿತಿ ಬೆಲೆಯಲ್ಲಿ ಸಿಗುತ್ತವೆ.

999 ರುಪಾಯಿಯಿಂದ ಆರಂಭವಾಗುತ್ತದೆ ಟಾಪ್-ರೇಟಿನ ಸ್ಮಾರ್ಟ್ ವಾಚ್ ಗಳು

999 ರುಪಾಯಿಯಿಂದ ಆರಂಭವಾಗುತ್ತದೆ ಟಾಪ್-ರೇಟಿನ ಸ್ಮಾರ್ಟ್ ವಾಚ್ ಗಳು

ಆಕ್ಸಸರೀಸ್ ಗಳ ವಿಚಾರಕ್ಕೆ ಬಂದರೆ ಟಾಪ್ ರೇಟಿನ ಸ್ಮಾರ್ಟ್ ವಾಚ್ ಗಳು ಹಲವು ಬ್ರ್ಯಾಂಡ್ ಗಳಲ್ಲಿ ಸಿಗುತ್ತದೆ. ವಿಶೇಷವೆಂದರೆ ಈ ಸೇಲ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಯ ಜೊತೆಗೆ ಎಕ್ಸ್ ಚೇಂಜ್ ಆಫರ್ ನಲ್ಲಿ ಕೇವಲ 999 ರುಪಾಯಿ ಬೆಲೆಗೆ ಪ್ರಮುಖ ಬ್ರ್ಯಾಂಡ್ ಗಳ ಸ್ಮಾರ್ಟ್ ವಾಚ್ ಗಳನ್ನು ಖರೀದಿಸುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ಟಾಪ್ ಬ್ರ್ಯಾಂಡಿನ ಸ್ಮಾರ್ಟ್ ವಾಚ್ ಗಳಿಗೆ 90% ದ ವರೆಗೆ ರಿಯಾಯಿತಿ ಲಭ್ಯವಿದೆ.

ಲ್ಯಾಪ್ ಟಾಪ್ ಗಳಿಗೆ 50% ದ ವರೆಗೆ ರಿಯಾಯಿತಿ

ಲ್ಯಾಪ್ ಟಾಪ್ ಗಳಿಗೆ 50% ದ ವರೆಗೆ ರಿಯಾಯಿತಿ

ಲ್ಯಾಪ್ ಟಾಪ್ ಗಳನ್ನು ಹುಡುಕುತ್ತಿದ್ದೀರಾ? ಹಾಗಾದ್ರೆ ಬಿಗ್ ಬಿಲಿಯನ್ ಸೇಲ್ ನಲ್ಲಿ 50%ದ ವರೆಗೆ ನಿಮಗೆ ರಿಯಾಯಿತಿ ಸಿಗುತ್ತದೆ. ಸದ್ಯಕ್ಕೆ ಯಾವೆಲ್ಲಾ ಮಾಡೆಲ್ ಗಳ ಲ್ಯಾಪ್ ಟಾಪ್ ಗಳಿಗೆ ಆಫರ್ ಇರುತ್ತದೆ ಎಂಬ ಬಗ್ಗೆ ಪ್ರಕಟಿಸಲಾಗಿಲ್ಲ. ಆದರೆ ನೋ ಕಾಸ್ಟ್ ಇಎಂಐ ಆಯ್ಕೆಗಳು ಎಕ್ಸ್ ಚೇಂಜ್ ಆಫರ್ ಗಳು ಖರೀದಿದಾರರಿಗೆ ಲಭ್ಯವಿದ್ದು ತಮ್ಮ ಲ್ಯಾಪ್ ಟಾಪ್ ಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳುವುದಕ್ಕೆ ಖಂಡಿತ ಇದು ಸರಿಯಾದ ಸಮಯವಾಗಿದೆ.

ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ 75% ದ ವರೆಗೆ ರಿಯಾಯಿತಿ

ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ 75% ದ ವರೆಗೆ ರಿಯಾಯಿತಿ

ಮ್ಯೂಸಿಕ್ ಪ್ರಿಯರಿಗೆ ಖಂಡಿತ ಧಮಾಕಾ ಆಫರ್ ಗಳು ಲಭ್ಯವಿದೆ. ಹೆಡ್ ಫೋನ್ ಗಳು ಮತ್ತು ಸ್ಪೀಕರ್ ಗಳಿಗೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ದೀಪಾವಳಿ ಸೇಲ್ 2019 ರಲ್ಲಿ ಭರ್ಜರಿ ಆಫರ್ ಗಳು ಲಭ್ಯವಿದೆ.ಬ್ಲೂಟೂತ್ ಹೆಡ್ ಫೋನ್ ಗಳು, ಬ್ಲೂಟೂತ್ ಸ್ಪೀಕರ್ ಗಳು, ವಯರ್ ಹೆಡ್ ಫೋನ್ ಗಳು, ಲ್ಯಾಪ್ ಟಾಪ್ ಸ್ಪೀಕರ್ ಗಳು, ಮನೆಯ ಮನೆರಂಜನೆಯ ಸ್ಪೀಕರ್ ಗಳು, ಪಾರ್ಟಿ ಸ್ಪೀಕರ್ ಗಳು, ಸೌಂಡ್ ಬಾರ್ ಗಳು ಇತ್ಯಾದಿಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ.

ಕ್ಯಾಮರಾಗಳ ಆರಂಭಿಕ ಬೆಲೆ 17,999 ರುಪಾಯಿಗಳು:

ಕ್ಯಾಮರಾಗಳ ಆರಂಭಿಕ ಬೆಲೆ 17,999 ರುಪಾಯಿಗಳು:

ಕ್ಯಾಮರಾಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕಾ? ಡಿಎಸ್ಎಲ್ಆರ್ ಮತ್ತು ಮಿರರ್ ಲೆಸ್ ಕ್ಯಾಮರಾಗಳು ನೀವು ನಿರೀಕ್ಷಿಸಿರದ ಆರಂಭಿಕ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಹೌದು ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ಸೇಲ್ 2019 ರಲ್ಲಿ 17,999 ರುಪಾಯಿಯ ಆರಂಭಿಕ ಬೆಲೆಯಲ್ಲಿ ಸಿಗುತ್ತವೆ.ನಿಕಾನ್,ಕೆನಾನ್ ಮತ್ತು ಇತ್ಯಾದಿ ಬ್ರ್ಯಾಂಡ್ ಗಳ ಕ್ಯಾಮರಾಗಳು ಈ ಆಫರ್ ನಲ್ಲಿ ಲಭ್ಯವಿದೆ.

ಟಿವಿ ಮತ್ತು ಅಪ್ಲಯನ್ಸಸ್ ಗಳಿಗೆ 75% ದ ವರೆಗೆ ರಿಯಾಯಿತಿ:

ಟಿವಿ ಮತ್ತು ಅಪ್ಲಯನ್ಸಸ್ ಗಳಿಗೆ 75% ದ ವರೆಗೆ ರಿಯಾಯಿತಿ:

ಟಿವಿ ಮತ್ತು ಅಪ್ಲಯನ್ಸಸ್ ಗಳಿಗೆ ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ಸೇಲ್ ನಲ್ಲಿ ಉತ್ತಮ ರಿಯಾಯಿತಿ ಸಿಗಲಿದೆ.ಸುಮಾರು 50,000 ಪ್ರೊಡಕ್ಟ್ ಗಳಿಗೆ 75% ದ ವರೆಗಿನ ರಿಯಾಯಿತಿ ಸಿಗಲಿದ್ದು ಸಂಪೂರ್ಣ ಕಾರ್ಡ್ ಲೆಸ್ ಕ್ರೆಡಿಟ್ ಮತ್ತು ಸಂಪೂರ್ಣ ಪ್ರೊಟೆಕ್ಷನ್ ಪ್ಲಾನ್ ಲಭ್ಯವಾಗುತ್ತದೆ. ಈ ಸೇಲ್ ನಲ್ಲಿ ಅಪ್ಲಯನ್ಸಸ್ ಗಳಾಗಿರುವ ರೆಫ್ರಿಜರೇಟರ್, ಗೀಸರ್, ಫ್ಯಾನ್, ಐರನ್ ಬಾಕ್ಸ್ ಗಳು, ಮಿಕ್ಸಿ ಮತ್ತು ಆರ್ ಓ ವಾಟರ್ ಪ್ಯೂರಿಫೈಯರ್ ಗಳು ಸೇರಿದಂತೆ ಹಲವು ವಸ್ತುಗಳಿಗೆ ರಿಯಾಯಿತಿ ಇದೆ.

ಫ್ಯಾಷನ್ ಪ್ರೊಡಕ್ಟ್ ಗಳಿಗೆ 50% ದಿಂದ 80% ದ ವರೆಗೆ ರಿಯಾಯಿತಿ:

ಫ್ಯಾಷನ್ ಪ್ರೊಡಕ್ಟ್ ಗಳಿಗೆ 50% ದಿಂದ 80% ದ ವರೆಗೆ ರಿಯಾಯಿತಿ:

ಕೇವಲ ಗೆಡ್ಜೆಟ್ ಗಳು ಮಾತ್ರವಲ್ಲ ಬದಲಾಗಿ ಫ್ಯಾಷನ್ ಪ್ರೊಡಕ್ಟ್ ಗಳು ಕೂಡ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ.1000 ಕ್ಕೂ ಅಧಿಕ ಬ್ರ್ಯಾಂಡ್ ಗಳಿಗೆ 50% ದಿಂದ 80% ದ ವರೆಗೆ ರಿಯಾಯಿತಿ ಸಿಗುತ್ತದೆ. ಪುರುಷರ ಚಪ್ಪಲಿಗಳಿಗೆ 40% ದಿಂದ 80% ರಿಯಾಯಿತಿ, ವಾಚ್ ಗಳು ಮತ್ತು ಟ್ರಾಲಿಗಳಿಗೆ 80% ದ ವರೆಗೆ ರಿಯಾಯಿತಿ ಸಿಗುತ್ತದೆ.

ಬ್ಯೂಟಿ, ಬೇಬಿ ಕೇರ್, ಟಾಯ್ ಮತ್ತು ಇತ್ಯಾದಿಗಳು 99 ರುಪಾಯಿಯಿಂದ ಆರಂಭ :

ಬ್ಯೂಟಿ, ಬೇಬಿ ಕೇರ್, ಟಾಯ್ ಮತ್ತು ಇತ್ಯಾದಿಗಳು 99 ರುಪಾಯಿಯಿಂದ ಆರಂಭ :

ನೀವು ಮಕ್ಕಳ ಆಟದ ವಸ್ತುಗಳು, ಬೇಬಿ ಕೇರ್ ಪ್ರೊಡಕ್ಟ್ ಗಳು, ಬ್ಯೂಟಿ ಪ್ರೊಡಕ್ಟ್ ಗಳು ಸೇರಿದಂತೆ ಇತರೆ ಹಲವು ವಸ್ತುಗಳು 99 ರುಪಾಯಿಯಿಂದ ಆರಂಭವಾಗುತ್ತದೆ. ಸ್ಪೋರ್ಟ್ಸ್ ಮತ್ತು ಫಿಟ್ನೆಸ್ ಪ್ರೊಡಕ್ಟ್ ಗಳು, ಸ್ಟೇಷನರಿ ಮತ್ತು ಬುಕ್ಸ್ ಗಳು ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತವೆ.

ಮನೆಬಳಕೆ ವಸ್ತುಗಳು ಮತ್ತು ಪೀಠೋಪಕರಣಗಳಿಗೆ 80% ದ ವರೆಗೆ ರಿಯಾಯಿತಿ :

ಮನೆಬಳಕೆ ವಸ್ತುಗಳು ಮತ್ತು ಪೀಠೋಪಕರಣಗಳಿಗೆ 80% ದ ವರೆಗೆ ರಿಯಾಯಿತಿ :

ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ಸೇಲ್ 2019 ರಲ್ಲಿ ಟೂಲ್ಸ್ ಮತ್ತು ಯುಟಿಲಿಟಿ ಪ್ರೊಡಕ್ಟ್ ಗಳು, ಪೀಠೋಪಕರಣಗಳು, ಬೆಡ್ ಶೀಟ್ ಗಳು, ಮರದ ಮಂಚಗಳು, ಅಡುಗೆ ಮನೆ ಮತ್ತು ಆಹಾರ ಸಂಗ್ರಹಣಾ ವಸ್ತುಗಳು ಅತ್ಯಂತ ಕಡಿಮೆ ಅಂದರೆ 49 ರುಪಾಯಿಯಿಂದ ಆರಂಭಾಗುತ್ತದೆ.ಅಷ್ಟೇ ಅಲ್ಲದೆ ಈ ಎಲ್ಲಾ ಪ್ರೊಡಕ್ಟ್ ಗಳಿಗೆ 40% ದಿಂದ 80% ದ ವರೆಗೆ ರಿಯಾಯಿತಿ ಕೂಡ ಲಭ್ಯವಿದೆ. ಸುಮಾರು 5000 ಬ್ರ್ಯಾಂಡ್ ಗಳಿಗೆ ಉಚಿತ ಡೆಲಿವರಿ ಸೌಕರ್ಯವೂ ಇದೆ.

ಫ್ಲಿಪ್ ಕಾರ್ಟ್ ಬ್ರ್ಯಾಂಡ್ ಗಳಿಗೆ 90% ದ ವರೆಗೆ ರಿಯಾಯಿತಿ:

ಫ್ಲಿಪ್ ಕಾರ್ಟ್ ಬ್ರ್ಯಾಂಡ್ ಗಳಿಗೆ 90% ದ ವರೆಗೆ ರಿಯಾಯಿತಿ:

ಫ್ಲಿಪ್ ಕಾರ್ಟ್ ಬ್ರ್ಯಾಂಡ್ ನಲ್ಲಿ ನೀವು ಪ್ರೊಡಕ್ಟ್ ಗಳನ್ನು ಖರೀದಿಸುವುದೇ ಆದಲ್ಲಿ ಸುಮಾರು 350 ಕೆಟಗರಿಯ ವಸ್ತುಗಳಿಗೆ 90% ದ ವರೆಗೆ ರಿಯಾಯಿತಿ ಇದೆ. ಅದರಲ್ಲಿ MarQ ಮತ್ತು ಫ್ಲಿಪ್ ಕಾರ್ಟ್ ಸ್ಮಾರ್ಟ್ ಬುಯ್ ಪ್ರೊಡಕ್ಟ್ ಗಳು ಸೇರಿವೆ.

ದಿನಸಿ ವಸ್ತುಗಳು 1 ರುಪಾಯಿಯಿಂದ ಆರಂಭ :

ದಿನಸಿ ವಸ್ತುಗಳು 1 ರುಪಾಯಿಯಿಂದ ಆರಂಭ :

ಈ ಫ್ಲಿಪ್ ಕಾರ್ಟ್ ದೀಪಾವಳಿ ಸೇಲ್ ನಲ್ಲಿ ದಿನಸಿ ವಸ್ತುಗಳನ್ನು ನೀವು ಕೇವಲ 1 ರುಪಾಯಿಗೆ ಖರೀದಿಸುವ ಅವಕಾಶವಿದೆ. ಹೌದು ದೀಪಾವಳಿ ಸಂಭ್ರಮಕ್ಕಾಗಿ ಫ್ಲಿಪ್ ಕಾರ್ಟ್ ನಲ್ಲಿ ಧಮಾಕ ಆಫರ್ ಇದಾಗಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚು ವಸ್ತುಗಳನ್ನು ಖರೀದಿಸುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.

Most Read Articles
Best Mobiles in India

English summary
As Diwali is approaching soon, the online retailers have started pouring discounts and offers, thereby luring potential buyers to make purchases. Flipkart just concluded the Big Billion Days sale on October 4. Now, it has announced the next round of sale for Diwali. Check out Flipkart Big Diwali Sale offers from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more