ಫ್ಲಿಪ್‌ಕಾರ್ಟ್‌ ಬಿಗ್ ದೀಪಾವಳಿ ಸೇಲ್ : ಈ ಫೋನ್‌ಗಳು ಬಿಗ್ ಡಿಸ್ಕೌಂಟ್‌ ಪಡೆಯಲಿವೆ!

|

ಆನ್‌ಲೈನ್‌ ಶಾಪಿಂಗ್ ಪ್ರಿಯರಿಗೆ ಹಬ್ಬದ ಸಮಯದಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಎಲ್ಲಿಲ್ಲದ ಖುಷಿ. ಏಕೆಂದರೇ ಹಬ್ಬದ ಪ್ರಯುಕ್ತ ಇ-ಕಾಮರ್ಸ್‌ ತಾಣಗಳು ವಿಶೇಷ ರಿಯಾಯಿತಿಗಳನ್ನು ಘೋಷಿಸುತ್ತಾರೆ. ಜನಪ್ರಿಯ ಫ್ಲಿಪ್‌ಕಾರ್ಟ್‌ ಇತ್ತೀಚಿಗಷ್ಟೆ ಬಿಗ್ ಬಿಲಿಯನ್ ಸೇಲ್ ಮೇಳಗೆ ತೆರೆ ಎಳಿದಿದ್ದು, ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಮತ್ತೆ ಆಫರ್‌ಗಳ ಮಹಾಮಳೆ ಸುರಿಸಲು ತಯಾರಾಗಿದೆ.

ಬಿಗ್ ದೀಪಾವಳಿ ಸೇಲ್

ಹೌದು, ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ತಾಣವು ದೀಪಾವಳಿ ಹಬ್ಬಕ್ಕೆಂದು ಈಗ 'ಬಿಗ್ ದೀಪಾವಳಿ ಸೇಲ್' ಮೇಳವನ್ನು ಆಯೋಜಿಸಿದೆ. ಈ ಮೇಳವು ಇದೇ ಅಕ್ಟೋಬರ್ 12 ರಿಂದ ಆರಂಭವಾಗಲಿದ್ದು, ಇದೇ ಅಕ್ಟೋಬರ್ 16ರ ವರೆಗೂ ನಡೆಯಲಿದೆ. ಇನ್ನು 'ಫ್ಲಿಪ್‌ಕಾರ್ಟ್‌ ಪ್ಲಸ್‌' ಗ್ರಾಹಕರಿಗೆ ಇದೇ ಅಕ್ಟೋಬರ್ 11ರ ರಾತ್ರಿ 8 ಗಂಟೆಯಿಂದಲೇ ಶಾಪಿಂಗ್ ಅವಕಾಶ ಲಭ್ಯವಾಗಲಿದೆ.

ಫ್ಲಿಪ್‌ಕಾರ್ಟ್‌ನ ದೀಪಾವಳಿ ಸೇಲ್‌

ಫ್ಲಿಪ್‌ಕಾರ್ಟ್‌ನ ಈ ದೀಪಾವಳಿ ಸೇಲ್‌ನಲ್ಲಿ ಗ್ಯಾಜೆಟ್ಸ್‌ಗಳಿಗೆ ಬಿಗ್ ಡಿಸ್ಕೌಂಟ್‌ಗಳು ದೊರೆಯಲಿದ್ದು, ಮುಖ್ಯವಾಗಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌, ಸ್ಮಾರ್ಟ್‌ವಾಚ್‌ಗಳು ಮತ್ತು ಸ್ಮಾರ್ಟ್‌ಟಿವಿಗಳಿಗೆ ವಿಶೇಷ ರಿಯಾಯಿತಿಗಳು ಸಿಗಲಿವೆ. ಹಾಗಾದರೇ ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಬೆಸ್ಟ್ ಡಿಸ್ಕೌಂಟ್‌ ಪಡೆಯುವ ಲಿಸ್ಟ್‌ನಲ್ಲಿವೆ ಮತ್ತು ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿಗಳಿಗೆ ಡಿಸ್ಕೌಂಟ್‌ ಎಷ್ಟು?.ಎಂಬುದನ್ನು ತಿಳಿಯಲು ಮುಂದೆ ಓದಿರಿ.

ರೆಡ್ಮಿ ನೋಟ್ 7S

ರೆಡ್ಮಿ ನೋಟ್ 7S

ಶಿಯೋಮಿಯ ರೆಡ್ಮಿ ನೋಟ್ 7S ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್‌ ಮೇಳದಲ್ಲಿ ಅತ್ಯುತ್ತಮ ಡಿಸ್ಕೌಂಟ್‌ ಪಡೆಯಲಿದ್ದು, ಆದರೆ ಎಷ್ಟು ಡಿಸ್ಕೌಂಟ್‌ ಸಿಗಲಿದೆ ಎನ್ನುವ ಬಗ್ಗೆ ಫ್ಲಿಪ್‌ಕಾರ್ಟ್‌ ಮಾಹಿತಿ ಹೊರಹಾಕಿಲ್ಲ. 48ಎಂಪಿ ರಿಯರ್‌ ಕ್ಯಾಮೆರಾ ಮತ್ತು 4,000mAh ಬ್ಯಾಟರಿ ಫೀಚರ್ಸ್‌ಗಳಿಂದ ಈಗಾಗಲೇ ಈ ಸ್ಮಾರ್ಟ್‌ಫೋನ್ ಗ್ರಾಹಕರನ್ನು ಆಕರ್ಷಿಸಿದೆ.

ರಿಯಲ್ ಮಿ 5

ರಿಯಲ್ ಮಿ 5

ಇತ್ತೀಚಿಗೆ ಬಿಡುಗಡೆ ಆಗಿರುವ ರಿಯಲ್‌ ಮಿ 5 ಸ್ಮಾರ್ಟ್‌ಫೋನ್‌ ಸಹ ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್‌ನಲ್ಲಿ ಬೆಸ್ಟ್‌ ಡೀಲ್ ಪಡೆಯುವ ಲಿಸ್ಟ್‌ನಲ್ಲಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳಿಂದ ಗಮನಸೆಳೆದಿದ್ದು, ಇದರೊಂದಿಗೆ 5000mAh ಬ್ಯಾಟರಿ ಲೈಫ್‌ ಸಹ ಪಡೆದುಕೊಂಡಿದೆ. ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 665 ಪ್ರೊಸೆಸರ್‌ ಸಾಮರ್ಥ್ಯವು ಇದೆ.

ರೆಡ್ಮಿ ನೋಟ್‌ 7 ಪ್ರೊ

ರೆಡ್ಮಿ ನೋಟ್‌ 7 ಪ್ರೊ

ಜನಪ್ರಿಯ ರೆಡ್ಮಿ ನೋಟ್‌ 7 ಪ್ರೊ ಸ್ಮಾರ್ಟ್‌ಫೋನ್ ಹವಾ ಇನ್ನು ಉಳಿದಿದ್ದು, ಈ ಫೋನಿಗೂ ದೀಪಾವಳಿ ಸೇಲ್‌ನಲ್ಲಿ ಅತ್ಯುತ್ತಮ ಡಿಸ್ಕೌಂಟ್‌ ಸಿಗಲಿದೆ. ರೆಡ್ಮಿ ನೋಟ್ 7 ಪ್ರೊ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ಸ್‌ ಎಂದರೇ 48ಎಂಪಿ ಕ್ಯಾಮೆರಾ, ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಮತ್ತು 4,000mAh ಬ್ಯಾಟರಿ ಸಾಮರ್ಥ್ಯ ಆಗಿವೆ.

ವಿವೋ Z1 ಪ್ರೊ

ವಿವೋ Z1 ಪ್ರೊ

ವಿವೋ ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ವಿವೋ Z1 ಪ್ರೊ ಸ್ಮಾರ್ಟ್‌ಫೋನ್‌ ಸಹ ಹೆಚ್ಚಿನ ರಿಯಾಯಿತಿಯಲ್ಲಿ ಸಿಗಲಿದೆ. ಈ ಸ್ಮಾರ್ಟ್‌ಫೋನ್‌ 5000mAh ಬ್ಯಾಟರಿ ಲೈಫ್, ತ್ರಿವಳಿ ಕ್ಯಾಮೆರಾ, 32ಎಂಪಿ ಸೆಲ್ಫಿ ಕ್ಯಾಮೆರಾ, ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್‌, ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಈ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ.

ಇತರೆ ಆಫರ್‌

ಇತರೆ ಆಫರ್‌

ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ದೀಪಾವಳಿ ಸೇಲ್‌ ಮೇಳದಲ್ಲಿ ಸ್ಮಾರ್ಟ್‌ಫೋನ್‌ನಂತಯೇ ಸ್ಮಾರ್ಟ್‌ಟಿವಿಗಳು ಮತ್ತು ಸ್ಮಾರ್ಟ್‌ ವಾಚ್‌ಗಳಿಗೂ ಡಿಸ್ಕೌಂಟ್‌ ಸಿಗಲಿದೆ. ಮೇಳದಲ್ಲಿ ಸುಮಾರು 50,000ರೂ. ಮೌಲ್ಯದ ಉತ್ಪನ್ನಗಳ ಖರೀದಿಗೆ ವಿಶೇಷ ರಿಯಾಯಿತಿ ಲಭ್ಯವಾಗಲಿದೆ. ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಮೇಲೆ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್‌ ಸಿಗಲಿದ್ದು, ನೋ ಕಾಸ್ಟ್‌ ಇಎಮ್‌ಐ ಮತ್ತು ಎಕ್ಸ್‌ಚೇಂಜ್ ಕೊಡುಗೆ ಸಹ ದೊರೆಯಲಿದೆ.

Best Mobiles in India

English summary
Flipkart Big Diwali Sale will see big discounts and offers on smartphones, TVs, wearables, laptops and more. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X