ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌: ಪೊಕೊ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ!

|

ಭಾರತದಲ್ಲಿ ದೀಪಾವಳಿ ಸಂಭ್ರಮಕ್ಕೆ ದಿನಗಣನೆ ಶುರುವಾಗಿದೆ. ದೀಪಾವಳಿ ಸೀಸನ್‌ ಶುರುವಾಗುವ ಮುನ್ನವೇ ಇ-ಕಾಮರ್ಸ್‌ ತಾಣಗಳು ಆನ್‌ಲೈನ್‌ ಗ್ರಾಹಕರಿಗೆ ಭರ್ಜರಿ ಆಫರ್‌ಗಲ ಸುರಿಮಳೆಯನ್ನೇ ಸುರಿಸುತ್ತಿವೆ. ಇನ್ನು ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನ ದೀಪಾವಳಿ ಬಿಗ್‌ ಸೇಲ್‌ ನಲ್ಲಿ ಆಫರ್‌ಗಳ ಮೇಲೆ ಆಫರ್‌ ನೀಡುತ್ತಿದೆ. ಇನ್ನು ಈ ಸೇಲ್‌ ನವೆಂಬರ್‌ 4 ರವರೆಗೂ ನಡೆಯಲಿದ್ದು, ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗಿದೆ.

ಫ್ಲಿಪ್ಕಾರ್ಟ್

ಹೌದು, ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್ಕಾರ್ಟ್ ತನ್ನ ಬಿಗ್ ದೀಪಾವಳಿ ಸೇಲ್‌ 2020 ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್‌ ಘೋಷಿಸಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌, ಸ್ಮಾರ್ಟ್‌ವಾಚ್‌ಗಳು ಮತ್ತು ಸ್ಮಾರ್ಟ್‌ಟಿವಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸಿವೆ. ಇನ್ನು ಈ ಸೇಲ್‌ನಲ್ಲಿ ಪೊಕೊ c3, ಪೊಕೊ m2 ಪ್ರೊ, ಪೊಕೊ x2, ಸ್ಮಾರ್ಟ್‌ಫೋನ್‌ ಗಳ ಮೇಲೆ ಭಾರಿ ಡಿಸ್ಕೌಮಟ್‌ ನೀಡಲಾಗಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್‌ನಲ್ಲಿ ಪೊಕೊ ಸ್ಮಾರ್ಟ್‌ಫೋನ್‌ಗಳ ಬೆಲೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್‌

ಪೊಕೊ ಫೋನ್‌ಗಳು ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ವಿಶೇಷ ರಿಯಾಯಿತಿಯೊಂದಿಗೆ ಮತ್ತೊಮ್ಮೆ ಲಭ್ಯವಿದೆ. ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಿಗ್ ದೀಪಾವಳಿ ಸೇಲ್‌ನಲ್ಲಿ ಮಾರಾಟವನ್ನು ಮಾಡುತ್ತಿದೆ. POCO ಫೋನ್‌ಗಳು ಮಾರಾಟದ ಸಮಯದಲ್ಲಿ 1,000 ರೂ.ಗಳವರೆಗೆ ಬೆಲೆ ಇಳಿಕೆಯನ್ನ ಪಡೆದುಕೊಂಡಿದ್ದು, ಇತ್ತೀಚಿನ POCO X3 ಸೇರಿದಂತೆ ಎಲ್ಲಾ ಕೊಡುಗೆಗಳಲ್ಲಿ ಆಕ್ಸಿಸ್ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ಆಯ್ಕೆಗಳೊಂದಿಗೆ ಖರೀದಿದಾರರು ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದಾಗಿದೆ. ಅಲ್ಲದೆ POCO C3 ಮತ್ತು M2 ಖರೀದಿದಾರರು ಪ್ರಿಪೇಯ್ಡ್ ಕೊಡುಗೆಗಳಲ್ಲಿ 500 ರೂ. ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಹಾಗಾದ್ರೆ ರಿಯಾಯಿತಿ ದರದಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಯೋಣ ಬನ್ನಿರಿ.

ಪೊಕೊ C3 (4GB)

ಪೊಕೊ C3 (4GB)

POCO C3 ಸ್ಮಾರ್ಟ್‌ಫೋನ್‌ 4GB RAM ರೂಪಾಂತರ ಫ್ಲಿಪ್‌ಕಾರ್ಟ್‌ ದೀಪಾವಳಿ ಸೇಲ್‌ನಲ್ಲಿ ಪ್ರಿಪೇಯ್ಡ್ ಆಫರ್‌ನಲ್ಲಿ 8,499 ರೂಗಳಿಗೆ ಖರೀದಿಸಬಹುದಾಗಿದೆ. ಅದರಲ್ಲು ನೀವು ಆಕ್ಸಿಸ್ ಬ್ಯಾಂಕ್ ಬಳಕೆದಾರರಾಗಿದ್ದರೆ, ನೀವು ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇನ್ನು POCO C3 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G35 SoC ಪ್ರೊಸೆಸರ್‌ ಅನ್ನು ಹೊಂದಿದ್ದು, 5,000mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ.

ಪೊಕೊ M2

ಪೊಕೊ M2

ಪೊಕೊ M2 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 64GB ಶೇಖರಣಾ ರೂಪಾಂತರಕ್ಕೆ 10,499 ರೂ.ಗೆ ಮಾರಾಟವಾಗುತ್ತಿದೆ, ಆದರೆ ಪ್ರಿಪೇಯ್ಡ್ ರಿಯಾಯಿತಿಯೊಂದಿಗೆ ಇದನ್ನು 9,999 ರೂ.ಗೆ ಕಡಿಮೆ ಖರೀದಿಸಬಹುದು. ಫೋನ್‌ನ 128GB ಶೇಖರಣಾ ಆಯ್ಕೆಯು 12,499 ರೂಗಳ ಬದಲು 11,499 ರೂಗಳಲ್ಲಿ ಲಭ್ಯವಿದೆ.

ಪೊಕೊ M2 ಪ್ರೊ

ಪೊಕೊ M2 ಪ್ರೊ

ಪೊಕೊ M2 ಪ್ರೊ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಫ್ಲಾಟ್ 1,000 ರೂ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ 13,999 ರೂ.ಗಳ ಬದಲು 12,999 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್ 720G ಚಿಪ್‌ಸೆಟ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮುಖ್ಯ ಕ್ಯಾಮೆರಾ ಒಳಗೊಂಡ ಕ್ವಾಡ್-ಕ್ಯಾಮೆರಾ ಸೆಟಪ್ ಮತ್ತು 33W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಪ್ಯಾಕ್ ಮಾಡುತ್ತದೆ.

ಪೊಕೊ x2

ಪೊಕೊ x2

ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್‌ನಲ್ಲಿ ಪೊಕೊ x2 ಸ್ಮಾರ್ಟ್‌ಫೋನ್‌ 64GB ಮತ್ತು 128GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ಗಳ ಮೇಲೆ 1,000 ರೂ ರಿಯಾಯಿತಿಯನ್ನ ನೀಡಲಾಗಿದೆ. ಪೊಕೊ x2 64GB ರೂಪಾಂತರವು 17,499 ರೂಗಳ ಬದಲು 16,499 ರೂಗಳಿಗೆ ಮಾರಾಟವಾಗುತ್ತಿದ್ದರೆ, 128GB ಆಯ್ಕೆಯು 17,499 ರೂಗಳಿಗೆ ಲಭ್ಯವಾಗಲಿದೆ.

ಪೊಕೊ x3

ಪೊಕೊ x3

ಪೊಕೊ x3 ಸ್ಮಾರ್ಟ್‌ಫೋನ್‌ 16,999ರೂ, ಬದಲು 15,299 ರೂಗಳಿಂದ ಪ್ರಾರಂಭವಾಗುವ ಪರಿಣಾಮಕಾರಿ ಬೆಲೆಗೆ ಮಾರಾಟವಾಗಲಿದೆ. ಆಕ್ಸಿಸ್ ಬ್ಯಾಂಕ್ ಕೊಡುಗೆಯೊಂದಿಗೆ ಖರೀದಿದಾರರು 2,000 ರೂ.ಗಳವರೆಗೆ ರಿಯಾಯಿತಿ ಪಡೆಯಬಹುದು. ಇನ್ನು ಈ ಸ್ಮಾರ್ಟ್‌ಫೋನ್‌ 8GB RAM + 256GB ಸ್ಟೋರೇಜ್ ಸಾಮರ್ಥ್ಯ, 120Hz ರಿಫ್ರೆಶ್ ರೇಟ್ ಸ್ಕ್ರೀನ್ ಮತ್ತು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಹೊಂದಿದೆ.

Most Read Articles
Best Mobiles in India

English summary
POCO C3, POCO M2 Pro, POCO X2 prices in India discounted during Flipkart Big Diwali Sale.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X