ಫ್ಲಿಪ್‌ಕಾರ್ಟ್‌ನಿಂದ ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆ ಡಬಲ್‌ ದಮಾಕ!

|

ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್‌ ತನ್ನ ಆನ್‌ಲೈನ್‌ ಗ್ರಾಹಕರಿಗೆ ಡಬಲ್‌ ದಮಾಕ ನೀಡಿದೆ. ಎರಡು ದಿನಗಳ ಹಿಂದೆಯಷ್ಟೇ ಕೊನೆಗೊಂಡ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ ಅನ್ನು ಮತ್ತೊಮ್ಮೆ ಆಯೋಜಿಸಲು ಸಿದ್ಧತೆ ನಡೆಸಿದೆ. ದೀಪಾವಳಿ ಹಬ್ಬದ ವಿಶೇಷವಾಗಿ ಇದೇ ಅಕ್ಟೋಬರ್ 28 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮತ್ತೊಮ್ಮೆ ದೀಪಾವಳಿ ಸೇಲ್‌ ನಡೆಯಲಿದೆ. ಇನ್ನು ಈ ಸೇಲ್‌ ಅಕ್ಟೋಬರ್ 28 ರಿಂದ ನವೆಂಬರ್ 3, 2021 ರವರೆಗೆ ನಡೆಯಲಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆ ಈ ಬಾರಿ ಡಬಲ್‌ ದಮಾಕ ನೀಡಿದೆ. ದೀಪಾವಳಿಯ ಸಂಭ್ರದಮದಲ್ಲಿ ಮತ್ತೊಮ್ಮೆ ಆಫರ್‌ಗಳ ಮೇಳವನ್ನು ಹೊತ್ತು ತಂದಿದೆ. ಇನ್ನು ಈ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್ SBI ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, SBI ಡೆಬಿಟ್ ಕಾರ್ಡ್ ಬಳಸಿ ಮಾಡಿದ ಖರೀದಿಗಳ ಮೇಲೆ 10% ಡಿಸ್ಕೌಂಟ್‌ ನೀಡಲಿದೆ. ಜೊತೆಗೆ ಎಸ್‌ಬಿಐ ಬ್ಯಾಂಕ್‌ ಅಪ್ಲಿಕೇಶನ್ Yono SBI ಮೂಲಕ ಪಾವತಿಸುವವರಿಗೂ ಬಿಗ್‌ ಡಿಸ್ಕೌಂಟ್‌ ದೊರೆಯಲಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಮತ್ತೊಮ್ಮೆ ಆಯೋಜಿಸುತ್ತಿರುವ ಹೊಸ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್ ತನ್ನ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಐಫೋನ್‌ಗಳು, ಮೊಟೊರೊಲಾ ಮತ್ತು ಶಿಯೋಮಿ ಫೋನ್‌ಗಳ ಮೇಲೆ ಭಾರಿ ಡೀಲ್‌ಗಳನ್ನು ನೀಡುವುದಾಗಿ ಹೇಳಿದೆ.ಆಯ್ದ ಉತ್ಪನ್ನಗಳ ಮೇಲೆ 80% ಡಿಸ್ಕೌಂಟ್‌ ನೀಡುವುದಾಗಿ ತನ್ನ ಸೇಲ್‌ ಪೇಜ್‌ನಲ್ಲಿ ಹೇಳಿಕೊಂಡಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳು, ಡೆಸ್ಕ್‌ಟಾಪ್‌ಗಳು, ಪವರ್ ಬ್ಯಾಂಕ್‌ಗಳು, ಹೆಡ್‌ಫೋನ್‌ಗಳು, ಸ್ಪೀಕರ್‌ಗಳು ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ 80% ಡಿಸ್ಕೌಂಟ್‌ ಸಿಗಲಿದೆ. ಇನ್ನು ಸ್ಮಾರ್ಟ್‌ಟಿವಿಗಳು ಮತ್ತು ಉಪಕರಣಗಳ ಮೇಲೆ 75% ರಷ್ಟು ರಿಯಾಯಿತಿಯನ್ನು ನೀಡಿದೆ.

ಐಫೋನ್

ಇನ್ನು ಐಫೋನ್ 12 ಮೇಲೆ ಫ್ಲಿಪ್‌ಕಾರ್ಟ್ ಬಿಗ್‌ ಡೀಲ್‌ಗಳನ್ನು ನೀಡುತ್ತಿದೆ. ಪ್ರಸ್ತುತ, ಐಫೋನ್‌ 12 64GB ಸ್ಟೋರೇಜ್ ಮಾದರಿಗೆ 60,199 ರೂಗಳಲ್ಲಿ ಲಭ್ಯವಿದೆ. ಆದರೆ 128GB ಮಾದರಿಯು 66,199ರೂ.ಗಳಿಗೆ ದೊರೆಯಲಿದೆ. ಇದಲ್ಲದೆ ಐಫೋನ್ 12 ಮಿನಿ 64GB ಮಾದರಿಗೆ 45,199ರೂ.ಬೆಲೆಗೆ ಲಭ್ಯವಿದೆ. ಬಿಗ್ ದೀಪಾವಳಿ ಸೇಲ್‌ ಸಮಯದಲ್ಲಿ ಈ ಎರಡೂ ಮಾದರಿಗಳ ಮೇಲೆ ಇನ್ನು ಹೆಚ್ಚಿನ ರಿಯಾಯಿತಿಗಳನ್ನು ನಿರೀಕ್ಷಿಸಬಹುದಾಗಿದೆ.

ಶಿಯೋಮಿ

ಇನ್ನು ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೂ ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಆಫರ್‌ ನೀಡಲಾಗ್ತಿದೆ. ಅದರಲ್ಲೂ ರೆಡ್‌ಮಿ 9 ಪ್ರೈಮ್‌, ರೆಡ್‌ಮಿ 9i Sport, ರೆಡ್‌ಮಿ 9ಪವರ್‌, ರೆಡ್‌ಮಿ 9ಪ್ರೈಮ್‌, ರೆಡ್‌ಮಿ 8A ಡ್ಯುಯೆಲ್‌, ಮತ್ತು ರೆಡ್‌ಮಿ ನೋಟ್‌ 9 ಸ್ಮಾರ್ಟ್‌ಫೋನ್‌ಗಳಿಗೆ ದೀಪಾವಳಿ ಸೇಲ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ದೊರೆಯಲಿದೆ. ಜೊತೆಗೆ ಫ್ಲಿಪ್‌ಕಾರ್ಟ್ ಸೇಲ್‌ ಸಮಯದಲ್ಲಿ ಮೋಟೋ G40, ಮೋಟೋ G60, ಮೊಟೊರೊಲಾ E7 ಪವರ್ ಮತ್ತು ಮೋಟೋ G40 ಫ್ಯೂಷನ್ ಮೇಲೆ ಫ್ಲಿಪ್‌ಕಾರ್ಟ್ ರಿಯಾಯಿತಿಗಳನ್ನು ಪಡೆಯುವ ಸಾಧ್ಯತೆಯಿದೆ. ಎಲ್ಲಾ ಹೊಸ ವಿಸ್ತರಣೆ ಅಥವಾ ದೀಪಾವಳಿ ಮಾರಾಟದ ಹೊಸ ಆವೃತ್ತಿಯ ಪ್ರಕಟಣೆಯು ಅಮೆಜಾನ್‌ನ ಒಂದು ತಿಂಗಳ ಅವಧಿಯ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನ ಮೊದಲ ಫಲಿತಾಂಶವಾಗಿದೆ, ಇದು ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭವಾಯಿತು ಮತ್ತು ಈ ತಿಂಗಳ ಅಂತ್ಯದವರೆಗೆ ಮುಂದುವರಿಯುತ್ತದೆ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಆಫರ್‌ ಪಡೆದುಕೊಂಡಿರುವ ಮೋಟೋ G60 ಸ್ಮಾರ್ಟ್‌ಫೋನ್‌ 6.80-ಇಂಚಿನ ಮ್ಯಾಕ್ಸ್ ವಿಷನ್ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ HDR10 ಅನ್ನು ಬೆಂಬಲಿಸಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732ಜಿ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 6GB RAM ಮತ್ತು 128GB ಇಂಟರ್‌ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು. ಇದು 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಮೋಟೋ

ಮೋಟೋ G40 ಫ್ಯೂಷನ್ ಮೋಟೋ G40 ಫ್ಯೂಷನ್ ಸ್ಮಾರ್ಟ್‌ಫೋನ್‌ ಮೂಲ ಬೆಲೆ 16,999ರೂ. ಆಗಿದೆ. ದೀಪಾವಳಿ ಸೇಲ್‌ನಲ್ಲಿ 12,999ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.80 ಇಂಚಿನ ಮ್ಯಾಕ್ಸ್ ವಿಷನ್ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಹೆಚ್‌ಡಿಆರ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732ಜಿ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇದು ಬೃಹತ್ 6000 mAh ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ.

Most Read Articles
Best Mobiles in India

English summary
Flipkart big diwali sale starts: Massive deals on Apple iPhones and Xiaomi smartphones.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X