ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಡಿಸ್ಕೌಂಟ್‌!

|

ಜನಪ್ರಿಯ ಇ-ಕಾಮರ್ಸ್‌ ಸೈಟ್‌ ಫ್ಲಿಪ್‌ಕಾರ್ಟ್‌ ಮತ್ತೊಮ್ಮೆ ತನ್ನ ಆನ್‌ಲೈನ್‌ ಗ್ರಾಹಕರಿಗಾಗಿ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಅನ್ನು ಹೊತ್ತು ತಂದಿದೆ. ಭಾರತದಲ್ಲಿ ಸ್ವಾತಂತ್ರ ದಿನಾಚರಣೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ರಿಯಾಯಿತಿ ಸೇಲ್‌ ಅನ್ನು ಆಯೋಜಿಸಿದೆ. ಇದಕ್ಕಾಗಿ ಇದೇ ಆಗಸ್ಟ್‌ 5ರಿಂದ ಬಿಗ್‌ ಸೇವಿಂಗ್‌ ಡೇಸ್‌ ಆಯೋಜಿಸಿದ್ದು, ಇದು ಆಗಸ್ಟ್‌ 9 ರವರೆಗೆ ನಡೆಯಲಿದೆ. ಇನ್ನು ಈ ಸೇಲ್‌ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಇಂದಿನಿಂದಲೇ ಲೈವ್ ಆಗಿದೆ. ಜೊತೆಗೆ ಇಂದು ಮಧ್ಯರಾತ್ರಿಯಿಂದ ಎಲ್ಲರಿಗೂ ಲಭ್ಯವಿರುತ್ತದೆ.

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಮತ್ತೊಮ್ಮೆ ತನ್ನ ಬಿಗ್‌ ಸೇವಿಂಗ್‌ ಡೇಸ್‌ 2021 ಸೇಲ್‌ ಅನ್ನು ಆಯೋಜಿಸಿದೆ. ಇನ್ನು ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು, ಧರಿಸಬಹುದಾದ ವಸ್ತುಗಳು ಮತ್ತು ಇತರ ಎಲೆಕ್ಟ್ರಾನಿಕ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ನಲ್ಲಿ ಲಭ್ಯವಿರುವ ಕೆಲವು ಉತ್ತಮ ಡೀಲ್‌ಗಳು ಮತ್ತು ಆಫರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಆಪಲ್ ಐಫೋನ್ 12 ಮಿನಿ

ಆಪಲ್ ಐಫೋನ್ 12 ಮಿನಿ

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ನಲ್ಲಿ ಆಪಲ್‌ನ ಐಫೋನ್ 12 ಮಿನಿ 64GB ರೂಪಾಂತರದ ಆಯ್ಕೆಯನ್ನು ನೀವು ಕೇವಲ 59,999 (MRP ರೂ. 69,900) ರೂ ಗಳಿಗೆ ಖರೀದಿಸಬಹುದಾಗಿದೆ. ಆದರೆ ನೀವು ಬಂಡಲ್ ವಿನಿಮಯ ಮತ್ತು ಪಾವತಿ ಕೊಡುಗೆಗಳನ್ನು ಬಳಸಿದರೆ, ನೀವು ಒಟ್ಟಾರೆ ಉತ್ತಮ ಬೆಲೆಯೊಂದಿಗೆ ಕೊನೆಗೊಳ್ಳುವ ಸಾಧ್ಯತೆಯಿದೆ. ಫ್ಲಿಪ್‌ಕಾರ್ಟ್‌ನ ಐಫೋನ್ 12 ಮಿನಿಯೊಂದಿಗೆ ಸಂಯೋಜಿತ ವಿನಿಮಯ ಕೊಡುಗೆ ಮೂಲಕ 15,000ರೂ. ವರೆಗಿನ ಒಪ್ಪಂದವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು ಹೆಚ್ಚುವರಿಯಾಗಿ 10 ಶೇಕಡಾ ರಿಯಾಯಿತಿ ಪಡೆಯಬಹುದು.

ಆಪಲ್ ಐಫೋನ್ 12

ಆಪಲ್ ಐಫೋನ್ 12

ಆಪಲ್‌ನ ಐಫೋನ್ 12 64GB ಆಯ್ಕೆ ಮತ್ತೆ ರಿಯಾಯಿತಿ ದರದಲ್ಲಿ 67,999 (MRP ರೂ. 79,900)ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಅಲ್ಲದೆ ನೀವು ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳಬಹುದು. ಇದಲ್ಲದೆ ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್ ಹೊಂದಿರುವವರು 10 ಶೇಕಡಾ ಹೆಚ್ಚುವರಿ ರಿಯಾಯಿತಿ ಪಡೆಯಬಹುದು.

ಆಸುಸ್ ROG ಫೋನ್ 3

ಆಸುಸ್ ROG ಫೋನ್ 3

ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ಆಸುಸ್‌ನ ಆರ್‌ಒಜಿ ಫೋನ್ 3 ಮತ್ತೆ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಕೇವಲ 39,999 (MRP ರೂ. 55,999) ರೂ ಗಳಿಗೆ ನೀವು ಖರೀದಿಸಬಹುದಾಗಿದೆ. ಇನ್ನು ಆಸುಸ್ ಆರ್‌ಒಜಿ ಫೋನ್ 3 64 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 865+ ಪ್ರೊಸೆಸರ್‌ ಸಾಮರ್ಥ್ಯ ಪಡೆದುಕೊಂಡಿದೆ.

ಮೊಟೊರೊಲಾ G10 ಪವರ್

ಮೊಟೊರೊಲಾ G10 ಪವರ್

ಮೊಟೊರೊಲಾ G10 ಪವರ್ ಕೂಡ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ನಲ್ಲಿ 9,999 (MRP ರೂ. 12,999)ರಿಯಾಯಿತಿ ದರದಲ್ಲಿ ದೊರೆಯಲಿದೆ. ಬಂಡಲ್ ಮಾಡಿದ ವಿನಿಮಯ ಕೊಡುಗೆಯಲ್ಲಿ 9,450 ರೂ. ವರೆಗಿನ ಹೆಚ್ಚುವರಿ ರಿಯಾಯಿತಿಯನ್ನು ನೀಡುತ್ತದೆ. ಇನ್ನು ಐಸಿಐಸಿಐ ಬ್ಯಾಂಕ್ ಕಾರ್ಡುದಾರರು ಹೆಚ್ಚುವರಿ ಶೇಕಡಾ 10 ರಷ್ಟು ರಿಯಾಯಿತಿ ಪಡೆಯಬಹುದು.

ರಿಯಲ್‌ಮಿ 8 (ರೂ. 13,999)

ರಿಯಲ್‌ಮಿ 8 (ರೂ. 13,999)

ರಿಯಲ್‌ಮಿ 8 (4GB, 128GB) ಸ್ಮಾರ್ಟ್‌ಫೋನ್‌ ಕೂಡ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ 13,999 (MRP ರೂ. 16,999)ರೂ ಬೆಲೆಗೆ ದೊರೆಯಲಿದೆ. ಇನ್ನು ನೀವು ಬಂಡಲ್ ಮಾಡಿದ ಎಕ್ಸ್‌ಚೇಂಜ್ ಆಫರ್‌ನಲ್ಲಿ 13,450.ರೂ ವರೆಗೆ ರಿಯಾಯಿತಿ ಕೂಡ ಪಡೆಯಬಹುದು. ರಿಯಲ್‌ಮಿ 8 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ.

Most Read Articles
Best Mobiles in India

English summary
Flipkart Big Saving Days 2021 sale is back with an Independence Day special flavour.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X