ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್: ಈ ಫೋನ್‌ಗಳಿಗೆ ಭಾರೀ ಡಿಸ್ಕೌಂಟ್‌!

|

ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಹಲವು ಆಫರ್‌ಗಳ ಮೂಲಕ ಗ್ರಾಹಕರ ಮನ ಗೆದ್ದಿದೆ. ಫ್ಲಿಪ್‌ಕಾರ್ಟ್‌ ಇದೀಗ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಘೋಷಿಸಿದೆ. ಈ ಸೇಲ್‌ ಮೇಳವು ನಾಳೆಯಿಂದ (ಆಗಷ್ಟ 5) ಪ್ರಾರಂಭವಾಗಲಿದ್ದು, ಆಗಷ್ಟ 9ರ ವರೆಗೂ ನಡೆಯಲಿದೆ. ಹಾಗೆಯೇ ಈ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರಿಸ್‌ಗಳ ಮೇಲೆ 80 ಪ್ರತಿಶತದಷ್ಟು ರಿಯಾಯಿತಿ ಮತ್ತು ಟಿವಿ ಮತ್ತು ಉಪಕರಣಗಳ ಮೇಲೆ 75% ರಷ್ಟು ರಿಯಾಯಿತಿ ಲಭ್ಯವಾಗಲಿದೆ.

ನಾಳೆಯಿಂದ

ಹೌದು, ಫ್ಲಿಪ್‌ಕಾರ್ಟ್ ಈಗ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಘೋಷಿಸಿದೆ. ನಾಳೆಯಿಂದ ಶುರುವಾಗುವ ಈ ಸೇಲ್ ಒಟ್ಟು ಐದು ದಿನಗಳವರೆಗೆ ಇರುತ್ತದೆ. ಈ ಸೇಲ್‌ನಲ್ಲಿ ಆಕರ್ಷಕ ಆಫರ್‌ಗಳು ಲಭ್ಯವಾಗುತ್ತವೆ. ಇದರೊಂದಿಗೆ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳು ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 10% ರಿಯಾಯಿತಿಯನ್ನು ಒಳಗೊಂಡಿರುತ್ತದೆ. ಹಾಗೆಯೇ ಯಾವುದೇ ವೆಚ್ಚದ ಇಎಂಐ ಆಯ್ಕೆಗಳು ಸಿಗಲಿವೆ. ಹಾಗಾದರೇ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟದ ವೇಳೆ ಅತ್ಯುತ್ತಮ ಡೀಲ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಸುಸ್ ROG ಫೋನ್ 3

ಆಸುಸ್ ROG ಫೋನ್ 3

ಆಸುಸ್ ROG ಫೋನ್ 3 ಈ ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ಭರ್ಜರಿ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. 46,999ರೂ. ಬೆಲೆ ಇರುವ ಈ ಫೋನ್ 39,999ರೂ.ಗಳ ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಮೊಟೊರೊಲಾ ರೇಜರ್

ಮೊಟೊರೊಲಾ ರೇಜರ್

74,999ರೂ.ಗಳ ಪ್ರೈಸ್‌ ಟ್ಯಾಗ್‌ ಹೊಂದಿರುವ ಮೊಟೊರೊಲಾ ರೇಜರ್ ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ಒಟ್ಟು 20,000ರೂ.ಗಳ ಡಿಸ್ಕೌಂಟ್‌ ಪಡೆದಿದೆ. ಸದ್ಯ 54,999ರೂ.ಗಳ ಆಫರ್‌ ದರದಲ್ಲಿ ಕಾಣಿಸಿಕೊಂಡಿದೆ.

ಶಿಯೋಮಿ ಮಿ 10T ಫೋನ್

ಶಿಯೋಮಿ ಮಿ 10T ಫೋನ್

ಶಿಯೋಮಿ ಕಂಪನಿಯ ಮಿ 10T ಫೋನ್ ಸಹ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ಭರ್ಜರಿ ರಿಯಾಯಿತಿ ಪಡೆದಿದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ಈ ಫೋನ್ 24,499ರೂ.ಗಳ ಆರಂಭಿಕ ದರದಲ್ಲಿ ಕಾಣಿಸಿಕೊಂಡಿದೆ.

ಮೊಟೊ G40 ಮತ್ತು ಮೊಟೊ G60

ಮೊಟೊ G40 ಮತ್ತು ಮೊಟೊ G60

ಜನಪ್ರಿಯ ಮೊಟೊರೊಲಾ ಕಂಪನಿಯ ಮೊಟೊ G40 ಫೋನ್ 1000ರೂ.ಗಳ ಡಿಸ್ಕೌಂಟ್‌ ಪಡೆದಿದೆ. 14,499ರೂ. ಪ್ರೈಸ್‌ಟ್ಯಾಗ್ ಹೊಂದಿದ್ದ ಈ ಫೋನ್ ಈಗ 13,499ರೂ.ಗಳ ದರದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಮೊಟೊ G60 ಸಹ 1000ರೂ.ಗಳ ರಿಯಾಯಿತಿ ಪಡೆದಿದ್ದು, 16,999ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಇನ್ಫಿನಿಕ್ಸ್ ಹಾಟ್‌ 10S

ಇನ್ಫಿನಿಕ್ಸ್ ಹಾಟ್‌ 10S

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ಇನ್ಫಿನಿಕ್ಸ್ ಹಾಟ್‌ 10S ಫೋನ್ 500ರೂ.ಗಳ ರಿಯಾಯಿತಿ ಪಡೆದಿದೆ. ಸದ್ಯ ಕೊಡುಗೆಯಲ್ಲಿ ಈ ಫೋನ್ 9,499ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ.

Most Read Articles
Best Mobiles in India

English summary
Flipkart Big Saving Days Sale: Best Deals These New Smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X