ಡಿಸ್ಕೌಂಟ್‌ನಲ್ಲಿ ಹೊಸ ಫೋನ್‌ ಖರೀದಿಸಬೇಕೆ?..ಈ ಚಾನ್ಸ್‌ ಮಿಸ್‌ ಮಾಡ್ಕೊಬೇಡಿ!

|

ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ಏನಾದರೊಂದು ವಿಶೇಷ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿರುತ್ತದೆ. ಈ ನಿಟ್ಟಿನಲ್ಲಿ ಈಗ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್‌ ಸೇಲ್ ಮೇಳವನ್ನು ಆಯೋಜಿಸಿದೆ. ಈ ವಿಶೇಷ ಸೇಲ್‌ ಮೇಳದಲ್ಲಿ ನೂತನ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಡಿಸ್ಕೌಂಟ್ ತಿಳಿಸಲಾಗಿದೆ. ಹಾಗೆಯೇ ಕೆಲವು ಆಯ್ದ ಬ್ಯಾಂಕ್‌ಗಳಿಂದ ನೋ ಕಾಸ್ಟ್ ಇಎಮ್‌ಐ ಹಾಗೂ ಇನ್‌ಸ್ಟಂಟ್ ಡಿಸ್ಕೌಂಟ್ ದೊರೆಯಲಿದೆ. ಹೀಗಾಗಿ ಡಿಸ್ಕೌಂಟ್‌ನಲ್ಲಿ ಫೋನ್ ಖರೀದಿಸಲು ಇದು ಸಕಾಲ ಆಗಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ತಾಣವು ತನ್ನ ಜನಪ್ರಿಯ ಬಿಗ್ ಸೇವಿಂಗ್ ಡೇಸ್‌ ಸೇಲ್ ಮೇಳವನ್ನು ಈಗ ಮತ್ತೆ ಆಯೋಜಿಸಿದೆ. ಈ ಸೇಲ್ ಮೇಳವು ಇಂದು (ಆ.6) ರಾತ್ರಿಯಿಂದ ಶುರುವಾಗಲಿದ್ದು, ಇದೇ ಆಗಸ್ಟ್ 10ರ ವರೆಗೂ ಚಾಲ್ತಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಹಾಗೆಯೇ ಎಕ್ಸ್‌ಚೇಂಜ್ ಆಫರ್‌ ಸಹ ಲಭ್ಯವಾಗಲಿದೆ. ಇನ್ನು ಸಿಟಿ ಬ್ಯಾಕ್ ಹಾಗೂ ಐಸಿಐಸಿಐ ಬ್ಯಾಂಕ್ ಕಾರ್ಡ್‌ ಬಳಸಿ ಖರೀದಿಸಿದರೇ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಾಗಲಿದೆ. ಹಾಗಾದರೇ ಈ ಸೇಲ್ ಮೇಳದಲ್ಲಿ ಡಿಸ್ಕೌಂಟ್ ಪಡೆದ ಪ್ರಮುಖ ಫೋನ್‌ಗಳ ಬಗ್ಗೆ ನೋಡೋಣ ಬನ್ನಿರಿ.

ಐಫೋನ್ XR

ಐಫೋನ್ XR

ಐಫೋನ್ XR ಫೋನ್ 4.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಬಯೋನಿಕ್ ಎ11 ಪ್ರೊಸೆಸರ್ ಒಳಗೊಂಡಿದೆ. ಈ ಫ್ಲಿಪ್‌ಕಾರ್ಟ್‌ನ ಈ ಸೇಲ್ ಮೇಳದಲ್ಲಿ ಐಫೋನ್ XR 44,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 13,450ರೂ. ವರೆಗೂ ಎಕ್ಸ್‌ಚೇಂಜ್ ಕೊಡುಗೆ ಲಭ್ಯವಾಗಲಿದೆ.

ಐಫೋನ್ SE 2020

ಐಫೋನ್ SE 2020

ಹೊಸದಾಗಿ ಬಿಡುಗಡೆ ಆಗಿರುವ ಆಪಲ್ ಐಫೋನ್‌ SE 2020 ಸಹ ಈ ಸೇಲ್ ಮೇಳದಲ್ಲಿ ಡಿಸ್ಕೌಂಟ್‌ ಪಡೆದಿದೆ. ಐಫೋನ್ SE 2020 ಫೋನ್ 36,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ದೊರೆಯಲಿದೆ. ಈ ಐಫೋನ್ ಬಯೋನಿಕ್ A13 ಪ್ರೊಸೆಸರ್ ಹೊಂದಿದ್ದು, 4.7 ಇಂಚಿನ ಸ್ಕ್ರೀನ್ ಒಳಗೊಂಡಿದೆ.

ಮೊಟೊರೊಲಾ ರೇಜರ್

ಮೊಟೊರೊಲಾ ರೇಜರ್

ಜನಪ್ರಿಯ ಮೊಟೊರೊಲಾ ಬಿಡುಗಡೆ ಮಾಡಿರುವ ಮೊಟೊರೊಲಾ ರೇಜರ್ ಫೋನ್‌ ಸಹ ರಿಯಾಯಿತಿ ಪಡೆದಿದೆ. 1,49,999ರೂ. ಬೆಲೆಯಲ್ಲಿ ಲಾಂಚ್ ಆಗಿದ್ದ ಈ ಫೋನ್ ಫ್ಲಿಪ್‌ಕಾರ್ಟ್‌ ಸೇಲ್ ಮೇಳದಲ್ಲಿ 104,999 ರೂ,ಗೆ ಲಭ್ಯವಾಗಲಿದೆ.

ರಿಯಲ್‌ಮಿ X2 ಪ್ರೊ

ರಿಯಲ್‌ಮಿ X2 ಪ್ರೊ

ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್‌ ನಲ್ಲಿ ರಿಯಲ್‌ಮಿ X2 ಪ್ರೊ ಸ್ಮಾರ್ಟ್‌ಫೋನ್‌ ರಿಯಾಯಿತಿ ಪಡೆದಿದೆ. ರಿಯಲ್‌ಮಿ X2 ಪ್ರೊ 256GB ಸ್ಟೋರೇಜ್ ವೇರಿಯಂಟ್‌ ಫೋನ್ 28,999ರೂ. ಪ್ರೈಸ್‌ನಲ್ಲಿ ದೊರೆಯಲಿದೆ. ಈ ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ.

ಪೊಕೊ X2

ಪೊಕೊ X2

ಇತ್ತೀಚಿನ ಪೊಕೊ X2 ಫೋನ್ ನಾಲ್ಕು ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾವು ಸೋನಿಯ IMX686 ಸೆನ್ಸಾರ್ ಒಳಗೊಂಡ 64ಎಂಪಿ ಕ್ಯಾಮೆರಾ ಆಗಿದೆ. ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್‌ ನಲ್ಲಿ 17,499ರೂ.ಗಳಿಗೆ ಲಭ್ಯ.

ಇತರೆ ಆಫರ್‌

ಇತರೆ ಆಫರ್‌

ಒಪ್ಪೋ ರೆನೋ 2 F ಫೋನ್ 17,990ರೂ. ಪ್ರೈಸ್‌ಟ್ಯಾಗ್ ಪಡೆದಿದೆ. ಹಾನರ್ ಬ್ಯಾಂಡ್ 5 ಡಿವೈಸ್‌ 1999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಹಾಗೆಯೇ ಹುವಾವೆ ಬ್ಯಾಂಡ್ 2 ಡಿವೈಸ್‌ 1499ರೂ. ದರದಲ್ಲಿ ದೊರೆಯಲಿದೆ. ಇನ್ನು ರಿಯಲ್‌ಮಿ ಬ್ಯಾಂಡ್‌ 1299ರೂ.ಗಳಿಗೆ ಸಿಗಲಿದೆ.

Most Read Articles
Best Mobiles in India

English summary
Flipkart Big Saving Days sale Live: The sale commenced at 12 midnight on August 6 and will go on till August 10.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X