ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಗ್‌ ಡೇಸ್‌ ಸೇಲ್‌ ದಿನಾಂಕ ನಿಗದಿ!

|

ಜನಪ್ರಿಯ ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್ ಆನ್‌ಲೈನ್‌ ಗ್ರಾಹಕರಿಗೆ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಮತ್‌ಎಂಡ್‌, ವಿಕೆಂಡ್‌ ಸ್ಪೇಷಲ್‌ ಸೇಲ್‌ಗಳನ್ನು ನಡೆಸುವ ಫ್ಲಿಪ್‌ಕಾರ್ಟ್‌ ಇದೀಗ ಬಿಗ್ ಸೇವಿಂಗ್ ಡೇಸ್ ಸೇಲ್‌ ನಡೆಸಲು ಡೇಟ್‌ ಫಿಕ್ಸ್‌ ಮಾಡಿದೆ. ಇನ್ನು ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಗ್‌ ಡೇಸ್‌ ಸೇಲ್‌ ಇದೇ ಜುಲೈ 25 ರಿಂದ ಜುಲೈ 29 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳಲ್ಲಿ ಡೀಲ್ ಮತ್ತು ರಿಯಾಯಿತಿಯನ್ನು ನೀಡಲಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಇದೇ ಜುಲೈ 25 ರಿಂದ ಜುಲೈ 29 ರವರೆಗೆ ನಡೆಯಲಿದೆ. ಇನ್ನು ಈ ಸೇಲ್‌ ಜುಲೈ 24 ರಿಂದ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಒಂದು ದಿನದ ಮುಂಚೆಯೇ ಒಪ್ಪಂದಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಶಾಪರ್‌ಗಳು ರಿಯಲ್‌ಮಿ, ಪೊಕೊ, ವಿವೊ, ಮೊಟೊರೊಲಾ ಮತ್ತು ಇತರ ತಯಾರಕರ ಮೇಲೆ ರಿಯಾಯಿತಿಯನ್ನು ನಿರೀಕ್ಷಿಸಬಹುದು. ಇನ್ನುಳಿದಂತೆ ಈ ಸೇಲ್‌ನಲ್ಲಿ ಯಾವೆಲ್ಲಾ ಪ್ರಾಡಕ್ಟ್‌ಗಳಿಗೆ ರಿಯಾಯಿತಿಯನ್ನು ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ 80% ರಿಯಾಯಿತಿ ನೀಡುತ್ತದೆ. ಜೊತೆಗೆ ಟಿವಿಗಳು ಮತ್ತು ಉಪಕರಣಗಳಿಗೆ 75% ರಿಯಾಯಿತಿ ನೀಡುತ್ತದೆ. ಇನ್ನು ಈ ಸೇಲ್‌ನಲ್ಲಿ ಎಲ್ಲಾ ಶಾಪರ್‌ಗಳು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳು ಮತ್ತು ಇಎಂಐ ವಹಿವಾಟುಗಳೊಂದಿಗೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಪಡೆಯಬಹುದು. ಇದಲ್ಲದೆ ನೋ ಕಾಸ್ಟ್‌ ಇಎಂಐ ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳು ದೊರೆಯಲಿದೆ.

ಸ್ಮಾರ್ಟ್‌ಫೋನ್‌

ಇನ್ನು ಸ್ಮಾರ್ಟ್‌ಫೋನ್‌ಗಳ ವಿಷಯದಲ್ಲಿ ರಿಯಲ್‌ಮಿ C20 6,499,ರೂ. ಗೆ ಖರೀದಿಸಬಹುದಾಗಿದೆ. ಇದರಲ್ಲಿ 500ರೂ ರಿಯಾಯಿತಿ ದೊರೆಯಲಿದೆ. ಪೊಕೊ X3 ಪ್ರೊ ಸ್ಮಾರ್ಟ್‌ಫೋನ್‌ 18,999.ರೂ ಬದಲು 17,249ರೂ. ಗೆ ದೊರೆಯಲಿದೆ. ರಿಯಲ್‌ಮಿ X7 5G ಸ್ಮಾರ್ಟ್‌ಫೋನ್‌ 18,999 ರೂ.ಬೆಲೆಗೆ ಖರೀದಿಸಬಹುದಾಗಿದೆ. ಇದರ ಆರಂಭಿಕ ಬೆಲೆ 19,999ರೂ.ಆಗಿದೆ. ಇನ್ನು ಮೋಟೋ G40 ಫ್ಯೂಷನ್ 14,499 ರೂ. ಬದಲಿಗೆ 13,499ರೂ ದೊರೆಯಲಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನ ಸಮಯದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F62 ಅನ್ನು ಸಹ ರಿಯಾಯಿತಿ ನೀಡಲಾಗುವುದು ಆದರೆ ಆಫರ್ ಬೆಲೆಯನ್ನು ಇನ್ನೂ ಹಂಚಲಾಗಿಲ್ಲ.

ಫ್ಲಿಪ್‌ಕಾರ್ಟ್

ಇದಲ್ಲದೆ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ, ಫ್ಲಿಪ್‌ಕಾರ್ಟ್ ಲ್ಯಾಪ್‌ಟಾಪ್‌ಗಳು, ಹೆಡ್‌ಫೋನ್‌ಗಳು, ಸೌಂಡ್‌ಬಾರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಹೆಚ್ಚಿನವುಗಳ ಉತ್ಪನ್ನಗಳಿಗೆ 80% ರಿಯಾಯಿತಿ ನೀಡುತ್ತದೆ. ಆಯ್ದ ಲ್ಯಾಪ್‌ಟಾಪ್‌ಗಳು ಇತರ ವ್ಯವಹಾರಗಳಲ್ಲಿ 40 ಪ್ರತಿಶತದವರೆಗೆ, ಹೆಡ್‌ಫೋನ್‌ಗಳು 70 ಪ್ರತಿಶತದವರೆಗೆ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ. ಆಪಲ್ ಐಪ್ಯಾಡ್ ಮಾದರಿಗಳು, ಒನ್‌ಪ್ಲಸ್ ಬ್ಯಾಂಡ್ 2,499ರೂ. ಬೋಟ್, ಮೊಟೊರೊಲಾ ಮತ್ತು ಇತರ ಕಂಪನಿಗಳ ಸೌಂಡ್‌ಬಾರ್‌ಗಳು, ರೂಟರ್‌ಗಳು ಮತ್ತು ಹೆಚ್ಚಿನ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎನ್ನಲಾಗಿದೆ.

Most Read Articles
Best Mobiles in India

English summary
Flipkart Big Saving Days sale will start one day early, July 24, for Flipkart Plus members.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X