ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ ಈ ಸ್ಮಾರ್ಟ್‌ಟಿವಿಗಳಿಗೆ ಬಿಗ್‌ ಡಿಸ್ಕೌಂಟ್‌!

|

ಜನಪ್ರಿಯ ಇ-ಕಾಮರ್ಸ್‌ ಸೈಟ್‌ ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗಾಗಿ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಹಬ್ಬ ಹರಿದಿನಗಳಲ್ಲಿ ಡಿಸ್ಕೌಂಟ್‌ ಮೇಳಗಳ ಮೂಲಕ ಗಮನ ಸೆಳೆದಿದೆ. ನವರಾತ್ರಿ ಪ್ರಯುಕ್ತ ಬಿಗ್‌ ಬಿಲಿಯನ್‌ ಡೇಸ್‌ ಆಯೋಜಿಸಿದ್ದ ಫ್ಲಿಪ್‌ಕಾರ್ಟ್‌ ಇದೀಗ ಬಿಗ್‌ ದೀಪಾವಳಿ ಸೇಲ್‌ ನಡೆಸುತ್ತಿದೆ. ಸದ್ಯ ಬಿಗ್‌ ದೀಪಾವಳಿ ಸೇಲ್‌ ಈಗಾಗಲೇ ಲೈವ್‌ ಆಗಿದ್ದು ಶಾಪಿಂಗ್‌ ಪ್ರಿಯರಿಗೆ ಭರ್ಜರಿ ಡಿಸ್ಕೌಂಟ್‌ ನೀಡುತ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಆಯ್ದ ಗ್ಯಾಜೆಟ್ಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಸೇರಿದಂತೆ ಹಲವು ಆಯ್ಕೆಯ ಸ್ಮಾರ್ಟ್‌ಡಿವೈಸ್‌ಗಳ ಮೇಲೆ ರಿಯಾಯಿತಿ ಲಭ್ಯವಿದೆ. ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಮಿಸ್‌ ಮಾಡಿಕೊಂಡವರಿಗೆ ಇದು ಮತ್ತೊಂದು ಅವಕಾಶವಾಗಿದೆ. ಇನ್ನು ದೀಪಾವಳಿಯ ಸಂಭ್ರಮದಲ್ಲಿ ನಿಮ್ಮ ಮನೆಗೆ ಹೊಸ ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಹೆಚ್ಚಿನ ಡಿಸ್ಕೌಂಟ್‌ ಸಿಗುತ್ತಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್ ಬಿಗ್‌ ದೀಪಾವಳಿ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒನ್‌ಪ್ಲಸ್ ವೈ ಸಿರೀಸ್‌ (32 ಇಂಚಿನ ಸ್ಮಾರ್ಟ್ ಟಿವಿ)

ಒನ್‌ಪ್ಲಸ್ ವೈ ಸಿರೀಸ್‌ (32 ಇಂಚಿನ ಸ್ಮಾರ್ಟ್ ಟಿವಿ)

ಒನ್‌ಪ್ಲಸ್ ವೈ-ಸರಣಿಯ 32 ಇಂಚಿನ ಸ್ಮಾರ್ಟ್‌ಟಿವಿ ಫ್ಲಿಪ್‌ಕಾಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಕೇವಲ 15,999ರೂ.ಗಳಿಗೆ ಲಭ್ಯವಾಗುತ್ತಿದೆ. ಇನ್ನು ಈ ಸ್ಮಾರ್ಟ್ ಟಿವಿ 60Hz ರಿಫ್ರೇಶ್‌ ರೇಟ್‌ ಹೊಂದಿರುವ HD ಸ್ಕ್ರೀನ್‌ ಹೊಂದಿದೆ. ಇದು 20W ಸೌಂಡ್‌ ಪ್ರೊಡಕ್ಷನ್‌ ಹೊಂದಿದೆ ಮತ್ತು ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು DTS-HD ಧ್ವನಿ ತಂತ್ರಜ್ಞಾನವನ್ನು ಬೆಂಬಲಿಸಲಿದ್ದು, ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌, ಪ್ರೈಮ್‌ ವೀಡಿಯೊ ವನ್ನು ಬೆಂಬಲಿಸಲಿದೆ.

ಮಿ 4A ಹೆಚ್‌ಡಿ ರೆಡಿ ಸ್ಮಾರ್ಟ್ ಟಿವಿ

ಮಿ 4A ಹೆಚ್‌ಡಿ ರೆಡಿ ಸ್ಮಾರ್ಟ್ ಟಿವಿ

ಮಿ 4A ಹೆಚ್‌ಡಿ ರೆಡಿ ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್‌ ದೀಪಾವಳಿ ಸೇಲ್‌ನಲ್ಲಿ ನಿಮಗೆ ರಿಯಾಯಿತಿ ದರದಲ್ಲಿ ಲಭ್ಯವಾಗುವ ಸ್ಮಾರ್ಟ್‌ಟಿವಿಯಾಗಿದೆ. ಈ ಸ್ಮಾರ್ಟ್‌ಟಿವಿ 19,999ರೂ. ಮೂಲ ಬೆಲೆ ಹೊಂದಿದ್ದು, 22% ಡಿಸ್ಕೌಂಟ್‌ ಪಡೆದಿದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ನಿಮಗೆ ಕೇವಲ 15,499ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 32 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್‌ ಪಡೆದುಕೊಂಡಿದೆ. ಇದು 64-ಬಿಟ್ ಕ್ವಾಡ್-ಕೋರ್ ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. 1GB RAM, 8GB ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಕೂಡ ಜನಪ್ರಿಯ OTT ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ.

ಇಫಾಲ್ಕನ್ 32 ಇಂಚಿನ ಸ್ಮಾರ್ಟ್ ಟಿವಿ

ಇಫಾಲ್ಕನ್ 32 ಇಂಚಿನ ಸ್ಮಾರ್ಟ್ ಟಿವಿ

ಫ್ಲಿಪ್‌ಕಾರ್ಟ್‌ ದೀಪಾವಳಿ ಸೇಲ್‌ನಲ್ಲಿ ಇಫಾಲ್ಕನ್ ಸ್ಮಾರ್ಟ್‌ಟಿವಿ ಕೂಡ ರಿಯಾಯಿತಿ ಪಡೆದಿದೆ. ಇದು 60Hz ರಿಫ್ರೇಶ್‌ ರೇಟ್‌ ಹೊಂದಿರುವ A+ ಗ್ರೇಡ್ ಸ್ಕ್ರೀನ್‌ ಹೊಂದಿದೆ. ಈ ಸ್ಮಾರ್ಟ್‌ಟಿವಿ 64 ಬಿಟ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ರೂ 12,499 ಕ್ಕೆ ಖರೀದಿಸಬಹುದಾಗಿದೆ.

ರಿಯಲ್‌ಮಿ 32 ಇಂಚಿನ ಸ್ಮಾರ್ಟ್ ಟಿವಿ

ರಿಯಲ್‌ಮಿ 32 ಇಂಚಿನ ಸ್ಮಾರ್ಟ್ ಟಿವಿ

ರಿಯಲ್‌ಮಿ 32 ಇಂಚಿನ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ ದೀಪಾವಳಿ ಸೇಲ್‌ನಲ್ಲಿ 13,999ರೂ.ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 60Hz ರಿಫ್ರೇಶ್‌ ರೇಟ್‌ ಅನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಟಿವಿ ಇಂಟರ್‌ಬಿಲ್ಟ್‌ ಗೂಗಲ್ ಅಸಿಸ್ಟೆಂಟ್ ಮತ್ತು ಕ್ರೋಮ್‌ಕಾಸ್ಟ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ 24W ನ ಸೌಂಡ್‌ ಪ್ರೊಡಕ್ಷನ್‌ ಹೊಂದಿದೆ. ಜೊತೆಗೆ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್ ಸ್ಟಾರ್ ಮತ್ತು ಯೂಟ್ಯೂಬ್ ಅನ್ನು ಬೆಂಬಲಿಸಲಿದೆ.

ಮಿ ಟಿವಿ 4A ಪ್ರೊ HD ರೆಡಿ ಸ್ಮಾರ್ಟ್ ಟಿವಿ

ಮಿ ಟಿವಿ 4A ಪ್ರೊ HD ರೆಡಿ ಸ್ಮಾರ್ಟ್ ಟಿವಿ

ಮಿ ಟಿವಿ 4A ಪ್ರೊ HD ರೆಡಿ ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ 14,999 ರೂ.ಗಳಿಗೆ ಲಭ್ಯವಿದೆ. ಈ ಸ್ಮಾರ್ಟ್‌ಟಿವಿ HD ಡಿಸ್‌ಪ್ಲೇ ಹೊಂದಿದ್ದು, 60Hz ರಿಪ್ರೇಶ್‌ ರೇಟ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಟಿವಿ 20W ಸ್ಪೀಕರ್ ಔಟ್‌ಪುಟ್‌ ಹೊಂದಿದ್ದು, ಡಿಟಿಎಸ್-ಎಚ್‌ಡಿ ಬೆಂಬಲವನ್ನು ಹೊಂದಿದೆ. ಇನ್ನು ಈ ಟಿವಿ 1GB RAM ಮತ್ತು 8GB ಸ್ಟೋರೇಜ್ ಮೆಮೊರಿ ಸಾಮರ್ಥ್ಯವನ್ನು ಹೊಂದಿದೆ. Xiaomi ಯಿಂದ ಸ್ಮಾರ್ಟ್ ಟಿವಿ ಪೂರ್ವ ಲೋಡ್ ಮಾಡಲಾದ ಅಪ್ಲಿಕೇಶನ್‌ಗಳನ್ನು ಹೊಂದಿದೆ ಮತ್ತು 12 ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತದೆ.

Most Read Articles
Best Mobiles in India

English summary
best offers on Smart TVs under 20,000 at Flipkart Diwali sale.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X