ಈ ಸ್ಮಾರ್ಟ್‌ವಾಚ್‌ಗೆ Flipkart ನೀಡಿರುವ ಡಿಸ್ಕೌಂಟ್‌ ತಿಳಿದ್ರೆ, ನೀವು ಶಾಕ್‌ ಆಗ್ತೀರಾ!

|

ಜನಪ್ರಿಯ ಇ ಕಾಮರ್ಸ್‌ ತಾಣವಾದ ಫ್ಲಿಪ್‌ಕಾರ್ಟ್‌ ದೀಪಾವಳಿ ಹಬ್ಬದ ಪ್ರಯುಕ್ತ (Big Diwali sale) ಬಿಗ್ ದೀಪಾವಳಿ ಸೇಲ್ ಮೇಳವನ್ನು ಆಯೋಜಿಸಿದೆ. ಈ ಮಾರಾಟ ಮೇಳದಲ್ಲಿ ಗ್ಯಾಡ್ಜೆಟ್ಸ್‌ ಉತ್ಪನ್ನಗಳು ಸೇರಿದಂತೆ ಇತರೆ ಅನೇಕ ವಸ್ತುಗಳ ಮೇಲೆ ಆಕರ್ಷಕ ಆಫರ್ ಘೋಷಿಸಿದೆ. ಮುಖ್ಯವಾಗಿ ಸ್ಮಾರ್ಟ್‌ ವಾಚ್‌ ಡಿವೈಸ್‌ಗಳ ಮೇಲೂ ಬೊಂಬಾಟ್‌ ರಿಯಾಯಿತಿ ತಿಳಿಸಲಾಗಿದ್ದು, ಆ ಪೈಕಿ ಬೋಟ್‌ ಕಂಪನಿಯ ಇತ್ತೀಚಿಗಿನ ಸ್ಮಾರ್ಟ್‌ ವಾಚ್‌ ವೊಂದು ಬರೋಬ್ಬರಿ 3,991 ರೂ.ಗಳ ಡಿಸ್ಕೌಂಟ್ ಪಡೆದಿದೆ.

ಆಯೋಜಿಸಿರುವ

ಹೌದು, ಫ್ಲಿಪ್‌ಕಾರ್ಟ್‌ ತಾಣವು ಆಯೋಜಿಸಿರುವ (Big Diwali sale) ಬಿಗ್ ದೀಪಾವಳಿ ಸೇಲ್‌ ಸದ್ಯ ಚಾಲ್ತಿ ಇದೆ. ಈ ವೇಳದಲ್ಲಿ ಬೋಟ್‌ ಕಂಪನಿಯ (Boat Storm Smartwatch) ಬೋಟ್ ಸ್ಟಾರ್ಮ್ ಸ್ಮಾರ್ಟ್ ವಾಚ್ ಭರ್ಜರಿ ರಿಯಾಯಿತಿ ಪಡೆದಿದ್ದು, ಗ್ರಾಹಕರು ಈ ಡಿವೈಸ್‌ ಅನ್ನು ಜಸ್ಟ್‌ 449ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಆಫರ್ ಅವಧಿಯು ಅಕ್ಟೋಬರ್ 17 - ಅ.23 ಆಗಿದೆ.
ಈ ಡಿವೈಸ್‌ 24x7 ಹಾರ್ಟ್‌ ರೇಟ್ ಮಾನಿಟರ್, ಸ್ಲಿಪ್ ಮಾನಿಟರ್ ನಂತಹ ಸೌಲಭ್ಯಗಳನ್ನು ಒಳಗೊಂಡಿದೆ.

ದೀಪಾವಳಿ

ಪ್ರಮುಖ ಆಡಿಯೋ ಕಂಪನಿಗಳಲ್ಲಿ ಒಂದಾಗಿರುವ ಬೋಟ್‌ ಸಂಸ್ಥೆಯ ಈ ಸ್ಮಾರ್ಟ್‌ ವಾಚ್ ಬೆಲೆಯು ಎಮ್‌ಆರ್‌ಪಿ ಬೆಲೆಯು 5,990 ರೂ. ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ದೀಪಾವಳಿ ಹಬ್ಬದ ಸೇಲ್‌ನಲ್ಲಿ ಈ ಡಿವೈಸ್‌ ಬರೋಬ್ಬರಿ 3,991ರೂ. ರಿಯಾಯಿತಿ ಪಡೆದಿದೆ. ಡಿಸ್ಕೌಂಟ್‌ ಬಳಿಕ 'ಬೋಟ್ ಸ್ಟಾರ್ಮ್ ಸ್ಮಾರ್ಟ್ ವಾಚ್' 1,999ರೂ.ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಅದಾಗ್ಯೂ ಗ್ರಾಹಕರು ಹೆಚ್ಚುವರಿ ರಿಯಾಯಿತಿ ಬಯಸಿದರೇ, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಬಹುದು. ಏಕೆಂದರೇ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಬಳಸಿ ಈ ಸ್ಮಾರ್ಟ್‌ ವಾಚ್‌ ಖರೀದಿಸಿದರೇ ಹೆಚ್ಚುವರಿಯಾಗಿ 1,500ರೂ.ಗಳ ರಿಯಾಯಿತಿ ಲಭ್ಯವಾಗಲಿದೆ. ಆಗ ಈ ಸ್ಮಾರ್ಟ್‌ ವಾಚ್ 499ರೂ.ಗಳ ಬೆಲೆಗೆ ಸಿಗಲಿದೆ.

ಬೋಟ್‌ ಸ್ಟಾರ್ಮ್‌ ಸ್ಮಾರ್ಟ್ ವಾಚ್ ಫೀಚರ್ಸ್ ಮಾಹಿತಿ:

ಬೋಟ್‌ ಸ್ಟಾರ್ಮ್‌ ಸ್ಮಾರ್ಟ್ ವಾಚ್ ಫೀಚರ್ಸ್ ಮಾಹಿತಿ:

ಬೋಟ್‌ ಕಂಪೆನಿ ತನ್ನ ಬೋಟ್‌ ಸ್ಟಾರ್ಮ್‌ ಸ್ಮಾರ್ಟ್ ವಾಚ್ ಅನ್ನು ಫಿಟ್ನೆಸ್‌ ಪ್ರಿಯರಿಗೆ ಅತ್ಯುತ್ತಮ ಆಯ್ಕೆ ಎನಿಸಿದೆ. ಈ ಡಿವೈಸ್ ಒಟ್ಟು ಒಂಬತ್ತು ಕ್ರೀಡಾ ವಿಧಾನಗಳನ್ನು ಹೊಂದಿದ್ದು, 100 ಕ್ಕೂ ಹೆಚ್ಚು ಡೌನ್‌ಲೋಡ್ ಮಾಡಬಹುದಾದ ವಾಚ್ ಫೇಸ್‌ಗಳನ್ನು ಹೊಂದಿದೆ. ಮೆಟಲ್‌ ಬಾಡಿ ವಿನ್ಯಾಸವನ್ನು ಹೊಂದಿದ್ದು, ನಿಖರವಾದ ಆರೋಗ್ಯ ಮತ್ತು ಫಿಟ್‌ನೆಸ್ ಮೇಲ್ವಿಚಾರಣೆಯ ಅಗತ್ಯವಿರುವವರಿಗೆ ಈ ಸ್ಮಾರ್ಟ್ ವಾಚ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಕರ್ವ್ಡ್

ಈ ವಾಚ್‌ 1.3 ಇಂಚಿನ ಟಚ್ ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ ನೀವು ಡಯಲ್ ಅನ್ನು ಸಹ ಗ್ರಾಹಕೀಯಗೊಳಿಸಬಹುದಾಗಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ಒಟಿಎ ಅಪ್‌ಡೇಟ್ ಲಭ್ಯವಿದ್ದು, ಇದರ ಮೂಲಕ ಡೌನ್‌ಲೋಡ್ ಮಾಡಬಹುದಾದ 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬಳಸಲು ಲಭ್ಯವಿರುತ್ತವೆ. ಇನ್ನು ಬೋಟ್‌ ಸ್ಟಾರ್ಮ್‌ ವಾಚ್‌ 24/7 ಹೃದಯ ಬಡಿತ ಮಾನಿಟರ್ ಮತ್ತು ಇಂಟರ್‌ಬಿಲ್ಟ್‌ SPO2 ಮೇಲ್ವಿಚಾರಣಾ ವ್ಯವಸ್ಥೆಯನ್ನು ಹೊಂದಿದೆ. ಬೋಟ್ ಸ್ಟಾರ್ಮ್ 5 ATM ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು, ಇದು 50 ಮೀಟರ್ ನೀರೊಳಗಿನವರೆಗೆ ಸುರಕ್ಷಿತವಾಗಿರಲಿದೆ.

ಕಂಪನಿ

ಇದು ಮಾರ್ಗದರ್ಶಿ ಧ್ಯಾನಸ್ಥ ಉಸಿರಾಟದ ಮೋಡ್ ಅನ್ನು ಸಹ ಹೊಂದಿದ್ದು, ನಿಮ್ಮ ಹೃದಯ ಬಡಿತವನ್ನು ಕಡಿಮೆ ಮಾಡಲು ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ. ಇನ್ನು ಈ ಸ್ಮಾರ್ಟ್ ವಾಚ್‌ ಒಂಬತ್ತು ಸಕ್ರಿಯ ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಇದರಲ್ಲಿ ಓಟ, ವಾಕಿಂಗ್, ಸೈಕ್ಲಿಂಗ್, ಹೈಕಿಂಗ್, ಕ್ಲೈಂಬಿಂಗ್, ಫಿಟ್ನೆಸ್, ಟ್ರೆಡ್ ಮಿಲ್, ಯೋಗ ಮತ್ತು ಡೈನಾಮಿಕ್ ಸೈಕ್ಲಿಂಗ್ ಸೇರಿವೆ. ಅಲ್ಲದೆ ಈ ಒಂಬತ್ತು ಆಯ್ಕೆಗಳಲ್ಲಿ ಎಂಟು ಆಯ್ಕೆಗಳನ್ನು ಒಂದೇ ಸಮಯದಲ್ಲಿ ಆಯ್ಕೆ ಮಾಡಬಹುದು.

ಜೊತೆಗೆ

ಬೋಟ್ ಸ್ಟಾರ್ಮ್ ವಾಚ್‌ನಲ್ಲಿ ಸಿಲಿಕೋನ್ ಸ್ಟ್ರಾಪ್ ಆಯ್ಕೆಗಳನ್ನು ಹೊಂದಿದೆ. ಇದು ಚರ್ಮ ಮತ್ತು ಬೆವರು ಸ್ನೇಹಿಯಾಗಿದ್ದು, ಆರಾಮದಾಯಕವಾದ ಫಿಟ್ ನೀಡುತ್ತದೆ. ಇದು ನಿಮ್ಮ ಮ್ಯೂಸಿಕ್‌, ವಾಲ್ಯೂಮ್, ಟ್ರ್ಯಾಕ್‌ಗಳು ಮತ್ತು ಕರೆಗಳನ್ನು ನಿಯಂತ್ರಿಸಲು ಗಡಿಯಾರವನ್ನು ಬಳಸಲು ಅನುಮತಿಸುವ ಕ್ಯುರೇಟೆಡ್ ನಿಯಂತ್ರಣಗಳನ್ನು ಸಹ ಹೊಂದಿದೆ. ಜೊತೆಗೆ ಆನ್-ಬೋರ್ಡ್ ಫೈಂಡ್ ಮೈ ಫೋನ್ ಫೀಚರ್ಸ್‌ ಮತ್ತು ಸ್ಮಾರ್ಟ್ ನೊಟೀಫೀಕೇಷನ್‌ಗಳನ್ನು ಸ್ಮಾರ್ಟ್ ವಾಚ್‌ನಲ್ಲಿ ನೇರವಾಗಿ ಸ್ವೀಕರಿಸಬಹುದು. ವಾಚ್ ಅನ್ನು ನಿಯಂತ್ರಿಸಲು ಮತ್ತು ಕಸ್ಟಮೈಸ್ ಮಾಡಲು ನೀವು ಬೋಟ್ ಪ್ರೊಗಿಯರ್ ಅಪ್ಲಿಕೇಶನ್ ಅನ್ನು ಸಹ ಡೌನ್‌ಲೋಡ್ ಮಾಡಬಹುದು.

Most Read Articles
Best Mobiles in India

English summary
Flipkart Diwali Sale: You Can Buy BoAt Storm Smartwatch Under Rs. 500.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X