ಫ್ಲಿಪ್‌ಕಾರ್ಟ್‌ ದಸರಾ ಹಬ್ಬದ ಸೇಲ್‌: ಹೊಸ ಫೋನ್‌ಗಳಿಗೆ ಭಾರೀ ಡಿಸ್ಕೌಂಟ್‌!

|

ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿಯ ಕೊಡುಗೆಗಳನ್ನು ಘೋಷಿಸಿತ್ತು. ಅದರ ಬೆನ್ನಲ್ಲೇ ಇದೀಗ ದಸರಾ ಹಬ್ಬದ ಪ್ರಯುಕ್ತ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌ ಕೊಡುಗೆಗಳನ್ನು ತಿಳಿಸಿದೆ.

ದಸರಾ

ಹೌದು, ಜನಪ್ರಿಯ ಫ್ಲಿಪ್‌ಕಾರ್ಟ್‌ ತಾಣವು ದಸರಾ ಹಬ್ಬದ ಅಂಗವಾಗಿ ಆಯ್ದ ನೂತನ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ಅಂದಹಾಗೇ ಈ ವಿಶೇಷ ಸೇಲ್‌ ಇಂದು ಶುರುವಾಗಿದ್ದು, ಇದೇ ಅಕ್ಟೋಬರ್ 28ರ ವರೆಗೂ ಚಾಲ್ತಿಯಲ್ಲಿ ಇರಲಿದೆ. ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ದೊರೆಯಲಿದೆ. ಈ ಸೇಲ್‌ನಲ್ಲಿ ಐಫೋನ್, ರೆಡ್ಮಿ, ರಿಯಲ್‌ ಮಿ, ಪೊಕೊ, ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಕೊಡುಗೆಗಳು ಲಭ್ಯವಾಗಲಿವೆ. ಹಾಗಾದರೇ ಈ ಸೇಲ್‌ನಲ್ಲಿ ಆಫರ್‌ನಲ್ಲಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಐಫೋನ್ 11 ಪ್ರೊ

ಐಫೋನ್ 11 ಪ್ರೊ

ದಸರಾ ಹಬ್ಬದ ಅಂಗವಾಗಿ ಫ್ಲಿಪ್‌ಕಾರ್ಟ್‌ 64 ಜಿಬಿ ಸ್ಟೋರೇಜ್ ವೇರಿಯಂಟ್‌ನ ಐಫೋನ್ 11 ಪ್ರೊ ಫೋನ್ 79,999ರೂ.ಗಳಿಗೆ ಮಾರಾಟ ಮಾಡುತ್ತಿದೆ. ಹಾಗೆಯೇ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯವನ್ನು ನೀಡುತ್ತಿದೆ.

ಐಫೋನ್ SE (2020)

ಐಫೋನ್ SE (2020)

ದಸರಾ ಹಬ್ಬದ ಅಂಗವಾಗಿ ಫ್ಲಿಪ್‌ಕಾರ್ಟ್‌ 64 ಜಿಬಿ ಸ್ಟೋರೇಜ್ ವೇರಿಯಂಟ್‌ನ ಐಫೋನ್ SE (2020) ಫೋನ್ 34,999 ರೂ.ಗಳಿಗೆ ಮಾರಾಟ ಮಾಡುತ್ತಿದೆ. 128ಜಿಬಿ ವೇರಿಯಂಟ್‌ 39,999ರೂ. ಪ್ರೈಸ್‌ಟ್ಯಾಗ್ ಪಡೆದಿದೆ. ಹಾಗೆಯೇ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯವನ್ನು ನೀಡುತ್ತಿದೆ.

ರಿಯಲ್‌ ಮಿ C3

ರಿಯಲ್‌ ಮಿ C3

ರಿಯಲ್‌ ಮಿ C3 ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 1,000 ರಿಯಾಯಿತಿ ಪಡೆದಿದ್ದು, 3 ಜಿಬಿ + 32 ಜಿಬಿ ಮಾದರಿಗೆ 7,999 ಮತ್ತು ರೂ. 4 ಜಿಬಿ + 64 ಜಿಬಿ ಮಾದರಿಗೆ 8,999 ರೂ. ಲಭ್ಯವಾಗಲಿದೆ. ಈ ಫೋನ್ ಗ್ರೇ ಮತ್ತು ಫ್ರೋಜನ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

ಪೊಕೊ M2

ಪೊಕೊ M2

ಪೊಕೊ M2 ಫೋನ್ ಸಹ ದಸರಾ ಹಬ್ಬದ ಸ್ಪೆಷಲ್ಸ್ ಸೇಲ್‌ನಲ್ಲಿ 1,000ರೂ. ಡಿಸ್ಕೌಂಟ್‌ ಪಡೆದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 6 ಜಿಬಿ + 128 ಜಿಬಿ ಮಾದರಿಗೆ 11,499ರೂ. ಆಗಿದೆ. ಹಾಗೆಯೇ 6 ಜಿಬಿ + 64 ಜಿಬಿ ವೇರಿಯಂಟ್‌ 12,499ರೂ.ಗಳಿಗೆ ಲಭ್ಯವಾಗಲಿದೆ.

ರಿಯಲ್‌ ಮಿ ನಾರ್ಜೊ 20 ಪ್ರೊ

ರಿಯಲ್‌ ಮಿ ನಾರ್ಜೊ 20 ಪ್ರೊ

ದಸರಾ ಹಬ್ಬದ ವಿಶೇಷ ಸೇಲ್‌ನ ಅಂಗವಾಗಿ ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ ಮಿ ನಾರ್ಜೊ 20 ಪ್ರೊ ಫೋನ್ 1000ರೂ. ರಿಯಾಯಿತಿ ಪಡೆದಿದೆ. 6 ಜಿಬಿ + 64 ಜಿಬಿ ಮಾದರಿಗೆ 13,999 ಮತ್ತು ರೂ. 8 ಜಿಬಿ + 128 ಜಿಬಿ ಮಾದರಿಗೆ 15,999 ರೂ. ಆಗಿದೆ.

Most Read Articles
Best Mobiles in India

English summary
Flipkart has announced its Dussehra Specials sale right after the end of the Big Billion Days sale. This new sale has begun from today and will go on till October 28.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X