ಫಾಲ್ಕನ್‌ನಿಂದ 'ಫಾಲ್ಕನ್‌ ಏರ್‌ಬುಕ್‌' ಲ್ಯಾಪ್‌ಟಾಪ್‌ ಬಿಡುಗಡೆ!

|

ಜಾಗತಿಕ ಮಟ್ಟದಲ್ಲಿ ಗ್ರಾಹಕರನ್ನ ಸೆಳೆಯಲು ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋ ಉತ್ತಮ ವೇದಿಕೆಯಾಗಿದ್ದು, ಸದ್ಯ ಲಾಸ್‌ವೇಗಸ್‌ನಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಹಲವಾರು ಸ್ಮಾರ್ಟ್‌ ಕಂಪೆನಿಗಳು ತಮ್ಮ ಪ್ರಾಡಕ್ಟ್‌ಗಳನ್ನ ಗ್ರಾಹಕರಿಗೆ ಪರಿಚಯಿಸುತ್ತಿವೆ. ವೈವಿಧ್ಯಮಯ ಫೀಚರ್ಸ್‌ಗಳ ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಸೇರಿದಂತೆ ಹಲವಾರು ಸ್ಮಾರ್ಟ್‌ ಪ್ರಾಡಕ್ಟ್‌ಗಳ ಬಿಡುಗಡೆ ಯಾಗಿವೆ. ಇದೀಗ ಫಾಲ್ಕನ್ ಕಂಪೆನಿ ಭಾರತೀಯ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ನ 'ಮಾರ್ಕ್ ಬೈ ಫ್ಲಿಪ್‌ಕಾರ್ಟ್' ಲೇಬಲ್ ಅಡಿಯಲ್ಲಿ ಫಾಲ್ಕನ್ ಏರ್‌ಬುಕ್ ಲ್ಯಾಪ್‌ಟಾಪ್ ಅನ್ನ ಬಿಡುಗಡೆ ಮಾಡಿದೆ.

ಹೌದು

ಹೌದು, ಇ-ಕಾಮರ್ಸ್‌ ಕ್ಷೇತ್ರದ ದೈತ್ಯ ಫ್ಲಿಪ್‌ಕಾರ್ಟ್ ತಾಣದಲ್ಲಿ ಫಾಲ್ಕನ್‌ ಕಂಪೆನಿ ತನ್ನ ಹೊಸ ಮಾದರಿಯ ಲ್ಯಾಪ್‌ಟಾಪ್‌ ಅನ್ನ ಲಾಂಚ್‌ ಮಾಡಿದೆ. ಸಿಇಎಸ್‌ 2020 ಪ್ರಯುಕ್ತ ಬಿಡುಗಡೆಯಾಗಿರುವ ಫಾಲ್ಕನ್ ಏರ್‌ಬುಕ್ ಲ್ಯಾಪ್‌ಟಾಪ್‌ ಆಕರ್ಷಕವಾಗಿದ್ದು, ಇದನ್ನ ತೆಳುವಾದ ಮತ್ತು ಹಗುರವಾಗಿ ವಿನ್ಯಾಸಗೊಳಿಸಲಾಗಿದೆ. ಈ ಲ್ಯಾಪ್‌ಟಾಪ್‌ 8th gen ಇಂಟೆಲ್‌ ಕೋರ್‌ ಪ್ರೊಸೆಸರ್‌ ಹೊಂದಿದ್ದು, ಫ್ಲಿಪ್‌ಕಾರ್ಟ್ ನಲ್ಲಿ ಜನವರಿ 17 ರಿಂದ ಲಭ್ಯವಾಗಲಿದ್ದು ಇದರ ಬೆಲೆ 39,990.ರೂ, ಆಗಿದೆ. ಈ ಲ್ಯಾಪ್‌ಟಾಪ್‌ ವಿಶೇಷತೆಗಳನ್ನ ತಿಳಿಯಲು ಮುಂದೆ ಓದಿರಿ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ ತುಂಬಾ ತೆಳುವಾದ ಮತ್ತು ಹಗುರವಾದ ಲ್ಯಾಪ್‌ಟಾಪ್‌ ಆಗಿದ್ದು, 16.5mm ಥಿಕ್‌ನೆಸ್‌ ಹೊಂದಿದ್ದು 1.26kg ತೂಕವಿದೆ. ಇದು 13.3-ಇಂಚಿನ, ಫುಲ್‌ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನ ಹೊಂದಿದೆ. ಇದು 8th gen ಇಂಟೆಲ್‌ ಕೋರ್‌ ಪ್ರೊಸೆಸರ್‌ ಹೊಂದಿದ್ದು, 8GB RAM ಮತ್ತು 256GB ಸಂಗ್ರಹಣಾ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಎಸ್‌ಎಸ್‌ಡಿ ಸ್ಲಾಟ್ ಮೂಲಕ 1TB ವರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಇನ್ನು

ಇನ್ನು

ಇನ್ನು ಟ್ರ್ಯಾಕ್‌ ಪ್ಯಾಡ್‌ಗಳಲ್ಲಿ ಮಲ್ಟಿ-ಟಚ್ ಗೆಸ್ಚರ್ಸ್‌ಗಳನ್ನ ಬೆಂಬಲಿಸಲಿದ್ದು, ಫಾಲ್ಕನ್ ಏರ್‌ಬುಕ್ 37Whr ಬ್ಯಾಟರಿಯನ್ನು ಹೊಂದಿದೆ, ಇದು 5 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. 10,000 ಕ್ಕೂ ಹೆಚ್ಚು ಪಿನ್ ಕೋಡ್ ಬೆಂಬಲದೊಂದಿಗೆ ಡೋರ್‌ಡೆಲಿವರಿ ವಾರಂಟಿಯನ್ನ ನೀಡುವುದಾಗಿ ಫ್ಲಿಪ್‌ಕಾರ್ಟ್ ಹೇಳಿದೆ. ಅಲ್ಲದೆ ಫ್ಲಿಪ್‌ಕಾರ್ಟ್‌ ಲಕ್ಷಾಂತರ ಗ್ರಾಹಕರ ಆಸಕ್ತಿ, ವಿಮರ್ಶೆ, ಅವಶ್ಯಕತೆ ಹಾಗೂ ಮಾರ್ಕೆಟ್‌ನಲ್ಲಿ ಗ್ರಾಹಕರಿಗೆ ಯಾವ ಮಾದರಿಯ ಲ್ಯಾಪ್‌ಟಾಪ್‌ ಅವಶ್ಯಕತೆ ಇದೆ ಅನ್ನೊದನ್ನ ಅಧ್ಯಯನ ಮಾಡಿದ ನಂತರ ಫಾಲ್ಕನ್‌ ಏರ್‌ಬುಕ್‌ ಲ್ಯಾಪ್‌ಟಾಪ್‌ ಅನ್ನ ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಫ್ಲಿಪ್‌ ಕಾರ್ಟ್‌ನ ಸಿನೀಯರ್‌ ವೈಸ್‌ ಪ್ರೆಸಿಡೆಂಟ್‌ ಆದರ್ಶ್ ಮೆನನ್ ಹೇಳಿದ್ದಾರೆ.

ಗ್ರಾಹಕರು

ಗ್ರಾಹಕರು ಬೆಲೆ, ಬಾಳಿಕೆ ಮತ್ತು ಹಗುರವಾದ ಲ್ಯಾಪ್‌ಟಾಪ್‌ಗಳ ಮೇಲೆ ಆಕರ್ಷಿತರಾಗಿದ್ದಾರೆ, ಅಷ್ಟೇ ಯಾಕೆ ಮುಂದಿನ ದಿನಗಳಲ್ಲಿ ತೆಳುವಾದ ಮಾದರಿಯ ಲ್ಯಾಪ್‌ಟಾಪ್‌ ಗಳ ಮಾರಾಟ ಶೇಖಡ 18ರಿಂದ 65% ಗೆ ಏರಿಕೆಯಾಗಲಿದೆ ಅನ್ನೊದನ್ನ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಗ್ರಾಃಕರಿಗೆ ಅವಶ್ಯಕವಿರುವ ಅಗತ್ಯ ವಸ್ತುಗಳನ್ನ ತಲುಪಿಸುವುದು ನಮ್ಮ ಜವಬ್ದಾರಿಯಾಗಿದ್ದು, ಇದಕ್ಕಾಗಿ ಖಾಸಗಿ ಬ್ರಾಂಡ್‌ಗಳ ಜೊತೆಗೆ ನಮ್ಮ ಹೊಂದಾಣಿಕೆ ಇನ್ನಷ್ಟು ಉತ್ತಮವಾಗಿರಲಿದೆ ಹಾಗೇಯೆ ಇನ್ನೂ ಹೆಚ್ಚಿನ ಪ್ರಮಾಣದಲ್ಇ ಉತ್ತಮ ದರ್ಜೆಯ ಲ್ಯಾಪ್‌ಟಾಪ್‌ಗಳನ್ನ ಗ್ರಾಃಕಲರಿಗೆ ಪೂರೈಸುತ್ತೇವೆ ಅಂತಾ ಫ್ಲಿಪ್‌ಕಾರ್ಟ್‌ ಹೇಳಿಕೊಂಡಿದೆ.

Most Read Articles
Best Mobiles in India

Read more about:
English summary
On the sidelines of the CES 2020, Indian e-commerce giant Flipkart has made an announcement that it will be adding laptops too, under its ‘MarQ by Flipkart' label. Its first laptop is called the Falkon Aerbook, which is designed to be thin and light and is powered by Intel's 8th generation CPUs. The laptop will be exclusively available through Flipkart for a starting price of Rs. 39,990, from January 17.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more