ಫ್ಲಿಪ್‌ಕಾರ್ಟ್‌ ಮೊಬೈಲ್ ಬೋನಾಂಜಾ ಸೇಲ್: ಹೊಸ ಫೋನ್‌ಗಳು ಬಿಗ್ ಡಿಸ್ಕೌಂಟ್‌!

|

ಬಹತೇಕ ಗ್ರಾಹಕರು ಆಫರ್‌ನಲ್ಲಿ ವಸ್ತುಗಳನ್ನು ಖರೀದಿಸುವುದಕ್ಕಾಗಿ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್ ನತ್ತ ಮುಖ ಮಾಡುತ್ತಾರೆ. ಇ-ಕಾಮರ್ಸ್ ತಾಣಗಳು ಸಹ ಗ್ರಾಹಕರನ್ನು ಸೆಳೆಯಲು ಒಂದಿಲ್ಲೊಂದು ಆಫರ್‌ಗಳನ್ನು ವಿಶೇಷ ಸೇಲ್‌ ಮೇಳವನ್ನು ಘೋಷಿಸುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಜನಪ್ರಿಯ ಫ್ಲಿಪ್‌ಕಾರ್ಟ್‌ ಇದೀಗ ಗ್ರಾಹಕರಿಗೆ ಅಂಥದೊಂದು ಸೇಲ್‌ ನೀಡಿದ್ದು, ಮೊಬೈಲ್ ಬೋನಾಂಜಾ ಮೇಳವನ್ನು ಆಯೋಜಿಸಿದೆ.

ಫ್ಲಿಪ್‌ಕಾರ್ಟ್‌

ಹೌದು, ಜನಪ್ರಿಯ ಇ-ಕಾಮರ್ಸ್ ಫ್ಲಿಪ್‌ಕಾರ್ಟ್‌ ಇದೀಗ ಮೊಬೈಲ್ ಬೋನಾಂಜಾ ಸೇಲ್ ಮೇಳವನ್ನು ಆಯೋಜಿಸಿದೆ. ಈ ಮೇಳವು ಇಂದಿನಿಂದ ಫೆ. 24ರಿಂದ ಆರಂಭವಾಗಿದ್ದು, ಫೆ. 28ರ ವರೆಗೂ ನಡೆಯಲಿದೆ. ಈ ಸೇಲ್‌ನಲ್ಲಿ ರಿಯಲ್‌ಮಿ, ಮೊಟೊ, ಪೊಕೊ, ಆಪಲ್ ಐಫೋನ್ ಸೇರಿದಂತೆ ಇತರೆ ಬ್ರ್ಯಾಂಡ್‌ ಫೋನ್‌ಗಳಿಗೂ ಭರ್ಜರಿ ರಿಯಾಯಿತಿ ತಿಳಿಸಲಾಗಿದೆ. ಹೀಗಾಗಿ ಫೋನ್ ಖರೀದಿಸುವ ಗ್ರಾಹಕರಿಗೆ ಇದುವೇ ಬೆಸ್ಟ್‌ ಟೈಮ್ ಎನ್ನಬಹುದಾಗಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಮೊಬೈಲ್ ಬೋನಾಂಜಾ ಸೇಲ್ ಮೇಳದಲ್ಲಿ ಆಫರ್ ಪಡೆದಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರಿಯಲ್‌ಮಿ C12

ರಿಯಲ್‌ಮಿ C12

ರಿಯಲ್‌ಮಿ C12 ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಎಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಹಿಲಿಯೊ G35SOC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ರಿಯಲ್‌ಮಿ C12 ಫೋನಿನ 3GB + 32GB ವೇರಿಯಂಟ್ 8,499ರೂ.ಗಳಿಗೆ ಲಭ್ಯ.

ಪೊಕೊ C3

ಪೊಕೊ C3

ಪೊಕೊ C3 ಸ್ಮಾರ್ಟ್‌ಫೋನ್ ಸಹ ಮೊಬೈಲ್ ಬೋನಾಂಜಾ ಸೇಲ್ ಡಿಸ್ಕೌಂಟ್‌ ಪಡೆದಿದ್ದು, 3GB + 32GB ವೇರಿಯಂಟ್ ಫೋನ್‌ 6,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಐಸಿಐಸಿಐ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್ ಬರೋಡಾ ಕಾರ್ಡ್‌ನಲ್ಲಿ ಶೇ. 10% ರಿಯಾಯಿತಿ ಸಿಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F41

ಸ್ಯಾಮ್‌ಸಂಗ್ ಗ್ಯಾಲಕ್ಸಿ F41

ಸ್ಯಾಮ್‌ಸಂಗ್ ಗ್ಯಾಲಕ್ಸಿ F41 ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲೆಡ್‌ ಇನ್ಫಿನಿಟಿ-ಯು ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್‌-ಎಕ್ಸಿನೋಸ್ 9611 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 10 ನಲ್ಲಿ ಒನ್ ಯುಐ ಕೋರ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಕೊಡುಗೆಯಲ್ಲಿ ಈ ಫೋನ್ ಆರಂಭಿಕ 15,499ರೂ.ಗಳಿಗೆ ಲಭ್ಯವಾಗಲಿದೆ.

ಮೊಟೊರೊಲಾ ರೇಜರ್ 5G

ಮೊಟೊರೊಲಾ ರೇಜರ್ 5G

ಮೊಟೊರೊಲಾ ರೇಜರ್‌ 5G ಫೋಲ್ಡಬಲ್‌ ಫೋನ್‌ 876x2,142 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿದೆ. ಇದು 21: 9ರಚನೆಯ ಅನುಪಾತ ಹೊಂದಿರುವ ಮಡಿಸಬಹುದಾದ 6.2-ಇಂಚಿನ ಪ್ಲಾಸ್ಟಿಕ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಸ್ನಾಪ್ಡ್ರಾಗನ್ 765G SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಇದು 8 GB RAM ಮತ್ತು 256GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ 99,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

Most Read Articles
Best Mobiles in India

English summary
The Flipkart Mobiles Bonanza includes offers on Apple, Motorola, Poco, Realme, Samsung, Vivo, Xiaomi and other brands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X