ನಾಳೆಯಿಂದ ಶುರುವಾಗಲಿದೆ ಫ್ಲಿಪ್‌ಕಾರ್ಟ್‌ನ ಫ್ಲಿಪ್‌ಸ್ಟಾರ್ಟ್ ಡೇಸ್ ಸೇಲ್‌!

|

ಹಬ್ಬ ಹರಿದಿನಗಳು, ವಿಶೇಷ ದಿನಗಳ ಪ್ರಯುಕ್ತ ಜನಪ್ರಿಯ ಇ-ಕಾಮರ್ಸ್‌ ತಾಣಗಳು ವಿಶೇಷ ಸೇಲ್‌ ಅನ್ನು ಆಯೋಜಿಸುತ್ತಲೇ ಬಂದಿವೆ. ಅಲ್ಲದೆ ಆನ್‌ಲೈನ್‌ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಗಳನ್ನ ನೀಡುತ್ತಿದ್ದು, ಆಫರ್‌ಗಳ ಸುರಿಮಳೆಯನ್ನೇ ಸುರಿಸುತ್ತಿವೆ. ಸದ್ಯ ಇದೀಗ ಜನಪ್ರಿಯ ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ತನ್ನ ಫ್ಲಿಪ್‌ಸ್ಟಾರ್ಟ್‌ ಡೇಸ್‌ ಸೇಲ್‌ ಅನ್ನು ಡಿಸೆಂಬರ್‌ 1ರಿಂದ ಡಿಸೆಂಬರ್‌ 3,2020 ರವೆರೆಗ ಆಯೋಜಿಸಿದೆ. ಇನ್ನು ಈ ಸೇಲ್‌ ಇದೀಗ ಲೈವ್‌ ಆಗಿದ್ದು, ಭರ್ಜರಿ ರಿಯಾಯಿತಿಯನ್ನ ಘೋಷಿಸಲಾಗಿದೆ.

ಫ್ಲಿಪ್‌ಕಾರ್ಟ್

ಹೌದು, ಫ್ಲಿಪ್‌ಕಾರ್ಟ್ ನ ಫ್ಲಿಪ್‌ಸ್ಟಾರ್ಟ್ ಡೇಸ್ ಸೇಲ್‌ ಡಿಸೆಂಬರ್ 1 ರಿಂದ ಡಿಸೆಂಬರ್ 3, 2020 ರವರೆಗೆ ನಡೆಯಲಿದೆ. ಈ ಸೇಲ್‌ ಎಲೆಕ್ಟ್ರಾನಿಕ್ ಆಕ್ಸಿಸರೀಸ್‌ಗಳ ಮೇಲೆ 80% ವರೆಗೆ ಮತ್ತು ಟಿವಿಗಳು, ಎಸಿಗಳು ಮತ್ತು ರೆಫ್ರಿಜರೇಟರ್‌ಗಳಲ್ಲಿ 50% ವರೆಗೆ ರಿಯಾಯಿತಿ ನೀಡುತ್ತದೆ. ಇನ್ನು ಈ ಸೇಲ್‌ನಲ್ಲಿ ಬಟ್ಟೆ, ಪಾದರಕ್ಷೆಗಳು, ಪರಿಕರಗಳು, ಸೌಂದರ್ಯ, ಕ್ರೀಡೆ, ಪೀಠೋಪಕರಣಗಳು, ಮನೆ ಅಲಂಕಾರಿಕ ಮತ್ತು ಇತರ ವಿಭಾಗಗಳಲ್ಲಿ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಒಳಗೊಂಡಿದೆ. ಇನ್ನು ಈ ಸೇಲ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫ್ಲಿಪ್‌ಕಾರ್ಟ್‌

ಇನ್ನು ಫ್ಲಿಪ್‌ಕಾರ್ಟ್‌ನ ಫ್ಲಿಪ್‌ಸ್ಟಾರ್ಟ್ ಡೇಸ್ ಸೇಲ್‌ನಲ್ಲಿ ಹೆಡ್‌ಫೋನ್‌ಗಳು ಮತ್ತು ಸ್ಪೀಕರ್‌ಗಳಲ್ಲಿ ಶೇಕಡಾ 70 ರಷ್ಟು ರಿಯಾಯಿತಿ ನೀಡುತ್ತಿದೆ. ಹೆಚ್ಚು ಮಾರಾಟವಾಗುವ ಲ್ಯಾಪ್‌ಟಾಪ್‌ಗಳ ಖರೀದಿಗೆ 30% ರಿಯಾಯಿತಿ ನೀಡಲಾಗುವುದು. ಧರಿಸಬಹುದಾದ ಸ್ಮಾರ್ಟ್‌ವಾಚ್‌ಗಳು ಮತ್ತು ಫಿಟ್‌ನೆಸ್ ಬ್ಯಾಂಡ್‌ಗಳ ನಡುವೆ ಮಾರಾಟದ ಸಮಯದಲ್ಲಿ 1,299 ರೂ. ವರೆಗೆ ಇರಲಿದೆ. ಸ್ಮಾರ್ಟ್ ಟಿವಿಗಳ ಬೆಲೆ ಏತನ್ಮಧ್ಯೆ ಮಾರಾಟದ ಸಮಯದಲ್ಲಿ 8,999 ರೂ. ಇರಲಿದೆ.

ಫ್ಲಿಪ್‌ಕಾರ್ಟ್

ಇದಲ್ಲದೆ ಫ್ಲಿಪ್‌ಕಾರ್ಟ್ ಬಳಕೆದಾರರು ಫ್ಲಿಪ್‌ಸ್ಟಾರ್ಟ್‌ ಸೇಲ್‌ನಲ್ಲಿ ನಿವು ಖರೀದಿಸಲು ಯೋಜಿಸಿರುವ ವಿಶ್‌ಲಿಸ್ಟ್‌ ಪ್ರೊಡಕ್ಟ್‌ಗಳ ಪಟ್ಟಿಯನ್ನು ಅನುಮತಿಸುತ್ತದೆ, ಇದರಲ್ಲಿ ನಿಮಗೆ ಬೇಕಾದ ಡೀಲ್ಸ್‌ಗಳನ್ನು ಪಡೆಯುವುದು ಸುಲಭವಾಗುತ್ತದೆ. ಇನ್ನು ಫ್ಲಿಪ್‌ಕಾರ್ಟ್‌ನ ಫ್ಲಿಪ್‌ಸ್ಟಾರ್ಟ್ ಡೇಸ್ ಸೇಲ್‌ನಲ್ಲಿ ಮೊಬೈಲ್ ಪರಿಕರಗಳು ರೂ. 129. ರೆಫ್ರಿಜರೇಟರ್‌ಗಳು ಮತ್ತು ಟಿವಿಗಳನ್ನು 40% ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. ಅಲ್ಲದೆ ಎಲೆಕ್ಟ್ರಾನಿಕ್ ಪರಿಕರಗಳ ಮೇಲೆ 80% ವರೆಗೆ ರಿಯಾಯಿತಿಯನ್ನು ನೀಡಲಾಗಿದೆ.

ಸೇಲ್‌

ಸದ್ಯ ಈ ಸೇಲ್‌ನಲ್ಲಿ ಯಾವುದೇ ಇಎಂಐ ಆಯ್ಕೆಗಳನ್ನ ನೀಡಲಾಗಿಲ್ಲ. ಆದರೆ ಭರ್ಜರಿ ರಿಯಾಯಿತಿಯನ್ನ ಪ್ರತಿಯೊಂದು ವಿಭಾಗದಲ್ಲಿ ನೀಡಲಾಗ್ತಿದೆ. ಟಿವಿಗಳು, ಎಸಿಗಳು ಮತ್ತು ರೆಫ್ರಿಜರೇಟರ್‌ಗಳು ಮತ್ತು ಇತರ ರಿಯಾಯಿತಿಗಳಲ್ಲಿ 50% ರಷ್ಟು ರಿಯಾಯಿತಿ ಮತ್ತು ಪಾದರಕ್ಷೆಗಳು, ಬಟ್ಟೆಗಳು ಕ್ರೀಡಾ ಉಪಕರಣಗಳು, ಪೀಠೋಪಕರಣಗಳು, ಮನೆ ಅಲಂಕಾರಿಕ ಪ್ರಾಡಕ್ಟ್‌ಗಳ ಮೇಲೆ ಹೆಚ್ಚಿನ ರಿಯಾಯಿತಿಯನ್ನು ನೀಡಲಾಗುತ್ತೆ ಎಂದು ವಿಶ್‌ಲಿಸ್ಟ್‌ನಲ್ಲಿ ತಿಳಿಸಲಾಗಿದೆ. ಸದ್ಯ ಈ ಸೇಲ್‌ ನಾಳೆಯಿಂದ ಶುರುವಾಗಲಿದ್ದು, ಇಂದಿನಿಂದಲೇ ಲೈವ್‌ ಆಗಿದೆ.

Most Read Articles
Best Mobiles in India

English summary
Flipkart Flipstart Days sale will kick off starting tomorrow, December 1, till December 3, 2020.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X