ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಈ ಎಲ್ಲಾ ಡಿವೈಸ್‌ಗಳಿಗೆ ಭಾರಿ ಡಿಸ್ಕೌಂಟ್‌!

|

ಫ್ಲಿಪ್‌ಕಾರ್ಟ್‌ ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗಾಗಿ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಹಬ್ಬ ಹರಿದಿನಗಳ ಸಮಯದಲ್ಲಿ ರಿಯಾಯಿತಿ ಸೇಲ್‌ಗಳನ್ನು ಆಯೋಜಿಸುವ ಮೂಲಕ ಬಿಗ್‌ ಡಿಸ್ಕೌಂಟ್‌ ನೀಡುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾರದ ಅಂತರದಲ್ಲಿ ಎರಡನೇ ಬಾರಿಗೆ ಬಿಗ್‌ ದೀಪಾವಳಿ ಸೇಲ್‌ ನಡೆಸುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ಗಳು ಮತ್ತು ಇಯರ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ತನ್ನ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಆಯ್ದ ಗ್ಯಾಜೆಟ್ಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ದೀಪಾವಳಿ ಸಮಯದಲ್ಲಿ ಹೊಸ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಖರೀದಿಸಬೇಕೆಂದು ಕೊಂಡವರಿಗೆ ಇದು ಉತ್ತಮ ಸಮಯ ಎಂದೇ ಹೇಳಬಹುದಾಗಿದೆ. ಅಷ್ಟೇ ಅಲ್ಲ ವಾಯರ್‌ಲೆಸ್‌ ಇಯರ್‌ಫೋನ್‌ಗಳ ಮೇಲೂ ಬಿಗ್‌ ಆಫರ್‌ ನೀಡಲಾಗ್ತಿದ್ದು, ಖರೀದಿಸುವವರಿಗೆ ಇದಕ್ಕಿಂತ ಬೆಸ್ಟ್‌ ಟೈಂ ಇಲ್ಲ ಎಂದೇ ಹೇಳಬಹುದು. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಯಾವೆಲ್ಲಾ ಡಿಸ್ಕೌಂಟ್‌ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌ಗಳ ಮೇಲಿನ ಆಫರ್‌ಗಳು

ಸ್ಮಾರ್ಟ್‌ಫೋನ್‌ಗಳ ಮೇಲಿನ ಆಫರ್‌ಗಳು

ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಐಫೋನ್‌ ಖರೀದಿಸಬೇಕೆಂದು ಕೊಂಡವರಿಗೆ ಉತ್ತಮ ಅವಕಾಶವಿದೆ. ಸದ್ಯ ನೀವು ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಅನ್ನುಕೇವಲ 53,999ರೂ.ಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸುವವರಿಗೆ 1,500 ರೂಪಾಯಿಗಳ ಹೆಚ್ಚುವರಿ ರಿಯಾಯಿತಿ ಕೂಡ ಸಿಗಲಿದೆ. ಇದರಿಂದ ನಿಮಗೆ ಐಫೋನ್‌ 12 ಅನ್ನು 52,499 ರೂ.ಗಳಿಗೆ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಆಪಲ್‌ ಐಫೋನ್‌ SE ಅನ್ನು 30,099 ರೂಗಳಿಗೆ ಖರೀದಿಸಬಹುದಾಗಿದೆ.

ಸ್ಯಾಮ್‌ಸಂಗ್‌

ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ F12 ಫ್ಲಿಪ್‌ಕಾರ್ಟ್‌ನಲ್ಲಿ 9,499ರೂ.ಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸುವವರಿಗೆ ಇದು ಕೇವಲ 8,549ರೂ.ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ ಬಜೆಟ್ ಫೋನ್ ಆಗಿರುವ ಪೊಕೊ M3 10,999ರೂ.ಗಳಿಗೆ ಲಭ್ಯವಾಗಲಿದೆ. ಜೊತೆಗೆ ನೀವು SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವವರು ಹೆಚ್ಚುವರಿಯಾಗಿ 1,100ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಜೊತೆಗೆ ರಿಯಲ್‌ಮಿ GT ಮಾಸ್ಟರ್ ಸ್ಮಾರ್ಟ್‌ಫೋನ್‌ ಕೂಡ 25,999ರೂ.ಗಳಿಗೆ ಲಭ್ಯವಿದೆ. ನೀವು ಪ್ರಿಪೇಯ್ಡ್ ವಹಿವಾಟಿನಲ್ಲಿ ಖರೀದಿಸಿದರೆ ಹೆಚ್ಚುವರಿಯಾಗಿ 4,000 ರೂಪಾಯಿಗಳ ರಿಯಾಯಿತಿ ಕೂಡ ಸಿಗಲಿದೆ.

ಲ್ಯಾಪ್‌ಟಾಪ್‌ಗಳ ಮೇಲಿನ ಆಫರ್‌ಗಳು

ಲ್ಯಾಪ್‌ಟಾಪ್‌ಗಳ ಮೇಲಿನ ಆಫರ್‌ಗಳು

ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಆಪಲ್‌ ಕಂಪೆನಿಯ ಮ್ಯಾಕ್‌ಬುಕ್‌ ಏರ್‌ ಅನ್ನು 83,990ರೂ.ಗೆ ಖರೀದಿಸಬಹುದು. SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವವರಿಗೆ ಹೆಚ್ಚುವರಿಯಾಗಿ 4,000 ರೂಪಾಯಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ನೀವು ಇದನ್ನು ಕೇವಲ 79,990 ರೂ.ಗೆ ಖರೀದಿಸಬಹುದು.
ಇನ್ನು ರೆಡ್‌ಮಿ ಬುಕ್‌ 15 ಪ್ರೊ ಲ್ಯಾಪ್‌ಟಾಪ್‌ ಫ್ಲಿಪ್‌ಕಾರ್ಟ್‌ನಲ್ಲಿ 44,999 ರೂ.ಗಳಿಗೆ ಮಾರಾಟವಾಗುತ್ತಿದೆ. SBI ಬ್ಯಾಂಕ್ ಕಾರ್ಡ್‌ ಮೂಲಕ ಖರೀದಿಸುವವರು, ಇದನ್ನು 43,499 ರೂ.ಗಳಿಗೆ ಪಡೆದುಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್‌

ಇದಲ್ಲದೆ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಏಸರ್‌ನ ಆಸ್ಪೈರ್ 7 ಲ್ಯಾಪ್‌ಟಾಪ್‌ ನಿಮಗೆ ಕೇವಲ 49,990ರೂ.ಗಳಿಗೆ ಲಭ್ಯವಾಗಲಿದೆ. ಇದನ್ನು ಎಸ್‌ಬಿಐ ಬ್ಯಾಂಕ್ ಕಾರ್ಡ್‌ನಲ್ಲಿ ಖರೀದಿಸದರೆ ಹೆಚ್ಚುವರಿಯಾಗಿ 1,500 ರೂಪಾಯಿ ರಿಯಾಯಿತಿ ಪಡೆಯಬಹುದು. ಇನ್ನು ರಿಯಲ್‌ಮಿ ಬುಕ್‌ ಸ್ಲಿಮ್‌ 11 ನೇ ಜನ್ Core i5 ಮಾಡೆಲ್ ಅನ್ನು 53,999 ರೂ.ಗಳಿಗೆ ಪಟ್ಟಿ ಮಾಡಲಾಗಿದೆ. ಬ್ಯಾಂಕ್‌ ಕಾರ್ಡ್‌ ಆಫರ್‌ನಲ್ಲಿ ಕೇವಲ 52,499 ರೂ.ಗೆ ಖರೀದಿಸಬಹುದು.

ಇಯರ್‌ಫೋನ್‌ಗಳ ಮೇಲಿನ ಆಫರ್‌ಗಳು

ಇಯರ್‌ಫೋನ್‌ಗಳ ಮೇಲಿನ ಆಫರ್‌ಗಳು

ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್‌ನಲ್ಲಿ ಆಪಲ್‌ನ ಏರ್‌ಪಾಡ್‌ ನಿಮಗೆ ಕೇವಲ 8,999ರೂ.ಗಳಿಗೆ ಖರೀದಿಸಬಹುದು. ಇನ್ನು ಒನ್‌ಪ್ಲಸ್‌ ಬುಲೆಟ್ ವಾಯರ್‌ಲೆಸ್ Z ಬ್ಲೂಟೂತ್ ಇಯರ್‌ಫೋನ್‌ಗಳು 1,799ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ರಿಯಲ್‌ಮಿ ಬಡ್ಸ್‌ ಏರ್‌ 2 ನಿಮಗೆ 2,799ರೂ.ಗಳಿಗೆ ದೊರೆಯಲಿದೆ. ಇದರೊಂದಿಗೆ ಒನ್‌ಪ್ಲಸ್‌ ಬಡ್ಸ್ 3,999 ರೂ.ಗೆ ಪಟ್ಟಿಮಾಡಲಾಗಿದೆ. ಜೊತೆಗೆ ಜಬ್ರಾ ಎಲೈಟ್ 75t ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್‌ಗಳು ಸಹ ಭಾರಿ ರಿಯಾಯಿತಿಯನ್ನು ಪಡೆದಿದ್ದು, ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಮಾರಾಟದ ಸಮಯದಲ್ಲಿ 7,999 ರೂಗಳಿಗೆ ಮಾರಾಟವಾಗುತ್ತಿದೆ.

Most Read Articles
Best Mobiles in India

English summary
Flipkart is running a “Big Diwali sale” on its platform, which is offering big discounts on several devices.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X