ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಫೋನ್ ಕಾರ್ನಿವಲ್ ಸೇಲ್: ಈ ಫೋನ್‌ಗಳಿಗೆ ಆಕರ್ಷಕ ಕೊಡುಗೆ!

|

ಜನಪ್ರಿಯ ಇ- ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ವಿಶೇಷ ಸೇಲ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತ ಸಾಗಿದೆ. ಇದೀಗ ಈ ಪ್ಲಾಟ್‌ಫಾರ್ಮ್‌ ಸ್ಮಾರ್ಟ್‌ಫೋನ್ ಕಾರ್ನಿವಲ್ ಸೇಲ್ ಮೇಳವನ್ನು ಆಯೋಜಿಸಿದೆ. ಈ ಸೇಲ್‌ ಮೇಳದಲ್ಲಿ ಜನಪ್ರಿಯ ಫೋನ್‌ ವೇರಿಯಂಟ್‌ಗಳ ಜೊತೆಗೆ ಇತ್ತೀಚಿಗಿನ ಕೆಲವು ನೂತನ ಫೋನ್‌ಗಳಿಗೂ ಭರ್ಜರಿ ರಿಯಾಯಿತಿ ತಿಳಿಸಿದೆ. ಸದ್ಯ ಚಾಲ್ತಿ ಇರುವ ಈ ಸೇಲ್‌ ಮೇಳವು ಇದೇ ಮಾರ್ಚ್ 20 ರಂದು ಮುಕ್ತಾಯವಾಗಲಿದೆ.

ರಿಯಲ್‌ಮಿ

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣವು ಸ್ಮಾರ್ಟ್‌ಫೋನ್ ಕಾರ್ನಿವಲ್ ಸೇಲ್‌ ಆರಂಭಿಸಿದ್ದು, ಈ ಸೇಲ್ ಮೇಳವು ಇದೇ ಮಾರ್ಚ್ 20 ರವರೆಗೂ ಚಾಲ್ತಿ ಇರಲಿದೆ. ಫ್ಲಿಪ್‌ಕಾರ್ಟ್‌ನ ಈ ಮೇಳದಲ್ಲಿ ರಿಯಲ್‌ಮಿ C12, ಮೋಟೋ G10 ಪವರ್, ರಿಯಲ್‌ಮಿ ನಾರ್ಜೊ 30A, ಐಫೋನ್ XR ಸೇರಿದಂತೆ ಇನ್ನಷ್ಟು ಜನಪ್ರಿಯ ಫೋನ್‌ಗಳಿಗೂ ವಿಶೇಷ ಡಿಸ್ಕೌಂಟ್‌ ಘೋಷಿಸಿದೆ.

ಎಚ್‌ಡಿಎಫ್‌ಸಿ

ಹಾಗೆಯೇ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ 750ರೂ. ಗಳವರೆಗೆ ರಿಯಾಯಿತಿ ನೀಡುತ್ತಿದೆ. ಇದಲ್ಲದೇ ಶಿಯೋಮಿ ಮಿ 10T ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಸೇರಿದಂತೆ ಇತರೆ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಇನ್‌ಸ್ಟಂಟ್ ಕೊಡುಗೆಗಳನ್ನು ಘೋಷಿಸಿದೆ.

ಮೊಟೊ G10 ಪವರ್

ಮೊಟೊ G10 ಪವರ್

ಮೊಟೊ G10 ಪವರ್ ಭಾರತದಲ್ಲಿ 9,999ರೂ.ಗ ಪ್ರೈಸ್‌ಟ್ಯಾಗ್ ಹೊಂದಿದ್ದು, ಆಫರ್‌ನಲ್ಲಿ 9,499ರೂ.ಗಳಿಗೆ ಮಾರಾಟವಾಗುತ್ತಿದೆ.ಇನ್ನು ಈ ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 460 SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 20W ವೇಗದ ಚಾರ್ಜರ್‌ನ ಅನ್ನು ಬೆಂಬಲಿಸಲಿದೆ.

ಪೊಕೊ M3 ಫೋನ್

ಪೊಕೊ M3 ಫೋನ್

ಸೇಲ್‌ ಮೇಳದಲ್ಲಿ ಪೊಕೊ M3 ಆಕರ್ಷಕ ರಿಯಾಯಿತಿ ಪಡೆದಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ 500ರೂ.ಗಳ ರಿಯಾಯಿತಿ ಪಡೆದಿದೆ. ಹೀಗಾಗಿ ಪೊಕೊ M3 ಫ್ಲಿಪ್‌ಕಾರ್ಟ್‌ನಲ್ಲಿ 10,999ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 1,080x2,340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 10 ನಲ್ಲಿ MIUI 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ರಿಯಲ್‌ಮಿ C12

ರಿಯಲ್‌ಮಿ C12

ರಿಯಲ್‌ಮಿ C12 ಫೋನಿನ 3 GB RAM + 32 ಸ್ಟೋರೇಜ್‌ ವೇರಿಯಂಟ್ ಭಾರತದಲ್ಲಿ 8,999 ರೂ.ಗ ಪ್ರೈಸ್‌ಟ್ಯಾಗ್ ಹೊಂದಿದ್ದು, ಆಫರ್‌ನಲ್ಲಿ 7,999ರೂ.ಗಳಿಗೆ ಮಾರಾಟವಾಗುತ್ತಿದೆ.

ಐಫೋನ್‌ 12 ಪ್ರೊ ಮ್ಯಾಕ್ಸ್‌

ಐಫೋನ್‌ 12 ಪ್ರೊ ಮ್ಯಾಕ್ಸ್‌

ಐಫೋನ್‌ 12 ಪ್ರೊ ಮ್ಯಾಕ್ಸ್‌ HDFC ಬ್ಯಾಂಕ್‌ನ ಕ್ರೆಡಿಟ್‌ ಹಾಗೂ ಡೆಬಿಟ್ ಕಾರ್ಡ್‌ ಮೂಲಕ 5,000ರೂ.ಗಳ ಇನ್‌ಸ್ಟಂಟ್‌ ರಿಯಾಯಿತಿ ಸಿಗಲಿದೆ. ಹೀಗಾಗಿ ಐಫೋನ್‌ 12 ಪ್ರೊ ಮ್ಯಾಕ್ಸ್‌ ಫೋನ್‌ 1,22,900ರೂ.ಗಳಿಗೆ ಲಭ್ಯ.

ಆಪಲ್‌ ಐಫೋನ್‌ 11

ಆಪಲ್‌ ಐಫೋನ್‌ 11

ಈ ಸೇಲ್‌ನಲ್ಲಿ ಆಪಲ್‌ ಐಫೋನ್‌ 11 ಸಹ ಡಿಸ್ಕೌಂಟ್‌ ಪಡೆದಿದೆ. 54,900ರೂ. ಪ್ರೈಸ್‌ಟ್ಯಾಗ್‌ ಪಡೆದಿರುವ ಈ ಫೋನ್ 44,999ರೂ.ಗಳಿಗೆ ಲಭ್ಯ.

ಶಿಯೋಮಿ ಮಿ 10T

ಶಿಯೋಮಿ ಮಿ 10T

ಶಿಯೋಮಿ ಮಿ 10T ಫೋನ್‌ 34,999ರೂ.ಗಳ ಪ್ರೈಸ್‌ ಟ್ಯಾಗ್‌ ಅನ್ನು ಹೊಂದಿದೆ. ಆದರೆ ಆಫರ್‌ನಲ್ಲಿ 32,999ರೂ.ಗಳಿಗೆ ಲಭ್ಯ. ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ಗ್ರಾಹಕರು 2,500 ರೂ.ಗಳ ರಿಯಾಯಿತಿ ಪಡೆಯಬಹುದು.

Most Read Articles
Best Mobiles in India

English summary
Flipkart Smartphone Carnival Sale: Great Deals On These Smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X