Just In
Don't Miss
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- News
ಪೋರ್ನ್ ಸೈಟ್ ನಿಷೇಧ ಹೇರುವಂತೆ ನಿತೀಶ್ ಕುಮಾರ್ ಆಗ್ರಹ
- Sports
ಸೈನ್ ಮಾಡಿ ಕೆಣಕಿದ ಕೆಸ್ರಿಕ್ಗೆ ಬ್ಯಾಟ್ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋ
- Automobiles
ಟ್ರೈಬರ್ ಕಾರಿಗೆ ಭರ್ಜರಿ ಬೇಡಿಕೆ- ಕಾರು ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ರೆನಾಲ್ಟ್
- Movies
ಅತ್ಯಾಚಾರಿಗಳ ಎನ್ ಕೌಂಟರ್: ಉಪ್ರೇಂದ ಟ್ವೀಟ್ ವಿರುದ್ಧ ನೆಟ್ಟಿಗರ ಆಕ್ರೋಶ
- Lifestyle
ಶನಿವಾರದ ದಿನ ಭವಿಷ್ಯ 07-12-2019
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಇದೇ 29ರಿಂದ ಫ್ಲಿಪ್ಕಾರ್ಟ್ ಬಿಗ್ ಸೇಲ್..! ನೆಚ್ಚಿನ ಉತ್ಪನ್ನ ಖರೀದಿಗೆ ಉತ್ತಮ ಸಮಯ..!
"ದಿ ಬಿಗ್ ಬಿಲಿಯನ್ ಡೇಸ್" ಎಂದು ಕರೆಯಲ್ಪಡುವ ಫ್ಲಿಪ್ಕಾರ್ಟ್ನ ಅತಿದೊಡ್ಡ ಮಾರಾಟ ಮತ್ತೊಮ್ಮೆ ಬಂದಿದೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4 ರವರೆಗೆ ನಡೆಯಲಿರುವ ಬೃಹತ್ ಆನ್ಲೈನ್ ಮಾರಾಟದಲ್ಲಿ ಅತಿ ಹೆಚ್ಚು ಆಕರ್ಷಕ ಆಫರ್ಗಳನ್ನು ಫ್ಲಿಪ್ಕಾರ್ಟ್ ನೀಡುತ್ತಿದೆ. ಮುಂದಿನ ಮಾರಾಟದಲ್ಲಿ ಆಕ್ಸಿಸ್ ಬ್ಯಾಂಕ್ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳು ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೇಲೆ ಶೇ.10ರಷ್ಟು ರಿಯಾಯಿತಿಯನ್ನು ಕಂಪನಿ ನೀಡುತ್ತಿದೆ.

ನಿಮ್ಮ ನೆಚ್ಚಿನ ಬಟ್ಟೆ, ಟಿವಿಗಳು ಮತ್ತು ವಸ್ತುಗಳು, ಮನೆ ಮತ್ತು ಪೀಠೋಪಕರಣಗಳು, ಸೌಂದರ್ಯ ಉತ್ಪನ್ನಗಳು, ಆಟಿಕೆಗಳು, ಸ್ಮಾರ್ಟ್ ಸಾಧನಗಳು ಮತ್ತು ದಿನಸಿ ಉತ್ಪನ್ನಗಳನ್ನು ಖರೀದಿಸಲು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4 ಉತ್ತಮ ಸಮಯ. ಆದರೆ, ಮೊಬೈಲ್, ಟ್ಯಾಬ್ಲೆಟ್ ಮತ್ತು ಇತರ ಗ್ಯಾಜೆಟ್ಗಳನ್ನು ಸೆಪ್ಟೆಂಬರ್ 30 ರಿಂದ ಖರೀದಿಸಬಹುದಾಗಿದೆ. ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯರಿಗೆ ಬಿಗ್ ಬಿಲಿಯನ್ ಡೇ ಸೇಲ್ಗೆ ನಾಲ್ಕು ಗಂಟೆಗಳ ಮುಂಚೆಯೇ ಪ್ರವೇಶ ಸಿಗಲಿದೆ.
ಇನ್ನು, ಈ ಮಹಾ ಸೇಲ್ ಹೆಚ್ಚುವರಿ ರಿಯಾಯಿತಿ, ಕ್ಯಾಶ್ಬ್ಯಾಕ್ ಕೊಡುಗೆ, ಜಿಎಸ್ಟಿ ಇನ್ವಾಯ್ಸ್ಗಳನ್ನು ಬಳಸುವಾಗ ಇತರ ವ್ಯವಹಾರಗಳ ಮೇಲೆ ಶೇ.28ರಷ್ಟು ಉಳಿತಾಯ, ಎಚ್ಎಸ್ಬಿಸಿ ಕ್ಯಾಶ್ಬ್ಯಾಕ್ ಕಾರ್ಡ್ನೊಂದಿಗೆ ತ್ವರಿತ ರಿಯಾಯಿತಿ, ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನಲ್ಲಿ ಅನ್ಲಿಮಿಟೆಡ್ ಕ್ಯಾಶ್ಬ್ಯಾಕ್ ಮತ್ತು ಹೆಚ್ಚಿನ ಆಫರ್ಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ಮೊಬೈಲ್, ಟಿವಿ, ಲ್ಯಾಪ್ಟಾಪ್ ಮೇಲೆ ಕ್ರೇಜಿ ಡೀಲ್
ಈ ವಿಭಾಗದಲ್ಲಿ ನಿಮಗೆ ಮೊಬೈಲ್, ಟಿವಿ, ಲ್ಯಾಪ್ಟಾಪ್ ಮತ್ತು ಇತರ ಉತ್ಪನ್ನಗಳ ಮೇಲೆ ಸಾಕಷ್ಟು ಕ್ರೇಜಿ ಕೊಡುಗೆಗಳನ್ನು ಫ್ಲಿಪ್ಕಾರ್ಟ್ ನೀಡುತ್ತದೆ. ನಿಮ್ಮ ವ್ಯವಹಾರಗಳನ್ನು ನೀವು ಮಧ್ಯರಾತ್ರಿ 12, ಬೆಳಗ್ಗೆ 8, ಮಧ್ಯಾಹ್ನ 12 ಮತ್ತು ರಾತ್ರಿ 8 ಗಂಟೆಗೆ ಲಾಕ್ ಮಾಡಬಹುದಾಗಿದೆ. ಹಲವಾರು ಹೊಸ ಸ್ಮಾರ್ಟ್ಫೋನ್ಗಳು ನಿಮ್ಮನ್ನು ಆಕರ್ಷಿಸಲಿದ್ದು, ಬಿಡುಗಡೆಗೂ ಮುನ್ನವೆ ಬುಕ್ ಮಾಡಬಹುದಾಗಿದೆ.

ಮಹಾ ಪ್ರೈಸ್ ಡ್ರಾಪ್
ಇಲ್ಲಿ ಭಾರೀ ದರ ಕಡಿತದೊಂದಿಗೆ ನಿಮಗೆ ವಿಭಿನ್ನ ಬಟ್ಟೆಯ ಬ್ರಾಂಡ್ಗಳು, ಸೌಂದರ್ಯ ಉತ್ಪನ್ನಗಳು, ಮನೆ ಅಲಂಕಾರಿಕ ವಸ್ತುಗಳು ಮತ್ತು ಹೆಚ್ಚಿನವುಗಳು ದೊರೆಯುತ್ತವೆ. ಬೆಲೆ ಕಡಿತವಷ್ಟೇ ಅಲ್ಲದೇ ಇಲ್ಲಿನ ಉತ್ಪನ್ನಗಳಿಗೆ ನೀವು ಹೆಚ್ಚುವರಿ ಶೇ.20ರಷ್ಟು ರಿಯಾಯಿತಿ ಪಡೆಯುವ ಅವಕಾಶ ಇದೆ.

ಸ್ಮಾರ್ಟ್ಫೋನ್ಗಳ ಪ್ರತಿ ಗಂಟೆ ಫ್ಲ್ಯಾಶ್ ಸೇಲ್
ಸ್ಮಾರ್ಟ್ಫೋನ್ಗಳ ಮೇಲೆ ಬಿಗ್ ಬಿಲಿಯನ್ ಡೇ ಸೇಲ್ ಅಸಂಖ್ಯಾತ ಆಫರ್ಗಳನ್ನು ನೀಡುತ್ತಿದೆ. ಈ ಕೊಡುಗೆಗಳು ಪ್ರತಿ ಗಂಟೆಗೊಮ್ಮೆ ಹೆಚ್ಚಿನ ಆಶ್ಚರ್ಯಭರಿತ ಆಫರ್ಗಳಿಂದ ನಿಮ್ಮನ್ನು ಆಕರ್ಷಿಸುವುದಲ್ಲದೇ ಸ್ಮಾರ್ಟ್ಫೋನ್ ಖರೀದಿಸಲು ಮತ್ತಷ್ಟು ಪ್ರಚೋದಿಸುತ್ತದೆ.

ಬ್ಯುಸಿ ಅವರ್ ಡಿಸ್ಕೌಂಟ್
ರಷ್ ಅವರ್ ರಿಯಾಯಿತಿಯಡಿಯಲ್ಲಿ, ವಿಭಿನ್ನ ಉತ್ಪನ್ನಗಳನ್ನು ಖರೀದಿಸಲು ಹೆಚ್ಚುವರಿ ರಿಯಾಯಿತಿಗಳನ್ನು ನೀವು ಪಡೆಯುತ್ತೀರಿ. ರಷ್ ಅವರ್ ಮಧ್ಯರಾತ್ರಿ 12 ರಿಂದ ತಡರಾತ್ರಿ 2 ಗಂಟೆಯವರೆಗೆ ಇರುತ್ತದೆ ಎಂಬುದನ್ನು ಗಮನಿಸಬೇಕು. ಬಿಗ್ ಬಿಲಿಯನ್ ಡೇ ಸೇಲ್ ಮುಂದುವರೆದಂತೆ ಈ ರಿಯಾಯಿತಿಯ ಬಗ್ಗೆ ನೀವು ಹೆಚ್ಚಿನದನ್ನು ತಿಳಿದುಕೊಳ್ಳುತ್ತೀರಿ.

ಕಾಂಬೊ ಡೀಲ್ಗಳು
ಫ್ಲಿಪ್ಕಾರ್ಟ್ ನೀಡುವ ಕಾಂಬೊ ಡೀಲ್ಗಳ ಮೇಲೆ ಒಂದು ಸಲ ಗಮನಹರಿಸುವುದು ಅವಶ್ಯವಾಗಿದೆ. ಮೂರು ಉತ್ಪನ್ನಗಳನ್ನು ಖರೀದಿಸಿದರೆ ಹೆಚ್ಚುವರಿ ಶೇ.10ರಷ್ಟು ರಿಯಾಯಿತಿ ದೊರೆಯುತ್ತದೆ. ನಾಲ್ಕು ಉತ್ಪನ್ನಗಳಿಗೆ ಹೆಚ್ಚುವರಿ ಶೇ.15ರಷ್ಟು ರಿಯಾಯಿತಿ ದೊರೆತರೆ. ರೂ. 1,999 ಶಾಪಿಂಗ್ಗೆ ಹೆಚ್ಚುವರಿ ಶೇ.15 ರಷ್ಟು, ರೂ. 1,499 ಹೆಚ್ಚುವರಿ ಶೇ.10ರಷ್ಟು ರಿಯಾಯಿತಿ ದೊರೆಯುತ್ತದೆ.

ಟಿವಿ ಮತ್ತು ಉಪಕರಣಗಳಲ್ಲಿ ಶೇ.75ರವರೆಗೆ ರಿಯಾಯಿತಿ
ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಕೆಲವು ಟಿವಿ ಮತ್ತು ಉಪಕರಣಗಳಲ್ಲಿ ಹಲವಾರು ಡೀಲ್ಗಳನ್ನು ನೀಡುತ್ತದೆ. ಈ ಉತ್ಪನ್ನಗಳ ಮೇಲೆ ನೀವು ಶೇ.75ರಷ್ಟು ರಿಯಾಯಿತಿ ಪಡೆಯಬಹುದು. ಉತ್ತಮ ವಿನಿಮಯ ಕೊಡುಗೆಗಳು, ಸಂಪೂರ್ಣ ಉಪಕರಣಗಳ ರಕ್ಷಣೆ ಮತ್ತು 36 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳಂತಹ ಇತರ ಡೀಲ್ಗಳನ್ನು ಇಲ್ಲಿ ಪಡೆಯಬಹುದು.

ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳಲ್ಲಿ ಶೇ.90ರವರೆಗೆ ಡಿಸ್ಕೌಂಟ್
ಕೆಲವು ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳಳ ಮೇಲೆ ಶೇ.90ರವರೆಗೆ ರಿಯಾಯಿತಿ ಪಡೆಯಬಹುದು. ಹೊಸ ಉತ್ಪನ್ನಗಳನ್ನು ಆಕರ್ಷಕ ಕೊಡುಗೆಗಳೊಂದಿಗೆ ನೀಡಲಾಗುತ್ತಿದ್ದು, ಮೂರು ಕೋಟಿಗೂ ಹೆಚ್ಚು ಉತ್ಪನ್ನಗಳು ಭಾರೀ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ.

ಶೇ.90ರವರೆಗೆ ಫ್ಯಾಷನ್ ಉತ್ಪನ್ನಗಳಲ್ಲಿ ರಿಯಾಯಿತಿ
ಫ್ಯಾಷನ್ ಉತ್ಪನ್ನಗಳ ಮೇಲೆ ಗ್ರಾಹಕರು ಶೇ.90ರಷ್ಟು ರಿಯಾಯಿತಿ ಪಡೆಯುತ್ತಾರೆ. ಅದಲ್ಲದೇ ಸೆಪ್ಟೆಂಬರ್ 29 ರಂದು ಗ್ರಾಹಕರು ಧಿರಿಸುಗಳ ಮೇಲೆ ಹೆಚ್ಚುವರಿ ಶೇ.10ರಷ್ಟು ರಿಯಾಯಿತಿ ಪಡೆಯುತ್ತಾರೆ. ಶಾಪಿಂಗ್ ಪೋರ್ಟಲ್ ಸಾವಿರಕ್ಕೂ ಹೆಚ್ಚು ವಿವಿಧ ಬ್ರಾಂಡ್ಗಳ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

49 ರೂ. ಆಫರ್
ಎಲ್ಲಾ ಸೌಂದರ್ಯ ಉತ್ಪನ್ನಗಳು, ಆಟಿಕೆಗಳು, ಮಗುವಿನ ಆರೈಕೆ ಉತ್ಪನ್ನಗಳು 49 ರೂ.ಗೆ ಖರೀದಿಸಬಹುದು. ಸೆಪ್ಟೆಂಬರ್ 29 ರಂದು ಖರೀದಿಸಿದರೆ ಹೆಚ್ಚುವರಿ ಶೇ.10ರಷ್ಟು ರಿಯಾಯಿತಿ ದೊರೆಯುತ್ತದೆ. ಇಲ್ಲಿ ನಿಮಗೆ ಐದು ಲಕ್ಷಕ್ಕೂ ಹೆಚ್ಚು ಉತ್ಪನ್ನಗಳು ಸಿಗಲಿವೆ.

ಗೃಹೋಪಯೋಗಿ ಮತ್ತು ಪೀಠೋಪಕರಣಗಳಲ್ಲಿ ಶೇ.50 ರಿಂದ ಶೇ.90ರಷ್ಟು ರಿಯಾಯಿತಿ
ನಿಮ್ಮ ನೆಚ್ಚಿನ ಗೃಹೋಪಯೋಗಿ ಮತ್ತು ಪೀಠೋಪಕರಣಗಳನ್ನು ಶೇ.50 ರಿಂದ ಶೇ.90ರವರೆಗೆ ರಿಯಾಯಿತಿಯೊಂದಿಗೆ ಪಡೆಯಬಹುದು. ಇಲ್ಲಿ ಉತ್ಪನ್ನಗಳನ್ನು ಖರೀದಿಸಿದಾಗ ಉಚಿತ ವಿತರಣೆ ಮತ್ತು ಉಚಿತ ಅನುಷ್ಠಾನ ಸೇವೆಗಳನ್ನು ಪಡೆಯುತ್ತೀರಿ. ಇಲ್ಲಿಯೂ ಸಹ ಐದು ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು ನೀವು ಖರೀದಿಸಬಹುದು.

ಫ್ಲಿಪ್ಕಾರ್ಟ್ ಬ್ರಾಂಡ್ ಉತ್ಪನ್ನಗಳಲ್ಲಿ ಶೇ.90ರವರೆಗೆ ಡಿಸ್ಕೌಂಟ್
ಫ್ಲಿಪ್ಕಾರ್ಟ್ನ ಬ್ರಾಂಡ್ ಉತ್ಪನ್ನಗಳ ಮೇಲೆ ಗ್ರಾಹಕರು ಶೇ.90 ರವರೆಗೆ ರಿಯಾಯಿತಿ ಪಡೆಯಲಿದ್ದಾರೆ. ಒಟ್ಟು 14 ಬ್ರ್ಯಾಂಡ್ಗಳಿದ್ದು, 350+ ನಗರಗಳಲ್ಲಿ ಲಭ್ಯವಿವೆ. ಈ ಬ್ರಾಂಡ್ಗಳಡಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು ಗ್ರಾಹಕರು ಖರೀದಿಸಬಹುದು.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090