ವಿಶ್ವದ ಪ್ರಸಿದ್ದ ಆಪ್‌ಗಳಲ್ಲಿ ಫೇಸ್‌ಬುಕ್‌ನದ್ದೇ ಅಧಿಪತ್ಯ!

|

ಇದು ಡಿಜಟಲ್‌ ಲೋಕ ಎಲ್ಲದಕ್ಕೂ ಆಪ್‌ಗಳನ್ನ ಬಳಸೋದಕ್ಕೆ ಮುಂದಾಗುತ್ತವೆ. ಭಾವನೆಗಳನ್ನ ವ್ಯಕ್ತಪಡಿಸುವುದರಿಂದ ಹಿಡಿದು ಊಟವನ್ನ ಆರ್ಡರ್‌ ಮಾಡುವವರೆಗೂ ಆಪ್‌ಗಳ ಮೊರೆ ಹೋಗುತ್ತೇವೆ. ಆಟ ವಾಡುವುದರಿಂದ ಹಿಡಿದು ಶಾಂಪಿಂಗ್‌ ಮಾಡುವುದಕ್ಕೂ ಕೂಡ ಆಪ್‌ಗಳು ಬಂದಾಗಿದೆ. ಅದರಲ್ಲೂ ಸೋಶೀಯಲ್‌ ಮೀಡಿಯಾಗೆ ಸಂಬಂಧಿಸಿದ ಆಪ್‌ಗಳು ಮನುಷ್ಯನಿಗೆ ಸಾಕಷ್ಟು ಹತ್ತಿರವಾಗಿ ಬಿಟ್ಟಿದೆ. ಹಾಗಾದ್ರೆ ಕಳೆದ ಕೆಲ ವರ್ಷಗಳಿಂದ ಅತಿ ಹೆಚ್ಚು ಡೌನ್‌ಲೋಡ್‌ ಆದ ಸೋಶಿಯಲ್‌ ಮೀಡಿಯಾ ಆಪ್‌ಗಳು ಯಾವುವು. ಆ ಮಾಹಿತಿ ಇದೀಗ ಬಹಿರಂಗವಾಗಿದೆ.

ಗೂಗಲ್‌

ಹೌದು ಗೂಗಲ್‌ ಅನಾಲಿಟಿಕಾ ಸಂಸ್ಥೆ ಕಳೆದ ಕೆಲ ವರ್ಷಗಳಿಂದ ಅತಿ ಹೆಚ್ಚು ಡೌನ್‌ಲೋಡ್‌ ಆದ ಆಪ್‌ಗಳ ಬಗ್ಗೆ ಮಾಹಿತಿ ನೀಡಿದೆ. ಈ ಮಾಹಿತಿಯ ಪ್ರಕಾರ ಜನಪ್ರಿಯ ಸೋಶಿಯಲ್‌ ಮಿಡಿಯಾ ಆಪ್‌ ಆದ ಫೇಸ್‌ಬುಕ್‌ ಮೊದಲ ಸ್ಥಾನದಲ್ಲಿದೆ. ಅಷ್ಟೇ ಅಲ್ಲ ಮೊದಲ ನಾಲ್ಕು ಸ್ಥಾನಗಳಲ್ಲಿ ಫೆಸ್‌ಬುಕ್‌ ಒಡೆತನದ ಆಪ್‌ಗಳೇ ಸ್ಥಾನ ಪಡೆದುಕೊಂಡಿದ್ದು ಗ್ರಾಹಕರು ಅತಿ ಹೆಚ್ಚು ಡೌನ್‌ಲೋಡ್‌ ಮಾಡಿದ ಆಪ್‌ಗಳಾಗಿವೆ.

ಅನಾಲಿಟಿಕಾ

ಸದ್ಯ ಗೂಗಲ್‌ ಅನಾಲಿಟಿಕಾ ಪ್ರಕಾರ ಕಳೆದ ಒಂದು ದಶಕದಿಂದಲೂ ಫೇಸ್‌ಬುಕ್‌ ಆಪ್‌ ಅನ್ನ ಅತಿ ಹೆಚ್ಚು ಗ್ರಾಹಕರರು ಡೌನ್‌ಲೋಡ್‌ ಮಾಡಿಕೊಂಡಿದ್ದು ಆಪ್‌ ಮಾರುಕಟ್ಟೆಯಲ್ಲಿ ಫೇಸ್‌ಬುಕ್‌ ತನ್ನ ಪ್ರಾಬಲ್ಯವನ್ನ ಸಾಧಿಸಿದೆ. ಈ ಮೂಲಕ ಸಾಮಾಜಿಕ ಮಾಧ್ಯಮವಾಗಿ ಗುರ್ತಿಸಿಕೊಂಡಿರೋ ಫೇಸ್‌ಬುಕ್‌ ಗ್ರಾಹಕರ ಅವಿಭಾಜ್ಯ ಅಂಗವಾಗಿಯೇ ಹೋಗಿ ಬಿಟ್ಟಿದೆ. ಅಷ್ಟೇ ಅಲ್ಲ ಗೂಗಲ್‌ ಅನಾಲಿಟಿಕಾ ವರದಿಯ ಪ್ರಕಾರ ಅತಿಹೆಚ್ಚು ಡೌನ್‌ ಲೋಡ್‌ ಆದ ಟಾಪ್‌ ಟೆನ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಫೇಸ್‌ಬುಕ್‌ ಮೆಸೆಂಜರ್‌, ಮೂರನೇ ಸ್ಥಾನದಲ್ಲಿ ಫೆಸ್‌ಬುಕ್‌ ಒಡೆತನದ ಅಡಿಯಲ್ಲಿಯೇ ಬರುವ ವಾಟ್ಸಾಪ್‌ ಮೂರನೇ ಸ್ಥಾನ ಮತ್ತು ಇನ್‌ಸ್ಟಾಗ್ರಾಮ್‌ ನಾಲ್ಕನೇ ಸ್ಥಾನವನ್ನ ಪಡೆದುಕೊಂಡಿವೆ.

ಟಾಪ್‌

ಇನ್ನು ಟಾಪ್‌ ನಾಲ್ಕು ಸ್ಥಾನ ಪಡೆದುಕೊಂಡಿರುವ ಆಪ್‌ಗಳೆಲ್ಲವೂ ಯುಎಸ್‌ ಮೂಲದ ಕಂಪೆನಿಗಳೇ ಆಗಿವೆ. ಇನ್ನು 5ನೇ ಸ್ಥಾನದಲ್ಲಿ ಸ್ನಾಪ್‌ಚಾಟ್‌ ಆಪ್‌, 6ನೇ ಸ್ಥಾನದಲ್ಲಿ ಸ್ಕೈಪ್, 7ನೇ ಸ್ಥಾನದಲ್ಲಿ ಜನಪ್ರಿಯ ಟಿಕ್‌ಟಾಕ್‌, 8ನೇ ಸ್ಥಾನದಲ್ಲಿ ಯುಸಿ ಬ್ರೌಸರ್‌, 9ನೇ ಸ್ಥಾನದಲ್ಲಿ ಯುಟ್ಯೂಬ್‌, 10ನೇ ಸ್ಥಾನದಲ್ಲಿ ಟ್ವಿಟ್ಟರ್‌ ಆಪ್‌ಗಳು ಸ್ಥಾನ ಪಡೆದುಕೊಂಡಿವೆ. ಹಾಗೇ ನೋಡಿದ್ರೆ ಇತ್ತಿಚೀನ ದಿನಗಳಲ್ಲಿ ಟಿಕ್‌ಟಾಕ್‌ ಆಪ್‌ ಬಾರಿ ಜನಪ್ರಿಯತೆ ಗಳಿಸುತ್ತಿದೆ, ಆದರೂ ಕೂಡ 7ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿರೋದು ನಿಜಕ್ಕೂ ಆಶ್ಚರ್ಯವೆನಿಸದೇ ಇರೋದಿಲ್ಲ.

ಯುಟ್ಯೂಬ್‌

ಅಷ್ಟೇ ಯಾಕೆ ಇತ್ತೀಚಿನ ದಿನಗಳಲ್ಲಿ ಯುಟ್ಯೂಬ್‌ ಬಳಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಪ್ರತಿಯೊಂದು ವೀಡಿಯೋಗಳನ್ನ ಶೇರ್‌ ಮಾಡುವುದರಿಂದ ಹಿಡಿದು ಯಾವುದೇ ಹೊಸ ವೀಡಿಯೋಗಳನ್ನ ವೀಕ್ಷಿಸುವುದಕ್ಕೆ ಹೆಚ್ಚಾಗಿ ಯುಟ್ಯೂಬ್‌ ಅನ್ನ ಬಳಸಲಾಗುತ್ತೆ.ಆದರೂ ಕೂಡ ಯುಟ್ಯೂಬ್‌ ಅತಿ ಹೆಚ್ಚು ಡೌನ್‌ಲೋಡ್‌ ಆದ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿರೋದನ್ನ ನಾವು ಗಮನಿಸಲೇಬೇಕಾಗುತ್ತೆ. ಅಷ್ಟೇ ಅಲ್ಲ ಚೀನಾ ಮೂಲದ ಆಪ್‌ ಕಂಪೆನಿಗಳು ಟಾಪ್‌5 ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದು, ಯುಎಸ್‌ ಮೂಲದ ಕಂಪೆನಿಗಳು ಪಾರಮ್ಯ ಮೆರೆದಿವೆ.

ಗೌಪ್ಯ

ಇತ್ತೀಚಿನ ದಿನಗಳಲ್ಲಿ ಫೆಸ್‌ಬುಕ್‌ನಲ್ಲಿ ಬಳಕೆದಾರನ ಗೌಪ್ಯ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪ ಪದೇ ಪದೇ ಕೇಳಿ ಬಂದರೂ ಸಹ ಫೇಸ್‌ಬುಕ್‌ ಪಾರಮ್ಯ ಸಾಧಿಸಿರೋದು ಗಮನಾರ್ಹವಾಗಿದೆ. ಬೇರೆಲ್ಲಾ ಆಪ್‌ಗಳು ಎಷ್ಟೇ ಜನಪ್ರಿಯತೆ ಸಾಧಿಸುತ್ತಿದ್ದರೂ ಸಹ ಸಾಮಾಜಿಕ ಮಾಧ್ಯಮ ಫೆಸ್‌ಬುಕ್‌ ಅನ್ನ ಸೈಡ್‌ಗೆ ಹಾಕೋಕೇ ಸಾಧ್ಯವಾಗಿಲ್ಲ.

Most Read Articles
Best Mobiles in India

English summary
Analytics firm App Annie revealed data about the most-downloaded apps and games of the past ten years. Most of it is about what you’d expect: microtransaction games dominated, as did social media and telecommunications. But there is one small detail that’s a bit galling: Facebook, quite literally, owned this decade.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X