ಬರಲಿದೆ ಫ್ಯೂಜಿಫಿಲ್ಮ್ ಕಂಪೆನಿಯ X100V ಕಾಂಪ್ಯಾಕ್ಟ್ ಕ್ಯಾಮೆರಾ!

|

ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾ ಪ್ರಪಂಚ ಸಾಕಷ್ಟು ಕಲರ್‌ಫುಲ್‌ ಆಗಿದೆ. ಹೊಸ ಮಾದರಿಯ ಆಕರ್ಷಕ ಫಿಚರ್ಸ್‌ಗಳನ್ನ ಹೊಂದಿರುವ ಕ್ಯಾಮೆರಾಗಳನ್ನ ಮಾರುಕಟ್ಟೆಯಲ್ಲಿ ನಾವಿಂದು ನೋಡಬಹುದಾಗಿದೆ. ಅವುಗಳಲ್ಲಿ ಫ್ಯೂಜಿಫಿಲ್ಮ್‌ ಕಂಪೆನಿ ಕೂಡ ಒಂದಾಗಿದ್ದು, ತನ್ನ ಗುಣಮಟ್ಟದ ಕ್ಯಾಮೆರಾಗಳಿಂದ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಅಲ್ಲದೆ ಈಗಾಗ್ಲೆ ಹಲವು ಮಾದರಿಯ ಕ್ಯಾಮೆರಾಗಳನ್ನ ಫ್ಯೂಜಿಫಿಲ್ಮ್‌ ಕಂಪೆನಿ ಪರಿಚಯಿಸಿದ್ದು ಇದೀಗ ಹೊಸ ಆವೃತ್ತಿಯ ಕ್ಯಾಮೆರಾವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.

ಹೌದು

ಹೌದು, ಜಾಗತಿಕ ಕ್ಯಾಮೆರಾ ಮಾರುಕಟ್ಟೆಯಲ್ಲಿ ಪ್ರಸಿದ್ದಿಯನ್ನ ಪಡೆದುಕೊಂಡಿರುವ ಫ್ಯೂಜಿಫಿಲ್ಮ್‌ ಕಂಪೆನಿ ತನ್ನ ಹೊಸ ಫ್ಯೂಜಿಫಿಲ್ಮ್ X100V ಕಾಂಪ್ಯಾಕ್ಟ್ ಕ್ಯಾಮೆರಾವನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಇನ್ನು ಈ ಕ್ಯಾಮೆರಾ X100 ಆವೃತ್ತಿಯಲ್ಲಿನ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಕಳೆದ ಒಂದು ದಶಕದ ನಂತರ ಬಂದ ಹೊಸ ವಿನ್ಯಾಸ ಎಂದು ಕಂಪೆನಿ ಹೇಳಿಕೊಂಡಿದೆ. ಅಲ್ಲದೆ X100V ಕ್ಯಾಮೆರಾ ಇಮೇಜ್ ಸೆನ್ಸಾರ್ ಮತ್ತು ಇಮೇಜ್-ಪ್ರೊಸೆಸಿಂಗ್ ಎಂಜಿನ್ ಹೊಂದಿದ್ದು, ಹೊಸತನದ ಅನುಭವ ನೀಡಲದೆ.

ಫ್ಯೂಜಿಫಿಲ್ಮ್ X100V ಕ್ಯಾಮೆರಾ

ಫ್ಯೂಜಿಫಿಲ್ಮ್ X100V ಕ್ಯಾಮೆರಾ

ಇನ್ನು ಫ್ಯೂಜಿಫಿಲ್ಮ್ X100V ಕಂಪ್ಯಾಕ್ಟ್‌ ಕ್ಯಾಮೆರಾ ಇಮೇಜ್ ಸೆನ್ಸಾರ್ ಮತ್ತು ಇಮೇಜ್-ಪ್ರೊಸೆಸಿಂಗ್ ಎಂಜಿನ್ ಹೊಂದಿದ್ದು ಗುಣ್ಣಮಟ್ಟದ ಇಮೇಜ್‌ಗಳನ್ನ ರಿ ಪ್ರೊಡಕ್ಷನ್‌ ಮಾಡಲು ಅವಕಾಶ ನೀಡಲಿದೆ. ಇದಲ್ಲದೆ ಫ್ಯೂಜಿಫಿಲ್ಮ್ X100V 26.1-ಮೆಗಾಪಿಕ್ಸೆಲ್ X-ಟ್ರಾನ್ಸ್ CMOS 4 ಸೆನ್ಸಾರ್‌ ಅನ್ನು ಹೊಂದಿದೆ, ಇದು ಎಕ್ಸ್-ಪ್ರೊಸೆಸರ್ 4 ಹೈ-ಸ್ಪೀಡ್ ಇಮೇಜ್ ಪ್ರೊಸೆಸಿಂಗ್ ಎಂಜಿನ್ ಜೊತೆಗೆ ವಿವಿಧ ಬಣ್ಣಗಳಲ್ಲಿ ಪ್ರೀಮಿಯಂ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಈ ಕ್ಯಾಮೆರಾದ ವ್ಯೂಫೈಂಡರ್ ಸುಧಾರಿತ ಹೈಬ್ರಿಡ್ ವ್ಯೂಫೈಂಡರ್ ಆಗಿದ್ದು, ಇದು ಫೊಟೋಗ್ರಾಫರ್‌ ಇಮೇಜ್‌ ಚಿತ್ರಿಕರಿಸಲು ತೆಗೆದುಕೊಳ್ಳುವ ಆಯ್ಕೆಯ ಮೇಲೆ ಆಪ್ಟಿಕಲ್ ವ್ಯೂಫೈಂಡರ್ ಮತ್ತು ಎಲೆಕ್ಟ್ರಾನಿಕ್ ವ್ಯೂಫೈಂಡರ್ ನಡುವೆ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ X100V ಕ್ಯಾಮೆರಾ 4Kವೀಡಿಯೊವನ್ನು ಸೆಕೆಂಡಿಗೆ 30 ಫ್ರೇಮ್‌ಗಳವರೆಗೆ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಂದರೆ 1080p ನಲ್ಲಿ ಸೆಕೆಂಡಿಗೆ 120 ಫ್ರೇಮ್‌ಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಒಳಗೊಂಡಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಫ್ಯೂಜಿಫಿಲ್ಮ್ X100V ಕ್ಯಾಮೆರಾದಲ್ಲಿ ಫೋಟೋ ತೆಗೆಯುವ ಹಾಗೂ ವಿಡಿಯೋ ಮಾಡುವಾಗ ಗುಣ್ಣಮಟ್ಟ ಹಾಗೂ ಉತ್ತಮ ರೆಕಾರ್ಡ್‌ ಔಟ್‌ಪುಟ್‌ಗಾಗಿ "ಮೊನೊಕ್ರೊಮಾಟಿಕ್‌ ಕಲರ್‌" ಮತ್ತು "ಕಲರ್‌ ಕ್ರೋಮ್‌ ಎಫೆಕ್ಟ್‌" ಅನ್ನು ಹೆಚ್ಚುವರಿಯಾಗಿ ಅಳವಡಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಇದಲ್ಲದೆ ಫ್ಯೂಜಿಫಿಲ್ಮ್X100V ಹೊಸ X-ಟ್ರಾನ್ಸ್ CMOS 4 ಸೆನ್ಸಾರ್‌ ಅನ್ನು ಖಚಿತಪಡಿಸಿಕೊಳ್ಳಲು 2nd gen 23 mmf / 2.0 ಲೆನ್ಸ್ ಅನ್ನು ನೀಡಲಾಗಿದೆ. ಅಲ್ಲದೆ ಇಂಟರ್‌ನಲ್ಲಿ 4-ಸ್ಟಾಪ್ ND ಫಿಲ್ಟರ್ ನಲ್ಲಿ WCL/TCL ಕನ್‌ವರ್ಷನ್‌ ಲೆನ್ಸ್‌ ಜೊತೆಗೆ ಕಾರ್ಯ ನಿರ್ವಹಿಸುತ್ತದೆ.

ಇತರೆ

ಇತರೆ

ಇನ್ನು ಈ ಹೊಸ ಕ್ಯಾಮೆರಾದ ಜೊತೆಗೆ ಫ್ಯೂಜಿಫಿಲ್ಮ್ XC35 MMF2 ಮತ್ತು GF45-100 MMF4. XC 35 MM ಎಂಬ ಎರಡು ಹೊಸ ಲೆನ್ಸ್‌ಗಳನ್ನು ಸಹ ಬಿಡುಗಡೆ ಮಾಡಲಿದೆ. ಇನ್ನು APS-C ಫಾರ್ಮ್ಯಾಟ್ ಅನ್ನು ಫ್ಯೂಜಿಫಿಲ್ಮ್ X-ಮೌಂಟ್ ಮಿರರ್‌ಲೆಸ್ ಕ್ಯಾಮೆರಾಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸದ್ಯ ಫ್ಯೂಜಿಫಿಲ್ಮ್‌ ಹೊಸ ಕ್ಯಾಂಎರಾವನ್ನು ಭಾರತದಲ್ಲಿ ಬಿಡುಗಡೆ ಗೊಳಿಸಲಿದೆ. ಆದರೆ ಇದರ ಬೆಲೆ ಏನು, ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇನ್ನು ಬಹಿರಂಗಗೊಂಡಿಲ್ಲ.

Most Read Articles
Best Mobiles in India

English summary
Fujifilm X100V features a 26.1-Megapixel X-Trans CMOS 4 sensor and X-Processor 4 high-speed image processing engine.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X