15 ವರ್ಷ ತುಂಬಿದ ಜಿಮೇಲ್ ಈಗ ಮತ್ತಷ್ಟು ಸ್ಮಾರ್ಟ್‌!..ಬೆಸ್ಟ್ ಅಪ್‌ಡೇಟ್ಸ್!

|

ಜಗತ್ತಿನಾದ್ಯಂತ ಮಾಸಿಕ ಜಿಮೇಲ್ ಬಳಕೆದಾರರ ಪ್ರಮಾಣ 150 ಕೋಟಿಯಷ್ಟಿದೆ ಎಂದರೆ ಆಶ್ಚರ್ಯವೇನೂ ಆಗುವುದಿಲ್ಲ. ಆದರೆ, ಯಹೂ, ರೆಡಿಫ್ ನಂತರ 2004ರ ಏಪ್ರಿಲ್ 1 ರಂದು ಹುಟ್ಟಿದ ಜಿಮೇಲ್ ಇಷ್ಟು ದೊಡ್ಡ ವೇದಿಕೆಯಾಗಿ ಬೆಳೆದುಬಂದಿದ್ದು ಇದೀಗ ಇತಿಹಾಸ. ಏಕೆಂದರೆ, 2004ರ ಏಪ್ರಿಲ್ 1 ರಂದು ಪೌಲ್ ಬಕೈಟ್ ಅಭಿವೃದ್ಧಿ ಪಡಿಸಿದ ಜಿಮೇಲ್ ಈ ನವಯುಗದ ಇಮೇಲ್ ಪ್ರಪಂಚದಲ್ಲಿ ಮಹಾಗುರುವಿನ ಸ್ಥಾನ ಪಡೆದುಕೊಂಡಿದೆ.

ಆರಂಭಿಕ ಹಂತದಲ್ಲಿ ಇಸ್ವೈಟ್ ಬೇಸಿಸ್‍ನಲ್ಲಿ ಕಾರ್ಯ ಆರಂಭಿಸಿದ್ದ ಜಿಮೇಲ್ ಆ ಸಂದರ್ಭದಲ್ಲಿ 1ಜಿಬಿವರೆಗಿನ ಸ್ಟೋರೇಜ್ ಸೌಲಭ್ಯವನ್ನು ಒದಗಿಸುತ್ತಿತ್ತು. ಆದರೀಗ ಪ್ರತಿ ಬಳಕೆದಾರರಿಗೆ 15GB ಉಚಿತ ಸ್ಟೋರೇಜ್ ಸೌಲಭ್ಯವನ್ನು ಕಲ್ಪಿಸಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ವೆಬ್‌ಸೈಟ್‌ಗಳ ಪ್ರವೇಶಕ್ಕೆ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಹಾರಕ್ಕೂ ಜಿಮೇಲ್ ಅತಿ ಅನಿವಾರ್ಯ ಪರಿಸ್ಥಿತಿಗೆ ಬರಲಾಗಿದೆ. ಇದು ಜಿಮೇಲ್‌ನ ಹೆಗ್ಗಳಿಕೆಯೂ ಸರಿ.

15 ವರ್ಷ ತುಂಬಿದ ಜಿಮೇಲ್ ಈಗ ಮತ್ತಷ್ಟು ಸ್ಮಾರ್ಟ್‌!..ಬೆಸ್ಟ್ ಅಪ್‌ಡೇಟ್ಸ್!

ಇಂತಹ ಜಿಮೇಲ್‌ಗೆ ಇದೀಗ 15 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗೂಗಲ್ ಜಿಮೇಲ್‍ನಲ್ಲಿ ಹಲವು ನೂತನ ಫೀಚರ್‌ಗಳನ್ನು ಪರಿಚಯಿಸಿದೆ. ದೊಡ್ಡ ಗಾತ್ರದ ವಿಡಿಯೋಗಳನ್ನು ಗೂಗಲ್ ಡ್ರೈವ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದಾದ ಮತ್ತು ಸುಲಭವಾಗಿ ಇಮೇಲ್ ಮೂಲಕ ರವಾನಿಸಬಹುದಾದ ಜಿಮೇಲ್‌ನಲ್ಲಿ ಇದೀಗ ತನ್ನ ವಿನ್ಯಾಸವನ್ನು ಬದಲಾಯಿಸಿಕೊಂಡಿದೆ. ಹಾಗಾದರೆ, ಗೂಗಲ್‌ ಇತ್ತೀಚಿಗೆ ಜಿಮೇಲ್‌ನಲ್ಲಿ ಪರಿಚಯಿಸಿದ ಫೀಚರ್ಸ್ ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ

ಜಿಮೇಲ್ ಇನ್‌ಬಾಕ್ಸ್‌ನಲ್ಲಿನ ಬಹುಮುಖ್ಯವಾದ ಇಮೇಲ್‌ಗಳಿಗೆ ತಕ್ಷಣ ಸ್ಪಂದಿಸಲು, ಅಥವಾ ಪ್ರತಿಕ್ರಿಯೆ ಬರೆಯಲು ನೆರವಾಗುವಂತೆ 'ಕೃತಕ ಬುದ್ಧಿಮತ್ತೆ' ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಇದರಿಂದ ತಕ್ಷಣವೇ ಇಮೇಲ್‌ಗೆ ಪ್ರತಿಕ್ರಿಯಿಸಬಹುದಾಗಿದ್ದು, ಈ ಕೃತಕ ಬುದ್ಧಿಮತ್ತೆ' ತಂತ್ರಜ್ಞಾನದಿಂದ ಜಿಮೇಲ್ ಬಳಕೆದಾರರಿಗೆ ಭಾರೀ ಸಮಯ ಉಳಿಯುತ್ತದೆ.

ಸ್ಮಾರ್ಟ್ ಕಂಪೋಸ್!

ಸ್ಮಾರ್ಟ್ ಕಂಪೋಸ್!

ಜಿಮೇಲ್‍ನಲ್ಲಿ ಈಗಾಗಲೇ ಕಂಪೋಸ್ ಆಯ್ಕೆ ಇದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಸ್ಮಾರ್ಟ್ ಆಗಲಿದೆ. ಜಿಮೇಲ್‍ನಲ್ಲಿ ಬರೆದಿರುವ ವಿಷಯವನ್ನು ಆಧರಿಸಿ ಸಬ್ಜೆಕ್ಟ್ ಲೈನ್ ಅನ್ನು ಬರೆಯಲು ಜಿಮೇಲ್ ಸಲಹೆ ಮಾಡಲಿದೆ. ಇದರಿಂದ ಜಿಮೇಲ್ ಬಳಕೆದಾರರು ಅತ್ಯಂತ ಸುಲಭವಾಗಿ ಸಂದೆಶಗಳನ್ನು ಸ್ಮಾರ್ಟ್ ಆಗಿ ಕಂಪೋಸ್ ಮಾಡಬಹುದು ಎಂದು ತಿಳಿಯಲಾಗಿದೆ.

ತ್ವರಿತ ಪ್ರತಿಕ್ರಿಯೆ

ತ್ವರಿತ ಪ್ರತಿಕ್ರಿಯೆ

ಈ ಮೊದಲು ಜಿಮೇಲ್ ಇನ್‌ಬಾಕ್ಸ್ ಓಪನ್ ಇದ್ದಾಗ ಗೂಗಲ್ ಡಾಕ್ಸ್‌ನಲ್ಲಿರುವ ಸಂದೇಶಕ್ಕೆ ಪ್ರತಿಕ್ರಿಯೆ ನೀಡಲು, ಸಭೆಯ ಸಮಯ ನಿಗದಿಪಡಿಸಲು, ಕ್ವಶನೇರ್ ತುಂಬಲು ಹೊಸ ಟ್ಯಾಬ್ ಓಪನ್ ಮಾಡಬೇಕಿತ್ತು. ಆದರೀಗ, ಇನ್‌ಬಾಕ್ಸ್ ತೆರೆದಿದ್ದಾಗಲೇ ತ್ವರಿತವಾಗಿ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿದೆ. ಇದು ಇತ್ತೀಚಿನ ಜಿಮೇಲ್ ಅಪ್‌ಡೇಟ್ ಆಗಿದೆ.

ಆಟೋ ಸೆಂಡ್!

ಆಟೋ ಸೆಂಡ್!

ಇಲ್ಲಿಯವರೆಗೆ ಜಿಮೇಲ್ ಮೂಲಕ ಇಮೇಲ್ ಕಳುಹಿಸಲು ನಾವೇ ಸ್ವತಃ ಕಳುಹಿಸಬೇಕಿತ್ತು. ಆದರೆ, ಇನ್ನು ಮುಂದಿನ ದಿನಗಳಲ್ಲಿ ಇಮೇಲ್ ಕಳುಹಿಸಬೇಕಾದ ದಿನ ಸಮಯವನ್ನು ನೀವು ಜಿಮೇಲ್‌ನಲ್ಲಿ ನಿಗದಿಪಡಿಸಿ ಸೆಟ್ ಮಾಡಿಟ್ಟರೆ ಸಾಕಾಗುತ್ತದೆ. ಇದರಿಂದ ಜಿಮೇಲ್ ಮೂಲಕ ನಾವು ಬಯಸಿದ ಸಮಯಕ್ಕೆ ಸ್ವಯಂಚಾಲಿತವಾಗಿ ಆ ಇಮೇಲ್ ಸೆಂಡ್ ಆಗಲಿದೆ.

ಕಾನ್ಪಿಡೇನ್ಷಿಯಲ್ ಮೊಡ್

ಕಾನ್ಪಿಡೇನ್ಷಿಯಲ್ ಮೊಡ್

ಕಾನ್ಪಿಡೇನ್ಷಿಯಲ್ ಮೊಡ್24 ಗಂಟೆಗಳಲ್ಲಿ ನೀವು ಕಳುಹಿಸಿದ ಇಮೇಲ್ ಮಾಯವಾಗುವ ಸೇವೆಯಾಗಿದೆ. ನೀವು ನಿಗಧಿ ಮಾಡಿದ ಸಮಯಕ್ಕೆ ನಿಮ್ಮ ಮೇಲ್ ಆಟೋಮೆಟಿಕ್ ಡಿಲೀಟ್ ಆಗಲಿದೆ. ಒಂದು ದಿನ, ಒಂದು ವಾರ. ಮತ್ತು ಒಂದು ತಿಂಗಳ ಅವಧಿಯನ್ನು ಸೆಲೆಕ್ಡ್ ಮಾಡಿಕೊಳ್ಳಬಹುದಾಗಿದೆ. ನೀವು ಸೆಲೆಕ್ಟ್ ಮಾಡಿದ ಸಮಯಕ್ಕೆ ಮೇಲ್ ಡಿಲೀಟ್ ಆಗಲಿದೆ.

ಮೇಲ್‌ಗೆ ಪಾಸ್‌ಕೋಡ್

ಮೇಲ್‌ಗೆ ಪಾಸ್‌ಕೋಡ್

ನೀವು ಈಗ ಪಾಸ್‌ಕೋಡ್ ಹಾಕಿ ಮೇಲ್ ಮಾಡಬಹುದಾಗಿದೆ. ಪಾಸ್ ಕೋಡ್ ಅನ್ನು ಮೊಬೈಲ್ OTP ಮೂಲಕ ಕಳುಹಿಸಬಹುದಾಗಿದ್ದು, ಪಾಸ್ ಕೋಡ್ ಸೆಲೆಕ್ಡ್ ಮಾಡಿದ ಮೇಲೆ ಸೆಂಟ್ ಬಟನ್ ಕ್ಲಿಕ್ ಮಾಡಿ. ಹೀಗೇ ಮೇಲ್ ಸ್ವೀಕರಿಸಿದವರು ಆ ಸಂದರ್ಭದಲ್ಲಿ OTP ಪಡೆದುಕೊಳ್ಳುತ್ತಾರೆ. ಅದನ್ನು ಆಡ್ ಮಾಡಿದ ನಂತರವೇ ಅವರು ಮೇಲ್ ಅನ್ನು ಓಪನ್ ಮಾಡಬಹುದು.

ಭಾಷೆಗಳಲ್ಲಿ ಸ್ಮಾರ್ಟ್ ಕಂಪೋಸ್

ಭಾಷೆಗಳಲ್ಲಿ ಸ್ಮಾರ್ಟ್ ಕಂಪೋಸ್

ಸ್ಮಾರ್ಟ್ ಕಂಪೋಸ್ ಮೂಲಕ ಇಮೇಲ್ ಬರೆಯಲು ಇಚ್ಛಿಸುವವರಿಗೆ ಜಿಮೇಲ್ ಮತ್ತಷ್ಟು ಭಾಷಾ ಅನುಕೂಲವನ್ನು ಕಲ್ಪಿಸಿದೆ. ನೀವು ಇನ್ಮುಂದೆ ಜಿಮೇಲ್‌ನಲ್ಲಿ ಸ್ಪಾನಿಶ್, ಫ್ರೆಂಚ್, ಇಟಾಲಿಯನ್ ಮತ್ತು ಪೋರ್ಚುಗೀಸ್ ಭಾಷೆಯಲ್ಲೂ ಇಮೇಲ್ ಬರೆಯಬಹುದಾಗಿದೆ. ಆದರೆ, ಭಾರತೀಯ ರೀಜನಲ್ ಭಾಷೆಗಳಿಗೆ ಈ ಆಯ್ಕೆಯನ್ನು ಗೂಗಲ್ ಇನ್ನು ಪರಿಚಯಿಸಿಲ್ಲ.

ಹಲವು ಆಪ್‌ಗಳ ಬಳಕೆ!

ಹಲವು ಆಪ್‌ಗಳ ಬಳಕೆ!

ಹೊಸ ಜಿಮೇಲ್ ಬಲ ತುದಿಯಲ್ಲಿ ಕ್ಯಾಲೆಂಡರ್‌, ಟಾಸ್ಕ್ ಮತ್ತು ಥರ್ಡ್‌ಪಾರ್ಟಿ ಆಡ್‌ ಆನ್‌, ಬಿಸಿನೆಸ್‌ ಅಪ್ಲಿಕೇಷನ್‌ಗಳನ್ನು ಬಳಸಬಹುದಾದ ಆಯ್ಕೆ ನೀಡಲಾಗಿದೆ. ಇದರಿಂದ ಜಿಮೇಲ್ ಬಳಸುವ ಸಂದರ್ಭದಲ್ಲಿ ಈ ಎಲ್ಲಾ ಅಪ್ಲಿಕೇಷನ್ ಬಳಸಬಹುದು. ಇದಕ್ಕಾಗಿ ಪದೇ ಪದೇ ವೆಬ್‌ ಟ್ಯಾಬ್‌ ಬದಲಿಸುತ್ತಿರುವ ಅಗತ್ಯವಿಲ್ಲ.

ವೆಬ್‌ ಬಳಕೆಗೂ ಆಟೊ ರಿಪ್ಲೇ

ವೆಬ್‌ ಬಳಕೆಗೂ ಆಟೊ ರಿಪ್ಲೇ

ಕಳೆದ ವರ್ಷ ಮೊಬೈಲ್‌ನಲ್ಲಿ ಜಿಮೇಲ್ ಬಳಸುವ ಗ್ರಾಹಕರಿಗಾಗಿ ಆಟೊ ರಿಪ್ಲೇ ಎಂಬ ಸೌಲಭ್ಯವನ್ನು ಗೂಗಲ್ ಪರಿಚಯಿಸಿದ್ದು ನಿಮಗೆಲ್ಲಾ ತಿಳಿದಿರಬಹುದು. ಇದೇ ಸೌಲಭ್ಯವನ್ನು ಈಗ ವೆಬ್‌ ಗ್ರಾಹಕರಿಗಾಗಿಯೂ ಪರಿಚಯಿಸಲಾಗಿದೆ. ಹಾಗಾಗಿ, ಈಗ ಡೆಸ್ಕ್‌ಟಾಪ್‌ನಲ್ಲೂ ಜಿಮೇಲ್ ನೊಟಿಫಿಕೇಷನ್ ನೋಡಬಹುದಾದ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ.

Most Read Articles
Best Mobiles in India

English summary
Gmail turns 15: The journey from 1GB space per account to 15GB free storage for its 1.5 bn monthly users. to know motre visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more