ವಿಶ್ವ ತಾಯಂದಿರ ದಿನದ ವಿಶೇಷ ಗೂಗಲ್‌ ಅಸಿಸ್ಟೆಂಟ್‌ನಿಂದ ಅಚ್ಚರಿಯ ನಡೆ!

|

ಅಮ್ಮ, ಈ ಎರಡು ಪದವನ್ನು ಕೇಳಿದರೆ ಸಾಕು ಎಲ್ಲರ ಕಿವಿ ನೆಟ್ಟಗಾಗುತ್ತದೆ. ಪ್ರತಿಯೊಂದು ಜೀವಿಗೂ ಜನ್ಮನೀಡುವ ಜನ್ಮದಾತೆ ಅಮ್ಮ. ಅಮ್ಮ ಎಂದರೆ ಎಲ್ಲರಿಗೂ ಹರುಷ. ಭೂಮಿಯ ಮೇಲೆ ದೇವರು ಇರಲಾಗುವುದಿಲ್ಲವೆಂದು ತಾಯಿಯನ್ನು ಇರಿಸಿದ್ದಾನೆ ಎಂಬ ಮಾತು ಸರ್ವಕಾಲಿಕ ಸತ್ಯ. ಅಂತಹ ತಾಯಿಯ ಪ್ರೀತಿಯನ್ನು ಎಂದಿಗೂ ಮರಳಿಸಲು ಸಾಧ್ಯವೇ ಇಲ್ಲ. ನಮ್ಮ ನಿಮ್ಮೆಲ್ಲರ ಜನ್ಮದಾತೆ ತಾಯಿಯನ್ನು ನೆನೆಯಲು ಯಾವುದೋ ಒಂದು ದಿನ ಸಾಲುವುದಿಲ್ಲ. ಆದರೂ ಅಮ್ಮನ ಮೇಲಿನ ಭಾವನೆಗಳನ್ನು ವ್ಯಕ್ತಪಡಿಸಲು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಜನ್ನಮ ಜನ್ಮ ಕಳೆದರೂ ತೀರಿಸಲಾಗದ ಋಣ ಅಮ್ಮನದು.

ಪೂಜಿಸಲು

ಹೌದು, ನಮ್ಮ ಹೆತ್ತ ತಾಯಿಯನ್ನು ಪೂಜಿಸಲು,ಪ್ರಾರ್ಥಿಸಲು, ಊಡುಗೊರೆ ನೀಡಲು ವಿಶೇಷ ದಿನದ ಅವಶ್ಯಕತೆಯಿಲ್ಲ. ಆದರೂ ನಾವು ಎಲ್ಲದಕ್ಕೂ ಒಂದೊಂದು ದಿನ ಗೊತ್ತುಮಾಡಿ ಆಚರಿಸುವ ನಮಗೆ ವಿಶ್ವ ತಾಯಂದಿರವನ್ನು ಆಚರಿಸುವ ಅವಕಾಶ ಕೂಡ ಇದೆ. ಈ ವರ್ಷ ಅಂದರೆ ಮೇ 9 ರಂದು ಆಚರಿಸಲಾಗುತ್ತಿದೆ. ತಾಯಿಯ ಮುಂದೆ ಎಲ್ಲರೂ ಕೂಡ ಮಕ್ಕಳೆ. ಇದೇ ಕಾರಣಕ್ಕೆ ಗೂಗಲ್‌ ಕೂಡ ವಿಶ್ವ ತಾಯಂದಿರ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸಲು ಗೂಗಲ್‌ ಅಸಿಸ್ಟೆಂಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಹಾಗಾದ್ರೆ ಈ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್

ವಿಶ್ವ ತಾಯಂದಿರ ದಿನಚರಣೆ ಪ್ರಯುಕ್ತ ಗೂಗಲ್ ಅಸಿಸ್ಟೆಂಟ್‌ ಹೊಸ ಫ್ಯಾಮಿಲಿ ಫೀಚರ್ಸ್‌ಗಳನ್ನು ಘೋಷಿಸಿದೆ. ಗೂಗಲ್ ಅಸಿಸ್ಟೆಂಟ್ ಸುಧಾರಿತ ಬ್ರಾಡ್‌ಕಾಸ್ಟ್‌ ಫೀಚರ್ಸ್‌, ಹೊಸ ‘ಫ್ಯಾಮಿಲಿ ಬೆಲ್' ಜ್ಞಾಪನೆಗಳು, ಹೊಸ ಸ್ಟೋರೀಸ್‌ ಮತ್ತು ಗೇಮ್‌ಗಳನ್ನು ಅನ್ನು ಆಡ್‌ ಮಾಡಿದೆ. ಅಲ್ಲದೆ ತಾಯಂದಿರ ದಿನದಂದು ಟೈಮರ್ ಹೊಂದಿಸುವಾಗ ಸಕ್ರಿಯಗೊಳ್ಳುವ ಕೆಲವು ಈಸ್ಟರ್ ಎಗ್‌ಗಳನ್ನು ಗೂಗಲ್ ಸೇರಿಸಿದೆ.

ಅಸಿಸ್ಟೆಂಟ್‌

ಗೂಗಲ್‌ ಅಸಿಸ್ಟೆಂಟ್‌ ಬಳಕೆದಾರರು ಈಗ ಫ್ಯಾಮಿಲಿ ಬ್ರಾಡ್‌ಕಾಸ್ಟ್‌ ಬಳಸಿಕೊಂಡು ಡಿವೈಸ್‌ನಾದ್ಯಂತ ಎಲ್ಲಾ ಸದಸ್ಯರಿಗೆ ಸಂದೇಶಗಳನ್ನು ಪ್ರಸಾರ ಮಾಡಲು ಸಾಧ್ಯವಾಗುತ್ತದೆ. ಇನ್ನು ಈ ಫೀಚರ್ಸ್‌ ಗೂಗಲ್ ಫ್ಯಾಮಿಲಿ ಗ್ರೂಪ್‌ನೊಂದಿಗೆ ಸಂಪರ್ಕಗೊಂಡಿರುವ ಸ್ಮಾರ್ಟ್ ಡಿಸ್‌ಪ್ಲೇ ಮತ್ತು ಸ್ಪೀಕರ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸಂದೇಶಗಳು ಐಒಎಸ್ ಮತ್ತು ಆಂಡ್ರಾಯ್ಡ್ ಫೋನ್‌ಗಳನ್ನು ಸಹ ತಲುಪುತ್ತದೆ. ಜೊತೆಗೆ ರಿಸೀವರ್ ವಾಯ್ಸ್‌ ಮೂಲಕ ಅಥವಾ ರಿಪ್ಲೇ ಬಟನ್‌ ಟ್ಯಾಪ್ ಮಾಡುವ ಮೂಲಕ ಉತ್ತರಿಸಬಹುದು.

ಗೂಗಲ್

ಗೂಗಲ್ ಫ್ಯಾಮಿಲಿ ಬೆಲ್ ಜ್ಞಾಪನೆಗಳನ್ನು ಸಹ ನವೀಕರಿಸಿದೆ. ಆದ್ದರಿಂದ ಬಳಕೆದಾರರು ಬೆಲ್ ಅನ್ನು ಕೊನೆಗೊಳಿಸಲು "ಸ್ಟಾಪ್‌" ಟ್ಯಾಪ್‌ ಮಾಡಬಹುದು, ಇದಕ್ಕಾಗಿ ಬಳಕೆದಾರರು ಮತ್ತೆ "ಹೇ ಗೂಗಲ್" ಎಂದು ಹೇಳಬೇಕಾಗಿಲ್ಲ. ಈ ಫೀಚರ್ಸ್‌ ಮೊದಲು ಇಂಗ್ಲಿಷ್‌ನಲ್ಲಿ ಲಭ್ಯವಿರುತ್ತದೆ. ಇಂದಿನಿಂದ ಪ್ರಾರಂಭವಾಗುವ ಒಂದು ಸಮಯದಲ್ಲಿ ಫ್ಯಾಮಿಲಿ ಬೆಲ್ ಈಗ ಅನೇಕ ಮನೆ ಡಿವೈಸ್‌ಗಳಲ್ಲಿ ರಿಂಗಣಿಸುತ್ತದೆ. ಗೂಗಲ್ ಫ್ಯಾಮಿಲಿ ಬೆಲ್ ಅನ್ನು ಡಚ್, ಫ್ರೆಂಚ್, ಜರ್ಮನ್, ಹಿಂದಿ, ಇಟಾಲಿಯನ್, ಜಪಾನೀಸ್, ಕೊರಿಯನ್, ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಸೇರಿದಂತೆ ಎಂಟು ಹೊಸ ಭಾಷೆಗಳಿಗೆ ವಿಸ್ತರಿಸುತ್ತಿದೆ.

ಡಿಸ್‌ಪ್ಲೇ

ಇನ್ನು ಸ್ಮಾರ್ಟ್ ಡಿಸ್‌ಪ್ಲೇ ಅಥವಾ ಆಂಡ್ರಾಯ್ಡ್ ಸಾಧನದಿಂದ ಪ್ರವೇಶಿಸಬಹುದಾದ ಹೊಸ ಸ್ಟೋರಿಗಳು ಮತ್ತು ಗೇಮ್‌ಗಳನ್ನು ಗೂಗಲ್ ಅಸಿಸ್ಟೆಂಟ್ ಪರಿಚಯಿಸಿದೆ. ಹ್ಯಾರಿ ಪಾಟರ್ ಕಥೆಗಳಿಗಾಗಿ ಪಾಟರ್ಮೋರ್ ಪಬ್ಲಿಷಿಂಗೋನೊಂದಿಗೆ ಗೂಗಲ್ ಪಾಲುದಾರಿಕೆ ಹೊಂದಿದೆ. ಇದು "Who Was?" ಪೆಂಗ್ವಿನ್ ರಾಂಡಮ್ ಹೌಸ್ ನಿಂದ ಸ್ಮಾರ್ಟ್ ಡಿಸ್ಪ್ಲೇಗಳವರೆಗೆ ಸರಣಿಯನ್ನು ಒಳಗೊಂಡಿದೆ. ಅಲ್ಲದೆ ಬಳಕೆದಾರರು "ಹೇ ಗೂಗಲ್, ನನಗೆ ಒಂದು ಕಥೆಯನ್ನು ಹೇಳು" ಎಂದು ಹೇಳುವ ಮೂಲಕ ಇಡೀ ಪಟ್ಟಿಯನ್ನು ಪಡೆಯಬಹುದು.

ಗೂಗಲ್

ಅಷ್ಟೆ ಅಲ್ಲ. ಮಕ್ಕಳಿಗೆ ಹೊಸ ಆಕ್ಟಿವಿಟಿಗಳನ್ನು ಮಾಡಲು ಸಹಾಯ ಮಾಡಲು ಗೂಗಲ್ ಹೊಸ ಹಾಡುಗಳನ್ನು ಕೂಡ ಸೇರಿಸಿದೆ. ಹೊಸ ಹಾಡುಗಳು ಮಕ್ಕಳು ನಿದ್ರೆ ಮಾಡುವಾಗ ಜೋಗುಳ ಹಾಡಿದಂತೆ ಇರಲಿದೆ. ಆದ್ದರಿಂದ ಇದು ಮಕ್ಕಳ ಮೇಲೆ ಇದೇ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ಆಶಿಸುತ್ತಾ ಹೊಸದನ್ನು ರಚಿಸಲು ನಿರ್ಧರಿಸಿದೆ ಎಂದು ಗೂಗಲ್ ಹೇಳಿದೆ. ಈಸ್ಟರ್ ಎಗ್‌ಗಳಿಗೆ ಸಂಬಂಧಿಸಿದಂತೆ, ನೀವು ತಾಯಿಯ ದಿನದಂದು ಟೈಮರ್ ಅನ್ನು ಹೊಂದಿಸಬೇಕು. ನಂತರ ಅದು ಏನಾಗಲಿದೆ ಅನ್ನೊದನ್ನ ಕಾದು ನೋಡಬೇಕು.

Most Read Articles
Best Mobiles in India

English summary
Google Assistant has received a bunch of new family features just in time for Mother's Day.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X