ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಈ ಡೇಂಜರಸ್ ಆಪ್‌ ಇದ್ರೆ, ತಕ್ಷಣವೇ ಡಿಲೀಟ್ ಮಾಡಿಬಿಡಿ!

|

ಸರ್ಚ್ ಇಂಜಿನ್ ದೈತ್ಯ ಗೂಗಲ್ ಇತ್ತೀಚೆಗೆ ಸುಮಾರು 150 ಕ್ಕೂ ಅಧಿಕ ಡೇಂಜರಸ್‌ ಆಪ್‌ಗಳನ್ನು ಬ್ಯಾನ್ ಮಾಡಿತ್ತು. ಇದೀಗ ಮತ್ತೆ ಮೂರು ಅಪಾಯಕಾರಿ ಆಪ್ಸ್‌ಗಳಿಗೆ ಗೇಟ್ ಪಾಸ್ ನೀಡಿದೆ. ಬಳಕೆದಾರರ ಖಾಸಗಿ ಮಾಹಿತಿ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿಷೇಧವನ್ನು ಮಾಡಲಾಗಿದೆ. ಮ್ಯಾಜಿಕ್ ಫೋಟೋ ಲ್ಯಾಬ್-ಫೋಟೋ ಎಡಿಟರ್, ಬ್ಲೆಂಡರ್ ಫೋಟೋ ಎಡಿಟರ್-ಈಸಿ ಫೋಟೋ ಬ್ಯಾಕ್‌ಗ್ರೌಂಡ್ ಎಡಿಟರ್ ಮತ್ತು ಪಿಕ್ಸ್ ಫೋಟೋ ಮೋಷನ್ ಎಡಿಟ್ 2021 ಇವುಗಳೆ ಬ್ಯಾನ್ ಆಗಿರುವ ಆಪ್‌ಗಳು. ಒಂದು ವೇಳೆ ನೀವು ನಿಮ್ಮ ಫೋನಿನಲ್ಲಿ ಈ ಆಪ್ಸ್‌ ಹೊಂದಿದ್ದರೇ, ತಕ್ಷಣವೇ ಡಿಲೀಟ್ ಮಾಡಿಬಿಡಿ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಈ ಡೇಂಜರಸ್ ಆಪ್‌ ಇದ್ರೆ, ತಕ್ಷಣವೇ ಡಿಲೀಟ್ ಮಾಡಿಬಿಡಿ

ಹೌದು, ಜನಪ್ರಿಯ ಗೂಗಲ್ ತನ್ನ ಆಪ್‌ ಸ್ಟೋರ್‌ ಆದ ಗೂಗಲ್ ಪ್ಲೇ ಸ್ಟೋರ್ ನಿಂದ ಮ್ಯಾಜಿಕ್ ಫೋಟೋ ಲ್ಯಾಬ್, ಬ್ಲೆಂಡರ್ ಫೋಟೋ ಎಡಿಟರ್ ಮತ್ತು ಪಿಕ್ಸ್ ಫೋಟೋ ಮೋಷನ್ ಎಡಿಟ್ 2021 ಈ ಮೂರು ಆಪ್‌ಗಳಿಗೆ ಕಿಕ್‌ ಔಟ್‌ ಮಾಡಿದೆ. ಈ ಮೂರು ಆಪ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ಕದಿಯುತ್ತಿದ್ದವು ಎನ್ನಲಾಗಿದೆ. ಭದ್ರತಾ ಸಂಸ್ಥೆ ಕ್ಯಾಸ್ಪರ್ಸ್ಕಿ ಈ ಆಪ್‌ಗಳನ್ನು ಗುರುತಿಸಿದ್ದು, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಲಾಗಿನ್‌ಗಳ ಮೂಲಕ ಕದಿಯಲಾಗುತ್ತಿದೆ. ಅಲ್ಲದೇ ಬಳಕೆದಾರರ ಬ್ಯಾಂಕ್ ಖಾತೆಗಳನ್ನು ಆಕ್ಸಸ್‌ ಮಾಡುತ್ತಿವೆ ಎಂದು ತಿಳಿಸಿದೆ.

ಪ್ರಸಕ್ತ ವರ್ಷ ನಡೆದ ಗೂಗಲ್‌ I/O ಕಾರ್ಯಕ್ರಮದಲ್ಲಿ, ಸದ್ಯ 3 ಬಿಲಿಯನ್ ಸಕ್ರಿಯ ಆಂಡ್ರಾಯ್ಡ್ ಡಿವೈಸ್‌ಗಳು ಇವೆ ಎಂದು ಟೆಕ್ ದೈತ್ಯ ತಿಳಿಸಿದೆ. ಹೀಗಾಗಿ ಇಂತಹ ಡೇಂಜರಸ್‌ ಆಪ್ಸ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕುವ ಮೂಲಕ ಗೂಗಲ್ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಕ್ರಮ ಕೈಗೊಂಡಿದೆ. ಸದ್ಯ ಬ್ಯಾನ್ ಮಾಡಲಾದ ಆಪ್ಸ್‌ಗಳು ಬಳಕೆದಾರರ ಖಾಸಗಿ ಮಾಹಿತಿ ಮತ್ತು ಹಣವನ್ನು ಕಬಳಿಸುತ್ತಿದ್ದವು ಎನ್ನಲಾಗಿದೆ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಈ ಡೇಂಜರಸ್ ಆಪ್‌ ಇದ್ರೆ, ತಕ್ಷಣವೇ ಡಿಲೀಟ್ ಮಾಡಿಬಿಡಿ

ಲಾಗಿನ್‌ ಐಡಿ ಮತ್ತು ವೈಯಕ್ತಿಕ ಮಾಹಿತಿಗೆ ಕನ್ನ:
ಬ್ಯಾನ್ ಮಾಡಲಾದ ಆಪ್ಸ್‌ಗಳು ಬಳಕೆದಾರರ ಲಾಗಿನ್‌ ಐಡಿ ಮತ್ತು ವೈಯಕ್ತಿಕ ಮಾಹಿತಿಗೆ ಕನ್ನ ಹಾಕುತ್ತಿದ್ದವು. ಫೇಸ್‌ಬುಕ್ ಬಟನೊಂದಿಗೆ ಲಾಗಿನ್ ಮೂಲಕ, ಬಳಕೆದಾರರು ಯಾವುದೇ ವೆಬ್ ಸೇವೆ ಅಥವಾ ಆಪ್ ಅನ್ನು ತಕ್ಷಣವೇ ದೃಢೀಕರಿಸುವುದು ಸುಲಭ. ಭದ್ರತಾ ಸಂಸ್ಥೆಯ ಪ್ರಕಾರ, ಈ ನಿ‍ಷೇಧಿತ ಆಪ್‌ಗಳನ್ನು ಬಳಕೆದಾರರ ಲಾಗಿನ್ ಐಡಿಗಳನ್ನು ಕದಿಯುವ ಮೂಲಕ ವೈಯಕ್ತಿಕ ಡೇಟಾವನ್ನು ಕಳುವು ಮಾಡುತ್ತಿದ್ದವು.

ಕಿಕ್‌ ಔಟ್ ಆದ ಆಪ್‌ ಲಿಸ್ಟ್‌ ಇಲ್ಲಿದೆ:
- ಮ್ಯಾಜಿಕ್ ಫೋಟೋ ಲ್ಯಾಬ್ - ಫೋಟೊ ಎಡಿಟರ್
- ಬ್ಲೆಂಡರ್ ಫೋಟೋ ಎಡಿಟರ್ - ಈಸಿ ಫೋಟೋ ಬ್ಯಾಕ್‌ಗ್ರೌಂಡ್ ಎಡಿಟರ್ ಮತ್ತು
- ಪಿಕ್ಸ್ ಫೋಟೋ ಮೋಷನ್ ಎಡಿಟ್ 2021.

ಒಂದು ವೇಳೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಈ ಅಪ್ಲಿಕೇಶನ್‌ಗಳನ್ನು ಇದ್ದರೇ. ಡಿಲೀಟ್ ಮಾಡಿರಿ. ನಿಮ್ಮ ಫೋನಿನಿಂದ ಈ ಆಪ್‌ ಡಿಲೀಟ್ ಮಾಡಲು, ಆಪ್ ಐಕಾನ್ ಮೇಲೆ ದೀರ್ಘವಾಗಿ ಒತ್ತಿರಿ. ನಂತರ ಅನ್ ಇನ್‌ಸ್ಟಾಲ್ ಆಯ್ಕೆಯನ್ನು ಕ್ಲಿಕ್ ಮಾಡಿ. ಆಪ್ ಡಿಲೀಟ್ ಮಾಡಿರಿ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಈ ಡೇಂಜರಸ್ ಆಪ್‌ ಇದ್ರೆ, ತಕ್ಷಣವೇ ಡಿಲೀಟ್ ಮಾಡಿಬಿಡಿ

ಆಪ್‌ ಡಿಲೀಟ್ ಮಾಡಿದರಷ್ಟೇ ಸಾಲದು!
ಹೌದು, ಡೇಂಜರಸ್‌ ಆಪ್‌ಗಳನ್ನಿ ನಿಮ್ಮ ಫೋನಿನಿಂದ ತೆಗೆದು ಹಾಕಿದರಷ್ಟೇ ಸಾಲದು. ಆ ಬಳಿಕ ನಿಮ್ಮ ಫೇಸ್‌ಬುಕ್‌ ಲಾಗಿನ್‌ ಮಾಹಿತಿ/ವಿವರ (ಪಾಸ್‌ವರ್ಡ್‌) ಬದಲಾಯಿಸಬೇಕು. ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.

ಕಳೆದ ಜೂನ್‌ ತಿಂಗಳಿನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಕಿಕ್ಔಟ್‌ ಆಗಿರುವ ಅಪ್ಲಿಕೇಶನ್‌ಗಳ ಲಿಸ್ಟ್‌:
ಕ್ವಿಕ್ ಹೀಲ್ ಸೆಕ್ಯುರಿಟಿ ಲ್ಯಾಬ್‌ ಸಂಶೋಧಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಳೆದ ಜೂನ್‌ನಲ್ಲಿ 8 ಜೋಕರ್ ಮಾಲ್‌ವೇರ್ (ದುರುದ್ದೇಶ ಪೂರಿತ ) ಅಪ್ಲಿಕೇಶನ್‌ಗಳನ್ನು ಪತ್ತೆ ಮಾಡಿದ್ದರು. ಈ ನಿಟ್ಟಿನಲ್ಲಿ ಗೂಗಲ್‌ ಆ ಆಪ್ಸ್‌ಗಳಿಗೆ ಗೇಟ್ ಪಾಸ್ ನೀಡಿತ್ತು.
* Auxiliary Message
* Fast Magic SMS
* Free CamScanner
* Super Message
* Element Scanner
* Go Messages
* Travel Wallpapers
* Super SMS

Most Read Articles
Best Mobiles in India

English summary
Google Banned These Three Dangerous Android Apps: Delete From Your Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X