ಗೂಗಲ್‌ ಪ್ಲೇ ಸ್ಟೋರ್‌ನಿಂದ ಮತ್ತೆ 29 ಅಪ್ಲಿಕೇಶನ್‌ಗಳಿಗೆ ಗೇಟ್‌ಪಾಸ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಹಲವಾರು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇದಲ್ಲದೆ ತನ್ನ ಪ್ಲೇ ಸ್ಟೋರ್‌ನಲ್ಲಿ ಹಲವು ಮಾದರಿಯ ಆಪ್‌ಗಳನ್ನ ಬಳಕೆದಾರರಿಗೆ ಪರಿಚಯಿಸಿದೆ. ಇನ್ನು ಲಭ್ಯವಿರುವ ಆಪ್ಲಿಕೇಶನ್‌ಗಳ ಮೇಲೆ ಸದಾ ಕಾಲ ನಿಗಾವಹಿಸುವ ಗೂಗಲ್‌ ಪ್ಲೇ ಸ್ಟೋರ್‌ ಇದೀಗ ತನ್ನ ಪ್ಲೇ ಸ್ಟೋರ್‌ನಿಂದ 29ಕ್ಕೂ ಅಧಿಕ ಅಪ್ಲಿಕೇಶನ್‌ಗಳನ್ನ ತೆಗೆದುಹಾಕಿದೆ. ವೈಟ್ ಓಪ್ಸ್ ಸಟೋರಿ ಬೆದರಿಕೆ ಗುಪ್ತಚರ ದಳ ಈ 29 ಅಪ್ಲಿಕೇಶನ್‌ಗಳನ್ನು ತಮ್ಮ ""CHARTREUSEBLUR"" ತನಿಖೆಯಲ್ಲಿ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನ ಕಂಡುಹಿಡಿದಿದೆ.

ಗೂಗಲ್‌

ಹೌದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 29 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಇನ್ನು ಆಪ್ಲಿಕೇಶನ್‌ಗಳಲ್ಲಿ ಬ್ಲರ್‌ ಫೀಚರ್ಸ್‌ ಹೊಂದಿರುವ ಫೀಚರ್ಸ್‌ಅನ್ನು ಹೊಂದಿರುವ ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳು ಸೇರಿಕೊಂಡಿವೆ. ಇನ್ನು ಈ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡಿಟೆಕ್ಷನ್‌ ಅನ್ನು ತಪ್ಪಿಸುವ ಫೀಚರ್ಸ್‌ಗಳು ಕಂಡುಬಮದಿದ್ದು, ಇದರಲ್ಲಿ OOC ಜಾಹೀರಾತುಗಳು ಲಭ್ಯವಿವೆ ಎನ್ನಲಾಗ್ತಿದೆ. ಬಳಕೆದಾರರು ಈ ಯಾವುದೇ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿದ ನಂತರ, ಲಾಂಚ್‌ ಐಕಾನ್‌ಗಳು ಫೋನ್‌ನಿಂದ ತಕ್ಷಣ ಮಾಯವಾಗುತ್ತವೆ. ಬಳಕೆದಾರರು ತಮ್ಮ ಫೋನ್‌ಗಳಿಂದ ದುರುದ್ದೇಶಪೂರಿತ ಅಪ್ಲಿಕೇಶನ್ ಅನ್ನು ತೆಗೆದುಹಾಕಲು ಇದರಿಂದ ಕಷ್ಟಕರವಾಗುತ್ತದೆ ಎನ್ನಲಾಗ್ತಿದೆ. ಅಷ್ಟಕ್ಕೂ ಗೂಗಲ್‌ 29 ಅಪ್ಲಿಕೇಶನ್‌ಗಳನ್ನ ತೆಗೆದುಹಾಕಲು ಕಾರಣವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಸದ್ಯ ಗೂಗಲ್‌ ತೆಗೆದುಹಾಕಿರುವ 29 ಅಪ್ಲಿಕೇಶನ್‌ಗಳಲ್ಲಿ ಆಡ್ವೇರ್ ಹೊಂದಿರುವ ಒಂದು ಅಪ್ಲಿಕೇಶನ್ ಅಂದರೆ ಅದು ಸ್ಕ್ವೇರ್ ಫೋಟೋ ಬ್ಲರ್‌ ಅಪ್ಲಿಕೇಶನ್ ಆಗಿದೆ. ಸಾಟೋರಿ ತಂಡವು ಈ ಅಪ್ಲಿಕೇಶನ್ ಅನ್ನು ಪರೀಕ್ಷೆ ಮಾಡಿದ್ದು, ಮತ್ತು ಪ್ಲೇ ಸ್ಟೋರ್ ಸೆಕ್ಯುರಿಟಿ ಪರಿಶೀಲನೆಗಳನ್ನು ರವಾನಿಸುವಲ್ಲಿ ಯಶಸ್ವಿಯಾಗಿದ್ದು, "hollow shell of an app" ಅನ್ನು ಕಂಡುಹಿಡಿದಿದೆ. ಈ ಅಪ್ಲಿಕೇಶನ್ ಜಾಹೀರಾತಿನಂತೆ ಕಾರ್ಯನಿರ್ವಹಿಸುವುದಿಲ್ಲ ಮತ್ತು ಫೋನ್‌ಗಳಲ್ಲಿ OOC ಜಾಹೀರಾತುಗಳನ್ನು ಚಲಾಯಿಸುತ್ತದೆ. ಇದರಿಂದ ಫೋನ್‌ನಲ್ಲಿ ಅಪ್ಲಿಕೇಶನ್ ಅನ್ನು ಒಮ್ಮೆ ಇನ್‌ಸ್ಟಾಲ್‌ ಮಾಡಿದ ನಂತರ ಲಾಂಚ್‌ ಐಕಾನ್‌ ಕಣ್ಮರೆಯಾಗಿದೆ. ಇದರಿಂದ ಈ ಅಪ್ಲಿಕೇಶನ್‌ಗಳಲ್ಲಿ ದೋಷಕಂಡುಬಂದಿದೆ.

ಅಪ್ಲಿಕೇಶನ್‌

ಇನ್ನು ಈ ಅಪ್ಲಿಕೇಶನ್‌ಗಳ ಮೂಲಕ ಪ್ರಕಟವಾದ ಜಾಹೀರಾತುಗಳು ಕೆಲವೇ ಸೆಕೆಂಡುಗಳ ಮಧ್ಯಂತರದಲ್ಲಿ ಪ್ಲೇ ಆಗಿದ್ದು, ಇವುಗಳಲ್ಲಿ ದೋಷಪೂರಿತ ಫಿಚರ್ಸ್‌ಗಳು ಕಂಡುಬಂದಿವೆ. ಅಲ್ಲದೆ, ಬಳಕೆದಾರರು ತಮ್ಮ ಫೋನ್‌ನಲ್ಲಿ ನಿರ್ವಹಿಸುವ ಪ್ರತಿಯೊಂದು ಕ್ರಿಯೆಯು ಜಾಹೀರಾತುಗಳಲ್ಲಿ ಪಾಪ್-ಅಪ್ ಮಾಡಲು ಅಪ್ಲಿಕೇಶನ್‌ನಲ್ಲಿ ಕೋಡ್ ಅನ್ನು ಪ್ರಚೋದಿಸುತ್ತದೆ. ಈ ಕೆಲವು ಕ್ರಿಯೆಗಳಲ್ಲಿ ಫೋನ್ ಅನ್ಲಾಕ್ ಮಾಡುವುದು, ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್‌ ಮಾಡುವುದು, ಫೋನ್ ಚಾರ್ಜ್ ಮಾಡುವುದು ಅಥವಾ ಮೊಬೈಲ್ ಡೇಟಾದಿಂದ ವೈ-ಫೈಗೆ ಬದಲಾಯಿಸುವುದು ಸೇರಿವೆ. ಜಾಹೀರಾತುಗಳು ಪಾಪ್ ಅಪ್ ಆಗುತ್ತವೆ ಮತ್ತು ಫೋನ್‌ನ ಫುಲ್‌ ಡಿಸ್‌ಪ್ಲೇಯನ್ನು ಆಕ್ರಮಿಸುತ್ತವೆ.

ಅಪ್ಲಿಕೇಶನ್‌

ಇದಲ್ಲದೆ ಈ ದುರುದ್ದೇಶಪೂರಿತ ಆಡ್‌ವೇರ್‌ ಹೊಂದಿರುವ 29 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಗುರುತಿಸಲಾಗಿದೆ. ಆದರೆ ಭವಿಷ್ಯದಲ್ಲಿ ಇವುಗಳ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗ್ತಿದೆ. ಅಲ್ಲದೆ ನೀವು ಅಪ್ಲಿಕೇಶನ್‌ಗಳ ಸಂಪೂರ್ಣ ಪಟ್ಟಿಯನ್ನು ಕಾಣಬಹುದಾಗಿದೆ ಮತ್ತು ಅವುಗಳನ್ನು ಅನ್‌ಇನ್‌ಸ್ಟಾಲ್‌ ಮಾಡಬಹುದಾಗಿದೆ. ಸದ್ಯ ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿರುವ ಅಪ್ಲಿಕೇಶನ್‌ಗಳಲ್ಲಿ ಕೆಲವು ಅಪ್ಲಿಕೇಶನ್‌ಗಳು 5-ಸ್ಟಾರ್ ರಿವ್ಯೂ ಹೊಂದಿವೆ, ಆದರೆ 1-ಸ್ಟಾರ್, ಅಪ್ಲಿಕೇಶನ್ ನಂತೆ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ಬಹಳ ಕಡಿಮೆ ಸಮಯದಲ್ಲಿ ಸಾಕಷ್ಟು ಡೌನ್‌ಲೋಡ್‌ಗಳನ್ನು ಹೊಂದಿದ್ದು, ಇದೆಲ್ಲಾ ಅಂಶಗಳು ಈ ಅಪ್ಲಿಕೇಶನ್ ಬಹುಶಃ ದುರುದ್ದೇಶಪೂರಿತವಾಗಿದೆ ಎಂಬ ಸೂಚಕಗಳಾಗಿ ಗುರುತಿಸಬಹುದಾಗಿದೆ. ಹೆಚ್ಚು ಕಡಿಮೆ ಈ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿ 3.5 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿವೆ ಎಂದು ಹೇಳಲಾಗ್ತಿದೆ.

Most Read Articles
Best Mobiles in India

English summary
A total of 29 Android apps with over 3.5 million downloads on the Play Store have been discovered with adware.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X