'ಈಡಿಯೇಟ್' ಎಂದು ಸರ್ಚ್ ಮಾಡಿದರೆ 'ಟ್ರಂಪ್' ಫೋಟೊ!..ಕಾರಣ ತಿಳಿಸಿದ ಗೂಗಲ್!!

|

ಅಮೆರಿಕಾದ ಕ್ಯಾಪಿಟಲ್‌ ಹಿಲ್‌ನಲ್ಲಿ ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರು ಕಳೆದ ಮಂಗಳವಾರ ವಿಚಾರಣೆಯೊಂದಕ್ಕೆ ಹಾಜರಾಗಿದ್ದರು. ಅಲ್ಲಿ ಅವರಿಗೆ ಅಮೆರಿಕಾದ ಜನಪ್ರತಿನಿಧಿ ಸಭೆಯ ನ್ಯಾಯಾಂಗ ಸಮಿತಿಯಿಂದ ಹಲವು ಪ್ರಶ್ನೆಗಳು ಎದುರಾದವು. ಗೂಗಲ್ ಕಂಪನಿಯ ಡಾಟಾ ಪ್ರೈವಸಿ, ತಪ್ಪು ಮಾಹಿತಿ, ಚೀನಾಕ್ಕೆ ಸಂಬಂಧಿಸಿದ ಸರ್ಚ್ ಎಂಜಿನ್‌ ನಿರ್ಮಾಣ ಸೇರಿದಂತೆ ಗೂಗಲ್ ಸರ್ಚ್ ನಲ್ಲಿ 'ಈಡಿಯಟ್' ಎಂದು ಟೈಪ್ ಮಾಡಿದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಬರುತ್ತದೆ ಏಕೆ ಎಂಬ ಪ್ರಶ್ನೆಗಳು ಹೊರಬಿದ್ದವು.

ಒಂದು ರೀತಿಯಲ್ಲಿ ಸಾಮಾನ್ಯ ಗೂಗಲ್ ಬಳಕೆದಾರನಿಗೂ ಪ್ರಶ್ನೆಗಳಾಗಿಯೇ ಉಳಿದಿರುವ ಈ ಪ್ರಶ್ನೆಗಳು ವಿಶ್ವಕ್ಕೂ ಕೂಡ ಯಕ್ಷ ಪ್ರಶ್ನೆಗಳಾಗಿದ್ದವು ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ, ಇಡೀ ವಿಶ್ವಕ್ಕೆ ಈ ಬಗ್ಗೆ ಸಂಶಯಗಳು ಇದ್ದವು. ಆದರೆ, ಈಗ ಈ ಎಲ್ಲಾ ಪ್ರಶ್ನೆಗಳಿಗೂ ಭಾರತೀಯ ಹಾಗೂ ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರು ಉತ್ತರಿಸಿದ್ದಾರೆ. ಗೂಗಲ್ ಡೇಟಾ ಸಂಗ್ರಹದ ಪಾರದರ್ಶಕತೆ, ಉತ್ತಾರದಾಯಿತ್ವ ವಿಚಾರಗಳಂತಹ ಸಂದೇಹಗಳಿಗೆ ಉತ್ತರ ನೀಡಿ ಪಿಚೈ ಎಲ್ಲರ ಸಂಶಯವನ್ನು ಶಮನ ಮಾಡಿದ್ದಾರೆ.

'ಈಡಿಯೇಟ್' ಎಂದು ಸರ್ಚ್ ಮಾಡಿದರೆ 'ಟ್ರಂಪ್' ಫೋಟೊ!..ಕಾರಣ ತಿಳಿಸಿದ ಗೂಗಲ್!!

ಸುಮಾರು ಮೂರುವರೆ ಗಂಟೆಗಳ ಕಾಲ ಪ್ರಶ್ನೋತ್ತರ ವಿಚಾರಣೆಯಲ್ಲಿ ಸುಂದರ್‌ ಪಿಚೈ ಅವರು ಉತ್ತರಿಸಿದ ಪ್ರಮುಖ ಅಂಶಗಳನ್ನು ನಾನು ಇಂದಿನ ಲೇಖನದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಇದರಲ್ಲಿ ಪ್ರಮುಖ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಚೆನ್ನೈ ಮೂಲದ ಸುಂದರ್‌ ಪಿಚೈ ಉತ್ತರಿಸಿದ್ದು ಏನು, ಮತ್ತು ಗೂಗಲ್ ಹೇಗೆ ಕಾರ್ಯನಿರ್ವಹಿಸುತ್ತಿದೆ?, ಕೆಲವೊಂದು ಸಮಸ್ಯೆಗಳನ್ನು ಎದುರಿಸಲು ಗೂಗಲ್‌ಗೆ ಸಾಧ್ಯವಾಗುತ್ತಿಲ್ಲವೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಗೂಗಲ್ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿದೆಯೇ?

ಗೂಗಲ್ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿದೆಯೇ?

ಗೂಗಲ್ ಕಂಪನಿ ತನ್ನ ಕಾರ್ಯನಿರ್ವಹಣೆಯಲ್ಲಿ ಸ್ವಾತಂತ್ರ್ಯದ ತತ್ವವನ್ನು ಪ್ರತಿಪಾದಿಸುತ್ತಿವೆಯಾ ಅಥವಾ ನಿಯಂತ್ರಣದ ಮಾರ್ಗವನ್ನು ಹೊಂದಿದೆಯಾ? ಏಕೆಂದರೆ ನಾವು ಗೂಗಲ್‌ ಮುಕ್ತ ಜಗತ್ತಿನ ಪರವಾಗಿದೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತಿದ್ದೇವೆ ಎಂಬ ಪ್ರಶ್ನೆ ಮೊದಲಿಗೆ ಪಿಚೈ ಅವರಿಗೆ ಮೊದಲ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಪಿಚೈ, ಪದೇ ಪದೇ ಸಂಸ್ಥೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರತಿಪಾದಿಸಿದರು. ‘ನಾನು ರಾಜಕೀಯ ಪಕ್ಷಪಾತವಿಲ್ಲದೆ ಸಂಸ್ಥೆಯನ್ನು ಮುನ್ನಡೆಸುತ್ತೇನೆ. ಸಂಸ್ಥೆಯೂ ಅದೇ ರೀತಿ ಕೆಲಸ ಮಾಡುತ್ತದೆ,' ಎಂದು ಹೇಳಿದರು. ಹೀಗೆ ಹೇಳಿದ ಪಿಚೈ ಅವರ ಮಾತಿಗೆ ವಿಚಾರಣೆ ಸದಸ್ಯರು ಅಸಮ್ಮತಿ ಸೂಚಿಸಿದಂತೆ ಕಂಡುಬಂದಿತು.

ಈಡಿಯೇಟ್ ಸರ್ಚ್ ಮಾಡಿದರೆ ಟ್ರಂಪ್ ಫೋಟೊ ಏಕೆ ಬರುತ್ತದೆ?

ಈಡಿಯೇಟ್ ಸರ್ಚ್ ಮಾಡಿದರೆ ಟ್ರಂಪ್ ಫೋಟೊ ಏಕೆ ಬರುತ್ತದೆ?

ಗೂಗಲ್‌ಲ್ಲಿ ಈಡಿಯೆಟ್ ಎಂದು ಇಮೇಜ್ ಸರ್ಚ್ ಮಾಡಿದರೆ, ಟ್ರಂಪ್ ಅವರ ಫೋಟೋ ಬರುತ್ತವೆ. ಈ ಪದವನ್ನು ಟೈಪ್ ಮಾಡಿದ ಕೂಡಲೇ ಟ್ರಂಪ್ ಫೋಟೋ ಬರಲು ಹೇಗೆ ಸಾಧ್ಯ? ಎಂದು ಪಿಚೈ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಪಿಚೈ, ಈ ರೀತಿಯ ಫಲಿತಾಂಶ ಬರಲು ಯಾವುದೇ ವ್ಯಕ್ತಿಗಳ ಕೈವಾಡವಿಲ್ಲ. ಗೂಗಲ್ ಕೀವರ್ಡ್ ಗಳನ್ನು ಬಳಸಿಕೊಂಡು ನಿಖರ ಸರ್ಚ್ ರಿಸಲ್ಟ್ ಗಳನ್ನು ನೀಡುತ್ತದೆ. ಕೀವರ್ಡ್ ಗಳನ್ನು ಪಡೆದು ನಂತರ 200 ಸಿಗ್ನಲ್‍ಗಳ ಮೂಲಕ ಮ್ಯಾಚ್ ಮಾಡಲಾಗುತ್ತದೆ. ( ವೆಬ್‌ಸೈಟ್‌) ಅತಿ ಹೆಚ್ಚು ಸರ್ಚ್, ಪ್ರಸ್ತುತ ಅದರ ಅಗತ್ಯತೆ ಈ ಎಲ್ಲ ವಿಚಾರಗಳನ್ನು ನೋಡಿಕೊಂಡು ಫಲಿತಾಂಶ ಬರುವಂತೆ ಸಿದ್ಧಪಡಿಸಲಾಗಿದೆ. ಎಲ್ಲ ಸರ್ಚ್‍ಗಳನ್ನು ನಾವು ಪರಿಶೀಲಿಸುವುದಿಲ್ಲ ಎಂದು ತಿಳಿಸಿದರು. ಫೇಕ್ ಎನ್ನುವ ಪದವನ್ನು ಗೂಗಲ್ ನಲ್ಲಿ ಟೈಪ್ ಮಾಡಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಹಾಗೂ ಪಪ್ಪು ಎಂದು ಸರ್ಚ್ ಮಾಡಿದಾಗ ರಾಹುಲ್‌ಗಾಂಧಿ ಚಿತ್ರ ಬರಲು ಇದೇ ಕಾರಣ.

ಗೂಗಲ್‌ ಎಷ್ಟರ ಮಟ್ಟಿಗೆ ಮಾಹಿತಿಗಳನ್ನು ಕಲೆ ಹಾಕುತ್ತದೆ?

ಗೂಗಲ್‌ ಎಷ್ಟರ ಮಟ್ಟಿಗೆ ಮಾಹಿತಿಗಳನ್ನು ಕಲೆ ಹಾಕುತ್ತದೆ?

ತನ್ನ ಬಳಕೆದಾರರಿಂದ ಗೂಗಲ್‌ ಎಷ್ಟರ ಮಟ್ಟಿಗೆ ಮಾಹಿತಿಗಳನ್ನು ಕಲೆ ಹಾಕುತ್ತದೆ ಎಂಬ ಪ್ರಶ್ನೆಯೂ ಕೂಡ ಇದೇ ಸಂದರ್ಭದಲ್ಲಿ ಎದುರಾಯಿತು. ಅದರಲ್ಲೂ ಮುಖ್ಯವಾಗಿ ಆಂಡ್ರಾಯ್ಡ್‌ನಿಂದ ಎಷ್ಟು ಮಾಹಿತಿಗಳನ್ನು ಪಡೆದುಕೊಳ್ಳುತ್ತೀರಿ ಎಂದು ನೇರವಾಗಿ ಗೂಗಲ್‌ ಮುಖ್ಯಸ್ಥರನ್ನೇ ಕೇಳಲಾಯಿತು. ಇದಕ್ಕೆ ಸಹಜವಾಗಿ ಉತ್ತರಿಸಿದ ಪಿಚೈ, ಗೂಗಲ್‌ ತುಂಬಾ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಆದರೆ ಈ ಖಾಸಗಿ ಮಾಹಿತಿಗಳನ್ನು ತುಂಬಾ ಹತ್ತಿರದಿಂದ ರಕ್ಷಣೆ ಮಾಡಲಾಗುತ್ತಿದ್ದು, ಗೂಗಲ್‌ನ ಎಲ್ಲಾ ಸಿಬ್ಬಂದಿಗಳ ಕೈಗೂ ಇದು ಸಿಗುವುದಿಲ್ಲ ಎಂದು ವಿವರಿಸಿದರು.ಇನ್ನು ಲೋಕೇಷನ್‌ ಪಡೆದುಕೊಳ್ಳುವ ಬಗ್ಗೆಯೂ ವಿವರ ಪಿಚೈ, "ಇದು (ಜಿಪಿಎಸ್‌ ಸೇವೆಗಳು) ಸಂಕೀರ್ಣ ವಿಷಯ, ಜನರು ಹೇಗೆ ಇಂಟರ್‌ನೆಟ್‌ ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬ ಒಂದೇ ಕಾರಣಕ್ಕೆ ನಾವಿದನ್ನು ಬಳಸುತ್ತಿದ್ದೇವೆ," ಎಂದರು.

ತಪ್ಪು ಮಾಹಿತಿ ತಡೆಗೆ ಕ್ರಮವೇನು?

ತಪ್ಪು ಮಾಹಿತಿ ತಡೆಗೆ ಕ್ರಮವೇನು?

ತಪ್ಪು ಮಾಹಿತಿಗಳು ಮತ್ತು ಧ್ವೇಷದ ಭಾಷಣವನ್ನು ಗೂಗಲ್ ಹೇಗೆ ನಿಯಂತ್ರಿಸುತ್ತದೆ ಎಂಬುದಾಗಿ ಸಿಇಒ ಅವರನ್ನು ಪ್ರಶ್ನಿಸಲಾಯಿತು. ಯೂಟ್ಯೂಬ್‌ನಲ್ಲಿ ನಾಝಿ ಸಿದ್ಧಾಂತವನ್ನು ಹರಡುವ ವಿಡಿಯೋಗಳಿವೆ ಎಂಬ ‘ವಾಷಿಂಗ್ಟನ್‌ ಪೋಸ್ಟ್‌'ನ ವರದಿ ಉಲ್ಲೇಖಿಸಿ ಪ್ರಶ್ನೆ ಕೇಳಲಾಯಿತು. ‘ಬಿಳಿಯರು ಸರ್ವಶ್ರೇಷ್ಠ ಮತ್ತು ಬಲಪಂಥೀಯ ತೀವ್ರವಾದಿ ಚಟುವಟಿಕೆಯನ್ನು ತಡೆಯಲು ಗೂಗಲ್‌ ಏನು ಮಾಡುತ್ತಿದೆ' ಎಂದು ಪಿಚೈ ಬಳಿ ಕೇಳಿದರು. ಇದಕ್ಕಾಗಿ ನಮ್ಮದೇ ಆದ ಪಾಲಿಸಿಗಳಿವೆ. ಒಂದೊಮ್ಮೆ ಉಲ್ಲಂಘನೆಗಳು ನಡೆದರೆ ಅಂಥಹ ವಿಷಯವನ್ನು ತೆಗೆದು ಹಾಕುತ್ತೇವೆ ಎಂದವರು ಹೇಳಿದರು. ಇದಾದ ನಂತರ ಯೂಟ್ಯೂಬ್ ಬಗ್ಗೆ ಮತ್ತೊಂದು ಕ್ಲಿಷ್ಟ ಪ್ರಶ್ನೆಯೊಂದು ಪಿಚೈ ಅವರಿಗೆ ಎದುರಾಯಿತು.

ಯೂಟ್ಯೂಬ್ ಅಲ್ಗೊರಿದಮ್ ಬಗ್ಗೆ ಪ್ರಶ್ನೆ

ಯೂಟ್ಯೂಬ್ ಅಲ್ಗೊರಿದಮ್ ಬಗ್ಗೆ ಪ್ರಶ್ನೆ

ತಪ್ಪು ಮಾಹಿತಿಗಳನ್ನು ನಿಯಂತ್ರಿಸಲು ನಮ್ಮದೇ ಆದ ಪಾಲಿಸಿಗಳಿವೆ. ಒಂದೊಮ್ಮೆ ಉಲ್ಲಂಘನೆಗಳು ನಡೆದರೆ ಅಂಥಹ ವಿಷಯವನ್ನು ತೆಗೆದು ಹಾಕುತ್ತೇವೆ ಎಂದು ಸುಂದರ್ ಪಿಚೈ ಅವರು ಹೇಳಿದರು. ಆದರೆ, ಯೂಟ್ಯೂಬ್ ಬಳಕೆದಾರರಿಗೆ ಈ ನಾಝಿ ಸಿದ್ಧಾಂತದ ವಿಡಿಯೋಗಳನ್ನು ನೋಡುವಂತೆ ಯೂಟ್ಯೂಬ್‌ ಅಲ್ಗೊರಿದಮ್‌ ಪ್ರೇರೇಪಿಸುತ್ತಿದೆ ಎಂಬುದನ್ನು ಗಮನಕ್ಕೆ ಅಲ್ಲಿನ ಸದಸ್ಯರೋರ್ವರು ತಂದರು. ಇದಕ್ಕೆ ಉತ್ತರಿಸಿದ ಪಿಚೈ, ಈ ಬಗ್ಗೆ ಕಂಪನಿ ಇನ್ನೂ ಸುಧಾರಣೆಯಾಗಬೇಕಿದೆ ಎಂದು ಹೇಳಿದರು. ನಾವು ತಪ್ಪು ಮಾಹಿತಿಗಳನ್ನು ತೆಗದು ಹಾಕುವ ಸಂಬಂಧ ಕೆಲಸ ಮಾಡುತ್ತಿದ್ದೇವೆ. ಈ ಸಂಬಂಧ ಕಳೆದೊಂದು ವರ್ಷದಲ್ಲಿ ಉತ್ತಮ ಪ್ರಗತಿಯಾಗಿದೆ. ಇನ್ನೂ ಕೆಲಸಗಳು ಬಾಕಿ ಉಳಿದಿವೆ ಎಂದವರು ಸಮಿತಿಯ ಗಮನಕ್ಕೆ ತಂದರು.

ಚೀನಾದಲ್ಲಿ ಪ್ರತ್ಯೇಕ ಸರ್ಚ್ ಎಂಜಿನ್?

ಚೀನಾದಲ್ಲಿ ಪ್ರತ್ಯೇಕ ಸರ್ಚ್ ಎಂಜಿನ್?

ಇನ್ನು ಇತ್ತೀಚಿಗಷ್ಟೇ ಚೀನಾದಲ್ಲಿ ಗೂಗಲ್ ಪ್ರತ್ಯೇಕ ಸರ್ಚ್ ಎಂಜಿನ್ ತೆರೆಯುತ್ತಿದೆ ಎಂಬ ಸುದ್ದಿ ಬಗ್ಗೆ ಕೂಡ ಪ್ರಶ್ನಿಸಲಾಯಿತು. ಗೂಗಲ್ ಸಂಸ್ಥೆ ಚೀನಾಕ್ಕೆ ಸಂಸ್ಥೆ ಹೊಸ ಸರ್ಜ್‌ ಇಂಜಿನ್‌ಗೆ ಬಿಡುಗಡೆ ಮಾಡಲಿದೆಯಾ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ಪಿಚೈ, "ಸದ್ಯ ಅಂಥಹ ಯಾವುದೇ ಉದ್ದೇಶವಿಲ್ಲ. ಆದರೆ ಕಂಪನಿಯಲ್ಲಿ ಸುಮಾರು 100 ಜನ ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ," ಎಂದು ವಿವರಿಸಿದರು. ಇನ್ನು ಬಳಕೆದಾರರಿಗೆ ಎಷ್ಟು ಮಾಹಿತಿಯನ್ನು ಗೂಗಲ್‌ಗೆ ಬಿಟ್ಟುಕೊಡಬೇಕು ಎಂಬುದನ್ನು ಎಚ್ಚರಿಸುತ್ತಿದ್ದೀರಾ ಎಂಬ ಪ್ರಶ್ನೆಗೆ, ಕಳೆದ ತಿಂಗಳಲ್ಲಿ 1.6 ಕೋಟಿ ಜನರು ತಮ್ಮ ಪ್ರೈವಸಿ ಸೆಟ್ಟಿಂಗ್‌ಗಳನ್ನು ಬದಲಾಯಿಸಿದ್ದಾರೆ ಎಂದರು. ಈ ಬಗ್ಗೆ ಸಂಸ್ಥೆ ಕಡೆಯಿಂದ ಹೆಚ್ಚಿನ ಕ್ರಮಗಳಾಗಬೇಕಿದ್ದು, ಬಳಕೆದಾರರಿಗೆ ಸುಲಭವಾಗಿ ಇವು ದಕ್ಕುವಂತಿರಬೇಕು ಎಂದು ಸಮಿತಿ ಸೂಚನೆ ನೀಡಿತು.

Most Read Articles
Best Mobiles in India

English summary
Sundar Pichai had to explain to Congress why Googling ‘idiot’ turns up pictures of Trump. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more